ಗಾಂಧಿ ಕುಲುಮೆ : ಎಂ. ರಾಜಗೋಪಾಲ್ ಸಂದರ್ಶನ – ಭಾಗ ೧

ಎಂ. ರಾಜಗೋಪಾಲ್ ಹುಟ್ಟಿದ್ದು 1948ರ ಮೇ 1 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನಾಜೆಯಲ್ಲಿ . ಕನ್ನಡ ಸಾಹಿತ್ಯದಲ್ಲಿ ಎಂ.ಎ ಮತ್ತು ಕಾನೂನು ಪದವಿ ಪಡೆದು ಎಲ್.ಐ.ಸಿ ಯಲ್ಲಿ ಉದ್ಯೋಗಿಯಾಗಿ 2008ರಲ್ಲಿ ನಿವೃತ್ತಿಗೊಂಡು ಈಗ ಉಡುಪಿಯ ಸಮೀಪ ಹಿರಿಯಡಕದಲ್ಲಿ ನೆಲೆಸಿದ್ದಾರೆ.

ತಾವೇ ಕ್ಲಿಕ್ಕಿಸಿದ ಹಿಮಾಲಯದ ಅಪೂರ್ವ ಚಿತ್ರಗಳನ್ನೊಳಗೊಂಡ ಇವರು ಬರೆದ ‘ಸಾಕಾರದಿಂದ ನಿರಾಕಾರಕ್ಕೆ’ ಹಿಮಾಲಯದ ಚಾರಣದ ಅಪರೂಪದ ಕೃತಿಗಳಲ್ಲೊಂದು. ಇವರ ಕಾದಂಬರಿ ‘ಮಂದಾರ ಮರದ ಜೇನ್ನೊಣ’ ಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. ಇವರು ಗಾಂಧಿಯ ಬಗ್ಗೆ 13 ವರ್ಷಗಳ ಕಾಲ ಅಧ್ಯಯನ ನಡೆಸಿ ‘ಗಾಂಧೀಜಿಯ ರೂಪಕಗಳು’ ಎಂಬ ಪುಸ್ತಕ ಬರೆದಿದ್ದಾರೆ.

ಋತುಮಾನಕ್ಕಾಗಿ ಎಂ. ರಾಜಗೋಪಾಲ್ ಅವರನ್ನು ಅರವಿಂದ ಚೊಕ್ಕಾಡಿ ಸಂದರ್ಶಿಸಿದ್ದಾರೆ . ಸ್ವತ: ಲೇಖಕರೂ ಆಗಿರುವ ಅರವಿಂದ ಚೊಕ್ಕಾಡಿ ಪ್ರಸ್ತುತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ ಬೆಳ್ತಂಗಡಿ ತಾಲೂಕು ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



ಛಾಯಾಗ್ರಹಣ : ನಿತೇಶ್ ಕುಂಟಾಡಿ
ಸಂಕಲನ : ವಿವೇಕ್ ಎಸ್. ಕೆ
ಉಪಶೀರ್ಷಿಕೆಗಳು : ಶ್ರೀಕಾಂತ್ ಚಕ್ರವರ್ತಿ

4 comments to “ಗಾಂಧಿ ಕುಲುಮೆ : ಎಂ. ರಾಜಗೋಪಾಲ್ ಸಂದರ್ಶನ – ಭಾಗ ೧”
  1. ಭಾರತದಲ್ಲಿ ಯಲ್ಲಕಾಲಕ್ಕೂ ಮೂರುಕಾಲಗಳೂ ಒಟ್ಟಿಗಿರಲು ಕಾರಣ ಯಂತಹ ನೀತಿ..?
    ಬುಡಕಟ್ಟುಗಳನ್ನ ,ದುಡಿವಜನರನ್ನ ನಡೆಸಿಕೊಳ್ಳುವಲ್ಲಿ ತೋರಿದ ನೀತಿ ಹಾಗೇ ಉಳಿದೇ ಇರುವುದು(ವ್ಯಾಸ ವಾಲ್ಮೀಕಿಗಳ ಕಾಲದಿಂದಲೂ).

    ಯಾವ ಧರ್ಮದ ಬಗ್ಗೆ ಈ ಹಿರಿಯರು ಹೇಳುತಿದಾರೋ ಅದರಲ್ಲಿಯೂ ಇರುವ ಕಟ್ಟು-ಕಟ್ಟಳೆಗಳೇ ಸ್ಮೃತಿಗಳು (ಕಾನೂನುಗಳು).

    ಪಾಶ್ಚಾತ್ಯರಲ್ಲಿ ನೀತಿಗೆ ಅವಕಾಶವಿಲ್ಲದಲ್ಲಿ ಕನ್ಪೆಷನ್(ತಪ್ಪೊಪ್ಪಿಗೆ) ಯಾಕೆ ಪ್ರಾಕ್ಟೀಸ್ ನಲ್ಲಿದೆ ಅಲ್ಲಿ..?

    ಏಸುಕ್ರಿಸ್ತ ಯಾವಾಗ ಏಷಿಯನ್ ಅದಾ..?

    ಪಾಶ್ಚಾತ್ಯ ಸಾಹಿತ್ಯದಲ್ಲಿ ಬರೆದವು ಈಗಿನಕಾಲಕ್ಕೆ ಪ್ರಸ್ತುತ ಆಗೋಲ್ಲ ಅಂದರೆ ಯಲ್ಲಿಂದ ನಗಬೇಕು..?

    ಬಿದ್ದವನನ್ನು ಎತ್ತಲಿಕ್ಕಾಗಲಿಲ್ಲವಾ ಅಂತ ಕೇಳುವ ನಮ್ಮ ಮನೆಗಳು, ಗಾಂಧಿಯನ್ನು ಕೊಂದವರ ವಾರಸುಗಳನ್ನೇನೂಕೇಳದೆ, ಅವರ ಕುಮ್ಮಕ್ಕುಗಳು ಬಲಗೊಳ್ಳುತಿರುವಾಗ ಎಲ್ಲಿ ಹೋಗಿದೆ ನೀತಿ..?

    ಇಂಥ ತರ್ಕವಿಲ್ಲದ ಮಾತುಗಳನ್ನಾಡುವವರ ಪುಸ್ತಕವನ್ನಂತು ನಾ ಓದಲಾರೆ …

    ಋತುಮಾನ ತಂಡದ ಮೇಲಿನ ನಂಬಿಕೆಗೆ ತಕ್ಕನಾದ ಕೆಲಸವಿದಲ್ಲವೆಂದು ನೋವಾಗುತಿದೆ…
    ಕ್ಷಮಿಸಿ…

  2. ಇಸ್ರೇಲ್ ಏಷ್ಯಾದಲ್ಲಿದೆ.
    ಅಫ್ಘಾನಿಸ್ತಾನ ಎಲ್ಲಿದೆ? ಅಂದರೆ ಅದು ಪರದೇಶ ಆಗಿಬಿಡ್ತದೆ.
    ಇಂಥ ಅನಿಸಿಕೆ ಮತ್ತೆ ಸಾವರ್ಕರ್ ರ ನಿಲುವಿಗೆ ಬಂದುಸೇರುವುದೆಂಬ ಅನುಮಾನ ನನಗೆ…
    ಮತ್ತೆ ಧರ್ಮದ ಅಡಿಯಲ್ಲಿ ಯಲ್ಲವನ್ನೂ ಕಾಣುವುದರಲ್ಲಿ ಕಪ್ಪು-ಬಿಳುಪಿನ ದೃಷ್ಟಿ ಮಾತ್ರವಿರ್ತದೆ…
    ಈ ಧರ್ಮ ದೇವರು ಇವು ಯಾವ ಉಪನಿಷತ್ತುಗಳಲ್ಲಿಯೂ ಪ್ರಸ್ತಾಪವಿಲ್ಲ ಎಂತಲೇ ಜಿಡ್ಡು ಕ್ರಿಷ್ಣಮೂರ್ತಿ ಅವರೂ,
    ಲೋಕಾಯತ ಎಂಬ ಕೃತಿಯಲ್ಲಿ ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರೂ ಮೊದಲು ದೇವರೆನ್ನುವ ಕಲ್ಪನೆಯೇ ಇರಲಿಲ್ಲ ಅದೆಲ್ಲ ತದನಂತರದಲ್ಲಿ ಬಂದದ್ದು ಎಂದೇ ನಿರೂಪಿಸುವರು…
    ಹೀಗಿರುವಾಗ ಗೋವನ್ನ ದೇವರಗನ್ನುವುದು ಈಗಾಗಲೇ ದುರಂತದರ್ಶನ ಮಾಡಿಸಿದೆ…
    ಹಾವನ್ನ ಏಷ್ಯಾದಲೇ ಹಲವುದೇಶಗಳಲ್ಲಿ ತಿಂತಾರೆ ಅವರಿಗ್ಯಾರಿಗೂ ನಾಗದೋಶವಾಗುವುದಿಲ್ಲ ಗಮನಿಸಿ…

    ಅಸಂಬದ್ಧ ಕಥೆಯನ್ನು ಹೇಳುತ್ತಾ ನಮ್ಮನ್ನ ಧರ್ಮ ದ ಹೆಸರಲ್ಲಿ ಮೂರ್ಖರನ್ನಾಗಿಸಿದ್ದು ಸಾಕಿನ್ನು…

Leave a Reply to Arun Cancel reply