ಎ. ಕೆ. ರಾಮಾನುಜನ್ ಧ್ವನಿಯಲ್ಲಿ ತಿರುಮಂಗೈ ಆಳ್ವಾರ್ ಹತ್ತು ಪದ್ಯಗಳು

ತಿರುಮಂಗೈ ಆಳ್ವಾರ್ ೮ ನೇ ಶತಮಾನದ ತಮಿಳಿನ ವೈಷ್ಣವ ಸಂಪ್ರದಾಯದ ಹನ್ನೆರಡು ಆಳ್ವಾರ್ ಸಂತರಲ್ಲಿ ಕೊನೆಯವರು. ಚೋಳಮಂಡಲಂ ಆರ್ಟಿಸ್ಟ್ಸ್ ವಿಲೇಜ್ ನಲ್ಲಿ ರಾಮಾನುಜನ್ ಈ ಪದ್ಯಗಳನ್ನು ಓದಿದ್ದಾಗ ಅಲ್ಲಿಯೇ ಇದ್ದ ಚಿತ್ರಕಾರರಾದ ವೇಲು ವಿಶ್ವನಾದನ್ ಮತ್ತು ಎಸ್.ಜಿ. ವಾಸುದೇವ್ ಇದನ್ನು ರೆಕಾರ್ಡ್ ಮಾಡಿಕೊಂಡರು. ಇದು ೧೯೯೩ರಲ್ಲಿ ರಾಮಾನುಜನ್ ನಿಧನಕ್ಕೆ ಮುನ್ನ ಅವರ ಭಾರತದ ಕೊನೆಯ ಭೇಟಿಯಾಗಿತ್ತು. ಆ ಸಮಯಕ್ಕೆ ಈ ಅನುವಾದಗಳು ಪ್ರಕಟಗೊಂಡಿರಲಿಲ್ಲ. ಒಂದು ವರ್ಷದ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಹೊರತಂದ ಇಂಡಿಯನ್ ಲಿಟರೇಚರ್ ಜರ್ನಲ್ ನ ವಿಶೇಷ ಸಂಚಿಕೆಯಲ್ಲಿ ಇವು ಪ್ರಕಟವಾದವು.


ಪ್ರತಿಕ್ರಿಯಿಸಿ