ಮಂಜು ಕರಗಿದ ಮೇಲೆ – ರಘುನಂದನ

ಕೆಆರ್ ನಗರದಲ್ಲಿದ್ಡುಕೊಂಡು ಕಾವ್ಯವನ್ನೇ ಧ್ಯಾನಿಸುತ್ತಾ ಕನ್ನಡದ ಓದುಗರಿಗೆ ಹೊಸ ರುಚಿಯ ಕವಿತೆಗಳನ್ನು ನೀಡಿದ ಎಸ್ . ಮಂಜುನಾಥ್ ಜನವರಿ 31 ರಂದು ನಮ್ಮನ್ನಗಲಿದರು . “ಒಬ್ಬನೊಳಗಿನ ಕನ್ನಡ ಮಾತನಾಡದೇ, ಹಲವು ಮನಸ್ಸುಗಳಿಗೆ ಒಬ್ಬನ ಮನಸ್ಸು ಮನೆಯಾಗದೇ ಭಾಷೆಗೆ ಸೇರಿ ಹೋಗುವಂತೆ ತುಂಬಾ ಚೆನ್ನಾದ ಕವಿತೆ ಬಾರದೇನೋ” ಎಂದಿದ್ದ ಮಂಜುನಾಥ್ ಇನ್ನು ನೆನಪು ಮಾತ್ರ . ಸ್ವತ: ಮಂಜುನಾಥ್ ಮತ್ತು ಅವರ ಕಾವ್ಯದ ಜೊತೆ ಹತ್ತಿರದ ಒಡನಾಟವಿದ್ದ ಲೇಖಕ , ನಾಟಕಕಾರ ರಘುನಂದನ ಋತುಮಾನಕ್ಕಾಗಿ ಮಂಜುನಾಥ್ ಕುರಿತು ಮಾತನಾಡುವುದರ ಜೊತೆಗೆ ಅವರ ಪ್ರೀತಿಯ ಕವಿತೆಗಳನ್ನೂ ಓದಿದ್ಡಾರೆ . ಸದಾ ಕವಿತೆಯನ್ನೇ ಜೀವಿಸುತಿದ್ದ “ಜೀವಯಾನದ ಮಂಜುನಾಥ್’ ತನ್ನ ಇತ್ತೀಚಿನ ಕವನ ಸಂಕಲನ “ಬೊಗಸೆ ಜಲ ಒಂದು ಒಂದು ಬೀಜಕ್ಕಾಗಿ ” ಕವನ ಸಂಕಲನದ ಮುನ್ನುಡಿಯಲ್ಲಿ ಹೇಳುವುದು ಹೀಗೆ – ” ಕವಿತೆ ತನ್ನ ಆತ್ಮತ್ರಪ್ತಿಗಾಗಿ ಎಂದು ಈಗ ಯಾರೂ ಹೇಳಲಾರರು . ಅಂಥವರು ವ್ಯಂಗ್ಯಕ್ಕೀಡಾಗುತ್ತಾರೆ . “ಕವಿತೆ ಸಮಾಜಕ್ಕಾಗಿ ಎಂದು ಹೇಳಿಕೊಳ್ಳುವುದು ಇನ್ನೊಂದು ತುದಿ . ಕವಿತೆ ತನಗಾಗಿಯೂ ಅಲ್ಲ , ಸಮಾಜಕ್ಕಾಗಿಯೂ ಅಲ್ಲ , ಕವಿತೆ ಅದಕ್ಕಾಗಿಯೇ ಎಂದು ನನಗನ್ನಿಸುವುದು . ಬರದಿದ್ದಾಗ ಬಾ ಎಂದರೆ ಬರದು ; ಬಂದಾಗ ಬೇಡವೆಂದರೆ ನಿಲ್ಲದು . ಅಂಥ ಅದರ ಆಶ್ಚರ್ಯಕ್ಕಾಗಿಯೇ ಲೋಕ ಅದನ್ನು ಪ್ರೀತಿಸುವುದು . “

One comment to “ಮಂಜು ಕರಗಿದ ಮೇಲೆ – ರಘುನಂದನ”
  1. ಬಹಳ ಸಂಕಟ ಎನಿಸುತ್ತದೆ. ಮಂಜುನಾಥ್ ಕಾವ್ಯ ನನ್ನನ್ನು ಅನೇಕ ಸರ್ತಿ ”ರಾಟವಾಳ” ದಲ್ಲಿ ಕೂಡಿಸಿದೆ -ಅದರ ವೇಗ , ಬೆರಗು ಆಕರ್ಷಣೆಯಿಂದ. ಮಂಜುನಾಥ್ ಕಾವ್ಯ ಪ್ರಭಾವ ಬೀರಿದ್ದು ಅನೇಕರ ಮೇಲೆ. ಅದು ಅವರಿಗಾದರೂ ಗೊತ್ತಿಲ್ಲದ ಸುಳಿಪ್ರಭಾವ.

    ಶ್ರೀ.ರಘುನಂದನರು ಅದೆಷ್ಟೊಂದು ತನ್ಮಯತೆ ಮತ್ತು ಕಾವ್ಯಪ್ರೀತಿಯಿಂದ ವ್ಯಾಖ್ಯಾನ ಸಹಿತ ವಾಚನ ಮಾಡಿದ್ದಾರೆಂದರೆ ಮಂಜುನಾಥ್ ತೀರಿದ ಸಂಕಟ ಈಗ ಇನ್ನಷ್ಟು ಕೆರಳಿಸುತ್ತದೆ. ಈ ಹಿರಿಯರಿಗೆ ಮತ್ತು ಈ ಒಳ್ಳೆಯ ಕೊಡುಗೆಗೆ ರುತುಮಾನಕ್ಕೆ ಅನೇಕ ವಂದನೆ.

ಪ್ರತಿಕ್ರಿಯಿಸಿ