ಋತುಮಾನ ಪದಬಂಧ ೧

ಪದಬಂಧ ಬಿಡಿಸಿ , ಉತ್ತರ ಅಥವಾ ಸ್ಕ್ರೀನ್‌ಶಾಟ್ ಪೋಸ್ಟಿನ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ

1 13 2 15
5
2 4 22 6 16
20
21 7 17
12 19 8
10 23
11 9

ಎಡದಿಂದ ಬಲಕ್ಕೆ


ಎಡದಿಂದ ಬಲಕ್ಕೆ:

೧. ಎದೆಗೆ ಅಕ್ಷರ ಬಿತ್ತಿದ ಮಹಾನುಭಾವ (೮)

೨. ಉತ್ತರಕರ್ನಾಟಕದ ಕತೆ ನ ಉಲ್ಟಾ ಹೇಳಿದರೆ ಇಲ್ಲೆಲ್ಲ ಉರಿಯುತ್ತೆ (೨)

೪. ಮಣಿಪಾಲದಿಂದ ತಿಂಗಳಿಗೊಮ್ಮೆ ಮಂಜಿನ ಹನಿಯೊಡನೆ ಬರುವ ಅತಿಥಿ (೩)

೫. ಊರಿರುವಲ್ಲಿ ಇದೂ ತಿರುಗಿ ಇರುತ್ತದೆ (೨)

೬. ಕೃಷ್ಣನ ಮಾಯಾಜಾಲ ತಿರುಗಿದೆ (೩)

೭. ವಿಜಿಯೊಡನೆ ಕವಿತಾ ಚಿತ್ರವಾಗಿಸಿದ ಅಪ್ಪನ ಕಾದಂಬರಿ (೨)

೮. ಈ ಮಳ್ಳ ಬಂದಿದ್ದೆ ದೊಡ್ಡ ಕತೆ (೨)

೯. ಎಡ ಪಂಥ ಬಲ ಪಂಥ ದವರ ಹೆಣಗಾಟದ ಮಧ್ಯೆ ಬಿದ್ದು ಹೋದ ಸೊಂಟ (೨)

೧೦. ನಿಯಮಿತವಾಗಿ ಬರುವ ಪತ್ರಿಕೆ ಕೊನೆಯಲ್ಲಿ ಧೀರ್ಘವಾಗಿದೆ (೬)

೧೧. ತಾನು ನಂಬಿದ್ದಕ್ಕೆ ಬದ್ದನಾದವನು ಪೂರ್ವದಲ್ಲಿ ಅರ್ಕ ಕಳೆದುಕೊಂಡಿದ್ದಾನೆ (೫)

೧೨. ಮೂರು ಕುಮಾರರು ನಟಿಸಿದ ಸಿನೆಮಾ, ಕಾದಂಬರಿಯೂ ಹೌದು (೫)

ಮೇಲಿನಿಂದ ಕೆಳಕ್ಕೆ


ಮೇಲಿನಿಂದ ಕೆಳಕ್ಕೆ:

೧೩. ಮೂರ್ತಿಗಳು ತಂದ ಕನ್ನಡದ ಆಗಿನ ಜರೂರು ಪತ್ರಿಕೆ. (೪)

೧. ಪ್ರಗತಿಯಿಲ್ಲದೆ ಶಿಥಿಲವಾಗಿರುವ ನಮ್ಮ ಸೀಮೆಯ ಸ್ಥಿತಿ (೪)

೨. ಗೌಜು ಗದ್ದಲದಿಂದಲೇ ಸದ್ದು ಮಾಡಿದ ಮೈಸೂರಿನ ಮಾಜಿ ಕುಲಪತಿ ಇನ್ನಿಲ್ಲ (೩)

೧೫. ಜುಗಾರಿ ಕ್ರಾಸಿನಲ್ಲಿ ಸಿಕ್ಕ ಸುರೇಶನಿಗೆ ತೇಜಸ್ವಿ ಇಟ್ಟ ಅಡ್ಡ ಹೆಸರು ಇಲ್ಲಿ ತಿರುಗಿದೆ (೪)

೧೬. ಪರವಶನಾದ ದೇವರು ಹಕ್ಕಿಗಳ ನೋಡಿ ಮಾಡಿದ್ದೇನು (೨)

೧೭. ಆಡಿ ಕಾರಿನೊಳಗೆ ಬಂದ ಪುರಾತನ ಕವಿ (೨)

೮. ಲಕ್ಷ್ಮಣ ರಾಯರ ಗೋಪಿಗೆ ಜಾಲಿ ಬಾರಿನಲ್ಲಿ ಸಿಕ್ಕವಳು ಇವಳಲ್ಲವೇ? (೪)

೨೨. ಮೊನ್ನೆ ಪಾಕಿಸ್ತಾನಕ್ಕೆ ಹೋಗಿ ಬಂದು ಸುದ್ದಿಯಾದವರು ಸಾಹಿತ್ಯದ ಒಂದು ಪ್ರಕಾರವೂ ಹೌದು (೨)

೨೦. ಗೌರಿಶಿಖರದೆತ್ತರಕ್ಕೆರಿದ ಗೋಕರ್ಣದ ಪ್ರತಿಭೆ ತಿರುಗಿ ನಿಂತಿದೆ(೩)

೭. ಸಾಹಿತ್ಯದ ಈ ಸಾಂಗತ್ಯದಲ್ಲಿ ಸರಿ ಎಂಬುದಿಲ್ಲ (೪)

೨೧. ರಸ್ತೆಯ ಇಕ್ಕೆಲಗಳಲ್ಲಿ ಕಂಡು ಬರುವ ಈ ಚಿರಪುಷ್ಪದ ಪರಿಮಳ ಜಯಂತರ ಕತೆಯೂ ಅಹುದು (೫)

೧೯. ವಿಮರ್ಶೆಯೊಳಗೆ ಅನಿಷ್ಟ ಬರದಂತೆ ತಡೆಯಲು ಅದನ್ನು ಹೀಗೆ ನೋಡಬೇಕು (೪)

೨೩. ಆಲನಹಳ್ಳಿಯ ಕಾದಂಬರಿ (೨)

3 comments to “ಋತುಮಾನ ಪದಬಂಧ ೧”

ಪ್ರತಿಕ್ರಿಯಿಸಿ