ಅಶೋಕ್ ಕೆ ಆರ್

ಡಾ. ಅಶೋಕ್. ಕೆ. ಆರ್. ವೃತ್ತಿಯಿಂದ ವೈದ್ಯ ವಿದ್ಯಾರ್ಥಿಗಳಿಗೆ ಅನಾಟಮಿ ಪಾಠ ಮಾಡುವ ವೈದ್ಯ. ಊರು ಮದ್ದೂರಿನ ಬೆಸಗರಹಳ್ಳಿಯ ಕೋಣಸಾಲೆ. ಓದು ಕೆಲಸದ ನೆಪದಲ್ಲಿ ಹುಣಸೂರು - ಮಂಡ್ಯ - ಮೈಸೂರು - ಕಲ್ಬುರ್ಗಿ - ಸುಳ್ಯ - ಬೆಂಗಳೂರಿನಲ್ಲಿ ವಾಸ. ಸದ್ಯಕ್ಕೆ ಬೆಂಗಳೂರಿನ ಬಿ.ಜಿ.ಎಸ್ ಮೆಡಿಕಲ್ ಕಾಲೇಜಿನಲ್ಲಿ ಅಸೆಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ. ಪ್ರವೃತ್ತಿಯಿಂದ ಲೇಖಕ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕತೆಗಳನ್ನು ಸೇರಿಸಿ 'ಸಮಾಧಿ ಹೋಟ್ಲು ಮತ್ತು ಇತರೆ ಕತೆಗಳು' ಪುಸ್ತಕವನ್ನು ಮದುವೆಯ ದಿನ ಬಿಡುಗಡೆಗೊಳಿಸಲಾಗಿತ್ತು. ಹಿಂಗ್ಯಾಕೆ ಬ್ಲಾಗಿನಲ್ಲಿ ನನ್ನ ಲೇಖನಗಳು ಲಭ್ಯ. ಇ ಪುಸ್ತಕದ ರೂಪದಲ್ಲಷ್ಟೇ ಪ್ರಕಟವಾದ ಕಾದಂಬರಿ 'ಆದರ್ಶವೇ ಬೆನ್ನು ಹತ್ತಿ'. ಸದ್ಯಕ್ಕೆ ಸಾಕೇತ್ ರಾಜನ್ ಬರೆದಿರುವ 'ಮೇಕಿಂಗ್ ಹಿಸ್ಟರಿ' ಪುಸ್ತಕಗಳ ಅನುವಾದದಲ್ಲಿ ನಿರತ. ಬರವಣಿಗೆ ಮತ್ತು ಓದಿನ ಜೊತೆಗೆ ಹವ್ಯಾಸದಂತೆ ಫೋಟೋಗ್ರಫಿ