ಚರಿತ್ರೆಯಲ್ಲಿ ಟಿಪ್ಪು : ನಿಧಿನ್ ಒಲಿಕಾರ್ ಸಂದರ್ಶನ – ಭಾಗ ೧

ಪ್ರಜೆಗಳಿಗೆ ಬೇಕಿರಲಿ. ಬೇಡದಿರಲಿ ಸರಕಾರಗಳು ಐತಿಹಾಸಿಕ ವ್ಯಕ್ತಿಗಳ ಜಯಂತಿ ಆಚರಿಸುತ್ತವೆ. ಸರಕಾರಗಳಿಗೆ ಈ ಜಯಂತಿಗಳ ಆಚರಣೆಗೆ ಅವರದ್ದೇ ರಾಜಕೀಯ ಕಾರಣಗಳಿರುತ್ತವೆ. ಪ್ರತಿ ಬಾರಿಯಂತೆ ಈ ಬಾರಿಯೂ ಟಿಪ್ಪು ಜಯಂತಿಯನ್ನು ಆಚರಣೆಯ ಬಗ್ಗೆ ಪರ ವಿರೋಧದ ಅಲೆ ಎದ್ದಿದೆ ಮತ್ತು ಈ ಅಲೆಗಳ ನಡುವೆ ಜನಸಾಮಾನ್ಯ ಇನ್ನಷ್ಟು ಗೊಂದಲಕ್ಕೀಡಾಗಿದ್ದಾನೆ. ಈ ಸಂದರ್ಶನ ಅಂತಹ ಗೊಂದಲಗಳನ್ನು ನಿವಾರಿಸುವತ್ತ ಒಂದು ಪುಟ್ಟ ಹೆಜ್ಜೆ. ಹದಿನೈದು ವರ್ಷಕ್ಕೂ ಮೇಲ್ಪಟ್ಟು ಟಿಪ್ಪುವನ್ನು ಕುರಿತು ಸ್ವತಂತ್ರ  ಇತಿಹಾಸಕಾರನಾಗಿ ಸಂಶೋಧನೆ ನಡೆಸುತ್ತಿರುವ ನಿದಿನ್ ಒಲಿಕಾರ್ ಆತನ ಕುರಿತು ಅಥೆಂಟಿಕ್ ಆಗಿ ಮಾತನಾಡಬಲ್ಲವರು. ಋತುಮಾನಕ್ಕಾಗಿ ಮುಕುಂದ್ ಸೆಟ್ಲೂರ್ ಈ ಸಂದರ್ಶನ ನಡೆಸಿಕೊಟ್ಟಿದ್ದಾರೆ.

ಮೂಲತ: ಕೇರಳದವರಾದ ನಿದಿನ್ ವೃತ್ತಿಯಿಂದ ಮ್ಯಾಕೆನಿಕಲ್ ಇಂಜಿನೀಯರ್. ಶಿವಮೊಗ್ಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಒಲಿಕಾರ್ ಟ್ರ್ಯಾಕ್ಟರ್ ಎನ್ನುವ ಹೆಸರಿನಲ್ಲಿ ಆಟೋಮೊಬ್ಯೆಲ್ ಬ್ಯಸಿನೆಸ್ ಮಾಡುತ್ತಿದ್ದಾರೆ. ಅನೇಕ ನಿಯತಕಾಲಿಕೆಗಳು, ಜರ್ನಲ್ ಗಳಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ. ಹಾಲಿ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಹೆಚ್ಚುವರಿ ಕಾರ್ಯ ನಿರ್ವಹಿಸುತ್ತಿದ್ದಾರೆ. “The Seringapatam Times”  ಎಂಬ ಹೆಸರಿನ ಅಂತರ್ಜಾಲದ ಬ್ಲಾಗ್ ನಲ್ಲಿ ಟಿಪ್ಪು ಮತ್ತು ಮೈಸೂರು ಸಂಸ್ಥಾನದ ಕುರಿತಾಗಿ ಇಂಗ್ಲೀಶ್ ನಲ್ಲಿ ಸಂಶೋಧನಾ ಲೇಖನಗಳನ್ನು ಬರೆಯುತ್ತಾರೆ .

ಈ ಸಂದರ್ಶನದ ಕುರಿತಾಗಿ ಅಥವಾ ಟಿಪ್ಪುವಿನ ಕುರಿತಾಗಿ ಇನ್ನೂ ಪ್ರಶ್ನೆಗಳಿದ್ದಲ್ಲಿ ನೀವು editor@ruthumana.com ಗೆ ಈಮೇಲ್ ಮಾಡಬಹುದು . ಅಥವಾ ಈ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಕೇಳಬಹುದು . ಸಾಧ್ಯವಾದಲ್ಲಿ ಇನ್ನೊಂದು ಭಾಗದಲ್ಲಿ ಆ ಪ್ರಶ್ನೆಗಳಿಗೆ ನಿದಿನ್ ಉತ್ತರಿಸುತ್ತಾರೆ .


2 comments to “ಚರಿತ್ರೆಯಲ್ಲಿ ಟಿಪ್ಪು : ನಿಧಿನ್ ಒಲಿಕಾರ್ ಸಂದರ್ಶನ – ಭಾಗ ೧”

ಪ್ರತಿಕ್ರಿಯಿಸಿ