ಮಂಜುನಾಥ್ ಲತಾ

ಮೈಸೂರು ಜಿಲ್ಲೆಯ ತಗಡೂರು ಸ್ವಂತ ಸ್ಥಳ . ವೃತ್ತಿಯಿಂದ ಹವ್ಯಾಸಿ ಪತ್ರಕರ್ತ , ಕಲಾವಿದ . 'ಸಕಾಲ' , 'ಕನ್ನಡ ಟೈಮ್ಸ್ ' , ' ಉಷಾಕಿರಣ' ಮುಂತಾದ ಪತ್ರಿಕೆಗಳಲ್ಲಿ ಸಹ ಸಂಪಾದಕರಾಗಿ , ಉಪಸಂಪಾದಕರಾಗಿ ದುಡಿದ ಅನುಭವ . 'ತೆಂಕಲಕೇರಿ ' , ' ಸನ್ ಆಫ್ ಸಿದ್ದಪ್ಪಾಜಿ ' ( ಕಥಾ ಸಂಕಲನಗಳು ) , ' ಪರದೇಸಿ ಮಗನ ಪದವು' , ' ಆಹಾ ಅನಿಮಿಷ ಕಾಲ ' ( ಕವನ ಸಂಕಲನಗಳು ) , ' ಪಲ್ಲಂಗ' ( ಕಾದಂಬರಿ) , ತರಾವರಿ ( ಲೇಖನಗಳು ) ಪ್ರಕಟಿತ ಕೃತಿಗಳು . ಸದ್ಯ ಮೈಸೂರಿನಲ್ಲಿ ವಾಸ . ಇವರ ‘ಕತೆ ಎಂಬ ಇರಿವ ಈ ಅಲಗು’ ಕಥಾ ಸಂಕಲನಕ್ಕೆ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ ದೊರಕಿದೆ .