ಶಿಶಿರ ಸಂಪುಟ ೨ – ಸಂಪಾದಕೀಯ

ಈ ಬಾರಿಯ ಶಿಶಿರ ಸಂಚಿಕೆಯಲ್ಲಿ ಎಚ್ ಎಸ್ ಶಿವಪ್ರಕಾಶ್ ರ ಸಮಗಾರ ಭೀಮವ್ವ ಕಾವ್ಯದ ಓದು ಮತ್ತು ಕವಿಯ ಅಭಿಪ್ರಾಯ ಎರಡನ್ನೂ ಒಟ್ಟಿಗೆ ಇಟ್ಟು ನೋಡುವ ವಿಭಿನ್ನ ಪ್ರಯೋಗವಿದೆ.

ಜನವರಿ ಮೂವತ್ತರಂದು ಜನಿಸಿದ ವರಕವಿ ಬೇಂದ್ರೆಯವರ ಧ್ವನಿಯಲ್ಲಿ ’ದೇವನಿಗೆ ನೋವಿಲ್ಲ’ ಕವನ ಕೇಳುವ ಸೌಭಾಗ್ಯವೂ ನಮ್ಮದಾಗಲಿದೆ.

ದಾಖಲೀಕರಣ ಯೋಜನೆಯಲ್ಲಿ ಭಾರತೀಯ ತಾತ್ವಿಕ ಪರಂಪರೆ: ವೈದಿಕ-ಅವೈದಿಕ ದರ್ಶನ ದ ಮುಂದಿನ ಭಾಗಗಳು ಲಭ್ಯವಾಗಲಿವೆ. ಈ ಅಪರೂಪದ ದಾಖಲೆಗೆ ನಾವು ರಥಬೀದಿ ಗೆಳೆಯರಿಗೆ ಋಣಿಯಾಗಿದ್ದೇವೆ.

ಗಾಂಧಿ ಕುಲುಮೆಯ ಸರಣಿ ವೀಡಿಯೋಗಳು ಈ ಸಂಚಿಕೆಯಲ್ಲೂ ಮುಂದುವರೆಯಲಿದೆ.

ಮ್ಯಾಗ್ಸೆಸ್ಸೆ ವಿಜೇತ ಬೆಜವಾಡ ವಿಲ್ಸನ್ ರ ಸಂದರ್ಶನ ಈ ಸಂಚಿಕೆಯ ವಿಶೇಷ. ತಮಿಳಿನ ಸುಪ್ರಸಿದ್ಧ ಲೇಖಕ ಪೆರುಮಾಳ್ ಮುರುಗನ್ ನಡೆಸಿದ ಸಂದರ್ಶನದ ಕನ್ನಡನುವಾದ ಪ್ರಕಟಿಸಲು ಋತುಮಾನ ಹೆಮ್ಮೆಪಡುತ್ತದೆ.

ಉಳಿದಂತೆ ಚಿಲಿಯ ಕವಿ ಪರ್ರೆಗೆ ನುಡಿನಮನ, ಬೆಂಗಳೂರೆಂಬ ಮಹಾನಗರದ ಕುರಿತ ಲೇಖನ ನಿಮ್ಮ ಓದಿನ ಪಸೆ ತಣಿಸಲಿದೆ ಎಂಬ ವಿಶ್ವಾಸದೊಂದಿಗೆ …

ನಮಸ್ಕಾರ

One comment to “ಶಿಶಿರ ಸಂಪುಟ ೨ – ಸಂಪಾದಕೀಯ”

ಪ್ರತಿಕ್ರಿಯಿಸಿ