ಉತ್ತರ ಕಾಂಡ : ಲಕ್ಷ್ಮೀಶ ತೋಳ್ಪಾಡಿ

ಪುತ್ತೂರಿನ  ‘ಬಹುವಚನಂ’ ಆಶ್ರಯದಲ್ಲಿ ನಡೆದ ರಾಮನವಮಿಯ ಸಂದರ್ಭದಲ್ಲಿ ನಡೆದ ಲಕ್ಷ್ಮೀಶ ತೋಳ್ಪಾಡಿಯವರು ನೀಡಿದ ಉಪನ್ಯಾಸ.

ಪ್ರಭುತ್ವವನ್ನು ಕುರಿತು ಬೀದಿ ಬೀದಿಯಲ್ಲಿ ಜನ ಮಾತಾಡುವುದನ್ನು ನಿಲ್ಲಿಸಬೇಕೆ? . ರಾಮಾಯಣ ನಿಲ್ಲಿಸಬೇಡಿ ಎಂದು ಹೇಳುತ್ತದೆ . ಹಾಗೆಯೇ ವಾಲ್ಮೀಕಿಯೂ ಕೂಡ . ರಾಮ ರಾಜ್ಯದಲ್ಲಿ ಹಾಸ್ಯಗಾರನೊಬ್ಬ ಸೀತೆಯ ಕುರಿತಾಗಿ ಕೇಳಿಬಂದ ಮಾತುಗಳನ್ನು ರಾಮ ತಡೆಯುವುದಿಲ್ಲ . ಜನ ಸತ್ಯವನ್ನು ತಮಗೆ ಕಂಡಂತೆ ಹೇಳುತ್ತಾರೆ .

ಸಾಹಿತ್ಯ ಪ್ರಭುತ್ವ ಕೈ ಹಾಕದ ಜಾಗ . ಧರ್ಮ ಕೂಡ ಪ್ರಭುತ್ವವಾದರೆ ಧರ್ಮ ಬೀದಿಯಲ್ಲಿ ನಿಲ್ಲಬೇಕು . ವೇದಿಕೆ , ಸಭೆಯಲ್ಲಲ್ಲ . ಆಗ ಅದಕ್ಕೆ ಜನ ಜೀವನದ ಸ್ಪರ್ಶವಾಗುತ್ತದೆ . ಧರ್ಮ ರಾಜನ ಪೋಷಾಕು ಧರಿಸಿದರೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ . ಎಲ್ಲೆಲ್ಲಿ ನಿಮ್ಮ ಸಂವೇದನೆ ಕುಂಟಿತವಾಗಿದೆ ಎಂದು ತೋರಿಸಿಕೊಡುವುದು ಧರ್ಮ ಶಾಸ್ತ್ರವಲ್ಲ , ಸಾಹಿತ್ಯ . ಸಾಹಿತ್ಯ ಅಂತಹ ಒಂದು ಜಾಗ . ಅದು ಯಾರೂ ಕೈಹಾಕಲು ಸಾಧ್ಯವಾಗದ ಜಾಗ .


ವಿಡಿಯೋ ಕೃಪೆ : ಡಾ . ಶ್ರೀಶ ಕುಮಾರ್ ಎಮ್ . ಕೆ
ಕೃತಜ್ಞತೆಗಳು : ಕಬೀರ ಮಾನವ

2 comments to “ಉತ್ತರ ಕಾಂಡ : ಲಕ್ಷ್ಮೀಶ ತೋಳ್ಪಾಡಿ”

ಪ್ರತಿಕ್ರಿಯಿಸಿ