ಬಾನು ಮುಷ್ತಾಕ್

ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಶ್ರೀಮತಿ ಬಾನು ಮುಸ್ತಾಕ್ ಕನ್ನಡದ ಪ್ರಮುಖ ಲೇಖಕಿ . ಹೆಜ್ಜೆ ಮೂಡಿದ ಹಾದಿ , ಬೆಂಕಿ ಮಳೆ , ಎದೆಯ ಹಣತೆ ಇದು ಅವರ ಕೆಲವು ಕಥಾಸಂಕಲನಗಳು. ಇವರ ಕರಿ ನಾಗರಗಳು ಎಂಬ ಕಥೆ ಹಸೀನಾ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ . ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಇವರ ಮೂಡಿಗೇರಿವೆ . ಹಾಸನ ಇವರ ಊರು .