ಕನ್ನಡ ಭಾಷೆ ಮತ್ತು ಲಿಪಿ ಚರಿತ್ರೆ : ಷ. ಶೆಟ್ಟರ್ – ಭಾಗ ೧

ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಇತಿಹಾಸ , ಪುರಾತತ್ತ್ವ ಮತ್ತು ದರ್ಶನ ಶಾಸ್ತ್ರ , ಕಲಾ ಇತಿಹಾಸ ಮತ್ತು ಹಳಗನ್ನಡ ಕುರಿತಂತೆ ಸುಮಾರು ೨೯ ಕ್ಕೂ ಹೆಚ್ಚು ಸಂಶೋಧನಾ ಕೃತಿಗಳನ್ನು ಪ್ರಕಟಿಸಿರುವ ಷ. ಶೆಟ್ಟರ್ (ಷಡಕ್ಷರಿ ಶೆಟ್ಟರ್ ) ನಮ್ಮ ನಡುವಿನ ಹಿರಿಯ ವಿದ್ವಾಂಸರು.

ಕನ್ನಡ ನುಡಿ ಮತ್ತು ಲಿಪಿಯ ಕುರಿತಾಗಿ ಬರೆದಿರುವ ೪ ಕೃತಿಗಳಲ್ಲಿ ಪ್ರೊ. ಶೆಟ್ಟರ್ ಕ್ರಿಸ್ತ ಪೂರ್ವ ೩ ನೇ ಶತಮಾನದಲ್ಲಿ ಚಕ್ರವರ್ತಿ ಅಶೋಕನ ಆಳ್ವಿಕೆಯ ಯುಗದಿಂದ ಮೊದಲ್ಗೊಂಡು ಲಿಪಿಯ ಬೆಳವಣಿಯ ಕುರಿತು ವಿಸ್ತ್ರತವಾಗಿ ಬರೆದಿದ್ದಾರೆ .


One comment to “ಕನ್ನಡ ಭಾಷೆ ಮತ್ತು ಲಿಪಿ ಚರಿತ್ರೆ : ಷ. ಶೆಟ್ಟರ್ – ಭಾಗ ೧”
  1. ಅಗಾಧ ಪಾಂಡಿತ್ಯ, ನಿರಂತರ ಸಂಶೋಧನೆ, ಅಪಾರವಾದ ಸಂಯಮ ಮತ್ತು ಮೆಲುದನಿಯಲ್ಲಿ ಖಚಿತವಾಗಿ ನಿಷ್ಠುರ ನಿಲುವುಗಳನ್ನು ಪ್ರಸ್ತುತಪಡಿಸುವ ನಿಮ್ಮ ವಿಧಾನ ಈ ಕಾಲಕ್ಕೆ ಎಲ್ಲರಿಗೂ ಮಾದರಿ. ಅಶೋಕ ನಮ್ಮ ಸಮಾಜಕ್ಕೆ ಲಿಪಿದಾನವನ್ನು ಮಾಡಿದಂತೆಯೇ ನೀವು ಹೊಸ ಸಂಶೋಧನಾ ಮಾರ್ಗವನ್ನು ತೋರಿಸಿದ್ದೀರಿ. ನಿಮ್ಮೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ನೀವು ತೋರುತ್ತಿರುವ ಸಂಶೋಧನಾ ದಾರಿಯ ಬೆಳಕೇ ಹಲವು ಕಿರುದಾರಿಗಳನ್ನು ಕಾಣಿಸಬಲ್ಲವು.

ಪ್ರತಿಕ್ರಿಯಿಸಿ