ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ : “ವಿದೇಶಿ ಚಲನಚಿತ್ರ”ದ ಆಸ್ಕರ್

ನನ್ನ ಕಳೆದ ಲೇಖನದಲ್ಲಿ, ೧೯೫೭ರ ಅಕಾಡೆಮಿ ಅವಾರ್ಡ್ನಲ್ಲಿ ಮದರ್ ಇಂಡಿಯಾಅತ್ಯುತ್ತಮ ವಿದೇಶಿ ಚಲನಚಿತ್ರವಿಭಾಗಕ್ಕೆ ಭಾರತದ ಅಧಿಕೃತ ಸ್ಪರ್ಧಿಯಾಗಿದ್ದನ್ನು ಹೇಳಿದ್ದೆ. ಇದು ವಿಭಾಗದಲ್ಲಿ ಆಸ್ಕರ್ ನೀಡುವ ಕೇವಲ ಎರಡನೇ ಬಾರಿಯಾಗಿತ್ತು. ಅಕಾಡೆಮಿ ಅವಾರ್ಡ್ ಸಮಾರಂಭಗಳು (ಜನಪ್ರಿಯವಾಗಿಆಸ್ಕರ್“) ಜಗತ್ತಿನ ಎಲ್ಲೆಡೆಯ ಸಿನೆಮಾಗಳನ್ನು ನೋಡಿ, ಪ್ರಶಸ್ತಿ ನೀಡುವಂತಹ ಚಲನಚಿತ್ರೋತ್ಸವಗಳಲ್ಲ. ಇವು ಮೂಲತಃ, ಭಾರತದ ಫಿಲ್ಮ್ ಫೇರ್ ಅವಾರ್ಡ್ ತರಹದ, ಔದ್ಯಮಿಕ ಸಮಾರಂಭಗಳು. ಹಾಲಿವುಡ್ಗೆ ಸ್ವಪ್ರಶಂಸೆಯೊಂದಿಗೆ ತನ್ನ ಅತ್ಯಂತ ಯಶಸ್ವಿ ಸಿನಿಮಾಗಳ ಪ್ರಚಾರಕ್ಕಾಗಿ  ವಾರ್ಷಿಕವಾಗಿ ಸಿಗುವ ಅವಕಾಶ.    

ಅಮೇರಿಕದ ಚಿತ್ರರಂಗದ ಪ್ರಾಬಲ್ಯ ಮತ್ತು ಅಮೇರಿಕದ ಪ್ರಮುಖ ಹಾಗೂ ಸಂಪದ್ಭರಿತ ಮಾರುಕಟ್ಟೆಗಳ ಹೊರತಾಗಿ ಅವು ಹೊರ ಜಗತ್ತಿನ ಆಸಕ್ತಿಯಾಗಿರುತ್ತಿರಲಿಲ್ಲ. ಹೀಗಾಗಿಅಂತರಾಷ್ಟ್ರೀಯ ಮನ್ನಣೆಎನ್ನುವುದು ಬಹುತೇಕಅಮೇರಿಕದಲ್ಲಿ (ಒಂದು ರೀತಿಯ)ಮನ್ನಣೆಎಂಬ ಗೂಡಾರ್ಥದಲ್ಲೇ ಬಳಸಲ್ಪಡುತ್ತದೆ. ಅತ್ಯುತ್ತಮ ವಿದೇಶಿ ಚಲನಚಿತ್ರಕ್ಕೆ ನೀಡುವ ಪ್ರಶಸ್ತಿಯು, ವಿದೇಶಿ ಸಿನೆಮಾಗಳನ್ನು ಪ್ರಶಂಸಿಸುತ್ತಲೇಅವುಗಳು ಇಷ್ಟರಲ್ಲೇ ಅತಿಕ್ರಮಿಸಲು ಹೊರಟಿದ್ದಯುಎಸ್ ಚಿತ್ರೋದ್ಯಮದ ಮುಖ್ಯವಾಹಿನಿಯ ಪ್ರಶಸ್ತಿಗಳಿಂದ ದೂರ ಇರಿಸುವ ತಂತ್ರವಾಗಿತ್ತು.  

೧೯೨೯ರಲ್ಲಿಯೇ(ಅಕಾಡೆಮಿ ಅವಾರ್ಡ್ ನೀಡಲು ಪ್ರಾರಂಭಿಸಿದ ವರ್ಷ) ಅಮೇರಿಕವಿದೇಶಿ ಪೈಪೋಟಿಯ ಬಗ್ಗೆ ಜಾಗರೂಕವಾಗಿತ್ತು. ಅಂದಿನ ಜರ್ಮನಿಯ ಚಿತ್ರರಂಗದ ಪ್ರಾಬಲ್ಯವನ್ನು ಅರಿತುಕೊಂಡೇ, Ernst Lubitsch ಮತ್ತು Friedrich Wilhelm Murnau ಸೇರಿದಂತೆ , ಹಲವು ಜರ್ಮನ್ ನಿರ್ದೇಶಕರನ್ನು ಆಕರ್ಷಕ ಕಾಂಟ್ರಾಕ್ಟ್ಗಳನ್ನು ನೀಡಿ ಅಮೇರಿಕಕ್ಕೆ ಸೆಳೆದುಕಂಡಿತ್ತು. ಮುರ್ನಾವ್ ಯುಎಸ್ನಲ್ಲಿ ಸನ್ರೈಸ್(೧೯೨೭) ಎಂಬ ಅದ್ಭುತ ಸಿನೆಮಾವನ್ನು ನಿರ್ದೇಶಿಸಿದರು (ಮೂಕಿ ಚಿತ್ರಗಳ ಕಾಲದಲ್ಲಿಯೇ). ೧೯೨೯ರಲ್ಲಿ ಇದಕ್ಕೆಅತ್ಯುತ್ತಮ ಕಲಾತ್ಮಕ ಚಿತ್ರಎಂಬ ವಿಶೇಷ ಪ್ರಶಸ್ತಿ ನೀಡಲಾಯಿತು ( ಹೆಸರಿನ ಆಸ್ಕರ್ಅನ್ನು ನೀಡಿದ್ದು ಇದೊಂದೇ ಬಾರಿ).

ಸನ್‍ರೈಸ್(೧೯೨೭) ಚಿತ್ರದ ಟ್ರೇಲರ್

ಇದು ಒಂದು ರೀತಿಯಲ್ಲಿ ಸಿನೆಮಾವನ್ನು ಗೌರವಿಸುತ್ತ ಅಂತೆಯೇ ಅದನ್ನು ವಿಶೇಷ ವರ್ಗಕ್ಕೆಸೇರಿಸಿಬಿಡುವ ವಿಧಾನ. “ಅತ್ಯುತ್ತಮ ಚಲನಚಿತ್ರಪ್ರಶಸ್ತಿಯು ಸಂಪೂರ್ಣವಾಗಿ ಅಮೇರಿಕಾದ್ದವಾದ ಸಿನೆಮಾಗಳಿಗೆ ನೀಡಲಾಯಿತು. ಮುರ್ನಾವ್‍ ನಿಂದ ಪ್ರಭಾವಿತರಾಗಿದ್ದ, ಆದರೆ ಇನ್ನು ಮೆದುವಾದ ಹಾಗೂ ಭಾವುಕತೆಯ ಧ್ವನಿಯುಳ್ಳ, ಯುವ ಅಮೇರಿಕನ್ ನಿರ್ದೇಶಕ ಫ್ರಾಂಕ್ ಬೋರ್ಜೇಗಿ ಅವರಿಗೆ ಹಲವು ಅವಾರ್ಡ್ಗಳನ್ನು ನೀಡಲಾಯಿತು.

ಕಲಾತ್ಮಕ ಚಿತ್ರ“(ಮೂಲತಃ ಯುರೋಪಿಯನ್ ಪರಿಕಲ್ಪನೆ) ಎಂಬ ಯಾವುದೇ ಕಲ್ಪನೆ ಇಲ್ಲದ  ಅಮೇರಿಕ, ತನ್ನದೇ ಆದಆರ್ಟ್ ಹೌಸ್ ಸಿನೆಮಾಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿತು. ಇದು ವಾಸ್ತವದಲ್ಲಿವಿದೇಶಿ ಚಲನಚಿತ್ರಕ್ಕೆ ಸಮಾನಾರ್ಥಕವಾಗಿದ್ದು, ಸಿನೆಮಾಗಳ ವಿತರಣೆಯನ್ನು ಬಹಳ ಸೀಮಿತ ವಲಯಗಳಿಗೆ(“ಆರ್ಟ್ ಹೌಸ್ಸಿನೆಮಾ ಮಂದಿರಗಳು) ನಿಯಂತ್ರಿಸುವ ವಿಧಾನವಾಗಿತ್ತು.

೪೦ರ ದಶಕದಲ್ಲಿ “anti-Trust” ಕಾನೂನಿನಿಂದ ಹಳೆಯಸ್ಟುಡಿಯೋವ್ಯವಸ್ಥೆಯು ಹೊರತಳ್ಳಲ್ಲಟ್ಟಿದ್ದರಿಂದ ಅಮೇರಿಕಾದ ಚಿತ್ರೋದ್ಯಮ ೫೦ರ ದಶಕದ ಹೊತ್ತಿಗೆ ಅವನತಿಯ ಹಾದಿಯಲ್ಲಿತ್ತು. ಆದರೆ ಇದೇ ಸಮಯದಲ್ಲಿ ಯುದ್ಧದಿಂದ ಚೇತರಿಸಿಕೊಂಡಿದ್ದ ಯುರೋಪಿಯನ್ ಮತ್ತು ಜಪಾನಿನ ಚಿತ್ರೋದ್ಯಮಗಳು ಪ್ರಬಲವಾಗಿದ್ದವು. ಇದು ಜಪಾನಿನಲ್ಲಿ ಕುರುಸೋವಾ ಮತ್ತು ಮಿಜೋಗುಚಿಯ ಕಾಲವಾಗಿತ್ತು. ಅಂತೆಯೇ ಯುರೋಪಿನಲ್ಲಿ ಡೆ ಸಿಕಾ, ಫೆಲಿನಿ, ಬರ್ಗ್ಮನ್ ಹಾಗೂ ಫ್ರೆಂಚ್ ಮತ್ತು ಪೂರ್ವ ಯೋರೋಪಿನಹೊಸ ಅಲೆ ಕಾಲವಾಗಿತ್ತು. ಹೀಗಾಗಿ ಆಸ್ಕರ್ನಲ್ಲಿಅತ್ಯುತ್ತಮ ಚಲನಚಿತ್ರಸೇರ್ಪಡೆಯಾಗಿದ್ದು ಹಾನಿ ನಿಯಂತ್ರಣದ ತಂತ್ರವಷ್ಟೇ ಆಗಿತ್ತು. ವಿದೇಶಿ ಚಲನಚಿತ್ರಗಳನ್ನು ಗುರುತಿಸಿ, ವಿದೇಶಿ ನಿರ್ದೇಶಕರಿಗೆ ಅವರ ಚಿತ್ರಗಳು ಕಲಾತ್ಮಕವೆನ್ನುತ್ತ ಸ್ತುತಿಮಾಡಿ ಅವರನ್ನು ಮುಖ್ಯವಾಹಿನಿಯ ಅವಾರ್ಡ್ಗಳಿಂದ ಹಾಗೂ ಸಿನೆಮಾಗಳಿಂದ ದೂರವಿರಿಸುವುದು.  

ತಂತ್ರ ಎಷ್ಟು ಪರಿಣಾಮಕಾರಿಯಾಗಿತ್ತೆಂದು ಜಪಾನಿನ ಉದಾಹರಣೆಯಲ್ಲಿ ಚೆನ್ನಾಗಿ ಕಾಣಬಹುದು. ಭಾಷೆಯ ಅಡೆತಡೆಯಿದ್ದರೂ ಜಪಾನೀ ಚಿತ್ರರಂಗ  ಯುಎಸ್ ಮಾರುಕಟ್ಟೆಗೆ ಒಳದಾರಿಗಳನ್ನು ಸೃಷ್ಟಿಸಿತ್ತು. ಹೀಗಾಗಿ  ಅಮೇರಿಕಾದ ಅಕಾಡೆಮಿ ೧೯೫೧ ರಿಂದ ೧೯೫೫ರ ಕಾಲದಲ್ಲಿ ಜಪಾನೀ ಸಿನೆಮಾಗಳಿಗೆ ಅನಿವಾರ್ಯವಾಗಿ ಮೂರು ಗೌರವಾನ್ವಿತ ಆಸ್ಕರ್ಗಳನ್ನು ನೀಡಿತು. ೧೯೫೭ರಿಂದೀಚೆಗೆ ಜಪಾನ್ ಚಿತ್ರಗಳನ್ನು ಪ್ರಶಸ್ತಿಗೆಂದು ಒಪ್ಪಿಸುತ್ತಲೇ ಇದ್ದರೂ ಇಷ್ಟೆಲ್ಲ ವರ್ಷಗಳಲ್ಲಿ ಕೇವಲ ಒಂದಕ್ಕೆ ಆಸ್ಕರ್ ಸಿಗುವಂತಾಗಿದೆ(೨೦೦೮). ಕೆಲವು ಯುರೋಪಿಯನ್ ನಿರ್ದೇಶಕರು ತರಹದ ಅವಾರ್ಡ್ಗಳ ಪರಿಕಲ್ಪನೆಯೊಡನೆಯೇ ಅಸಡ್ಡೆ ಹೊಂದಿ; ಉದಾಹರಣೆಗೆ ಫ್ರೆಂಚ್ಹೊಸ ಅಲೆ ಸಿನೆಮಾಗಳು, ಪ್ರಶಸ್ತಿಗೆಂದು ಒಪ್ಪಿಸಲೇ ಇಲ್ಲ.

೧೯೫೭, ಭಾರತ ಆಸ್ಕರ್ಗೆ ಸಿನೆಮಾ ಕಳುಹಿಸಿದ ಮೊದಲನೇ ವರ್ಷವಾಗಿತ್ತು. ಕೊನೆಯಲ್ಲಿ ಪ್ರಶಸ್ತಿಯನ್ನು ಗೆಲ್ಲದಿದ್ದರೂ ನಾಮಿನೇಟ್ ಆದ ಐದು ಚಿತ್ರಗಳಲ್ಲಿಮದರ್ ಇಂಡಿಯಾಒಂದಾಗಿದ್ದು ಉತ್ತಮ ಸಾಧನೆಯೇ ಸರಿ. ಅದಾದ ಮೇಲೆ ಕೇವಲ ಎರಡು ಭಾರತೀಯ ಚಿತ್ರಗಳು ನಾಮಿನೇಟ್ ಆಗಿವೆ. ೧೯೮೮ರಲ್ಲಿ ಮೀರಾ ನಾಯರ್ ಅವರಸಲಾಮ್ ಬಾಂಬೆಮತ್ತು ೨೦೦೧ರಲ್ಲಿ ಗೊವಾರಿಕರ್ಅವರಲಗಾನ್‘. ೨೦೦೭ರಲ್ಲಿ ಎರಡು ಹಿಂದಿ ಸಿನಿಮಾಗಳು ಸಲ್ಲಿಸಿದ ಸಿನೆಮಾಗಳ ಪಟ್ಟಿಯಲ್ಲಿದ್ದವು(ಭಾರತದಂದ ಆರ್ ಮೆಹ್ರಾ ಅವರರಂಗ್ ದೆ ಬಸಂತಿಹಾಗೂ ಕೆನೆಡಾದಿಂದ ದೀಪಾ ಮೆಹ್ತಾ ಅವರವಾಟರ್‘) ಆದರೆ ಕೇವಲವಾಟರ್ನಾಮಿನೇಟ್ ಆಯಿತು. ಭಾರತವನ್ನು ಹೊರತುಪಡಿಸಿ ಬೇರೆ ದೇಶಗಳಿಗೆ ಭಾರತೀಯ ಭಾಷೆಯ ಸಿನೆಮಾವನ್ನು ಸಲ್ಲಿಸಲು ಮೊದಲು ಬಾರಿಗೆ ಸಾಧ್ಯವಾದದ್ದು ಇದೇ ಬಾರಿಯಾಗಿತ್ತು. ಭಾರತ ಸ್ವತಃ ೧೯೯೪ರಲ್ಲಿ ಯುಎಸ್/ಯುಕೆ ನಿರ್ಮಿತ ಹಿಂದಿ ಸಿನೆಮಾ, ಇಸ್ಮಾಯಿಲ್ ಮರ್ಚೆಂಟ್ ಅವರ ನಿರ್ದೇಶನದ ಅನಿತಾ ದೇಸಾಯಿ ಅವರ ಕಾದಂಬರಿ ಆಧಾರಿತಇನ್ ಕಸ್ಟಡಿ‘, ಅನ್ನು ಸಲ್ಲಿಸಿತ್ತು. ಆದರೆ ಅದೇ ೨೦೦೧ರಲ್ಲಿ ಆಸಿಫ್ ಕಪಾಡಿಯಾ ನಿರ್ದೇಶನದ ಇರ್ಫಾನ್ ಖಾನ್ ನಟಿಸಿರುವ ಬ್ರಿಟಿಷ್ ಚಿತ್ರ ವಾರಿಯರ್ ಅನ್ನು, ಹಿಂದಿ ಬ್ರಿಟಿಷ್ ಭಾಷೆಯಲ್ಲ ಎಂಬ ಕಾರಣಕ್ಕೆ ಸ್ವೀಕರಿಸಿರಲಿಲ್ಲ. ಹೀಗಾಗಿಯೇ ಸಿನೆಮಾ ಎಷ್ಟು ಹೆಸರು ಮಾಡಬೇಕಿತ್ತೋ ಅಷ್ಟು ಹೆಸರು ಮಾಡಲಿಲ್ಲ. ಅನುಭವ ಬ್ರಿಟಿಷ್ ಕಂಪನಿಗಳಿಗೆ ಬ್ರಿಟಿಷ್ ಇಂಡಿಯನ್ ನಿರ್ದೇಶಕರ ಸಿನೆಮಾಗಳನ್ನು ನಿರ್ಮಿಸುವಲ್ಲಿ ಉತ್ಸಾಹ ಕುಂದಿಸುವಂತೆಯೂ ಕೆಲಸ ಮಾಡಿರಬಹುದು. ಇದು ಭಾರತೀಯ ಭಾಷೆಗಳ ಸಿನೆಮಾ ನಿರ್ಮಿಸಲು ಬ್ರಿಟನ್ ಮತ್ತೊಂದು ಕೇಂದ್ರದಂತೆ ಬೆಳೆಯಲು ಸಾಧ್ಯವಾಗಲಿಲ್ಲ.

ನಾಮಿನೇಷನ್ ಪ್ರಕ್ರಿಯೆ ಸ್ವಲ್ಪ ಪಾರದರ್ಶಕವಲ್ಲದಿದ್ದರೂ, ಆಯ್ಕೆಯಾದ ಸಿನೆಮಾಗಳು ಕಲಾತ್ಮಕ ಪ್ರಶಂಸೆಯಷ್ಟೇ ರಾಜಕೀಯ ಅನುಮೋದನೆಯನ್ನು ಬಿಂಬಿಸಿದರೂ, ಈ ರೀತಿ ಆಸ್ಕರ್‍ನಲ್ಲಿ ಬದಿಗೊತ್ತಲ್ಪಟ್ಟಿರುವಂತಹ ವಿಭಾಗದಲ್ಲಿ ನಾಮಿನೇಟ್ ಆಗುವುದರಿಂದ ಸಿನೆಮಾ ಹೆಚ್ಚಿನ ಜನರನ್ನು ತಲುಪತ್ತದೇನೆಂದೆಲ್ಲ. ಸಿನೆಮಾದ ಗಳಿಕೆಯ ಮೇಲೂ ಪರಿಣಾಮವೇನಿಲ್ಲ. ಬದಲಿಗೆ ಸಲ್ಲಿಸಲ್ಪಟ್ಟರೂ ನಾಮಿನೇಟ್ ಆಗದಿರುವುದು ‘ಅಂತರಾಷ್ಟ್ರೀಯ’ವಾಗಿ ಸಿನೆಮಾವನ್ನು ಕೆಳತಳ್ಳುವ ಪರಿಣಾಮಕಾರೀ ವಿಧಾನ. ಅಮೇರಿಕನ್ನರು ರನ್ನರ್ ಅಪ್‍ಗಳಿಗೆ ಹೇಳುವಂತೆ “close…but no cigar”. ಇದು ಒಬ್ಬ ವ್ಯಕ್ತಿ ತನ್ನನ್ನು ಬಿ.ಎ(ಫೇಲ್) ಎಂದು ಹೇಳಿಕೊಂಡಂತೆ.

೨೦೧೭ರಲ್ಲಿ ವಿಸಾರಣೈ ಭಾರತದ ಸಲ್ಲಿಕೆಯಾಗಿತ್ತು ಆದರೆ ನಾಮಿನೇಟ್ ಆಗಿರಲಿಲ್ಲ. ನಿರ್ದೇಶಕ/ನಿರ್ಮಾಪಕ ಶಂಕರ್ ಮತ್ತು ನಟ/ನಿರ್ದೇಶಕ ಕಮಲ ಹಾಸನ್ ಅವರ ಪಸಿದ್ಧಿ ಉತ್ತುಂಗಕ್ಕೇರಿದ ಕಾಲದಲ್ಲಿ ಹಲವು ತಮಿಳು ಸಿನಿಮಾಗಳನ್ನು ಭಾರತ ಸಲ್ಲಿಸಿದೆ ಆದರೆ ಯಾವುದೂ ನಾಮಿನೇಟ್ ಆಗಲಿಲ್ಲ. ಇಷ್ಟೇ ಅಯಶಸ್ಸಿನೊಂದಿಗೆ, ಸಿಂಪಡನೆಯೆಂಬಂತೆ ಆಗೀಗ ಬೇರೆ ಭಾಷೆಯ(ಬೆಂಗಾಲಿ, ಮರಾಠಿ, ಮಲಯಾಳಂ ಹಾಗೂ ಗುಜರಾತಿ ಕೂಡ) ಸಿನೆಮಾಗಳನ್ನೂ ಸಲ್ಲಿಸಲಾಗಿದೆ. ಈ ಮುನ್ನ ವಿಮರ್ಶಿಸಿರುವ ‘ಕೋರ್ಟ್’ ಕೂಡ ಮತ್ತೊಂದು ನಾಮಿನೇಟ್ ಆಗದ ಭಾರತೀಯ ಸಲ್ಲಿಕೆ(೨೦೧೫).

ಇದರರ್ಥ ಇಷ್ಟೆಲ್ಲ ವರ್ಷಗಳಲ್ಲಿ ಸಲ್ಲಿಸಲ್ಪಟ್ಟರೂ ನಾಮಿನೇಟ್ ಆಗದ ಕೆಲವು ಅತ್ಯುತ್ತಮ ಭಾರತೀಯ ಸಿನೆಮಾಗಳು ಇಲ್ಲ ಎಂದೇನಲ್ಲ. ಪ್ರಾರಂಭದ ದಿನಗಳಲ್ಲಂತೂ, ಭಾರತದ ಸಿನೆಮಾಗಳನ್ನು ‘ಅಂತರಾಷ್ಟ್ರೀಯ’ ಮಂಡಳಿಗಳು ಭಾರತದ ಚಲನಚಿತ್ರಗಳನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಿದ್ದಾಗ, ಇದು ಬಹಳ ಸತ್ಯ. ೧೯೫೮ರಲ್ಲಿ ಬಿಮಲ್ ರಾಯ್ ಅವರ ‘ಮಧುಮತಿ’ ಸಲ್ಲಿಕೆಯಾಗಿತ್ತು ಹಾಗೂ ೧೯೫೯ರಲ್ಲಿ ಸತ್ಯಜಿತ್ ರೇ ಅವರ ‘ಅಪುರ್ ಸಂಸಾರ್’ ಸಲ್ಲಿಕೆಯಾಗಿತ್ತು. ೧೯೬೨ರಲ್ಲಿ ಗುರುದತ್ ಅವರ ಅತ್ಯುತ್ತಮ ಚಿತ್ರ ‘ಸಾಹಿಬ್ ಬೀಬಿ ಔರ್ ಗುಲಾಮ್’ ಸಲ್ಲಿಕೆಯಾಗಿತ್ತು. ವಿಜಯ್ ಆನಂದ್ ಅವರ ‘ಗೈಡ್’ ಅನ್ನು ೧೯೬೫ರಲ್ಲಿ ಸಲ್ಲಿಸಲಾಗಿತ್ತು, ೧೯೭೪ರಲ್ಲಿ ಎಂ ಎಸ್ ಸತ್ಯು ಅವರ ‘ಗರಂ ಹವಾ’ ಮತ್ತು ೧೯೭೭ರಲ್ಲಿ ಸತ್ಯಜಿತ್ ರೇ ಅವರ ‘ಶತರಂಜ್ ಕೆ ಖಿಲಾಡಿ’. ಮತ್ತೆ  ದೀಪಾ ಮೆಹ್ತಾ ಅವರ ಅರ್ತ್(೧೯೯೯), ಕಮಲ್ ಹಾಸನ್ ಅವರ ‘ಹೇಯ್ ರಾಮ್'(೨೦೦೦) ಮತ್ತು ಮೆಹ್ರಾರವರ ‘ರಂಗ್ ದೆ ಬಸಂತಿ(೨೦೦೬) ಸಿನೆಮಾಗಳು ಇನ್ನು ಒಳ್ಳೆಯ ಸ್ವಾಗತವನ್ನು ಬಯಸಿದ್ದಿರಬಹುದು. ೧೯೯೯ರಲ್ಲಿ ಬೇರೆ ದೇಶಗಳಿಂದ ಸ್ಪರ್ಧೆ ಕಡಿಮೆಯಿದ್ದಾಗ ಭಾರತದಿಂದ ಸಲ್ಲಿಸಲ್ಪಟ್ಟ ‘ಅರ್ತ್’ ನಾಮಿನೇಟ್ ಆಗದಿದ್ದದ್ದು, ಮತ್ತು ಕೆನಡಾದಿಂದ ಸಲ್ಲಿಸಲ್ಪಟ್ಟ ‘ವಾಟರ್’ ೨೦೦೭ರಲ್ಲಿ ಪ್ರಬಲ ಸ್ಪರ್ಧೆಯಿದ್ದೂ ನಾಮಿನೇಟ್ ಆಗಿದ್ದು ಹೇಗೆ ಎಂದು ನಮ್ಮಲ್ಲಿ ಪ್ರಶ್ನೆಯೇಳಬಹುದು.

ಇದಕ್ಕೆ ಸರಿಯಾಗಿ ಹಲವು ಸಾಧಾರಣ ಚಿತ್ರಗಳನ್ನು, ಬಹುಶಃ ಅವು ಸೂಕ್ತ ಬಗೆಯಲ್ಲಿ ‘ರಾಜಕೀಯವಾಗಿ ಒಪ್ಪಿತ’ ಎಂದೇನೋ ಅಂದುಕೊಂಡು, ಸಲ್ಲಿಸಲಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ, ಚಿತ್ರೋತ್ಸವದ ಸಿನೆಮಾಗಳಂತೆಯೇ ಆಸ್ಕರ್ ಸಲ್ಲಿಕೆ ನಮಗೆ ಸಿನೆಮಾದ ಗುಣಮಟ್ಟದ ಕುರಿತು ಏನನ್ನೂ ಹೇಳುವುದಿಲ್ಲ. ನಾಮಿನೇಶನ್ ಆಗಿರುವುದೋ ಎಂಬುದು ಕೂಡ ನಮಗೆ ಮಹತ್ವದ್ದೇನನ್ನೂ ಹೇಳುವುದಿಲ್ಲ. ಇದು ಮಾರುಕಟ್ಟೆಯ ವಿಷಯದ ಬಗ್ಗೆಯಷ್ಟೇ ತಿಳಿಸಬಲ್ಲದು. ಇಷ್ಟು ಹೇಳಿ ನಾನು ಯಾವುದೇ ಪೂರ್ವಗ್ರಹವಿಲ್ಲದೇ ಭಾರತದ ಇತ್ತೀಚಿನ ಸಲ್ಲಿಕೆಯಾದ ತಮಿಳು ನಿರ್ದೇಶಕ ವೆಟ್ರಿಮಾರನ್ ಅವರ ವಿಸಾರಣೈ ಅನ್ನು ವಿಮರ್ಶಿಸ ಹೊರಡುತ್ತೇನೆ.

ಮುಂದೆ ವಿಮರ್ಶಿಸಲ್ಪಡಲಿರುವ ಸಿನೆಮಾಗಳು: ವಿಸಾರಣೈ (ವೆಟ್ರಿಮಾರನ್ ಅವರ ನಿರ್ದೇಶನದ  ೨೦೧೫ರ ತಮಿಳು ಸಿನೆಮಾ) ಮತ್ತು ಆಡುಕಲಂ (ವೆಟ್ರಿಮಾರನ್ ಅವರ ನಿರ್ದೇಶನದ ೨೦೧೧ರ ತಮಿಳು ಸಿನೆಮಾ)

ಇಂಗ್ಲೀಷಿ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ


ಅನುವಾದ : ಸುಬ್ರಮಣ್ಯ ಹೆಗಡೆ
ಮೂಲತಃ ಶಿರಸಿಯವರಾದ ಸುಬ್ರಹ್ಮಣ್ಯ ಹೆಗಡೆ ಈಗ ತಿರುವನಂತಪುರಂನಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಅನುಸಂಧಾನ ಕೇಂದ್ರದಲ್ಲಿ ಭೌತಶಾಸ್ತ್ರದ ಸಂಶೋಧನಾ ವಿದ್ಯಾರ್ಥಿ. ಆಗೀಗ ಕವಿತೆಗಳನ್ನು ಬರೆಯುತ್ತಾರೆ. ಬ್ಲಾಗಿಗ.

ಪ್ರತಿಕ್ರಿಯಿಸಿ