ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ – ಕಂತು ೯

ಪ್ರಯೋಗದಲ್ಲಿ ಒರಟು ಹಾಗೂ ಶಿಷ್ಟವಲ್ಲದ ದಲಿತ , ಪ್ರಾದೇಶಿಕ ಭಾಷೆಯನ್ನು ಇತರ ಭಾಷಾ ಪ್ರಭೇದಗಳಂತೆಯೇ ಸಮರ್ಥವಾಗಿ ಬಳಸಿ , ಕಣ್ಣೊಡಲ ತುಂಬುವ ಸಶಕ್ತ ರೂಪಕಗಳೊಡನೆ ದೇವನೂರು ಮಹಾದೇವ ಬರೆದ  ಕೃತಿ ‘ಕುಸುಮಬಾಲೆ’ ಕನ್ನಡ ಕಾದಂಬರಿ ಇತಿಹಾಸದಲ್ಲಿ a sudden leap  ಅನ್ನಿಸಿಕೊಂಡು ಹಲವು ಚರ್ಚೆಗೆ ದಾರಿಯಾಯಿತು. ತನ್ನ ವಿಶಿಷ್ಟವಾದ ಕಥನ ಕ್ರಮದಿಂದ ಓದುಗ ಮತ್ತು ವಿಮರ್ಶಕ ವರ್ಗಗಳೆರಡರಿಂದಲೂ ಪ್ರಶಂಶೆಗೆ ಪಾತ್ರವಾಯಿತು .
ಕುಸುಮಬಾಲೆ ಮೊತ್ತ ಮೊದಲನೆಯದಾಗಿ ೧೯೮೫ರಲ್ಲಿ ಸುದ್ದಿ ಸಂಗಾತಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು .  ಅದು ಪುಸ್ತಕರೂಪದಲ್ಲಿ ಹೊರಬಂದದ್ದು ೧೯೮೮ ರಲ್ಲಿ . ಇದಾದ ಮಾರನೆಯ ವರ್ಷದಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ಕೃತಿಕಾರ ದೇವನೂರು ಮಹಾದೇವರಿಗೆ  ಕನ್ನಡದಲ್ಲಿ ಆ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಲೇಖಕ ಅನ್ನುವ ಗರಿ ಮೂಡಿಸಿತು .
ಸರಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ಋತುಮಾನಕ್ಕಾಗಿ ಕುಸುಮಬಾಲೆಯನ್ನು ಓದಿದ್ದಾರೆ.


ಕಂತು ೧ : https://ruthumana.com/2019/03/23/kusumabale-reading-a-m-shivsaway-episode-1/
ಕಂತು ೨ : https://ruthumana.com/2019/03/29/kusumabale-reading-a-m-shivaswamy-episode-2/
ಕಂತು ೩ : https://ruthumana.com/2019/04/03/kusumabale-reading-a-m-shivaswamy-episode-3/
ಕಂತು ೪ : https://ruthumana.com/2019/04/07/kusumabale-reading-a-m-shivaswamy-episode-4/
ಕಂತು ೫ : https://ruthumana.com/2019/04/12/kusumabale-reading-a-m-shivaswamy-episode-5/
ಕಂತು ೬ : https://ruthumana.com/2019/04/17/kusumabale-reading-a-m-shivaswamy-episode-6/
ಕಂತು ೭ : https://ruthumana.com/2019/04/24/kusumabale-reading-a-m-shivaswamy-episode-7/
ಕಂತು ೮ : https://ruthumana.com/2019/05/01/kusumabale-reading-a-m-shivaswamy-episode-8/

One comment to “ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ – ಕಂತು ೯”
  1. ಪ್ರತಿ ದಿನ ಓದಿನ ಕಂತಿಗಾಗಿ ಕಾತರಿಸಿ ಕಾಯುತ್ತಾ ಇದ್ದ ನನಗೆ ಇವತ್ತು ಪೂರ್ತಿಯಾಗಿ ಕಥೆ ದಕ್ಕಿತು. ಕಥೆಯ ಓದನ್ನು ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನಿಸುತ್ತದೆ. ಕೇಳುತ್ತಲೇ ಕಥೆಯ ಕಲ್ಪನೆಯೂ ಸಾಧ್ಯವಾಗುವುದು. ಕುಸುಮಬಾಲೆಯೂ ಅದರ ಭಾಷೆಯು ಕಷ್ಟವಾಗಿ ಪರಿಣಮಿಸಿದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದಕ್ಕಾಗಿ ಋತುಮಾನಕ್ಕೂ ಹಾಗೂ ಓದಿದ ಎ ಎಂ ಶಿವಸ್ವಾಮಿ ಗುರುಗಳಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು.

ಪ್ರತಿಕ್ರಿಯಿಸಿ