ಲೋಕಚರಿತ ಬೆಂಗಳೂರು – ರಾಮು ಕವಿತೆಗಳು ಓದು ಸಂವಾದ

ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ‘ರಾಮು ಕವಿತೆಗಳು’ ಸಂಕಲನ ಬಿಡುಗಡೆಯಾದ ಒಂದೆರಡು ತಿಂಗಳಲ್ಲಿ ಮುನ್ನೂರಕ್ಕೂ ಹೆಚ್ಚು ಓದುಗರನ್ನು ಸೆಳೆದಿದೆ. ರಾಮು ಎಂದರೆ ಯಾರು? ಅದು ನೀವೇನಾ? ಅಂತ ಹಲವರು ಕೇಳುತ್ತಿದ್ದಾರೆ. ಎಸ್. ಮಂಜುನಾಥ್ ಇರಬೇಕು, ತೇಜಶ್ರೀ ಇರಬೇಕು ಅಂತ ಇನ್ನು ಕೆಲವರ ಊಹೆ. ಇದರ ನಡುವೆ ಕೆಲವರು ರಾಮು ಎಂದರೆ ಇವರೇ ಎಂದು ಹೆಮ್ಮೆಯಿಂದ ಸಾಧಿಸುವ ಉಮೇದಿನಲ್ಲಿದ್ದಾರೆ. ಓದುಗರಲ್ಲಿ ಇಂಥ ಕುತೂಹಲ ಹುಟ್ಟಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಈ ಪದ್ಯಗಳನ್ನು ಬರೆದ ಕವಿಯು ಹಲವಾರು ವರ್ಷಗಳಿಂದ ಪುಸ್ತಕ ಪ್ರಕಟನೆಗೆ ಒಪ್ಪಿರಲಿಲ್ಲ. ಕೊನೆಗೆ ತನ್ನ ಹೆಸರು ಹಾಕಬಾರದು ಎನ್ನುವ ಕರಾರಿನ ಮೇಲೆ ಒಪ್ಪಿದರು. ಈಗಲೂ ಅವರು ಇದ್ಯಾವುದನ್ನೂ ಹಚ್ಚಿಕೊಳ್ಳದೆ ಕವಿತೆಯೊಡನೆ ತಮ್ಮ ಪಾಡಿಗೆ ತಾವಿದ್ದಾರೆ. ಅದಾಗ್ಯೂ ಓದುಗರ ಕುತೂಹಲ ಸಹಜವಾದದ್ದು. ಇದರಲ್ಲಿ ಬಚ್ಚಿಡುವ ಹಠವೇನಿಲ್ಲ. ಕವಿಯು ಅಜ್ಞಾತನಾಗಿರಲು ಬಯಸಿದಾಗ ಅದನ್ನು ಗೌರವಿಸುವ ಸೌಜನ್ಯ ಓದುಗರಾಗಿ , ಪ್ರಕಾಶಕರಾಗಿ ನಮ್ಮದು ಅಷ್ಟೇ. ಇಲ್ಲದಿದ್ದರೂ ಕವಿಗೆ ಯಾವುದೇ ಕೆಡುಕಿಲ್ಲ. ರಾಮು ಕವಿತೆಗಳು ಯಾರದ್ದು ಅಂತ ಕೇಳುವವರಿಗೆ ಕವಿಯನ್ನು ತಿಳಿದುಕೊಳ್ಳುವ ಕುತೂಹಲಕ್ಕಿಂತ ಕವಿತೆಯನ್ನು ಮನನ ಮಾಡಿಕೊಳ್ಳಿ ಎಂದು ವಿನಂತಿಸುತ್ತೇವೆ.

ನಾಟಕಕಾರ ರಘುನಂದನ ರಾಮು ಕವಿತೆಗಳನ್ನು ಓದಿರುವ ಎರಡನೆಯ ಭಾಗವನ್ನು ಇಲ್ಲಿ ನೋಡಿ .

ಸಂತೋಷದ ವಿಷಯವೆಂದರೆ ಈ ಕವಿತೆಗಳನ್ನು ಓದುವ, ಸ್ಪಂದನೆಗಳನ್ನು ಹಂಚಿಕೊಳ್ಳುವ ಆಪ್ತ ಕಾರ್ಯಕ್ರಮವೊಂದನ್ನು ‘ಲೋಕಚರಿತ’ ಆಯೋಜಿಸುತ್ತಿದೆ. ಇದೇ ನವೆಂಬರ್ ೧೨ ಭಾನುವಾರದಂದು ಮಲ್ಲೇಶ್ವರ ೧೫ನೇ ಕ್ರಾಸಿನಲ್ಲಿರುವ ಎಂ.ಇ.ಎಸ್. ಕಾಲೇಜಿನ ಮುಕ್ತ ಆವರಣದಲ್ಲಿ ಅನೇಕ ಕಾವ್ಯಾಸಕ್ತರು ಸೇರಲಿದ್ದಾರೆ. ಲಲಿತಾ ಸಿದ್ದಬಸವಯ್ಯ, ಅಚ್ಯುತ ಕುಮಾರ್, ಗಿರಿಜಾ ಸಿದ್ದಿ, ಸೌಮ್ಯ ಭಟ್, ರಾಘು ಶಿವಮೊಗ್ಗ, ಧರ್ಮೇಂದ್ರ ಅರಸ್, ಮೌನೇಶ್ ಬಡಿಗೇರ್ ಮುಂತಾದವರು ನಮ್ಮೊಂದಿಗಿರುತ್ತಾರೆ. ಎಲ್ಲರಿಗೂ ತುಂಬು ಹೃದಯದ ಮುಕ್ತ ಆಹ್ವಾನವಿದು. ತಪ್ಪದೇ ಬನ್ನಿ. ನೀವಿನ್ನೂ ಪುಸ್ತಕ ಕೊಳ್ಳದಿದ್ದರೆ ಈ ಕೂಡಲೇ ಪಡೆದುಕೊಳ್ಳಿ. ಕ್ಯಾಶ್ ಆನ್ ಡೆಲಿವೆರಿಯ ಮೂಲಕವೂ ನೀವು ಪುಸ್ತಕ ಕೊಳ್ಳಬಹುದು. ಪುಸ್ತಕ ನಿಮ್ಮ ಕೈ ಸೇರುವಾಗ ಹಣ ಪಾವತಿಸಬಹುದು. ಪುಸ್ತಕ ಖರೀದಸಲು ಆಸಕ್ತಿ ಇರುವವರು ನಿಮ್ಮ ವಿಳಾಸ ತಿಳಿಸಿ.

– ‘ಪ್ರಕೃತಿ’ ಪ್ರಕಾಶನದ ಬಳಗದಿಂದ

ನೀವು ಪುಸ್ತಕವನ್ನು ಋತುಮಾನ ಅಂತರ್ಜಾಲ ಮಳಿಗೆಯ ಈ ಕೊಂಡಿಯಲ್ಲಿ ಖರೀದಿಸಬಹುದು.

http://store.ruthumana.com/product/ramu_kavitegalu/

ಪ್ರತಿಕ್ರಿಯಿಸಿ