ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೩

ಅಂಬೇಡ್ಕರ್ ಪ್ರಕಾರ ಆಧುನಿಕತೆಯು ನೈತಿಕ ಮೌಲ್ಯಗಳನ್ನು ಸೃಷ್ಟಿಸುವುದಿಲ್ಲ. ಮಾನವ ಸಮಾನತೆಯನ್ನು ಎತ್ತಿ ಹಿಡಿಯಲು ನೈತಿಕ ಬದುಕು ಅತ್ಯಗತ್ಯ. ಮೌಲಿಕ ಜೀವನ ಕ್ರಮದಿಂದ ಮಾತ್ರ ಮನುಷ್ಯನನ್ನು ಮನುಷ್ಯನಾಗಿ ಕಾಣಬಹುದೇ ಹೊರತು ಕೇವಲ ತಂತ್ರಜ್ಞಾನ ಹಾಗೂ ಆಧುನಿಕಯುಗದ ಜ್ಞಾನದಿಂದ ಮಾತ್ರ ಮನುಷ್ಯ ಸಂಬಂಧಗಳನ್ನು ಬೆಳೆಸುವುದು ಸಾಧ್ಯವಿಲ್ಲ . ಹಾಗಾಗಿ ಅಂಬೇಡ್ಕರ್ ಪ್ರಜ್ಞಾಪೂರ್ವಕವಾಗಿಯೇ ಬುದ್ದನ ಭೋದನೆಗಳ ಮೊರೆಹೋಗುತ್ತಾರೆ ಮತ್ತು ಧರ್ಮ ಸಾರ್ವಜನಿಕ ಬದುಕಿಗೆ ಅಗತ್ಯ ಎಂದು ವಾದಿಸುತ್ತಾರೆ. ಆದರೆ ಈಗಿರುವ ಧರ್ಮವಲ್ಲ ಬದಲಾಗಿ ಸಮಾನತೆಯನ್ನು ಸಾರುವ ಬೇರೆಯೇ ಧರ್ಮದ ಅಗತ್ಯತೆ ಇದೆ ಎಂಬುದು ಅವರ ವಾದವಾಗಿತ್ತು. ಹಾಗಾಗಿ ಬೌದ್ದ ಧರ್ಮದ ದೀಕ್ಷೆಯನ್ನು ಸ್ವೀಕರಿಸುವಾಗಲೂ ಸಹ ಆವರ ಮೂರನೇ ವಾಕ್ಯ “ಸಂಘಂ ಶರಣಂ ಗಚ್ಛಾಮಿ” ಯನ್ನು ಹೇಳುವುದಿಲ್ಲ .

ಈ ಸರಣಿ ಇಲ್ಲಿಗೆ ಮುಗಿಯುತ್ತದೆ .



ಛಾಯಾಗ್ರಹಣ : ನಿತೇಶ್ ಕುಂಟಾಡಿ | ಕಬೀರ್ ಮಾನವ
ಸಂಕಲನ : ವಿವೇಕ್ ಎಸ್.ಕೆ
ಇಂಗ್ಲೀಶ್ ಉಪಶೀರ್ಷಿಕೆಗಳು : ಶ್ರೀಕಾಂತ್ ಚಕ್ರವರ್ತಿ

ಭಾಗ ೧ : http://ruthumana.com/2018/04/14/valerian-rodrigues-interview-part-1/

ಭಾಗ ೨ : http://ruthumana.com/2018/04/16/valerian-rodrigues-interview-part-2/

ಪ್ರತಿಕ್ರಿಯಿಸಿ