ದಯಾನಂದ

ಕಥನ– ಕವನದ ನಡುಹಾದಿಯಲ್ಲಿರುವ ದಯಾನಂದ ಹುಟ್ಟಿದ್ದು 1988ರ ಅಂಬೇಡ್ಕರ್‌ ಜಯಂತಿಯಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ. ಓದಿ ಬೆಳೆದಿದ್ದು ಬೆಳ್ಳೂರು – ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ. 2010ರಲ್ಲಿ ಸಮಯ ಸುದ್ದಿ ವಾಹಿನಿಯ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ವೃತ್ತಿ ಆರಂಭ. 2011ರಿಂದ ‘ಪ್ರಜಾವಾಣಿ’ ದಿನ ಪತ್ರಿಕೆಯಲ್ಲಿ ವರದಿಗಾರ, ಉಪ ಸಂಪಾದಕ. ಪ್ರಜಾವಾಣಿ, ಸುಧಾ, ಮಯೂರ, ವಿಜಯ ಕರ್ನಾಟಕ, ಕನ್ನಡಪ್ರಭ, ಸಂಚಯ, ಸಂಕ್ರಮಣ, ಸಂಕಥನ, ಸಂವಾದ, ಶೋಧನೆ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನಗಳು ಪ್ರಕಟಗೊಂಡಿವೆ.