ಡಿ. ಆರ್. ನಾಗರಾಜ್ : ದೇಸೀ – ಮಾರ್ಗ

ಸಾಹಿತ್ಯ ಮತ್ತು ಸಂಸ್ಕೃತಿಗಳ ಸಂಕಥನದಲ್ಲಿ ‘ಮಾರ್ಗ’ ಮತ್ತು ‘ದೇಸಿ’ ಎಂಬ ಶಬ್ದಗಳ ಬಳಕೆ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಕನ್ನಡದ ಲೇಖಕರಲ್ಲಿ ಹಲವರು ಮಾರ್ಗ ಮತ್ತು ದೇಸಿಗಳನ್ನು ಪರಸ್ಪರ ಮುಖಾಮುಖಿಯಾಗುವ ಪರಿಕಲ್ಪನೆಗಳೆಂದು ಸೂಚಿಸುತ್ತಾರೆ. ‘ಮಾರ್ಗ’ ಮತ್ತು ‘ದೇಸಿ’ಗಳನ್ನು ಭಿನ್ನವೆಂದು ಗುರುತಿಸಲಾಗಿದ್ದರೂ ಅವು ಪರಸ್ಪರ ಅವಲಂಬಿಗಳಾಗಿ, ಒಂದು ಮತ್ತೊಂದನ್ನು ಒಳಗೊಳ್ಳುವ, ಒಂದರ ಸೂಕ್ಷ್ಮಗಳನ್ನು ಇನ್ನೊಂದರಲ್ಲಿ ಹಿಡಿಯುವ, ಒಂದು ಇನ್ನೊಂದರಿಂದ ಪ್ರಭಾವಿತವಾಗುವ ಪ್ರಕ್ರಿಯೆ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕಲಾ ಇತಿಹಾಸ ವಿಭಾಗದಲ್ಲಿ ಉಪನ್ಯಾಸಕರಾಗಿರುವ ಹೆಚ್.ಎ. ಅನಿಲ್ ಕುಮಾರ್ ಮತ್ತು ಸಂಗಡಿಗರೊಂದಿಗೆ ನಡೆಸಿದ ಮಾರ್ಗ ಮತ್ತು ದೇಸಿಯ ಕುರಿತಾದ ಸುಮಾರು ಒಂದೂವರೆ ಘಂಟೆಗಳಷ್ಟು ಧೀರ್ಘವಾದ ಸಂವಾದ ಇಲ್ಲಿದೆ .

 

 

One comment to “ಡಿ. ಆರ್. ನಾಗರಾಜ್ : ದೇಸೀ – ಮಾರ್ಗ”

ಪ್ರತಿಕ್ರಿಯಿಸಿ