ಸಂವಿಧಾನಕ್ಕೆ ದ್ರೋಹ ಬಗೆಯಬೇಡಿ, ಪೌರತ್ವ ತಿದ್ದುಪಡಿ ಮಸೂದೆಯನ್ನು ವಾಪಸ್ಸು ಪಡೆಯಿರಿ

“ಸಂವಿಧಾನದ ಮೂಲ ಆಶಯಕ್ಕೆ ವಿರೋಧವಾಗಿ ಭಾರತದ ಪೌರತ್ವವು ಧರ್ಮದ ಆಧಾರದಲ್ಲಿ ನಿರ್ಧಾರಗೊಳ್ಳುವುದನ್ನು ಋತುಮಾನ ಬಳಗ ವಿರೋಧಿಸುತ್ತದೆ ಹಾಗೂ ಪೌರತ್ವ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸುತ್ತದೆ”.

ದೇಶದಾದ್ಯಂತ ಹಲವು ಕ್ಷೇತ್ರಗಳ ಜನರು ವಿವಿಧ ಹೇಳಿಕೆಗಳ ಮೂಲಕ ಈ ಮಸೂದೆಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ವಿವಿಧ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಮುದಾಯಗಳ ಜನರು ಸಹಿ ಮಾಡಿರುವ ಹೇಳಿಕೆಯನ್ನು ಇಂಡಿಯನ್ ಕಲ್ಚರಲ್ ಫೋರಮ್ ಪ್ರಕಟಿಸಿದೆ. ಋತುಮಾನದ ಸಂಪಾದಕ ಬಳಗ ಈ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತದೆ ಮತ್ತು ಇನ್ನು ಮುಂದೆ ಮಸೂದೆ ಹಿಂಪಡೆಯುವವರೆಗೆ ಋತುಮಾನದ ಎಲ್ಲಾ ಪ್ರಕಟನೆಗಳ ಕೊನೆಯಲ್ಲಿ ಖಂಡನಾ ವಾಕ್ಯವನ್ನು ಲಗತ್ತಿಸುತ್ತದೆ.

ಸ್ವಾತಂತ್ರದ ನಂತರ ಭಾರತೀಯ ಪೌರತ್ಯವು ಸಂವಿಧಾನದಲ್ಲಿ ಬಲವಾಗಿ ಬೇರೂರಿದೆ. ಸಂವಿಧಾನವು ಪೌರತ್ವದ ನಿಬಂಧನೆಗಳಲ್ಲಿ ಲಿಂಗ, ಜಾತಿ, ಧರ್ಮ, ವರ್ಗ, ಸಮುದಾಯ ಅಥವಾ ಭಾಷೆಗಳನ್ನು ಆಧರಿಸದೆ ಸಮಾನತೆಯ ಮೂಲತತ್ತ್ವಗಳನ್ನು ಎತ್ತಿಹಿಡಿಯುತ್ತದೆ.

ಭಾರತದ ಸ್ವಾತಂತ್ರ ಹೋರಾಟಕ್ಕೆ ಮಾರ್ಗದರ್ಶನ ಮಾಡಿದ ಎಲ್ಲರನ್ನೂ ಒಳಗೊಳ್ಳುವ ಹಾಗೂ ವೈವಿಧ್ಯತೆಯ ಕಾಣ್ಕೆಯನ್ನು ೨೦೧೯ ರ ಪೌರತ್ವ(ತಿದ್ದುಪಡಿ) ಮಸೂದೆಯು ನುಚ್ಚು ನೂರು ಮಾಡುತ್ತದೆ. ನಾಗರೀಕತ್ವ ಕಾಯಿದೆ ೧೯೫೫ ಕ್ಕೆ ಈ ಹೊಸ ಮಸೂದೆಯು ತರುತ್ತಿರುವ ತಿದ್ದುಪಡಿಗಳು ಸಂವಿಧಾನದ ಮೂಲತತ್ತ್ವವನ್ನು ಉಲ್ಲಂಘನೆ ಮಾಡುವಂತಿವೆ. ನಿಜವೇನೆಂದರೆ, ಇದು ಕೇವಲ ಕಾನೂನಿನ ಬದಲಾವಣೆಯಲ್ಲ. ಇದು ಭಾರತೀಯ ಪ್ರಜಾಸತ್ತೆಯ ಸ್ವರೂಪವನ್ನೇ ಮೂಲಭೂತವಾಗಿ ಬದಲಾಯಿಸುವ ಮಸೂದೆಯಾಗಿದೆ.

ನಮ್ಮ ಸ್ವತಂತ್ರ ಹಾಗೂ ಸೆಕ್ಯೂಲರ್ ಪ್ರಜಾಪ್ರಭುತ್ವ ಅನುಷ್ಠಾನದ ನಂತರ ಮೊದಲ ಬಾರಿಗೆ ಈ ಮಸೂದೆಯು ಧರ್ಮವನ್ನು ನಾಗರೀಕತ್ವದ ಸಾಧನವನ್ನಾಗಿಸುತ್ತದೆ. ಈ ಮಸೂದೆಯು ೧೯೫೫ರ ನಾಗರೀಕತ್ವ ಕಾಯಿದೆಯನ್ನು ತಿದ್ದುಪಡಿ ಮಾಡಿ ಬಾಂಗ್ಲಾದೇಶ, ಅಫಘಾನಿಸ್ತಾನ , ಮತ್ತು ಪಾಕಿಸ್ತಾನದ ಮುಸ್ಲಿಮೇತರರಿಗೆ ತ್ವರಿತ ಗತಿಯಲ್ಲಿ ಭಾರತೀಯ ನಾಗರೀಕತ್ವವನ್ನು ನೀಡುವುದಕ್ಕೆ ಅನುವು ಮಾಡಿಕೊಡುತ್ತದೆ. ಇದು ಕೆಲವು ಧರ್ಮಗಳಿಗೆ ಮಾತ್ರ ನಾಗರೀಕತ್ವ ಕೊಡುವ ಮೊದಲ ಕಾನೂನಾತ್ಮಕ ಪ್ರಯತ್ನವಾಗಿದೆ. ಇದರಿಂದಾಗಿ ಮೊದಲ ಬಾರಿಗೆ ಕಾನೂನಾತ್ಮಕವಾಗಿ ಮುಸ್ಲಿಮರನ್ನು ನಾಗರೀಕತ್ವ ಮತ್ತು amnesty ಯಿಂದ ಹೊರಗಿಡುವ ಪ್ರಯತ್ನವಿದಾಗಿದೆ. ವಾಸ್ತವವೇನೆಂದರೆ ಸಹಸ್ರಮಾನಗಳಲ್ಲಿ ಈ ದೇಶವು ಒಳಪಟ್ಟ ಯಾವುದೇ ಆಳ್ವಿಕೆಯಲ್ಲಿ ವಲಸಿಗರಿಗೆ, ನಿರಾಶ್ರಿತರಿಗೆ ಧರ್ಮದ ಆಧಾರದ ಮೇಲೆ ಸ್ಥಳವನ್ನು ನಿರಾಕರಿಸುವ ಆಡಳಿತಾತ್ಮಕ ಧೋರಣೆಯನ್ನು ವ್ಯಕ್ತಪಡಿಸಿದ ಒಂದೇ ಉದಾಹರಣೆಯು ಸಿಕ್ಕುವುದಿಲ್ಲ.

ನಾಗರೀಕತ್ವ ತಿದ್ದುಪಡಿ ಮಸೂದೆಯನ್ನು (CAB) ಮತ್ತು ಈಗ ಪ್ರಸ್ತಾಪಿಸಲಾಗುತ್ತಿರುವ ದೇಶಾದ್ಯಂತ NRC ಯ ಅನುಷ್ಠಾನದ ಜೊತೆಗೆ ನೋಡಬೇಕಾಗುತ್ತದೆ. ಅಸ್ಸಾಂ ರಾಜ್ಯದಲ್ಲಿ ನಡೆದಿರುವ NRC ಕಾರ್ಯಾಚರಣೆಯು ಈಗಾಗಲೇ ನಮಗೆ ಜನರನ್ನು ವಿಭಜಿಸುವ ಹಾಗೂ ನಾಗರೀಕತ್ವವನ್ನು ದಾಖಲೆಗಳಿಗೆ, ಬಂದೀಖಾನೆಗಳಿಗೆ ಮತ್ತು ನ್ಯಾಯಮಂಡಳಿಗಳಿಗೆ ಜೋಡಿಸುವ ಭೀಕರವಾದ ಮಾನವೀಯ ದುರಂತವನ್ನು ಅದರಲ್ಲೂ ವಿಶೇಷವಾಗಿ ಈಗಾಗಲೇ ದುಸ್ತರವಾದ ಬದುಕನ್ನು ಬದುಕುತ್ತಿರುವ ಜನರಲ್ಲಿ ಅದರ ಪರಿಣಾಮವನ್ನು ತೋರಿಸಿಕೊಟ್ಟಿದೆ. ಸಾವು, ಕುಟುಂಬಗಳು ಒಡೆದು ಹೋಗುವ ನೋವುಗಳು, ಬಂದೀಖಾನೆಗಳು ವಿದೇಶಿಯರ ನ್ಯಾಯಮಂಡಳಿಗಳು, ಭೀತಿ ಮತ್ತು ದೇಶವಿಹೀನತೆಯ ಭಯ – ಇವನ್ನು ಸಾಮಾನ್ಯ ಪ್ರಜೆಗಳು ಅದರಲ್ಲೂ ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು ಮತ್ತು ಬಡಜನರು ಅಸಾಮಿನಲ್ಲಿ ಅನುಭವಿಸಿದ್ದಾರೆ ಮತ್ತು ಈಗಲೂ ಅನುಭವಿಸುತ್ತಿದ್ದಾರೆ. ನಾಗರೀಕತ್ವ ಮಸೂದೆಯು ಮತ್ತು ದೇಶಾದ್ಯಂತ NRC ಕಾರ್ಯಾಚರಣೆಯು ಜನರ ನೈಜ ಆತಂಕಕರವಾದ ಅವಶ್ಯಕತೆಗಳನ್ನು ಆಹಾರಭದ್ರತೆ, ಉದ್ಯೋಗ ಹಾಗೂ ಜಾತಿ. ಸಮುದಾಯ ಮತ್ತು ಲಿಂಗಾಧರಿತ ತಾರತಮ್ಯಗಳ ನಿವಾರಣೆಯನ್ನು ಹಾಗೂ ಮಾತನಾಡುವ, ಆರಾಧಿಸುವ , ನಮ್ಮ ವಿಭಿನ್ನ ಜನರು ತಮ್ಮ ಆಯ್ಕೆಯ ಹಾಗೆ ಬದುಕುವ ಸ್ವಾತಂತ್ರ ಉಳಿಸಿಕೊಳ್ಳುವ ಅಗತ್ಯಗಳಿಗೆ ಗಮನ ಕೊಡುವ ಬದಲು ಇಡೀ ದೇಶದಲ್ಲಿ ವಿಪರೀತವಾದ ವಿಭಜನೆಯನ್ನು ಮತ್ತು ಸಂಕಷ್ಟಗಳನ್ನು ಜನರಲ್ಲಿ ಉಂಟುಮಾಡುತ್ತವೆ.

ಮೂರು ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರಗಳ ಮುಸ್ಲಿಮೇತರರು ತಮ್ಮ ರಾಷ್ಟ್ರಗಳಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸಿದ್ದರೆ ಅಥವಾ ಅಂಥ ಕಿರುಕುಳಕ್ಕೆ ಹೆದರಿ ಭಾರತಕ್ಕೆ ವಲಸೆ ಬಂದಿದ್ದರೆ ಅವರಿಗೆ ತೋರಿತ ಮಾರ್ಗದಲ್ಲಿ ನಾಗರೀಕತ್ವವನ್ನು ಕೊಡಲಾಗುವುದೆಂದು ಈ ಮಸೂದೆಯು ಹೇಳುತ್ತದೆ. ಮಯನ್ಮಾರ್ ರೋಹಿಂಗ್ಯಾಗಳು, ಶ್ರೀಲಂಕಾದ ತಮಿಳರು ಅಥವಾ ಪಾಕಿಸ್ತಾನದ ಅಹಮದಿಗಳು ಇಂಥ ನಿರಾಶ್ರಿತರನ್ನು ಮಾತ್ರ ಕೈಬಿಡುವುದು ಏಕೆ? ಮೂರು ನಿರ್ದಿಷ್ಟ ರಾಷ್ಟ್ರಗಳು ಮಾತ್ರ ಆಶ್ರಯ ಕೇಳಿಬರುವ ನಿರಾಶ್ರಿತರ ಸಂಭವನೀಯ ಮೂಲಗಳು ಎನ್ನುವ ಹಾಗೆ ಅವುಗಳ ಮೇಲೆ ಮಾತ್ರ ಏಕೆ ಗಮನಕೊಡಲಾಗಿದೆ? ನಮಗೆ ಅಂತರ್ ರಾಷ್ಟ್ರೀಯ ಕಾನೂನಿಗೆ ಒಗ್ಗುವ ನಿರಾಶ್ರಿತರ ಬಗೆಗಿನ ನೀತಿಯ ಅವಶ್ಯಕತೆ ಇದೆಯೆ ಹೊರತು ಧರ್ಮವನ್ನು ರಾಜಕೀಯ ಲಾಭಗಳಿಗಾಗಿ ಬಳಸಿಕೊಳ್ಳುವ ಸಿದ್ಧಾಂತದಿಂದ ನಿರ್ದೇಶಿತವಾಗಿರುವ ಮಸೂದೆಯಲ್ಲ.

ಭಾರತೀಯ ನಾಗರಿಕತ್ವವು ಸಂವಿಧಾನದಿಂದ ನಮಗೆ ದತ್ತವಾಗಿದೆ. ನಾಗರೀಕತ್ವ ತಿದ್ದುಪಡಿ ಮಸೂದೆಯು ಹೀಗೆ ಒಂದು ಸಮುದಾಯವನ್ನು ಹೊರಗಿಡುವುದು ತಾರತಮ್ಯಕರ ಮತ್ತು ವಿಭಜಕವಾಗಿದೆ. ಇದು ನಮ್ಮ ಸಂವಿಧಾನದಲ್ಲಿ  ಅಂದರೆ ೧೪, ೧೫, ೧೬ ಮತ್ತು ೨೧ನೇ ಪರಿಚ್ಛೇದಗಳು ಸೇರಿದಂತೆ, ಅನುಷ್ಠಾನವಾಗಿರುವ ಮತ ನಿರಪೇಕ್ಷ ತತ್ವಗಳನ್ನು ಉಲ್ಲಂಘಿಸುತ್ತದೆ. ಇವು ಸಮಾನತೆ, ಕಾನೂನಿನ ಎದುರಿಗೆ ಸಮಾನತೆ ಮತ್ತು ಭಾರತದ ಪ್ರಭುತ್ವದಿಂದ ತಾರತಮ್ಯವಿಲ್ಲದ ನೋಡುಕೊಳ್ಳುವಿಕೆಗಳನ್ನು ಅವಿಶ್ವಾಸದಿಂದ ನೋಡುತ್ತದೆ. ಈ ಮಸೂದೆಯು ಸಂವಿಧಾನವು ಕೊಡಮಾಡಿರುವ ಸಂಯುಕ್ತ ಒಕ್ಕೂಟದ ಚೌಕಟ್ಟನ್ನು ಅಪಾಯಕ್ಕೆ ಒಳಪಡಿಸುತ್ತದೆ. ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಅವಶ್ಯಕವಾಗಿರುವ ಸಂಸತ್ತಿನಲ್ಲಿ ಚರ್ಚೆ ಹಾಗೂ ಮುಕ್ತ ಹಾಗೂ ವ್ಯಾಪಕವಾದ ಸಾರ್ವಜನಿಕ ಚರ್ಚೆಯನ್ನು ಅದು ಕಡೆಗಣಿಸಿದೆ.

ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಮುದಾಯಗಳ ಸದಸ್ಯರಾದ ನಾವು ಈ ಮಸೂದೆಯನ್ನು ಅದು ವಿಭಜಕವಾಗಿದೆ. ತಾರತಮ್ಯಕರವಾಗಿದೆ ಮತ್ತು ಅಸಂವಿಧಾನಾತ್ಮಕವಾಗಿದೆಯೆಂದು ಖಂಡಿಸುತ್ತೇವೆ. ಅದು, ಜೊತೆಗೆ ದೇಶಾದ್ಯಂತ NRC ಯ ಅನುಷ್ಠಾನವು ದೇಶದುದ್ದಕ್ಕೂ ಜನರಿಗೆ ಹೇಳಲಾಗದ ಸಂಕಷ್ಟಗಳನ್ನು ತರುತ್ತವೆ. ಭಾರತೀಯ ಪ್ರಜಾರಾಜ್ಯದ ಮೂಲ ಸ್ವಭಾವವನ್ನೇ ಇದು ಮೂಲಭೂತವಾಗಿ ಮತ್ತು ಸರಿಪಡಿಸಲಾಗದಂತೆ ಹಾನಿಗೀಡುಮಾಡುತ್ತದೆ. ಆದ್ದರಿಂದಲೇ ಸರಕಾರವು ಈ ಮಸೂದೆಯನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸುತ್ತೇವೆ. ಆದ್ದರಿಂದಲೇ ಸಂವಿಧಾನಕ್ಕೆ ದ್ರೋಹ ಬಗೆಯಬೇಡಿ ಎಂದು ಸರಕಾರವನ್ನು ಒತ್ತಾಯಿಸುತ್ತೇವೆ. ನಾವು ಎಲ್ಲ ಪ್ರಜ್ಞಾವಂತ ಜನರಿಗೆ ಸಮಾನ ಹಾಗೂ ಸೆಕ್ಯೂಲರ್ ನಾಗರಿಕತೆಯ ಬಗ್ಗೆ ಇರುವ ಸಂವಿಧಾನಾತ್ಮಕ ಬದ್ಧತೆಯನ್ನು ಗೌರವಿಸಿ ಎಂದು ನೀವೂ ಒತ್ತಾಯಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ.

ಈ ಹೇಳಿಕೆಗೆ ಸಹಿ ಮಾಡಿದವರ ಹೆಸರನ್ನು ಈ ಕೆಳಗಿನ ಕೊಂಡಿಯಲ್ಲಿ ನೀವು ನೋಡಬಹುದು .

900 people across civil society have issued the call: “Don’t betray the Constitution. Withdraw the Citizenship Amendment Bill 2019.” – Indian Cultural Forum

Indian Cultural Forum People across the country – from all constituencies – have been expressing their protest through various statements from different groups. The Indian Cultural Forum will continue to collect signatures till the draconian Citizenship Amendment Bill is withdrawn. Send in your endorsements to [email protected] Since independence, Indian citizenship has been firmly rooted in the Constitution.

 

ಪ್ರತಿಕ್ರಿಯಿಸಿ