ಕರ್ಕಿ ಕೃಷ್ಣಮೂರ್ತಿ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಊರಿನವರು. ಖಾಸಗಿ ಸಂಸ್ಥೆಯಲ್ಲಿ ಸೀನಿಯರ್ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಮಳೆ ಮಾರುವ ಹುಡುಗ’ ಮೊದಲ ಕಥಾ ಸಂಕಲನ. ’ಗಾಳಿಗೆ ಮೆತ್ತಿದ ಬಣ್ಣ’ ಕಥಾಸಂಕಲನವು ಛಂದ ಪುಸ್ತಕದಿಂದ ಪ್ರಕಟವಾಗಿದೆ. ‘ಬೇಂದ್ರೆ ಗ್ರಂಥ ಬಹುಮಾನ, ಮಾಸ್ತಿ ಪುಸ್ತಕ ಬಹುಮಾನ ಮತ್ತು ಸ್ವಸ್ತಿ ಪ್ರಕಾಶನದ ಬಹುಮಾನ ಪಡೆದಿದ್ದಾರೆ. ‘ಮಳೆ ಮಾರುವ ಹುಡುಗ’ ಮತ್ತು ‘ಉತ್ಸರ್ಗ’ ಕಥೆಗಳು ಹಿಂದಿಗೆ ಅನುವಾದವಾಗಿವೆ. ‘ವದ್ಧಾ’ ಹಾಗೂ ‘ಉತ್ಸರ್ಗ’ ಕಥೆ ಅನುಕ್ರಮವಾಗಿ ಸುಚಿತ್ರಾ ಫಿಲ್ಮ್ ಸೊಸೈಟಿಯ ಕಥಾ ಬಹುಮಾನ, ಪ್ರಜಾವಾಣಿ ದೀಪಾವಳಿ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿವೆ.


,

ಮನಕ್ಕೆ ಹಾಕಿದ ಹಿಜಾಬ್ ಸರಿಸಿದಾಗ…

ಅಮೇರಿಕಾದಲ್ಲಿ ಬಹುಕಾಲದಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ, ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರಾದ ಗುರುಪ್ರಸಾದ ಕಾಗಿನೆಲೆ ತಮ್ಮ ಹೊಸ ಕಾದಂಬರಿ ಹೊರತಂದಿದ್ದಾರೆ....