ಕುವೆಂಪು ತಮ್ಮ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಚಿತ್ರಿಸಿರುವ ಮಂಥರೆಯ ಪಾತ್ರ ವಿಶೇಷವಾದುದು . ಮನೋವಿಜ್ಞಾನ , ಸಮಾಜವಿಜ್ಞಾನ , ಪ್ರಜಾಪ್ರಭುತ್ವ ಮಾನವ ಅಪರಾಧಗಳ ಬಗೆಗೆ ಕ್ರಾಂತಿಕಾರಕದೃಷ್ಟಿಯಲ್ಲಿ ಪರಿವರ್ತನೆ ಮಾಡಿವೆ . ಕೊಲೆಗೆ ಕೊಲೆ ಮದ್ದಲ್ಲವೆಂಬ , ಕೊಲೆಗಡುಕರಿಗೆ ಮರಣದಂಡನೆಯೂ ಅಸಾಧು ಎಂದು ಯೋಚಿಸುತ್ತಿರುವ ಈ ಯುಗದಲ್ಲಿ ಕುವೆಂಪು ಹೊಸತಾಗಿ ಕಟ್ಟಿಕೊಟ್ಟ ‘ಮಮತೆಯ ಸುಳಿ ಮಂಥರೆ’ ಯ ಆಯ್ದ ಭಾಗವನ್ನು ಚಂದ್ರಶೇಖರ ಕೆದಿಲಾಯ ಓದಿದ್ದಾರೆ.