ಎವ ಪೆತ್ರೊವಾ

ಪ್ರಾಗಿನ ಚಾರ್ಲ್ಸ್ ವಿಶ್ವವಿದ್ಯಾಲಯದಲ್ಲಿ ಕಲಾ , ಇತಿಹಾಸ ಮತ್ತು ಅಲಂಕಾರ ಶಾಸ್ತ್ರದಲ್ಲಿ 1961 ರಲ್ಲಿ ಡಾಕ್ಟರೇಟ್ ಪದವಿ ಪಡೆದರು . ಅನೇಕ ಕಲಾ ಪ್ರದರ್ಶನಗಳಿಗೆ ನಿರ್ವಾಹಕಿಯಾಗಿ ಕೆಲಸ ಮಾಡುತ್ತಾ ಜೊತೆಗೆ ಪದ್ಯ , ಕಥೆಗಳನ್ನು ಬರೆದು ಪ್ರಕಟಿಸಿದ್ದರು . ಅಂತಾರಾಷ್ಟ್ರೀಯ ಕಲಾ ಸಂಸ್ಥೆ AICA ಸದಸ್ಯೆಯಾಗಿ 2005-08 ರಲ್ಲಿ ಪುನರುಜ್ಜೀವನಗೊಂಡ ಪ್ರಾಗಿನ "ಕಲಾಭಿಮಾನಿಗಳ ಬಳಗ" ದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು . ಯುವ ಕಲಾಕಾರರ ಪ್ರದರ್ಶನಗಳನ್ನು ಪ್ರೋತ್ಸಾಹಿಸಲು ಹುಟ್ಟಿದ "ಹೊಲ್ಲಾರ್" ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು . ಸಾಮ್ರಾಟ ರುಡಾಲ್ಫನ ಆಸ್ಥಾನದಲ್ಲಿ ಕಲೆ , ವಿಜ್ಞಾನ , ಸಾಹಿತ್ಯ ಇವೆಲ್ಲವೂ ಬೆಳೆದ ಬಗೆಯನ್ನು ತಮ್ಮ ಕಥೆಗಳಲ್ಲಿ ಮೂಡಿದಿದ್ದಾರೆ .