ಓ.ಎಲ್. ನಾಗಭೂಷಣ ಸ್ವಾಮಿ

ಕನ್ನಡದ ಹೆಸರಾಂತ ಶಿಕ್ಷಕರೂ. ವಿಮರ್ಶಕರೂ, ಬರಹಗಾರರೂ ಆದ ಓ. ಎಲ್. ನಾಗಭೂಷಣಸ್ವಾಮಿ ಕರ್ನಾಟಕದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕ ವೃತ್ತಿ ನಡೆಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ, ಕನ್ನಡ ಸಾಹಿತ್ಯ ಮತ್ತು ಭಾಷೆ ವಿಭಾಗಗಳ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದರು . ವಿಮರ್ಶೆಯ ಪರಿಭಾಷೆ, ನನ್ನ ಹಿಮಾಲಯ, ಕನ್ನಡಕ್ಕೆ ಬಂದ ಕವಿತೆ, ಇಂದಿನ ಹೆಜ್ಜೆ, ನಮ್ಮ ಕನ್ನಡ ಕಾವ್ಯ ಮುಂತಾದವು ಅವರ ಕೆಲವು ಪ್ರಮುಖ ಕೃತಿಗಳು. ಚಂದ್ರಶೇಖರ ಕಂಬಾರ ಅವರ ಚಕೋರಿ, ಆಯ್ದ ಕವಿತೆಗಳು ಮತ್ತು ತುಕ್ರನ ಕನಸು ನಾಟಕಗಳನ್ನು; ಜಿ. ಎಸ್. ಶಿವರುದ್ರಪ್ಪ ಅವರ ಆಯ್ದ ಕವಿತೆಗಳನ್ನು; ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಏಗದಾಗೆಲ್ಲಾ ಐತೆ ಮುಂತಾದ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಟಾಲ್ಸ್ಟಾಯ್ ಕಥೆಗಳು, ಜೆ. ಕೃಷ್ಣಮೂರ್ತಿ ಅವರ ಕೆಲವು ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.


,

ಒಂದಷ್ಟು ಹೊತ್ತು ಕತ್ತಲು ಕವಿಯುವಂತೆ ಮಾಡಿದ ಕವಿಗೆ ನಮಸ್ಕಾರ

ಹೊಸ ತಲೆಮಾರಿನ ಪ್ರಮುಖ ಕವಿಗಳಲ್ಲೊಬ್ಬರಾದ ಆರಿಫ್ ರಾಜಾ ಅವರ ಹೊಸ ಕವನ ಸಂಕಲನ “ನಕ್ಷತ್ರ ಮೋಹ” ದ ಕುರಿತಾಗಿ ಕನ್ನಡದ...