ರಮೇಶ್ ಆರೋಲಿ

ರಮೇಶ್ ಅರೋಲಿ , ಬಯಲು ಸೀಮೆಯ ರಾಯಚೂರಿನ ಅಸ್ಕಿಹಾಳದಲ್ಲಿ ಹುಟ್ಟಿ, ಕರಾವಳಿಯ ಕಾರವಾರದಲ್ಲಿ ಪತ್ರಕರ್ತರಾಗಿ ದುಡಿದು ಮಲೆನಾಡಿನ ಸಾಗರದಲ್ಲಿ ಅತಿಥಿ ಉಪನ್ಯಾಸಕರಾಗಿ ಇದೀಗ ರಾಜಧಾನಿ ದೆಹಲಿಯ ಕಮಲಾ ನೆಹರು ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ. 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ' (2010) ಕವನ ಸಂಕಲನಕ್ಕೆ ಕರ್ನಾಟಕ ಸಂಘ ಶಿವಮೊಗ್ಗದ ಡಾ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, 'ಜುಲುಮೆ' ಸಂಕಲನಕ್ಕೆ 'ಡಾ.ಪು.ತಿ.ನ. ಕಾವ್ಯ ನಾಟಕ ಪುರಸ್ಕಾರ' (2014) ಮತ್ತು ಬಿಡಿಗವಿತೆಗಳಿಗೆ ಸಂಚಯ, ಸಂಕ್ರಮಣ, ಪ್ರಜಾವಾಣಿ ಕಾವ್ಯ ಸ್ಪರ್ದೆಯಲ್ಲಿ ಬಹುಮಾನ ಲಭಿಸಿವೆ.


,

ರಮೇಶ್ ಅರೋಲಿ ಕವಿತೆ : ನೇಣಿನ ಹಕ್ಕಿ

ದಿಕ್ಕು ದಿಕ್ಕಿಗೆ ಉಯ್ಯಾಲೆ ನೀನು ದಿಕ್ಕಿಲ್ಲದ ಹಕ್ಕಿಯೆ ಉಯ್ಯಾಲೆ ಮಡಲಿಗೆ ಬಂದಾಗ ಮನೆಯೆಲ್ಲ ತುಂಬಿತ್ತು ಅಂಬೆಗಾಲಿಡುವಾಗ ಅಂಗಳ ನಕ್ಕಿತ್ತು...