ರಾಮು ಕವಿತೆಗಳು : ವಿಕ್ರಮ ಹತ್ವಾರ್ – ಭಾಗ ೨

ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ಅನಾಮಧೇಯ ಕವಿಯೊಬ್ಬರ ಕವನ ಸಂಕಲನ ‘ರಾಮು ಕವಿತೆಗಳು‘ ಋತುಮಾನ ಅಂತರ್ಜಾಲ ತಾಣದಲ್ಲಿ ಸೆಪ್ಟೆಂಬರ್ ೧೪ ರಂದು ಬಿಡುಗಡೆಯಾಯಿತು. ಲೇಖಕ ವಿಕ್ರಮ ಹತ್ವಾರ್ ಈ ಕವನ ಸಂಕಲನದ ಇನ್ನೊಂದು ಪದ್ಯವನ್ನು ಇಲ್ಲಿ ಓದಿದ್ದಾರೆ. ನೀವು ಪುಸ್ತಕವನ್ನು ಋತುಮಾನ ಅಂತರ್ಜಾಲ ಮಳಿಗೆಯ ಈ ಕೊಂಡಿಯಲ್ಲಿ ಖರೀದಿಸಬಹುದು.

http://store.ruthumana.com/product/ramu_kavitegalu/

ಕವಿತೆಯು ಭಾಷೆಯಲ್ಲಿಯೇ ಆಗಬೇಕು ಎಂಬುದನ್ನು ವ್ರತದಂತೆ ಪಾಲಿಸುವ ಇಲ್ಲಿನ ಕವಿತೆಗಳು ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯಕ್ಕೆ ಹೊಸ ದನಿಯನ್ನು ಸೇರಿಸುತ್ತಿವೆ. ಮನುಷ್ಯನ ಅಸಾಹಯಕತೆ, ಸಂಭ್ರಮ, ವಿರಾಹ, ವಿಷಾದ, ನೋವು, ಪ್ರತಿಭಟನೆ ಇತ್ಯಾದಿ ಭಾವಗಳನ್ನು ಅತಿ ಸರಳ ಭಾಷೆಯಲ್ಲಿ ಉಸುರುವ ಈ ಕವಿತೆಗಳು ಭಾಷಾಲೋಕದ ಬೆರಗನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಕಾರಣದಿಂದಲೇ ತನ್ನದೇ ವಿಶಿಷ್ಠ ಭಾಷೆ ಮತ್ತು ನುಡಿಗಟ್ಟನ್ನು ಸೃಷ್ಟಿಸಿಕೊಂಡಿದೆ.

ರಾಮು ಕವಿತೆಗಳು : ವಿಕ್ರಮ ಹತ್ವಾರ್ – ಭಾಗ ೨ | Ramu Kavitegalu : Vikram Hatwar – Part 2

ಪ್ರತಿಕ್ರಿಯಿಸಿ