ಟಿ . ಪಿ ಕೈಲಾಸಂ ಪದಬಂಧ ವಿಜೇತರು ಮತ್ತು ಉತ್ತರಗಳು

ಕಳೆದ ಭಾನುವಾರ ಪ್ರಕಟಿಸಿದ್ದ ಟಿ. ಪಿ ಕೈಲಾಸಂ ಪದಬಂಧದ ವಿಜೇತರು ಪುನೀತ್ ಕುಮಾರ್ ಮತ್ತು ಸಹಮತ . ವಿಜೇತರಗೆ ಅಭಿನಂದನೆಗಳು. ಪದಬಂಧದ ಸರಿ ಉತ್ತರಗಳನ್ನು ,ಜೊತೆಗೆ ಸಂಬಂಧಿಸಿದ ಟಿಪ್ಪಣಿಗಳನ್ನು ಇಲ್ಲಿ ಕೊಡಲಾಗಿದೆ.

ಪದಬಂಧ ರಚನೆ ಮತ್ತು ಬಹುಮಾನದ ಪ್ರಾಯೋಜನೆ : ಶ್ರೀಕಾಂತ್ ಚಕ್ರವರ್ತಿ

ಎಡದಿಂದ ಬಲಕ್ಕೆ

1          ಬರೆದ ಹದಿನೇಳು ವರ್ಷಗಳ ನಂತರ ಪ್ರಕಟವಾದ ನಾಟಕ (5)

ಕೈಲಾಸಂ ಅವರು ೧೯೨೬ರಲ್ಲಿ ಬರೆದ ಅಮ್ಮಾವ್ರ ಗಂಡ  ನಾಟಕ ೧೯೪೩ರಲ್ಲಿ ಪ್ರಕಟಗೊಂಡಿತು.

2          ಕೈಲಾಸಂ ಅವರ ಪ್ರಕಟವಾದ ಪ್ರಥಮ ನಾಟಕ (4)

ಕೈಲಾಸಂ ಅವರು ೧೯೧೮ರಲ್ಲಿ ಬರೆದ ಟೊಳ್ಳುಗಟ್ಟಿ ನಾಟಕ ೧೯೨೨ರಲ್ಲಿ ಪ್ರಕಟಗೊಂಡಿತು.

3          ರಾಮಣ್ಣ ಈ ಊರಿನ ಲಾಯರು, ರಾಮಾರಾಯರು ಈ ಊರಿನ ಮುನಿಸಿಪಲ್ ಪ್ರೆಸಿಡೆಂಟು (4)

ಹೋಂ ರೂಲ್ ನಾಟಕದ ನಾಯಕ ರಾಮಣ್ಣ, ಹುತ್ತದಲ್ಲಿ ಹುತ್ತ ನಾಟಕದ ಸುಬ್ಬಮ್ಮ ದಿವಂಗತ ರಾಮಪುರದ ಪ್ರೆಸಿಡೆಂಟ್, ಜೋಡೀದಾರ್ ರಾವ್ ಸಾಹೇಬ್ ರಾಮರಾಯರ ವೃದ್ಧ ವಿತಂತು.

4          ಕೈಲಾಸಂ ಅವರ ಪ್ರಥಮ ನಾಟಕ ಹುಟ್ಟಿದ ಊರು (4)

“1918 ಯುಗಾದಿ ದಿನ ಶಿವಮೊಗ್ಗೆಯ ಶಾಲಾಬಾಲಕರು ನಾಟಕ ಆಡಬೇಕು ಎಂದಾಗ ಒಂದು ಸಣ್ಣ ಸಂಭಾಷಣೆಯ ದೃಶ್ಯವನ್ನು ಬರೆದರಂತೆ. ವಸ್ತು ಆ ಹುಡುಗರಿಗೆ ಸಂಬಂಧ ಪಟ್ಟಿದ್ದೆ. ಹಿರಿಯಣ್ಣಯ್ಯ ಎಂಬುವನಿಗೆ ಇಬ್ಬರು ಮಕ್ಕಳು, ಪುಟ್ಟು ಮತ್ತು ಮಾಧು. ಹಿರಿಯ ಮಗ ಪುಟ್ಟು ಪುಸ್ತಕಗಳನ್ನು ಸಂಪೂರ್ಣವಾಗಿ ನುಂಗಿ, ಪರೀಕ್ಷೆಗಳಲ್ಲಿ ಫಸ್ಟ್ ಕ್ಲಾಸ್ ಸಿಗಿಯುವದರಲ್ಲಿ ಪ್ರಚಂಡ; ಆದರೆ ಅವನಿಂದ ಮನೆಯವರಿಗಾಗಲಿ ನೆರೆಹೊರೆಯವರಿಗಾಗಲಿ ಮೂರು ಕಾಸಿನ ಉಪಯೋಗವಿಲ್ಲ. ಕಿರಿಯ ಮಗ ಮಾಧು ಕೂಡ ಬೇರೆ ರೀತಿಯಲ್ಲಿ ಪ್ರಚಂಡ. ಮನೆಯ ಒಳಗೇ ಆಗಲಿ ಹೊರಗೇ ಆಗಲಿ ಯಾವೂರಿಗೆ ಏನು ಕಷ್ಟ ಬಂದರೂ ತನ್ನ ಕೈಲಾದ ಸಹಾಯಮಾಡುವುದಕ್ಕೆ ಮಾಧು ಸದಾ ಸಿದ್ಧ. ಈ ಉಪಕಾರ ಬಾಹುಳ್ಯದ ನಡುವೆ ಓದಿಗೆ ಕೊಂಚ ಊನ, ಅದರಿಂದ ಪರೀಕ್ಷೆ ಫೇಲು. ಆದರೂ ಹಿರಿಯ ಮಗ ಹೊರಗೆ ಗಟ್ಟಿಯಂತೆ ತೋರಿಬಂದರೂ ಒಳಗೆ ಟೊಳ್ಳು ; ಕಿರಿಯವನು ಹೊರಗೆ ಟೊಳ್ಳು ಎಂಬಂತೆ ಕಾಣಿಸಿದರೂ, ಒಳಗೆ ಗಟ್ಟಿ…. “

ಹೀಗೆ ಶಿವಮೊಗ್ಗೆಯಲ್ಲಿ ಹುಟ್ಟಿದ್ದು ಕೈಲಾಸಂ ಅವರ ಪ್ರಥಮ ನಾಟಕ ಟೊಳ್ಳುಗಟ್ಟಿ.

5          ಅಶ್ವತ್ಥನನ್ನು ಸ್ತ್ರೀಮುಖ ವ್ಯಾಘ್ರದಿಂದ ಬಿಡುಗಡೆ ಮಾಡಿದವ (3)

ದುಡ್ಡಿನ ಆಸೆಗೆ ಅಶ್ವತ್ಥನ ಸಾವಿಗೆ ಕಾಯುತ್ತಿರುವ ಅವನ ಹೆಂಡತಿಯಿಂದ ಕಾಪಾಡುವ ಅವಳ ಮೊದಲನೇ ಗಂಡ, ಅಶ್ವತ್ಥನ ಸ್ನೇಹಿತನಾದ  ರಂಗಣ್ಣ.

6          Will you please rule the world for a few minutes ಅಂತ ಹೇಳಿ ತನ್ನ ಹೆಂಡತಿ ಕೈಗೆ cradle ಕೊಟ್ಟವ (3)

Women’s rights ಬಗ್ಗೆ ಮಾತಾಡುತ್ತ The hand that rocks the cradle rules the world ಎಂದ ಅಮ್ಮವ್ರಿಗೆ ಗಂಡ, ಸುಬ್ಬಣ್ಣ, ಹೀಗೆ ಹೇಳಿ fresh air ತಗೋಳೋಕೆ ಹೊರಗೆ ಹೋಗ್ತಾನೆ. – ಅಮ್ಮಾವ್ರ ಗಂಡ

7          ೧೯೩೫ರಲ್ಲಿ ತಾವರೆಕೆರೆ ಕಥಾಸಂಕಲನವನ್ನು ಪ್ರಕಟಿಸಿದ ಮಾಸಪತ್ರಿಕೆ (4)

೧೯೩೫ರಲ್ಲಿ ಕತೆಗಾರ ಮಾಸಪತ್ರಿಕೆ ತಾವರೆಕೆರೆ, ವೈದ್ಯನ ಜಾಡ್ಯ, ಬಂಡವಾಳವಿಲ್ಲದ ಬಡಾಯಿ, ಮತ್ತು ಸೀಕರ್ಣೆ ಸಾವಿತ್ರಿ ನಾಟಕಗಳನ್ನು ತಿಂಗಳು ತಿಂಗಳು ಪ್ರಕಟ ಮಾಡಿ, ಮೊದಲ ಎರಡನ್ನು ತಾನೇ ಪುಸ್ತಕ ರೂಪವಾಗಿ ಪ್ರಕಟಿಸಿತು.

8          ವಾಲ್ಮೀಕಿ ಬರೆದ ಕಥೆಯಲ್ಲಿ ಕಾಡು ಹಾಳಾಯ್ತು, ಕೈಲಾಸಂ ಕಥೇಲಿ ಕಾಡಿನ ಹೆಸರೇ ಹಾಳಾಯ್ತು (5)

ನಮ್ ಕಂಪನಿ ಅಥವಾ ಶೂರ್ಪನಖಾ ಕುಲವಧು ನಾಟಕದ ಎರಡನೇ ಅಂಕದ ಮೊದಲನೇ ಸೀನ್, ಅಧ್ವಾನವನ

ಮೇಲಿಂದ ಕೆಳಕ್ಕೆ

1          ೧೯೨೮ರಲ್ಲಿ ಬರೆದ ನಾಟಕ (4)

ಕೈಲಾಸಂ ಅವರು ೧೯೨೮ರಲ್ಲಿ ಬರೆದ ಗಂಡಸ್ಕತ್ರಿ ನಾಟಕ ೧೯೩೦ರಲ್ಲಿ ಪ್ರಕಟಗೊಂಡಿತು.

2          ಕೈಲಾಸಂ ನಿರ್ದೇಶನದ ಚಲನಚಿತ್ರ (2)

ಕರ್ಣ ನಾಟಕವನ್ನು ಚಲನಚಿತ್ರ ಮಾಡಲು ಹೊರಟು ಕಡೆಗೆ ಕುಟ್ಟಿ ಅಥವಾ ಕಂದನ್ ಎಂಬ ತಮಿಳು ಚಲನಚಿತ್ರಕ್ಕೆ ತಾವೇ director, author, costume manager, technical director ಎಲ್ಲಾ ಆಗಿ ಮಾಡಿದರು. ಇದು ಮೂರು ದಿನವೂ ಸರಿಯಾಗಿ ಓಡಲಿಲ್ಲ.

3          ನರಸಿಂಹಯ್ಯನವರಿಗೆ ಬಂದ ನಾಟ್ ಪೇಯ್ಡ್ ಲೆಟರ್ ಬಾಬತ್ತು (6)

ತಾಳಿಕಟ್ಟೋಕ್ಕೂಲೀನೇ ನಾಟಕದ ಮೊದಲನೇ ಭಾಗ, ಪಾತೂ ತೌರ್ಮನೆ ಕಥೆಯಲ್ಲಿ ನರಸಿಂಹಯ್ಯನವರಿಗೆ ಮಗ ಕಳಿಸಿದ ಪಾತ್ರದ ಬಾಬತ್ತು.

4          ಇವನ ನಿಘಂಟಿನಲ್ಲಿರೋ ಮೊದಲನೇ ಪದ Nothing is impossible (3)

ಹುತ್ತದಲ್ಲಿ ಹುತ್ತ ನಾಟಕದ ಹಿರಿಯಣ್ಣಯ್ಯನ ಸೆಕ್ರೆಟರಿ, ಕಪ್ಪಣ್ಣ, Sir title ಬಗ್ಗೆ ಕೊಡುವ ಭರವಸೆ

5          ಮಗು ಗಿಡುಗ ಆಗೋಕೆ ಮುಂಚೆ ಹೀಗಿದ್ದ (3)

ಪೋಲಿ ಕಿಟ್ಟಿ ನಾಟಕದ Assistant Commissioner ಪುತ್ರ, ಮಗೂ.

6          ಕೈಲಾಸಂ ನಾಟಕಗಳ ಖಾಯಂ ಸೇವಕ (2)

ಹೋಂ ರೂಲು, ಗಂಡಸ್ಕತ್ರಿ, ಹುತ್ತದಲ್ಲಿ ಹುತ್ತ ಮುಂತಾದ ನಾಟಕಗಳ ಸೇವಕನ ಹೆಸರು, ಬೋರ

8          ಕೈಲಾಸಂ ಅಸುನೀಗಿದ ವಿ.ಟಿ. ಶ್ರೀನಿವಾಸನ್ ಅವರ ಮನೆ (3)

ಸ್ವಾಭಾವಿಕವಾಗಿ ಒಂದೆಡೆ ನಿಲ್ಲದ ಕೈಲಾಸಂ ತಂದೆ, ಸಹೋದರರ ಸಾವಿನ ಬಳಿಕ ಮದರಾಸು, ಮುಂಬೈಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಹಾಗಿದ್ದರೂ ತಮ್ಮ ಕಡೆಯ ದಿನಗಳಲ್ಲಿ ಬೆಂಗಳೂರಿನ ವಿ.ಟಿ. ಶ್ರೀನಿವಾಸನ್ ಅವರ ಮನೆ, ಅವಂತಿಯಲ್ಲಿ ಒಮ್ಮೆ ಉಳಿದುಕೊಂಡಿದ್ದಾಗ ಹಿಂದಿನ ದಿನ ಮಲಗಿದ್ದವರು ಬೆಳಗ್ಗೆ ಏಳಲಿಲ್ಲ.

ಮೂಲಗಳು:

೧.  ಜಿ.ಪಿ. ರಾಜರತ್ನಂ ಬರೆದ “ಕೈಲಾಸಂ ಕಥನ” ಅಥವಾ “ಗುಂಡೂ ಭಂಡಾರ ಮಥನ”

೨.  ಕೆ.ವಿ.ಐಯ್ಯರ್ ಬರೆದ  “ಶ್ರೀ ಕೈಲಾಸಂ ಅವರ ಸ್ಮರಣೆ”

೩.  ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟಗೊಂಡ “ಕೈಲಾಸಂ ಕೃತಿಗಳು”

ಪ್ರತಿಕ್ರಿಯಿಸಿ