ಕಥನ, ಬರಹ ಅಧೋಲೋಕದ ಟಿಪ್ಪಣಿಗಳು – ಕಂತು ೨ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ) Author Ruthumana Date October 21, 2018 -೩- ನೋಡೀ, ಸೇಡು ತೀರಿಸಿಕೊಳ್ಳುವುದರಲ್ಲಿ ನಿಷ್ಣಾತರಾದ ವ್ಯಕ್ತಿಗಳು ಏನು ಮಾಡುತ್ತಾರೆ ಗೊತ್ತೆ ನಿಮಗೆ? ಹೃದಯದೊಳಗೆ ಸೇಡಿನ ಜ್ವಾಲೆ ಭುಗ್ಗನೆ...