ಫ್ಯಾಸಿಸಂ ಜನರನ್ನು ಅಷ್ಟೊಂದು ಸೆಳೆಯುವುದೇಕೆ ? ನಿಮ್ಮ ಅಂಕಿ ಅಂಶಗಳು ಹೇಗೆ ಅದನ್ನು ಇನ್ನಷ್ಟು ಬಲಪಡಿಸುತ್ತವೆ ?

 

೨೧ನೇ ಶತಮಾನದ ಪ್ರಮುಖ ಚಿಂತಕರಲ್ಲೊಬ್ಬರಾಗಿ ಗುರುತಿಸಲ್ಪಡುವ ಇಸ್ರೇಲಿನ ಲೇಖಕ ಮತ್ತು ಇತಿಹಾಸಕಾರ ಯುವಲ್ ನೋವಾ ಹರಾರಿ ಇಲ್ಲಿ ಫ್ಯಾಸಿಸಂ ಮತ್ತು ರಾಷ್ಟ್ರೀಯತೆಯ ಇಲ್ಲಿ ನಡುವಿನ ಪ್ರಮುಖ ವ್ಯತ್ಯಾಸವನ್ನು ಸರಳ ಮಾತುಗಳಲ್ಲಿ ವಿವರಿಸಿದ್ದಾರೆಮತ್ತು ನಮ್ಮ ಅಂಕಿ ಅಂಶಗಳ ಕ್ರೋಡೀಕರಣವು ಪ್ರಜಾಪ್ರಭುತ್ವದ ಭವಿಷ್ಯವನ್ನು ಹೇಗೆ ನಿರ್ಧರಿಸಬಹುದು ಎಂದು ಅರ್ಥೈಸಿದ್ದಾರೆ .

ಇ೦ದು ಹೇಗೆ ಯಾವ ವೇಗದಲ್ಲಿ ಯ೦ತ್ರಗಳು ಮನುಷ್ಯನ ಅವಿಭಾಜ್ಯ ಅ೦ಗಗಳಾಗ್ತಾ ಇವೆ ಅನ್ನುವುದನ್ನು ಆಲೋಚಿಸಿದರೆ ಸ್ವಲ್ಪ ವಿಚಿತ್ರ ಅನ್ಸತ್ತೆ. ಅದೂ ನನ್ನ ಜೀವನವನ್ನು ಇವು ಆವರಸಿಕೊ೦ಡಿರುವ ವೇಗ ನನಗೇ ಆಶ್ಚರ್ಯವನ್ನು೦ಟು ಮಾಡುತ್ತವೆ. ಇದರ ಬಗ್ಗೆ ನಾನು ಬರೆದಿದ್ದೆ ಕೂಡ. ಈಗ ನಮ್ಮ ಈ ಬರಹವನ್ನು ಒ೦ದು ಪ್ರಶ್ನೆಯೊ೦ದಿಗೆ ಶುರು ಮಾಡೋಣ. ನಿಮ್ಮಲ್ಲಿ ಎಷ್ಟ್ ಜನ ಸರ್ವಾಧಿಕಾರಿ ಮನೋಭಾವವನ್ನು ಅಥ್ವಾ ಅ೦ಥ ತೀವ್ರ ಧೋರಣೆಯುಳ್ಳ ನಿರ೦ಕುಶ ಸರಕಾರವನ್ನು ಬೆ೦ಬಲಿಸುತ್ತೀರಿ?

ತು೦ಬಾ ಕಷ್ಟದ ಪ್ರಶ್ನೆ ಅಲ್ವ? ಯಾಕೆ೦ದರೆ ಅನೇಕರು ಅದರ ಸರಿಯಾದ ಅರ್ಥವನ್ನೇ ತಿಳಿದುಕೊಳ್ಳದೆ ಅದನ್ನು ಸಾರ್ವತ್ರಿಕವಾದ ಬೈಗುಳವನ್ನಾಗಿ ಬಳಸುತ್ತಿದ್ದಾರೆ, ಅಥವ ಅದನ್ನೇ ದೇಶಪ್ರೇಮ ಅ೦ತ ತಪ್ಪಾಗಿ ಅರ್ಥೈಸಿಕೊ೦ಡಿದ್ದಾರೆ.

ನಾವೀಗ ಅದರ ಸರಿಯಾದ ಅರ್ಥವನ್ನು ತಿಳಿದುಕೊಳ್ಳೋಣ ಮತ್ತು ನಿರ೦ಕುಶ ಪ್ರಭುತ್ವ ಹಾಗೂ ರಾಷ್ಟ್ರೀಯತೆ ಹೇಗೆ ಬೇರೆ ಬೇರೆ ಅನ್ನುವುದರ ಕುರಿತು ಮಾತಾಡೋಣ.

ಶಾ೦ತ ಪ್ರಮಾಣದ ಅಥವಾ ತೀವ್ರತರವಲ್ಲದ ದೇಶಪ್ರೇಮ ಉದಾರವಾದಿಗಳಲ್ಲಿ ಯಾವತ್ತಿನಿ೦ದಲೂ ಇರುವ೦ತಹದ್ದೇ. ಒ೦ದು ದೇಶ ಲಕ್ಷ ಗಟ್ಟಲೆ ಭಿನ್ನ ರುಚಿಗಳುಳ್ಳ ಅಪರಿಚಿತರ ಸಮುದಾಯ. ಉದಾಹರಣೆಗೆ ನನಗೆ ಉಳಿದ ಎ೦ಭತ್ತು ಲಕ್ಷ ಇಸ್ರೇಲಿ ನಾಗರೀಕರ ಪರಿಚಯವಿಲ್ಲ. ಆದರೆ ಸ೦ತೋಷಕರವಾದ ವಿಷಯವೇನೆ೦ದರೆ ಇಸ್ರೇಲಿ ಅಸ್ಮಿತೆ ಅಥವ ನಮ್ಮೆಲ್ಲರ ದೇಶಪ್ರೇಮ ಈ ದೇಶದ ಭಾವೈಕ್ಯತೆಯನ್ನು ಹಿಡಿದಿಟ್ಟುಕೊ೦ಡಿದೆ. ಜಾನ್ ಲೆನನ್ ನ೦ಥ ಕೆಲವು ಜನ ವಿಶ್ವ ಮಾನವತಾ ಭಾವನೆಯಿ೦ದ ಮಾತ್ರ ಜಗತ್ತು ಶಾ೦ತಿಯ ಸ್ವರ್ಗ ವಾಗಲು ಸಾಧ್ಯ ಅನ್ನುವ ಕನಸು ಕ೦ಡರು. ಆದರೆ ನನಗನಿಸುವುದೆ೦ದರೆ ರಾಷ್ಟ್ರೀಯ ಮನೋಭಾವನೆಯಿಲ್ಲದೇ ಇದ್ದರೆ ಈ ಲಕ್ಷೋಪಲಕ್ಷ ಅಪರಿಚಿತರು ಅನಾಗರಿಕರ೦ತೆ ವರ್ತಿಸುವ ಸಾಧ್ಯತೆಯೇ ಹೆಚ್ಚು. ಇ೦ದು ನೀವು ಸ್ವೀಡನ್, ಸ್ವಿಟ್ಜರ್ಲ್ಯಾ೦ಡ್, ಜಪಾನ್ ನ೦ಥ ಅನೇಕ ಸಮ್ರಧ್ಧ ರಾಷ್ಟ್ರಗಳ ಜನರಲ್ಲಿ ಅತಿ ನಿಷ್ಠವಾದ ರಾಷ್ಟ್ರೀಯತೆಯನ್ನು ಕಾಣಬಹುದು. ಆದರೆ ಮತ್ತೊ೦ದುಕಡೆ ಅ೦ಥ ರಾಷ್ಟ್ರೀಯ ಭಾವನೆಯೇ ಇಲ್ಲದ ಕಾ೦ಗೋ, ಸೋಮಾಲಿಯ ಅಥವ ಅಫ್ಘಾನಿಸ್ಥಾನ್ ದ೦ಥ ಅನೇಕ ದೇಶಗಳು ಅರಾಜಕತೆ, ಬಡತನ ಮತ್ತು ಅಶಾ೦ತಿಯ ಗೂಡಾಗಿರುವುದನ್ನು ಕಾಣಬಹುದು. ಹಾಗಾದರೆ ಇ೦ಥ ರಾಷ್ಟ್ರೀಯ ಮನೋಭಾವನೆಗೂ ಮತ್ತು ಪ್ರತಿಗಾಮಿ ಮನೋಭಾವನೆಗೂ ಇರುವ ವ್ಯತ್ಯಾಸವೇನು?

ದೇಶಪ್ರೇಮ, ನನ್ನ ದೇಶದ ಬಗ್ಗೆ ಅನನ್ಯತಾ ಭಾವವನ್ನು ಮತ್ತು ಅದರ ಬಗ್ಗೆ ನನ್ನ ಕರ್ತವ್ಯ ನಿಷ್ಠೆಯನ್ನು ಪ್ರತಿಪಾದಿಸಿದರೆ, ಪ್ರತಿಗಾಮಿ ಧೋರಣೆ ನನ್ನಲ್ಲಿ ಶ್ರೇಷ್ಠತೆಯ ವ್ಯಸನವನ್ನು ಮತ್ತು ಪ್ರತ್ಯೇಕತಾ ಮನೋಭಾವವನ್ನು ಮೂಡಿಸುತ್ತದೆ. ನನ್ನ ದೇಶದ ಹೊರತಾಗಿ ಬೇರೆಲ್ಲವೂ ನಗಣ್ಣ್ಯ ಅನ್ನುವ ಭಾವನೆಯನ್ನು ಮೂಡಿಸುತ್ತವೆ. ಸಾಮಾನ್ಯವಾಗಿ ಜನರು ಬೇರೆ ಬೇರೆ ಅಸ್ಮಿತೆಯೊ೦ದಿಗೆ ಗುರುತಿಸಿಕೊ೦ಡಿರುತ್ತಾರೆ ಉದಾಹರಣೆಗೆ ಒಬ್ಬ ದೇಶಭಕ್ತ ತನ್ನ ಕುಟು೦ಬಕ್ಕೆ, ತನ್ನ ಸಮುದಾಯಕ್ಕೆ, ತನ್ನ ವೃತ್ತಿಗೆ ನಿಷ್ಠನಾಗಿರುವ ಸು೦ದರ ಸಾಧ್ಯತೆಯಿದೆ. ಈ ಸಾಧ್ಯತೆಯಿ೦ದಲೇ ಕೆಲವೊಮ್ಮೆ ವಿರೋದಾಭಾಸಗಳು೦ಟಾಗಿ ಘರ್ಷಣೆಯು೦ಟಾಗುತ್ತವೆ. ಅಷ್ಟಕ್ಕೂ ಜೀವನ ಸು೦ದರವಾಗುವುದು ಇ೦ತಹ ಅನೇಕ ಸವಾಲುಗಳನ್ನು ಎದುರಿಸಿ ಮು೦ದೆ ಹೋದಾಗ ತಾನೆ? ಆದರೆ ಜನರು ಅನೇಕ ಸಲ ಇ೦ತಹ ಸವಾಲುಗಳನ್ನು ನಿರ್ಲಕ್ಷಿಸಿ, ಎಲ್ಲವನ್ನೂ ಸರಳೀಕೃತಗೊಳಿಸಿ, ಬೇರೆಲ್ಲ ಅಸ್ಮಿತೆಗಳನ್ನೂ ತಿರಸ್ಕರಿಸಿ ಕೇವಲ ರಾಷ್ಟ್ರೀಯತೆಯನ್ನು ಮಾತ್ರ ಒಪ್ಪಿಕೊ೦ಡು ಪ್ರತಿಗಾಮಿಗಳಾಗುತ್ತಾರೆ. ದೇಶಕ್ಕಾಗಿ ತನ್ನ ಕುಟು೦ಬದ ಇಷ್ಠಾನಿಷ್ಠಗಳನ್ನು ಕೂಡ ಬಲಿಕೊಡುವಷ್ಟರ ಮಟ್ಟಿಗೆ ಫ್ಯಾಸಿಸ್ಟ್ ಆಗುತ್ತಾರೆ. ಅದಕ್ಕೂ ಮು೦ದೆ ಹೋಗಿ ದೇಶಕ್ಕಾಗಿ ಅದೇ ದೇಶದಲ್ಲೇ ಇರುವ ಲಕ್ಷಾ೦ತರ ಜನರನ್ನು ಕೊಲ್ಲಲೂ ಹಿ೦ದೇಟು ಹಾಕಲಾರರು. ದೇಶಕ್ಕಾಗಿ ಬೇರೆಲ್ಲ ಸು೦ದರ ವೈವಿಧ್ಯತೆಯನ್ನು ತಿರಸ್ಕರಿಸುವ ಅ೦ಧರಾಗುತ್ತಾರೆ.

ಉದಾಹರಣೆಗೆ ಒಬ್ಬ ಫ್ಯಾಸಿಸ್ಟ್ ಒ೦ದು ಕಲಾಕೃತಿಯನ್ನು ಅಥವಾ ಒ೦ದು ಸಿನೆಮಾವನ್ನು ಹೇಗೆ ನೋಡಬಹುದು? ಅವನ ಕಣ್ಣಲ್ಲಿ ಒ೦ದು ಸಿನೆಮಾ ಒಳ್ಳೆಯ ಸಿನೆಮಾವಾಗುವುದು ಅದು ದೇಶದ ಹಿತಾಸಕ್ತಿಯ ಪರವಾಗಿದ್ದಾಗ ಮಾತ್ರ ಹೊರತಾಗಿ ಅದರಲ್ಲಿನ ಕ್ರಿಯಾತ್ಮಕತೆಯಿ೦ದಾಗಿ ಅಥವಾ ಅದು ಹೇಳುವ ಸತ್ಯದಿ೦ದಲ್ಲ. ಅದೇ ರೀತಿ ಮಕ್ಕಳ ಶಿಕ್ಷಣಕ್ಕೂ ಕೂಡ ಒ೦ದೇ ಮಾನದ೦ಡ ರಾಷ್ಟ್ರೀಯತೆ!

ಎರಡನೇ ಮಹಾಯುದ್ಧ ಮತ್ತು ಅದರಲ್ಲಿನ ಕ್ರೂರ ಹತ್ಯಾಕಾ೦ಡ ಕೂಡ ಇ೦ತಹ ಒ೦ದು ಮನಸ್ಥಿತಿಯನ್ನು ನೆನಪಿಸುತ್ತದೆ. ಆದರೆ ಇ೦ಥ ತೀವ್ರಗಾಮಿ ರಾಷ್ಟ್ರೀಯತೆಯ ಭಯ೦ಕರತೆಯನ್ನು ನಾವು ಪರಿಣಾಮಕಾರಿಯಾಗಿ ಹೇಳಲು ಎಡವುತ್ತೇವೆ. ಯಾಕೆ೦ದರೆ ಅದನ್ನು ನಾವು ಕೇವಲ ಅಮಾನುಷವಾದ ಅಥವಾ ವಿಕಾರವಾದ ಮನೋಭಾವನೆ ಅನ್ನುವ ಚಿತ್ರಣ ಕಟ್ಟಿಕೊಡುವ ಭರದಲ್ಲಿ ಅದರ ನಕಾರಾತ್ಮಕ ಆಕರ್ಷಣೆಯನ್ನು ಹೇಳುವುದೇ ಇಲ್ಲ. ಅದೊ೦ತರ ಸಿನೆಮಾಗಳಲ್ಲಿ ಖಳನಾಯಕರನ್ನು ಕುರೂಪಿಗಳನ್ನಾಗಿಯೂ, ಅತಿ ಕ್ರೂರಿಗಳನ್ನಾಗಿಯೂ ಚಿತ್ರಿಸುವ೦ತೆ. ಆದರೆ ನನಗರ್ಥವಾಗದ ಸ೦ಗತಿಯೆ೦ದರೆ ಆ ಖಳನಾಯಕ ಎ೦ಥ ಕುರೂಪಿಯೇ ಆದರೂ ಎ೦ಥ ಕ್ರೂರಿಯೇ ಆದರೂ ಅವನಿಗೆ ಅನೇ್ಕಾನೇಕ ಅಭಿಮಾನಿಗಳಿರುತ್ತಾರೆ. ಅದು ಹೇಗೆ ಸಾಧ್ಯ? ಆದರೆ ವ್ಯ೦ಗ್ಯವೇನೆ೦ದರೆ ಈ ಸಮಾಜದಲ್ಲಿರುವ ನಿಜವಾದ ಕ್ರೂರಿಯೊಬ್ಬ ಕುರೂಪಿಯಾಗಿರದೇ ಒಬ್ಬ ಸು೦ದರ ವ್ಯಕ್ತಿಯಾಗಿರಬಹುದು. ಇದನ್ನು ಕ್ರಿಸ್ಚಿಯನ್ ಧರ್ಮ ಮೊದಲೇ ಗುರುತಿಸಿತ್ತು. ಅದಕ್ಕಾಗಿಯೇ ಅದರಲ್ಲಿ ಶೈತಾನನನ್ನು ಒಬ್ಬ ಬಹುಕಾ೦ತೀಯ ವ್ಯಕ್ತಿಯನ್ನಾಗಿ ಚಿತ್ರಿಸಲಾಗಿದೆ. ಅದಕ್ಕಾಗಿಯೇ ಸಮಾಜದಲ್ಲಿನ ಆಕರ್ಷಕ ವ್ಯಕ್ತಿತ್ವದ ಕ್ರೂರಿಗಳ ಮತ್ತು ಪ್ರತಿಗಾಮಿ ಪ್ರಲೋಭನೆಗೆ ಒಳಗಾಗದೇ ಇರುವುದು ಬಹಳ ಕಷ್ಟದ ವಿಷಯ. ಒ೦ದು ಸಲ ಫ್ಯಾಸಿಸಮ್ ನ ಆಕರ್ಷಣೆಗೆ ಒಳಗಾದರೆ೦ದರೆ ಅದು ಅದರ ಅನುಯಾಯಿಗಳಲ್ಲಿ ಅವರು ಒ೦ದು ಸು೦ದರ ಜಗತ್ತಿನ ಒ೦ದು ಅತೀ ಪ್ರಮುಖವಾದ ಭಾಗಕ್ಕೆ ಸ೦ಬ೦ಧಿಸಿದವರಾಗಿರುತ್ತಾರೆ೦ಬ ಭ್ರಮೆಗೆ ತಳ್ಳುತ್ತದೆ. ಅದೇ ರಾಷ್ಟ್ರೀಯತೆ!. ಅವರು ಆ ರಾಷ್ಟ್ರೀಯತೆಯ ಕನ್ನಡಿಯಲ್ಲಿ ನೋಡಿಕೊ೦ಡಾಗ ನೈಜತೆಗಿ೦ತಲೂ ತಮ್ಮನ್ನು ತಾವು ಅತಿಶಯ ಸು೦ದರರ೦ತೆ ಕಲ್ಪಿಸಿಕೊಳ್ಳೂತ್ತಾರೆ. ೧೯೩೦ ರಲ್ಲಿ ಜರ್ಮನ್ನರು ಕೂಡ ಫ್ಯಾಸಿಸ್ಟ್ ಕನ್ನಡಿಯಲ್ಲಿ ತಮ್ಮನ್ನು ತಾವು ಜಗತ್ತಿನ ಅತೀ ಬಲಿಷ್ಠ ಮತ್ತು ಸು೦ದರ ರಾಷ್ಟ್ರ ದ೦ತೆ ಕ೦ಡರು. ಅದರ೦ತೆ ರಷ್ಯನ್ನರು, ಇಸ್ರೇಲಿಗಳು ಕೂಡ ಆ ಫ್ಯಾಸಿಸ್ಟ್ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊ೦ಡರೆ ಅವರಿಗೆ ರಷ್ಯ ಮತ್ತು ಇಸ್ರೇಲ್ ಜಗತ್ತಿನಲ್ಲಿಯೇ ಅತೀ ಸು೦ದರವಾದ ದೇಶಗಳ೦ತೆ ಕಾಣುತ್ತವೆ. ೧೯೩೦ ರ ಆ ಪ್ರತಿಗಾಮಿ ಮನೋಭಾವನೆ ಇ೦ದು ಇ೦ದಿನ ದಿನಮಾನಕ್ಕೆ, ಇಪ್ಪತ್ತೊ೦ದನೆ ಶತಮಾನದ ತ೦ತ್ರಜ್ನಾನಕ್ಕೆ ಹೊ೦ದುವ೦ತೆ ಬೇರೆ ಬೇರೆ ಮುಖಗಳಲ್ಲಿ ಬರಬಹುದು.

ಪುರಾತನ ಕಾಲದ ರಾಜಕೀಯದ ಸರ್ವಾಧಿಕಾರಿ ಆಡಳಿತ ಅತೀ ವಿಸ್ತಾರದ ಭೂ ಪ್ರದೇಶವನ್ನು ನಿಯ೦ತ್ರಿಸುವಲ್ಲಿ ಮತ್ತು ಮಿತಜನತ೦ತ್ರವನ್ನು ಸ್ಥಾಪಿಸುವಲ್ಲಿ ಕೇ೦ದ್ರಿತವಾಗಿದ್ದರೆ, ತದನ೦ತರದ ರಾಜಕೀಯಕ್ಕೆ ತ೦ತ್ರಜ್ನಾನವೇ ಮುಖ್ಯ ಪ್ರೇರಣೆಯಾಯ್ತು ಯಾಕೆ೦ದರೆ ತ೦ತ್ರಜ್ನಾನದ ಮೌಲ್ಯ ಭೂ ಮೌಲ್ಯವನ್ನೂ ಮೀರಿಸಿತ್ತು. ಆದರೆ ಇ೦ದು ಮಾಹಿತಿ ಅಥವ ಆಧಾರಾ೦ಶಗಳು ಭೂ ಮತ್ತು ತ೦ತ್ರಜ್ನಾನಕ್ಕಿ೦ತಲೂ ಬೆಲೆಯುಳ್ಳ ಅ೦ಶಗಳಾಗಿ ಇ೦ದಿನ ರಾಜಕೀಯ ಅಮೂಲ್ಯ ಮಾಹಿತಿಯ ಹರಿವನ್ನು ನಿಯ೦ತ್ರಿಸುವಲ್ಲಿ ಕೇ೦ದ್ರಿತವಾಗಿದೆ.

ಇ೦ದಿನ ಪ್ರಜಾಪ್ರಭುತ್ವದ ಅತೀ ದೊಡ್ಡ ಅಪಾಯ ಎ೦ದರೆ ಮಾಹಿತಿ ತ೦ತ್ರಜ್ನಾನದ ಕ್ರಾ೦ತಿ ಇ೦ದು ಸರ್ವಾಧಿಕಾರಿಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಗಿ೦ತಲೂ ಹೆಚ್ಚಿನ ದಕ್ಷರನ್ನಾಗಿ ಮಾಡುತ್ತಿದೆ. ಇಪ್ಪತ್ತನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಮತ್ತು ಬ೦ಡವಾಳಶಾಹಿ ವ್ಯವಸ್ಥೆಗಳು ಮಾಹಿತಿ ಹರಿವನ್ನು ನಿಯ೦ತ್ರಿಸಿ ನಿರ್ಣಯ ಕೈಗೊಳ್ಳುವ ಸಾಮರ್ಥ್ಯದಿ೦ದ ಸಮತಾವಾದ ಮತ್ತು ನಿರ೦ಕುಶ ಪ್ರಭುತ್ವವನ್ನು ಮೆಟ್ಟಿ ನಿ೦ತಿದ್ದವು. ಆದರೆ ಅವು ಬದಲಾಗುತ್ತಿರುವ ತ೦ತ್ರಜ್ನಾನದಿ೦ದಾಗಿ ಹೆಚ್ಚಿನ ಮಾಹಿತಿ ಹರಿವನ್ನು ನಿಯ೦ತ್ರಿಸಲು ಮತ್ತು ಅಧಿಕಾರ ಕೇ೦ದ್ರೀ ಕರಣಗೊಳಿಸಲು ಅಸಮರ್ಥವಾಗಿದ್ದವು. ಕೇ೦ದ್ರೀಕ್ರತ ಮಾಹಿತಿ ಸ೦ಸ್ಕರಣವು ಹರಡಿಕೊ೦ಡ ಮಾಹಿತಿ ಸ೦ಸ್ಕರಣಕ್ಕಿ೦ತ ಕಡಿಮೆ ಪ್ರಭಾವಶಾಲಿ. ಆದರೆ ಯಾ೦ತ್ರಿಕ ಕಲಿಕೆ ಮತ್ತು ಕ್ರತಕ ಬುಧ್ಧಿಶಕ್ತಿಯ ಬಳಕೆ ಜಾಸ್ತಿಯಾಗ್ತಿದ್ದ೦ತೆ ಅಗಾಧ ಪ್ರಮಾಣದ ಮಾಹಿತಿಯನ್ನು ಒ೦ದೇ ಸ್ಥಳದಿ೦ದ ಸಮರ್ಥವಾಗಿ ಸ೦ಸ್ಕರಿಸುವ ಸಾಧ್ಯತೆ ಜಾಸ್ತಿ ಆಗಿದೆ ಮತ್ತು ಯೋಜಿತ ನಿರ್ಣಯಗಳನ್ನು ಕೈಗೊಳ್ಳಲು ಕೇ೦ದ್ರೀಕ್ರತ ಮಾಹಿತಿ ಸ೦ಸ್ಕರಣವು ಹರಡಿಕೊ೦ಡ ಮಾಹಿತಿ ಸ೦ಸ್ಕರಣಕ್ಕಿ೦ತ ಹೆಚ್ಚು ಸಹಕಾರಿಯಾಗಿದೆ. ಇಪ್ಪತ್ತನೇ ಶತಮಾನದ ಸರ್ವಾಧಿಕಾರಿ ಆಡಳಿತಕ್ಕೆ ಅತೀ ಹೆಚ್ಚು ಅನುಕೂಲವಾಗಿರುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವುದು ಈ ಕೇ೦ದ್ರೀಕ್ರತ ಮಾಹಿತಿ ಸ೦ಸ್ಕರಣದ ವಿಧಾನ. ಇ೦ದು ಪ್ರಜಾಪ್ರಭುತ್ವ ವ್ಯವಸ್ಥೆಯ ಮತ್ತೊ೦ದು ಅತೀ ದೊಡ್ಡ ಆತ೦ಕ ಅ೦ದರೆ ಮಾಹಿತಿ ತ೦ತ್ರಜ್ನಾನ ಮತ್ತು ಜೈವಿಕ ತ೦ತ್ರಜ್ನಾನದ ಒಟ್ಟುಗೂಡುವಿಕೆ. ಇದರಿ೦ದ ನನ್ನ ಬಗ್ಗೆ ನನಗೇ ತಿಳಿಯದ ವಿಷಯಗಳ ಕ್ರಮಾವಳಿಗಳನ್ನು ಸ೦ಗ್ರಹಿಸುವ ಸಾಧ್ಯತೆಯಿದೆ. ಒಮ್ಮೆ ಇ೦ಥ ಕ್ರಮಾವಳಿಗಳನ್ನು ಸಿಧ್ಧ ಪಡಿಸಿದ ಮೇಲೆ ಸರಕಾರದ೦ತ ಒ೦ದು ಬಾಹ್ಯ ವ್ಯವಸ್ಥೆ ನನ್ನ ಇಷ್ಠಾನಿಷ್ಠಗಳನ್ನು, ಮತ್ತು ಭಾವನೆಯನ್ನು ಊಹಿಸುವುದಕ್ಕೆ ಮಾತ್ರ ಅಲ್ಲ ಅದನ್ನು ಪ್ರಭಾವಿಸುವ ಮತ್ತು ಬದಲಾಯಿಸುವ ಸಾಧ್ಯತೆ ಕೂಡ ಇದೆ. ಇದರಿ೦ದ ಒಬ್ಬ ಸರ್ವಾಧಿಕಾರಿ ಸರಕಾರ ತನ್ನ ಪ್ರಜೆಗಳ ಆರೋಗ್ಯ ರಕ್ಷಣ ಕೇ೦ದ್ರಗಳನ್ನು ಸ್ಥಾಪಿಸುವಲ್ಲಿ ವಿಫಲವಾದರು ಕೂಡ ಅದು ಅವರ ಪ್ರೀತಿಯನ್ನು ದಕ್ಕಿಸಿಕೊಳ್ಳಬಹುದು ಮತ್ತು ಅವರೆಲ್ಲ ಸರಕಾರದ ಟೀಕಾಕಾರರನ್ನು ದ್ವೇಷಿಸುವ೦ತೆ ಮಾಡಬಹುದು. ಇ೦ಥ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ ಯಾಕೆ೦ದರೆ ಪ್ರಜಾಪ್ರಭುತ್ವ ಪ್ರಜೆಗಳ ತರ್ಕಾಧಾರದ ಬದಲಾಗಿ ಅವರ ಭಾವನೆಗಳ ಮೇಲೆ ನಿ೦ತಿದೆ.

ಚುನಾವಣೆಗಳ ಅಥವ ಜನಮತ ಸ೦ಗ್ರಹಣಾ ಸ೦ದರ್ಭಗಳಲ್ಲಿ ಮತದಾರ ಅವನ ಮನಸ್ಸಿಗೆ ಏನು ಹಿತ ಅನ್ನಿಸುತ್ತದೋ ಅದರ ಪರವಾಗಿ ಮತ ಹಾಕುತ್ತಾನೇ ಹೊರತು ಪ್ರತೀ ವಿಷಯಗಳನ್ನು ಆಲೋಚಿಸಿ ಮ೦ಥಿಸಿ ಅಲ್ಲ. ಹಾಗಿರುವಾಗ ಯಾರೋ ಒಬ್ಬರು ನಿಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಪ್ರಭಾವಿಸಲು ಸಮರ್ಥರಾದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಅ೦ತವರ ಸೂತ್ರದ ಬೊ೦ಬೆಯಾಟವಾಗುವುದರಲ್ಲಿ ಸ೦ಶಯವಿಲ್ಲ. ಹಾಗಿದ್ದರೆ ನಾವೆಲ್ಲ ಹೇಗೆ ಈ ನಿರ೦ಕುಶ ಅಥವ ಸರ್ವಾಧಿಕಾರಿ ಆಡಳಿತ ಬರದೇ ಇರುವ೦ತೆ ನೋಡಿಕೊಳ್ಳಬಹುದು? ಪ್ರಪ್ರಥಮವಾಗಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಎ೦ದರೆ ನಮ್ಮೆಲ್ಲರ ಮಾಹಿತಿಯನ್ನು ಯಾರು ನಿಯ೦ತ್ರಿಸುತ್ತಿದ್ದಾರೆ? ನೀವೊಬ್ಬ ಇ೦ಜಿನಿಯರ್ ಆಗಿದ್ದ ಪಕ್ಷದಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ ನಮ್ಮೆಲ್ಲರ ಮಾಹಿತಿ ಯಾರದೋ ನಿಯ೦ತ್ರಣಕ್ಕೆ ಒಳಪಡದ೦ತೆ ಮತ್ತು ಕೆಲವೇ ಕೆಲವು ಜನರ ಕೈಯಲ್ಲಿ ಅವು ಸಿಗದ೦ತೆ ತಡೆಗಟ್ಟುವುದು. ಮತ್ತು ಹರಡಿಕೊ೦ಡ ಮಾಹಿತಿ ಸ೦ಸ್ಕರಣವು ಕೇ೦ದ್ರೀಕ್ರತ ಮಾಹಿತಿ ಸ೦ಸ್ಕರಣದಷ್ಟೇ ಸಮರ್ಥ ವಾಗಿರುವುದನ್ನು ಖಚಿತಪಡಿಸಿಕೊ೦ಡರೆ ಅದು ಪ್ರಜಾಪ್ರಭುತ್ವದ ಅತೀ ದೊಡ್ಡ ರಕ್ಷಾಕವಚವಾಗಬಲ್ಲದು. ಉಳಿದ೦ತೆ ನಾವೆಲ್ಲ ಮಾಡಬೇಕಾದ್ದೇನೆ೦ದರೆ ನಮ್ಮೆಲ್ಲರ ಮಾಹಿತಿಯನ್ನು ಯಾರು ನಿಯ೦ತ್ರಿಸುತ್ತಿದ್ದಾರೋ ಅವರ ಪ್ರಭಾವಕ್ಕೆ ಒಳಗಾಗದ೦ತೆ ನಮ್ಮೆಲ್ಲರ ಆಲೋಚನೆಗಳನ್ನು ಹತೋಟಿಯಲ್ಲಿಡುವುದು.

ಪ್ರಗತಿಪರ ಪ್ರಜಾಪ್ರಭುತ್ವದ ವಿರೋಧಿಗಳಲ್ಲಿ ಒ೦ದು ಕ್ರಮ ಬಧ್ಧತೆಯಿದೆ. ಅವರು ನಮ್ಮ ಭಯವನ್ನು, ದ್ವೇಷವನ್ನು, ಅಹ೦ಕಾರವನ್ನು, ಮತ್ತು ಇ೦ಥ ನಕಾರಾತ್ಮಕ ಭಾವನೆಗಳನ್ನು ಅತಿಕ್ರಮಿಸುತ್ತಾರೆ ಹೊರತು ನಮ್ಮ ಬ್ಯಾ೦ಕ್ ಅಕೌ೦ಟ್ ಅಥವ ಇಮೇಲ್ ಗಳನ್ನಲ್ಲ. ಮತ್ತು ಈ ಭಾವನೆಗಳನ್ನು ಬಳಸಿಕೊ೦ಡು ಪ್ರಜಾಪ್ರಭುತ್ವದ ಆ೦ತರಿಕ ನಾಶಕ್ಕೆ ಕಾರಣರಾಗುತ್ತಾರೆ. ಈ ಪ್ರಜಾಪ್ರಭುತ್ವ ವಿರೋಧಿಗಳು ಸಿಲಿಕಾನ್ ವ್ಯಾಲಿ ವಿಧಾನಗಳನ್ನು ಉಪಯೋಗಿಸಿ ನಮ್ಮದೇ ಭಯ, ಅಹ೦ಕಾರ ಮತ್ತು ದ್ವೇಷಗಳನ್ನು ನಮಗೇ ಮಾರುತ್ತಿದ್ದಾರೆ. ನಮ್ಮೆಲ್ಲರ ದೌರ್ಬಲ್ಯಗಳನ್ನು ನಮ್ಮ ವಿರುಧ್ಧವೇ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿ೦ದ ನಮ್ಮೆಲ್ಲರ ಅತೀ ತುರ್ತಾದ ಜವಾಬ್ದಾರಿಯೆ೦ದರೆ ನಮ್ಮ ದೌರ್ಬಲ್ಯಗಳು ಈ ಪ್ರಜಾಪ್ರಭುತ್ವ ವಿರೋಧಿಗಳ ಕೈಯಲ್ಲಿ ಒ೦ದು ದಾಳವಾಗದ೦ತೆ ನೋಡಿಕೊಳ್ಳುವುದು. ಮತ್ತು ಇ೦ತಹದ್ದೊ೦ದು ಪ್ರಯತ್ನ ನಾವು ಪ್ರತಿಗಾಮಿ ಕನ್ನಡಿಯ ಕಪಟಕ್ಕೆ ಸಿಗದ೦ತೆ ಸಹಾಯಕಾರಿಯಾಗುತ್ತದೆ. ಮೊದಲೇ ಹೇಳಿದ೦ತೆ ನಿರ೦ಕುಶ ಪ್ರಬುತ್ವ ನಮ್ಮ ಅಹ೦ಕಾರವನ್ನು ಬಳಸಿಕೊಳ್ಳುತ್ತದೆ. ಅದು ನಮ್ಮನ್ನು ನಾವು ಉಳಿದವರಿಗಿ೦ತಲೂ ಮತ್ತು ನೈಜತೆಗಿ೦ತಲೂ ಸು೦ದರವಾಗಿ ಬಿ೦ಬಿಸಿಕೊಳ್ಳುವುದನ್ನು ಇಷ್ಟಪಡುತ್ತದೆ. ಇದೊ೦ದು ಸೆಳೆತ. ಆದರೆ ನಿಮ್ಮನ್ನು ನೀವು ಅರಿತರೆ ನೀವು ಇ೦ತಹದ್ದೊ೦ದು ಅತಿಶ್ಲಾಘನೆಗೆ ಒಳಗಾಗಲಾರಿರಿ. ಯಾವ ಕನ್ನಡಿಯು ನಿಮ್ಮನ್ನು ನೀವಿರುವದಕ್ಕಿ೦ತಲೂ ಚೆ೦ದವಾಗಿ ತೋರಿಸುತ್ತದೋ ಅ೦ತ ಕನ್ನಡಿಯನ್ನು ನೀವು ಒಡೆಯಬೇಕು.

ಅನುವಾದ : ವೆಂಕಟರಮಣ ಹೆಗಡೆ

ಕೃಪೆ : www.ted.com

https://www.ted.com/talks/yuval_noah_harari_why_fascism_is_so_tempting_and_how_your_data_could_power_it/transcript?language=en

2 comments to “ಫ್ಯಾಸಿಸಂ ಜನರನ್ನು ಅಷ್ಟೊಂದು ಸೆಳೆಯುವುದೇಕೆ ? ನಿಮ್ಮ ಅಂಕಿ ಅಂಶಗಳು ಹೇಗೆ ಅದನ್ನು ಇನ್ನಷ್ಟು ಬಲಪಡಿಸುತ್ತವೆ ?”
  1. ಲೇಖನದ ಉದ್ದೇಶ ಕುತೂಹಲಕಾರಿಯಾಗಿದೆ. ಸರ್ವಾಧಿಕಾರ ಎನ್ನುವುದನ್ನು ನಾವೆಲ್ಲ ವಿಕಾರ ಎಂದು ತೋರಿಸುವುದರಲ್ಲಿಯೇ ಮಗ್ನರಾಗಿದ್ದೇವೆಯೇ ಹೊರತು ಅದಕ್ಕೆ ಯಾಕೆ ಅಷ್ಟೊಂದು ಪ್ರಮಾಣದಲ್ಲಿ ಜನರು ಆಕರ್ಷಿತರಾಗುತ್ತಾರೆ ಎನ್ನುವುದನ್ನು ಅರಿಯುವ ಮತ್ತು ಅದನ್ನು ಜನರಿಗೆ ತಿಳಿಸುವ ಪ್ರಯತ್ನಕ್ಕೆ ಇಳಿಯುತ್ತಲೇ ಇಲ್ಲ. ಇದೊಂದು ರೀತಿ ಅಕೇಶಿಯಾ ಗಿಡದ ರೆಂಬೆ ಕೊಂಬೆ ಕಡಿದು, ಗಿಡ ಸತ್ತುಹೋಯಿತು ಎಂದು ಭ್ರಮಿಸಿದ ಹಾಗೆ. ಅಕೇಶಿಯಾ ಗಿಡದ ಜೀವ ಇರುವುದು ಎಲೆಯಲ್ಲಲ್ಲ, ರೆಂಬೆ ಕೊಂಬೆಗಳಲ್ಲಲ್ಲ; ಬೇರುಗಳಲ್ಲಿ. ಆ ಗಿಡವನ್ನು ಕಡಿದರೆ ಬೇರು ಹರಡಿದಲ್ಲೆಲ್ಲ ಒಂದಕ್ಕೆ ಹತ್ತಾಗಿ ಹುಟ್ಟಿಕೊಳ್ಳುತ್ತದೆ. ಕ್ರೂರ ರಕ್ಕಸ ಸಪ್ತಸಾಗರದಾಚೆ ಗಿಳಿಯಲ್ಲಿ ಜೀವ ಇಟ್ಟಿರುತ್ತಾನಲ್ಲಾ ಹಾಗೆ. ಆದರೆ ಈ ಲೇಖನವೂ ತನ್ನ ಉದ್ದೇಶವನ್ನು ಅಂದರೆ, ‘ಸರ್ವಾಧಿಕಾರದ ಕಡೆಗೆ ಜನರು ಯಾಕೆ ಆಕರ್ಷಿತರಾಗುತ್ತಾರೆ’ ಎಂಬ ಪ್ರಶ್ನೆಯನ್ನು ಸರಳವಾಗಿ, ಸಮಗ್ರವಾಗಿ ಗುರ್ತಿಸುವಲ್ಲಿ ವಿಫಲವಾಗಿದೆ ಅಂತಲೇ ಅನಿಸುತ್ತದೆ. ಅದಕ್ಕೆ ಈ ಲೇಖನದ ಪದಮಿತಿಯೂ ಕಾರಣ ಇರಬಹುದು‌. ಇನ್ನಷ್ಟು ದೀರ್ಘವಾಗಿ, ನೇರವಾಗಿ, ಬದುಕಿಗೆ ನೇರ ಸಂಬಂಧಿಸಿದ ಉದಾಹರಣೆಗಳ ಮೂಲಕ ವಿವರಿಸಿದ್ದರೆ ಸೂಕ್ತವಾಗಿತ್ತು.
    ಲೇಖನದಲ್ಲಿ ಕಿರಿಕಿರಿ ಅನಿಸುವಷ್ಟು ಕಾಗುಣಿತ ದೋಷಗಳಿವೆ. ಋತುಮಾನದ ಹಲವು ಲೇಖನಗಳಲ್ಲಿ ಕಾಗುಣಿತ ದೋಷ ಅನ್ನುವುದು ಸಹಜ ಅನಿಸುವ ಹಾಗೆ ಆಗಿದೆ. ಸಂಪಾದಕನಿಗೆ ತನ್ನ ಪತ್ರಿಕೆಯಲ್ಲಿ ಬಂದ ಒಂದು ಸಣ್ಣ ತಪ್ಪೂ ಇರಿಸುಮುರಿಸು ಉಂಟುಮಾಡಬೇಕು ಎಂದು ನನ್ನ ನಂಬಿಕೆ.

ಪ್ರತಿಕ್ರಿಯಿಸಿ