ರಹಮತ್ ತರೀಕೆರೆ ಮಾಡಿರುವ ಜಿ. ಎಚ್. ನಾಯಕ ಸಂದರ್ಶನ

ಈ ಸಂದರ್ಶನವನ್ನು ಹಂಪಿ ವಿಶ್ವವಿದ್ಯಾನಿಲಯದ ಪ್ರಸಾರಂಗ ಪ್ರಕಟಿಸುವ “ಕನ್ನಡ ಅಧ್ಯಯನ” ತ್ರೈಮಾಸಿಕಕ್ಕೆ 2002 ಇಸವಿಯಲ್ಲಿ ರಹಮತ್ ತರೀಕೆರೆ ಮಾಡಿರುವರು.

ವಿಮರ್ಶಕರಷ್ಟೇ ಅಲ್ಲದೆ , ಸಾಮಾಜಿಕ , ರಾಜಕೀಯ , ಸಾಂಸ್ಕೃತಿಕ ಚಿಂತಕರೂ ಆಗಿರುವ ಗೋವಿಂದರಾಯ ಹಮ್ಮಣ್ಣ ನಾಯಕ ತಮ್ಮ ದಿಟ್ಟ ನಿಲುವಿಗೆ, ಖಚಿತ ಅಭಿಪ್ರಾಯಕ್ಕೆ ಹೆಸರಾದವರು . ಮೂಲತಃ ಉತ್ತರಕನ್ನಡ ಜಿಲ್ಲೆಯವರಾದ ಪ್ರೊ. ನಾಯಕ ಅವರ ‘ನಿರಪೇಕ್ಷ ’ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಅವರ ಮತ್ತೊಂದು ವಿಮರ್ಶಾ ಕೃತಿ ‘ನಿಜದನಿ’ಯು ವಿ.ಎಂ.ಇನಾಂದಾರ ಸ್ಮಾರಕ ಬಹುಮಾನಕ್ಕೆ ಪಾತ್ರವಾಗಿದೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಜಿ ಎಸ್ ಶಿವರುದ್ರಪ್ಪ ಸಾಹಿತ್ಯ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಕಬಡ್ಡಿ ಆಟಗಾರರಾಗಿದ್ದ ಅವರು ಮೈಸೂರು ರಾಜ್ಯ ತಂಡದಲ್ಲಿದ್ದವರು. ಮಹಾರಾಜ ಕಾಲೇಜಿನ ತಂಡದ ನಾಯಕರಾಗಿದ್ದರು. ಯಕ್ಷಗಾನ ರಂಗಭೂಮಿಯಲ್ಲಿ ಹಲವು ಪಾತ್ರಗಳನ್ನು ಧರಿಸಿದವರು.

ರಾಜ್ಯ ಸರಕಾರ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಪಂಪ ಪ್ರಶಸ್ತಿಗೆ ಪಾತ್ರರಾಗಿರುವ ಪ್ರೊ.ನಾಯಕ ಅವರು ನೇರ, ನಿಷ್ಠುರ, ಖಚಿತ, ನಿಲುವುಗಳಿಗೆ ಹೆಸರಾದವರು. ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಚಿಂತಕರೂ ಆದ ಅವರು ಸಮಸಮಾಜಕ್ಕಾಗಿ ತುಡಿಯುತ್ತಾರೆ. ಗಾಂಧಿ, ಅಂಬೇಡ್ಕರ್, ಲೋಹಿಯಾ ಕುರಿತು ಅವರು ಧೇನಿಸಿದವರು. ಅನೇಕ ಸಾಮಾಜಿಕ- ರಾಜಕೀಯ ಹೋರಾಟಗಳಲ್ಲಿ ಭಾಗವಹಿಸಿದವರು.

ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ವಿನಯ ವಿಮರ್ಶೆ (1991), ಸಕಾಲಿಕ (1995), ಹರಿಶ್ಚಂದ್ರ ಕಾವ್ಯ- ಓದು ವಿಮರ್ಶೆ, ಗುಣಗೌರವ( ವ್ಯಕ್ತಿಚಿತ್ರಗಳು, 2002), ದಲಿತ ಹೋರಾಟ- ಗಂಭೀರ ಸವಾಲುಗಳು (2004), ಕೃತಿಸಾಕ್ಷಿ (ಸಾಹಿತ್ಯ ವಿಮರ್ಶೆ, 2006), ಸ್ಥಿತಿ ಪ್ರಜ್ಞೆ (2007), ಬಾಳು- ಆತ್ಮಕಥಾನಕ (ಅಪೂರ್ಣ), ಮತ್ತೆ ಮತ್ತೆ ಪಂಪ (2009) ಸಾಹಿತ್ಯ ಸಮೀಕ್ಷೆ (2009) ಹಾಗೂ ಉತ್ತರಾರ್ಧ (2001) ಅವರ ಇತರೆ ಸಾಹಿತ್ಯ ವಿಮರ್ಶಾ ಕೃತಿಗಳು.

ಸಂವೇದನೆ(ಎಂ ಗೋಪಾಲಕೃಷ್ಣ ಅಡಿಗರ ಗೌರವ ಗ್ರಂಥ), ಕನ್ನಡ ಸಣ್ಣ ಕಥೆಗಳು, ಹೊಸಗನ್ನಡ ಕವಿತೆ, ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ, ಶತಮಾನದ ಕನ್ನಡ ಸಾಹಿತ್ಯ ಸಂಪುಟ-1’ ಕೃತಿಗಳನ್ನು ಅವರು ಸಂಪಾದಿಸಿದ್ದಾರೆ.

ಜಿ ಎಚ್ ನಾಯಕರ ಆತ್ಮ ಕಥನ ಬಾಳು. ಅಂಕೋಲದ ರಾಘವೇಂದ್ರ ಪ್ರಕಾಶನದಿಂದ ಪ್ರಕಟ.



ಪೋಸ್ಟರ್ : ಗೌರೀಶ್ ಕಪನಿ

]ಧ್ವನಿ ಸಂಸ್ಕ್ರರಣೆ : ಶ್ರೀಕಾಂತ್ ಚಕ್ರವರ್ತಿ

ಪ್ರತಿಕ್ರಿಯಿಸಿ