ಪ್ರವೀಣ್ ಕುಮಾರ್. ಜಿ

ಊರು ಬಳ್ಳಾರಿ ಸೂರು ಬೆಂಗಳೂರು. ಬೆಂಗಳೂರಿನ ಪಿ.ಇ.ಎಸ್ ಯುನಿವರ್ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪದವಿಧರ. ಕೂರ್ಮಾವತಾರ, ಸಕ್ಕರೆ, ಎಂದೆಂದೂ ನಿನಗಾಗಿ, ಕಹಿ, ದನ ಕಾಯೋನು ಮತ್ತು ಮುಗುಳು ನಗೆ ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕೆಲಸ. ಕಹಿ ಮತ್ತು ವಿನಾಶಿನಿ ಚಿತ್ರಗಳಿಗೆ ಗೀತರಚನೆ. ಅಳಿದು ಉಳಿದವರು ಚಿತ್ರದ ಸಂಭಾಷಣಾಕಾರರಲ್ಲೊಬ್ಬ. ಬರೆದ ಕೆಲವು ಸಣ್ಣಕತೆಗಳು ಮಯೂರ, ಪ್ರಜಾವಾಣಿ, ತುಷಾರ, ಕನ್ನಡಪ್ರಭ, ವಿಜಯ ನೆಕ್ಸ್ಟ್, ಸಂಕ್ರಮಣ, ಮಂಗಳ ಇತರೆ ಪತ್ರಿಕೆಗಳಲ್ಲಿ ಪ್ರಕಟ.