ದೇವರ ದೇವ ಶಿಖಾಮಣಿ ಬಂದಾನೋ- ಮೊದಲ ಭಾಗ

 ಋತುಮಾನ ಆಂಡ್ರಾಯ್ಡ್ ಆ್ಯಪ್‌ ಈಗ ಲಭ್ಯ.  ಈ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ

ಶ್ರೀಭಗವಾನುವಾಚ |

ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ |

ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರನ್ತಪ || 5||

The Supreme Lord said: Both you and I have had many births, O Arjun. You have forgotten them, while I remember them all, O Parantapa.

(Bhagavad Githa chapter 4 verse 5)

 

 

-೧-

ಆ ತೋಟದ ಮನೆ ಬೆಳ್ಳನೆಯ ಬೆಳಗಿನಲ್ಲಿಯೇ ಆಗಾಗ ಸಪ್ಪಗೆ ಕಪ್ಪಾಗುತ್ತಿತ್ತು. ಸುತ್ತಲೂ ಕತ್ತಲಂತೆ ಹಬ್ಬಿ ತುಂಬಿದ್ದ ಗನ ಮರಗಳು ಗಾಳಿಯ ಜತೆ ಓಲಾಡಿ, ಈ ಕ್ಷಣಿಕ ಇರುಳ ನೆರಳನ್ನು ಅತ್ತ ಎಸೆಯುತ್ತಿರಬೇಕು. ಆ ಮಹಾ ಮನೆಯ ಇಕ್ಕೆಲಗಳಲ್ಲಿ ಮಾವು, ಹಲಸು, ಆಲದ ಮರಗಳು ತಮಗಿಷ್ಟ ಬಂದ ಭಂಗಿಗಳಲ್ಲಿ ಉದ್ಭವವಾಗಿದ್ದವು. ಇವುಗಳಾಚೆ,ಬತ್ತಿದ ಕಾಲುವೆ, ಕುರುಚಲು ಪೊದೆಗಳು, ಲಂಟಾನ ಗಿಡಗಳು ಸ್ವಚ್ಚಂದವಾಗಿ, ಭೂಮಿಯಿಂದ ನಗೆದಿತ್ತು. ಅದೇ ಹಿಂಬಾಗದಲ್ಲಿ ಒಂದೆರಡು ಎಕರೆ ತಾಜಾ ಪಾಳು ಭೂಮಿ ಹರಡಿತ್ತು. ಸ್ವಲ್ಪಕಾಲ ಹಿಂದೆಯಷ್ಟೇ ಅಲ್ಲಿ ಮುಸುಕಿನ ಜೋಳದ ಕಟಾವು ನಡೆದಿದ್ದ ಕುರುಹಿತ್ತು. ಅಜ್ನಾತ ಗವಿಗಳಿಂದ ಎದ್ದಿದ್ದ ಗಾಳಿ, ಈಗ ಬಿಸಿಲಲ್ಲಿ ಹೊಳೆಯುತಿದ್ದ ಖಾಲಿ ಆಕಾಶದ ಪ್ರಭಾವದಿಂದ, ತಾನೂ ಬಿಸಿಯಾಗಿ ಲಂಟಾನದ ಮೇಲೆ ಹಾದು, ಎಲ್ಲಾ ಮರಗಳಿಗೆ ಡಿಕ್ಕಿ ಹೊಡೆದು, ಮನೆಯೆದುರಿದ್ದ ಹೂವಿನ ಬಳ್ಳಿಗಳ ಜತೆ ತಿರುಗಾಡಿ ತೆರೆದ ಕಿಟಕಿಯೊಳಗೆ ನುಸುಳಿ, ಧಗೆಯನ್ನು ಏರಿಸುತ್ತಾ, ಬೆರಕೆ ಕಂಪನ್ನು ಮೇಲ್ಚಾವಣಿಯತ್ತ ಹಾರಿಸಿಕೊಂಡು ಸಾಗಿತ್ತು.

ಅಲ್ಲಿ ಕೋಣೆಯ ನಡುವೆ ದೇವರಾಯ ಕೂತಿದ್ದ. ಬೆವರಿನ ಹನಿಗಳು ಅವನ ಅಗಲವಾದ ಹಣೆಯಲ್ಲಿ ಹೊಳೆದವು. ಅವನಿಗೆ ಅಯ್ವತ್ತು ದಾಟಿತ್ತು. ಕಯ್, ಕತ್ತು, ಹಣೆ ಎಲ್ಲಾ ಕಡೆ ನೆರಿಗೆಗಳು, ಕುದ್ದು ಕಾಲನ ವೈವಿಧ್ಯಮಯ ಆಕ್ರಮಣಗಳ ಸಹಿಯಾಗಿ ಅಚ್ಚೊತ್ತಿದ್ದವು. ಆಳವಾಗಿ ದೇನಿಸುತ್ತಾ ದೇವರಾಯ ಒಂದು ದಪ್ಪಗಿದ್ದ ನೋಟು ಪುಸ್ತಕದಲ್ಲಿ ಏನನ್ನೋ ಬರೆಯುತಿದ್ದ. ಒಳ್ಳೆ ಲಯದಲ್ಲಿ ಆ ಪುಟ ತಿರುವಿದ, ಸ್ವಲ್ಪ ಹೊತ್ತು ಹಾಗೇ ಕೂತ ಮತ್ತೆ ಬರೆದ. ಬರೆಯುತ್ತಿದ್ದ ಹಾಗೆಯೇ ಮತ್ತೆ ಕಿರಿಕಿರಿಯಾದಂತೆ ಆ ಪುಸ್ತಕವನ್ನು ಮುಚ್ಚದೆ ಹಾಗೇ ಎಸೆದ. ಒಮ್ಮೆ ಮುಷ್ಠಿ ಅಮುಕಿ ಕುರ್ಚಿಯಿಂದ ಎದ್ದ. ಕನ್ನಡಿಯಲ್ಲಿ ಇಣುಕಿದ. ಪಾತಾಳಕ್ಕಿಳಿದಿದ್ದ ಅವನ ನೀಲಿ ಕಣ್ಣುಗಳು, ಒಮ್ಮೆಲೆ ‘ಬಗ್’ ಎಂದು ಹೊಳೆದಂತೆ ಬೆಳಗಿದವು. ತನ್ನ ಲ್ಯಾಪ್‌ಟಾಪ್‌ನ ಹೆಡೆಯನ್ನು ಎತ್ತಿಸಿ, ‘White owl speaks’ಎಂಬ ಅಂತರಜಾಲದೊಳಗೆ ನಿಧಾನಕ್ಕೆ ತನ್ನಾತ್ಮವನ್ನು ಇಳಿಸಿದ. ಅವನ ಬೆರಳುಗಳು ಲೀಲಾಜಾಲವಾಗಿ ಕೀಲಿಮಣೆಯನ್ನು ನುಡಿಸಿದವು, ಪಳಗಿದ ಪಿಯಾನೋ ಪ್ಲೇಯರ್‌ನಂತೆ. ಆ ಕಡೆ ಹಸಿದ ರಣಹದ್ದಿನ ಹಾಗೇ ಚುಚ್ಚುವ ದೃಷ್ಠಿಯಲ್ಲಿ ನಿಂತಿದ್ದ ನಿಸ್ತೇಜ ಕಣ್ಣುಗಳ ನೀರೆಯ ಚಿತ್ರವಿತ್ತು. ಇದ್ದಕ್ಕಿದ್ದಂತೆಯೇ, ಅವಳ ಚಿತ್ರದ ಸುತ್ತಲೂ ಹಸಿರು ಪ್ರಭೆ ಹತ್ತಿಕೊಂಡಿತು. ‘ಆ… ಬಂದ್ಲು ಆನ್‌ಲಯ್ನ್‌ಗೆ ಕೊನೆಗೂ ’ ಎಂದ ಮುದುಕ. ತಕ್ಷಣ ಆ ಜಾಲದೊಳಗೆ ಲಾಗ್ ಇನ್ ಆದ,
“This is Oedipus here, wanna continue the chat… with Daddy” ಎಂದು ಒತ್ತಿ, ಆ ಮೇಘ ಸಂದೇಶ ರವಾನಿಸಿ, ಅವಳ ಪ್ರತಿಕ್ರಿಯೆಗಾಗಿ ತಾಳ್ಮೆಗೆಟ್ಟು ಕಾದ.

ಅವನ ತಲೆಮೇಲೆ ಸತ್ತಂತೆ ಫ್ಯಾನ್ ತಿರುಗುತ್ತಿತ್ತು. ಪ್ರತಿ ಸಲ ಅದರ ತುಕ್ಕು ಹಿಡಿದ ರೆಕ್ಕೆಗಳು ಗಿರಕಿ ಹೊಡೆದಾಗ ಗುಪ್ತ ಸಬ್‌ಮೇರಿನ್ ಒಂದು ಹಟಾತ್ತಾಗಿ ಸಮುದ್ರದ ಗರ್ಭದಿಂದ ಎದ್ದು ಬೋರ್ಘರೆದಂತೆ ಸದ್ದು ಮಾಡುತಿತ್ತು. ಅವಳ ಉತ್ತರ ಬರುವಷ್ಟರಲ್ಲಿ ಆ ಪುಟದಲ್ಲಿ ಅಸ್ತಿತ್ವದಲ್ಲಿದ್ದ ಸುಮಾರು ೨೫ ಹುಡುಗಿಯರ ಪ್ರೋಪಯ್ಲ್ ಪಿಕ್ಚರ‍್ಸ್‌ಗಳತ್ತ ಕರ‍್ಸರ್ ತೂರಿಸಿ, ಅವರನ್ನು ತನ್ನ ಜತೆ Dirty-kinky ಚಾಟ್ ಮಾಡುವಂತೆ ಬೇಡಿದ್ದ. ಆದರೆ ಅವನೆಲ್ಲಾ ದೃಷ್ಠಿ ಇದ್ದದ್ದು ಆಂಟಿಗೋನ್‌ನತ್ತ. ಕಡೇಗೂ ಆಕೆ ಮಾತಾನಾಡಿದಳು.

‘your card no is accurate tell me how do you like to see me papa’
ದೇವರಾಯ ಗೊಗ್ಗರು ದನಿಯಲ್ಲಿ ಸದ್ದು ಮಾಡಿ, ಉಶ್ಟ್ರಪಕ್ಷಿಯಂತೆ ಜೋತಾಡುತ್ತಿದ್ದ ತನ್ನ ಗಂಟಲನ್ನು ಉಜ್ಜಿಕೊಳ್ಳುತ್ತಾ

“Sick of your barren clips…I ll thorw you money… more money if you come over here… you know dady’s address…”ಎಂದು ಟಕಟಕನೆ ಪದಗಳನ್ನು ಆ ಖಾಲಿ ಪರದೆಯಲ್ಲಿ ಸೃಷ್ಠಿಸಿ, ಕಳುಹಿಸಿ, ಕಣ್ಣು ಮುಚ್ಚಿದ.

ಮತ್ತೆ ಕಣ್ಣು ತೆಗೆದಾಗ ತಾನು ಈಗಷ್ಟೇ ಮೂರು ಸಾಲುಗಳನ್ನು ಬರೆದು ಅತ್ತ ಬಿಸಾಡಿದ್ದ ತನ್ನ ಮಹಾ ಕಾವ್ಯದ ಹಸ್ತ ಪ್ರತಿಯ ಮೇಲೆ ಮಂಡಲದ ಹಾವು ಸುತ್ತು ಹಾಕಿ ಮಲಗಿದಂತೆ ಕಾಣಿಸಿತು. ಒಮ್ಮೆ ತಲೆ ಎತ್ತಿ ತನ್ನ ಸೀಳು ನಾಲಗೆಯನ್ನು ಹೊರಚಾಚಿತು. ಅದರ ನಿರ್ವಿಕಾರ ಕಣ್ಣು, ಅಂತರಿಕ್ಷದ ಕಪ್ಪುರಂಧ್ರಗಳಂತೆ ಆಳವಾಗಿ, ಇವನನ್ನು ದಿಟ್ಟಿಸಿತು. ಇವನು ಆಕಳಿಸಿದ, ಮತ್ತೆ ಆ ನೋಟದೊಳಗೆ ದೃಷ್ಠಿಯಲ್ಲೇ ಧುಮುಕುವಂತೆ ದಿಟ್ಟಿಸಿದ. ಮತ್ತೆ, ಅದೇ ಬಂಗಿಯಲ್ಲೇ ಕೂತು ‘ಟ್ಸ್…’ ಎಂದು ಪೂತ್ಕರಿಸಿದ.

ದಡಾರನೆ ಡ್ರಾಯರ್ ಎಳೆದ. ಅದರೊಳಗಿದ್ದ ಗಾಂಜಾ ಸುತ್ತಿದ ಜಾಯಿಂಟ್, ಹೆರಾಯಿನ್ ಪ್ಯಾಕೇಟ್‌ಗಳು ಮತ್ತು ಎಲ್.ಎಸ್.ಡಿ. ಗುಳಿಗೆಗಳ ಡಬ್ಬಿಗಳಿದ್ದವು. ಬಿಳಿಹುಡಿಯಿದ್ದ ಪ್ಯಾಕೆಟ್ ಒಂದನ್ನು ಎತ್ತಿ, ಅದೇ ಮೇಜಿನ ಮೇಲೆ ಸುರಿದು, ಒಂದು ಸಾವಿರ ರೂಪಾಯಿಯ ನೋಟನ್ನು ವೇಗವಾಗಿ ಸುರುಳಿ ಸುತ್ತಿ, ಆ ಶ್ವೇತಚೂರ‍್ಣವನ್ನು ಧಾರಾಳವಾಗಿ ಉಸಿರಾಡಿ, “ಹಾ…” ಎಂದು ತಲೆಯನ್ನು ಸಡಿಲಿಸಿದ, ಬೆಳ್ಳಿಹಕ್ಕಿಯಾಗಿ ತಾನು ಮಹಾಪರ‍್ವತದ ಮೇಲಿಂದ ಇಣುಕುತ್ತಿದ್ದ, ಕೇಸರಿ ವರ‍್ಣದ ಮೋಡಗಳ ನಡುವೆ ಚುಕ್ಕಿಯಾಗಿ ಕರುಗುತ್ತಿರುವಂತೆ. ಅವನ ನೀಲಿ ಕಣ್ಣು ಮತ್ತೆ ಹತ್ತಿಕೊಂಡಿತು.
-೨-
“Hemmingway and ತೇಜಸ್ವಿ ನೋಡಕ್ಕೆ ಒಂದೇ ತರ ಕಾಣ್ತಾರಲ್ಲ… ಇಬ್ರ ಕತೆಗಳಲ್ಲಿ, -ತೇಜಸ್ವಿ ಅರ‍್ಲೀ ಕತೆಗಳಲ್ಲಿ- Suicide themes ಒಂತರಾ Devil’s reflections ಆಗಿ ಕಾಣಿಸ್ಕೋಳ್‌ತೆ ಅಲ್ಲಾ…?! but Hemmingway literally…”

“Ya…Ya… he blew his brain and died…” ಅವಳು ಕಚ-ಕಚನೆ ಪಾಪ್‌ಕಾರ‍್ನ್ ಅಗಿದಳು, “ಹೆಮ್ಮಿಂಗ್ವೆ ಅಂದಾಗ ನೆನಪಾಯ್ತು, ಯುರೋಪ್ ಟ್ರಿಪ್ ಪ್ಲಾನ್ ಏನಾಯ್ತು…”

“Still in a corner… ಹಣ ಅಡ್ಜಸ್ಟ್ ಆಗ್ತಿಲ್ಲಾ… ನೀನ್ ಗಂಡನ ಜತೆ ಹೋಗಬಹುದಲ್ಲಾ…”

“Bullshit ಅವ್ನ ಜತೆ ಹೋಗಕ್ಕೆ ನೀನೇನ್ ರೆಕಮೆಂಡ್ ಮಾಡ್ಬೇಂಕತಿಲ್ಲ… attend to your phone my god its so loud horrible”

ರಪರಪ್ಪಾರಪರಪರಪ್ಪ ಎಂದವನ ಜಂಗಮ ವಾಣಿ ಜೇಂಕರಿಸುತಿತ್ತು.

“ತೂ… NAKBA company A.E., ಹೇಳಿದ್ದ ಡೇಟ್‌ಗೆ ಕ್ಯಾಬೀನಲ್ಲಿ ಇಲ್ಲಾಂದ್ರೇ ಈ ತರ ಟಾರ‍್ಚರ್ ಮಾಡ್ತಾನೆ ಸುವರ್… ಹೇ ಇದನ್ನ horrible ಅಂತೀಯ… “World on Fire” ಸಾಂಗ್ನ beginning beats ಇದು…”

“whaterver I don care… and you should not ignore company’ call besides I am the one who introduced you to them alright… forget it. one meeting ಇದೆ. ಮೋಸ್ಟ್‌ಲೀ American Universtity tie up ಆಗಿರೋ ಒಂದು institutionಅಲ್ಲಿ school counselor ಆಗಿ ನನ್ನ appointment ಮಾಡ್ಬಹುದು, lets see ನಾಳಿದ್ದು ಅವರ ರೆಪ್ರಸನ್‌ಟೇಟೀವ್ ವಿಸಿಟ್ ಕೊಡ್ಬಹುದು ನಮ್ಮ ಕ್ಲಿನಿಕ್‌ಗೆ.”

“Ok…Good luck… ಇನ್ನೂ ಸ್ಟಾರ್ಟ್ ಮಾಡ್ತಾ ಇಲ್ಲಾ ಅಲ್ಲ ಪಿಲಂ ಇವ್ರು…”

“ಆದ್ರೆ airconditioning needs to be fixed”

“So…”

“So…I am running short of some money …can you lend me some 50K…”

“ಹಾ… Jim Morrison The End song ಇದು… ಏನೂ…? Sorry…why don’t you ask your hubby… and moreover whats with this k thing huh? 50k…10k what the fuck does that even mean…? ಇದನೆಲ್ಲಾ ಎಲ್ಲಿಂದ ಕಲ್ತಿರೋದು ನೀವೂ?”

“ಹಾ…!ಟಾಪಿಕ್ ಚೇಂಜ್ ಮಾಡ್ಬೇಡ! ಎಲ್ಲನೂ ಅವ್ನ ಹತ್ರನೇ ಕೇಳೋ ಹಾಗಿದ್ರೆ, ನಿನ್ನ ಹತ್ರ ನಾನ್ಯಾಕ್ ಬರ‍್ತಿದ್ದೆ… ನಿನ್ಹತ್ರ ದುಡ್ಡಿಲ್ಲ ಅಂತ ಒಪ್ಕೋ.”

“ಆಯ್ತು… ನನ್ಹತ್ರ ದುಡ್ಡಿಲ್ಲ… ಆಯ್ತಲ್ಲ. ನವ್ ಸುಮ್ನೆ ಫಿಲಂ ನೋಡೋಣ. ಪ್ಲೀಸ್…”

“ ಅಶ್ಟು ಆಸೇ ಇದ್ರೇ ಒಬ್ನೇ ಪಿಲಂ ನೋಡೋಕೆ ಬರ‍್ಬೇಕಿತ್ತು, ಜರ‍್ಕ್ ತರಾ…
ನನ್ಯಾಕೆ ಸುಮ್ನೆ ಕರ‍್ಕೋಂಡು ಬಂದೆ. My day is ruined ಅಷ್ಟೆಲ್ಲಾ clinets ಬಿಟ್ಟು ನಿನ್ನ ಹತ್ರ ಬಂದಿದ್ದು.”

“ಆಯ್ತು… ಇನ್ನೂ ನಿನ್ನ ಕ್ಲಯ್ಂಟ್ಸ್ ಕಾಯ್ತಾ ಇರ‍್ತಾರೆ…you please carry on…”
“Fine…To hell with you… I am going … don’t you ever call me again… I know you do… the moment you get tired of your Morrison and your Allen Poe you run back to me … cling to me… this time I wont allow that shit.. don’t pull that stunt again basterd …”

“…”

“watch your Fucking Favorite Scene…”

ಕತ್ತಲ ಥಿಯೇಟರ್ ಇದ್ದಕ್ಕಿದ್ದಂತೆ ಅಚ್ಚ ಅರಿಶಿನ ಬಣ್ಣದಲ್ಲಿ ಜಗಮಗಿಸಿತು. ತೆರೆಯಲ್ಲಿ ಹಲವಾರು ತೆಂಗಿನ ಮರಗಳು ಹತ್ತಿಕೊಂಡು ಬೆಳಕಿನ ಮರಗಳಾಗಿ ಗಾಳಿಯಲ್ಲಿ ಹಾರುವ ದೃಶ್ಯ ಹೊಳೆಯುತಿತ್ತು. ಇದನ್ನು ಸೂಕ್ಶ್ಮವಾಗಿ ನೋಡಲೆಂದೇ ನಾಗೇಂದ್ರ ಅನಾಮಿಕಳ ಮಾತನ್ನು ಅಷ್ಟು ಹೀನವಾಗಿ ಕಡೆಗಣಿಸಿದ್ದು. ಅವಳು ಬುಸುಗುಡುತ್ತಾ ಹೊರ ನಡೆಯುವಾಗ, ಇವನು ತನಗೆ ಅವಮಾನ ಮಾಡಲೆಂದೇ ಮೌನವಾಗಿದ್ದಾನೆ ಎಂದುಕೊಂಡಳಾದರೂ, ಅಸಲಿಗೆ ನಾಗೇಂದ್ರ ಸಿನಿಮಾವನ್ನು ತೀರದ ಏಕಾಗ್ರತೆಯಲ್ಲಿ ನೋಡುತ್ತಿದ್ದ. ಅವಳು ಆಳದ ಹಗೆಯಲ್ಲಿ ಬೈದ ಮಾತುಗಳನ್ನು ಆತ ಕೇಳಿಸಿಕೊಂಡೇ ಇರಲಿಲ್ಲ. ಅದರ ಜತೆಗೆ ಇತ್ತೀಚೆಗೆ ಯಾರಾದರೂ ಹಣದ ಸುದ್ದಿ ಎತ್ತಿದರೇ ಸಾಕು, ಅವನು ದಿವ್ಯ ಉದಾಸೀನ ಮುದ್ರೆ ತಾಳುತ್ತಿದ್ದ. ಇದಕ್ಕೆ ಊನಗೊಂಡಿದ್ದ ತನ್ನದೇ ಆರ್ಥಿಕ ಸ್ಥಿತಿಯೇ ಕಾರಣವೆಂದರೆ ತಪ್ಪಗಾಲಾರದು. ಐದು ವರುಶಗಳ ಹಿಂದೆ Director Of Photography ಆಗುವ ಕನಸಿಗೆ ಅಂಟಿ ಮುಂಬಯ್ಗೆ ಹೋಗಿ, ಅಲ್ಲಿ ಗಾಂಜಾ ಸೇದುವ ಚಟ ಹತ್ತಿಸಿಕೊಂಡಿದ್ದ. ಕಾಲ ಕಳೆದಂತೆ ‘ಪ್ರೆಶ್ ಮಾಲು’ ತರುವ ಡೀಲರ್‌ನಿಂದಲೇ ರಾ ಲೀವ್ಸ್ ಖರೀದಿ ಮಾಡುವಶ್ಟು ತೀವ್ರವಾದ ಬಂಗಿದಾಸನಾದ. ರೈಲ್ವೆ ಸ್ಟೇಶನಿನಲ್ಲಿ ಆ ಡೀಲರ್‌ನನ್ನೇ ಕಾಯವಷ್ಟು ಕೆಟ್ಟ ಚಪಲ ಅವನಿಗೆ ಜೋತು ಬಿದ್ದಿತ್ತು. ಗ್ರಹಚಾರ ನೋಡಿ, ಇವನು ಆ ಡೀಲರ್‌ನ ಜತೆ ವಹಿವಾಟು ನಡೆಸುವಾಗಲೇ ಹೊಂಚು ಹಾಕಿದ್ದ ಆಂಟಿ ಡ್ರಗ್ಸ್‌ಸ್ಕ್ವಾಡ್ ಜನ ಹಟಾತ್ತಾಗಿ ಪ್ರತ್ಯಕ್ಷರಾಗಿ ಇವರಿಬ್ಬರನ್ನೂ ಹೆಡೆಮುರಿ ಕಟ್ಟಿ ಜಯ್ಲಿಗೆ ದಬ್ಬಿದ್ದರು. ಅಲ್ಲಿ ಅರೆಸ್ಟ್ ಆಗಿದ್ದವನನ್ನು ಮತ್ತೆ ಮನೆಗೆ ಕರೆ ತಂದದ್ದು ಇವನ ಚಿಕ್ಕಪ್ಪ ಕಾಂತರಾಜ. ಇವನ ಮೇಲೆ ಅವರಿಗೆ ವಿಶೇಷ ಮಮಕಾರವೇನಿರಲಿಲ್ಲ. ಆದರೆ ೪೦-೬೦ ಸೈಟಿನ ಮನೆಯಲ್ಲಿ ಇವನ ತಾಯಿಗೂ ಭಾಗವಿತ್ತು. ಹುಟ್ಟುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದ ನಾಗೇಂದ್ರನನ್ನು ಸಾಕಿದ್ದೆಲ್ಲಾ ತಾಯಿ ಸರೋಜಮ್ಮನವರು. ಇವರ ತಂಗಿ ಜಾನಕಿಯನ್ನು ಕಾಂತರಾಜಪ್ಪನವರು ಮದುವೆಯಾಗಿ ಗಂಡು ದಿಕ್ಕಿಲ್ಲದ ಮನೆಯನ್ನು ಒಂದು ಮಟ್ಟಕ್ಕ್ಕೆ ತಂದಿದ್ದರು. ಅವರು ತಮ್ಮ ಹೆಂಡತಿ, ಮಕ್ಕಳ ಆರೊಗ್ಯ ನೋಡಿಕೊಂಡರೇ ವಿನಹ ಇಡೀ ಕುಟುಂಬದ ನೆಮ್ಮದಿಯನ್ನಲ್ಲಾ. ಆಗ ನಾಗೇಂದ್ರನಿಗೆ ಇನ್ನೂ ಚಿಕ್ಕ ವಯಸ್ಸು. ಆದರೂ ತನಗಿದ್ದ ಗೊತ್ತಿದ್ದ ಪೋಟೋಗ್ರಪೀ ಕಲೆಯ ಗೀಳನ್ನೇ ಬಳಸಿಕೊಂಡು ಕಂಡ – ಕಂಡ ಮದುವೆಯನ್ನೆಲ್ಲಾ ಚಿತ್ರೀಕರಿಸಿ ಹೇಗೋ ಹಣ ಹೊಂದಿಸಿ ತನ್ನ ಅಕ್ಕನ ಮದುವೆ ಮಾಡಿಸಿದ್ದ . ವಿಧಿ ವಿಪರೀತ. ದುಬೈನಲ್ಲಿ ದುಡಿಯುತ್ತಿದ್ದ ಅಕ್ಕನ ಗಂಡನ ನೌಕರಿ ಅಷ್ಟೇನು ಅಚ್ಚುಕಟ್ಟಾಗಿರಲಿಲ್ಲ. “ಒಂದು ಆರು ತಿಂಗಳು ನಿಮ್ಮನೇಲಿ ಮೀನಾಕ್ಷಿ ಇರ‍್ಲಿ… ದುಬೈನಲ್ಲಿ, ಒಂದು ಪ್ಲಾಟ್ ಹಿಡ್ದು, ಅವ್ಳ್ನು, ಮಗ್ಳು ದೇವಿನೂ ಕರ‍್ಕೊಂಡು ಹೋಗ್ತೀನಿ ವಾಪಾಸು …” ಎಂದಿದ್ದ ಭಾಸ್ಕರ ಆರು ವರುಶವಾದರೂ ತನ್ನ ಮಾತನ್ನು ಕಾರ‍್ಯರೂಪಕ್ಕೆ ತಂದಿರಲಿಲ್ಲ, ಒಮ್ಮೊಮ್ಮೆ ರಜೆ ಸಿಕ್ಕಾಗ ಇಲ್ಲಿಗೇ ಬಂದು ಗಡದ್ದಾಗಿ ಉಂಡು, ಊರೆಲ್ಲಾ ಸುತ್ತಾಡಿ ಮನೆಯಲ್ಲೇ ಮಲಗಿರುತ್ತಿದ್ದ. ಇದರಿಂದ ರೋಸಿ ಹೋಗಿದ್ದ ನಾಗೇಂದ್ರ ಒಮ್ಮೆ ಮಾತ್ರ ಭಾಸ್ಕರನಿಗೆ ಚೆನ್ನಾಗಿಯೇ ಜಾಡಿಸಿದ್ದ. ಆಗ ತಿಕ್ಕಲು ತಿಕ್ಕಲಾಗಿ ಕಿರುಚಾಡಿದ್ದ ಭಾಸ್ಕರ, ಮತ್ತೆ ದುಬಾಯಿಗೆ ಹಾರಿದ್ದ. ಈ ಕಹಿ ಅನುಭವದ ಜತೆಗೇ ಅಕ್ಕನ ನಿಷ್ಠುರವನ್ನೂ ಕಟ್ಟಿಕೊಂಡು ಬೇನೆಯಲ್ಲಿ ಬದುಕುತಿದ್ದ ನಾಗೇಂದ್ರನಿಗೆ, ಇನ್ನೊಂದು ಆಘಾತವಾಗಿದ್ದು, ಅಕ್ಕನ ಮಗಳು ದೇವಿಯ ಹೃದಯದಲ್ಲಿ ತೂತಿರುವ ವಿಷಯ ತಪಾಸಣೆಯಿಂದ ತಿಳಿದಾಗ. ಆಂಜಿಯೋಗ್ರಾಪಿ, ಆ ಚೆಕ್‌ಅಪ್- ಈ ಸೆಕೆಂಡ್ ಓಪಿನಿಯನ್ ಎಂದು ಎರಡೆರಡು ಸಾರಿ ಬೆಂಗಳೂರಿಗೆ ಅಲೆದು ಸುಸ್ತಾಗಿ, ಈ ಉಸಾಬರಿಯೇ ಬೇಡ ಎಂದು ಕ್ಯಾಮರಾ ಎತ್ತಿಕೊಂಡು ಮುಂಬಯ್ಗೆ ಎದ್ದಿದ್ದ ನಾಗೇಂದ್ರ. ಆಗ ಇವನ ಚಿಕ್ಕಪ್ಪ ಕಾಂತರಾಜ, ಚಿಕ್ಕಮ್ಮ ಯಶೋಧರೆಯ ಒತ್ತಾಯಕ್ಕೆ ಸಿಲುಕಿ, “ಈ ಜಾಗ ನನ್ನ ಹೆಸರಲ್ಲಿದೆ, ನಿಮ್ಮ ಪಾಲಿನ ದುಡ್ಡು ಹತ್ ಲಕ್ಷ ಕೊಡ್ತೀನಿ. ನೀನು, ನಿನ್ನ ಹೆಗ್ಣದ ಸಂಸಾರನೂ ಈ ಮನೆಯಿಂದ ತೊಲಗಿ…” ಎಂದು ಕ್ಯಾತೆ ತೆಗೆದಿದ್ದಾಗ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಗೊತ್ತಾಗದೇ ಗಲಿಬಿಲಿಯಾಗಿ ಸರೋಜಮ್ಮ ನಾಗೇಂದ್ರನಿಗೆ ಕರೆ ಮಾಡಿದಾಗ ಅವನು ಜೈಲಿನಲ್ಲಿ ಇರುವ ಮಾಹಿತಿ ತಿಳಿದು, “ಬಾವ ನಿಮ್ಮ ಕಾಲ್ಗೆ ಬೀಳ್ತೀನಿ, ನಾಗೇಂದ್ರನ ಬಿಡ್ಸಿ… ಆಮೇಲೆ ನಾವ್ ಹೋರಡ್ತೀವಿ… ಎಂದು ಗೋಗರೆದು, ಪ್ರಮಾಣ ಹಾಕಿದ್ದಳು, ಮರಳಿ ಮಣ್ಣಿಗೆ ಬಂದ ನಾಗೇಂದ್ರನನ್ನು ಹೈರಾಣಾಗಿಸಿದ್ದು ಇದೇ ಕಾಂತರಾಜನ ಅಶರೀರವಾಣಿ. ಮೇಲಿನ ಮಹಡಿಗೆ, ನುಗ್ಗಿ ಬಾಗಿಲು ಜಡಿದು, “ಆ ಹಲ್ಕಾ ಡ್ರಗ್ ಆಡಿಕ್ಟನ್ ಲಂಚ ಕೊಟ್ಟು ಬಿಡ್ಸಿ ಬಂದಿರೋದು, ಆ ಖರ್ಚ್ ಮಡ್ಗಿ, ಮುಂದಿನ ತಿಂಗ್ಳೇ ತೊಲ್ಗಿ, ಕಳ್ ಸೂಳೇ ಮಕ್ಳ…” ಎಂದರಚಿದ್ದ., ಸರೋಜಮ್ಮ ತಮ್ಮ ತಿಮಿಂಗಿಲ ಗಾತ್ರದ ದೇಹವನ್ನು ಕೊಳೆ ಸೀರೆಯಲ್ಲಿ ಮುಚ್ಚಿಕೊಂಡು ತಾಜಾ ಚಿತ್ರಹಂಸೆಯ ವರದಿಯಿಡುತ್ತಾ ನಾಗೇಂದ್ರನ ದಿಗ್ಬ್ರಮೆಗಳನ್ನು ಊದಿಸಿದ್ದರು.
ಅತ್ತ ನಾಗೇಂದ್ರನ ಕನಸು ಮುಂಬಯಿ ದೂರದ ಸಮುದ್ರದಲ್ಲಿ ದಡಾರನೆ ಮುಳುಗಿತ್ತು. ಇತ್ತ ತನ್ನ ಉಳಿವಿಗಾಗಿ ಹೋರಾಟ ನಡೇಸಬೇಕಾದ ಪರಿಸ್ಥಿತಿ. ಹೀಗಿರುವಾಗ ಅನಾಮಿಕ ಆಕಸ್ಮಿಕವಾಗಿ ಸಿಕ್ಕಳು. ಅವಳು ಪಾಠ ಮಾಡುತ್ತಿದ್ದ ಕಾಲೇಜಿನ ಪ್ರಮೋಶನಲ್ ಆಡ್ಸ್ ತೆಗೆಯಲು ಹೋಗಿದ್ದಾಗ ಅವಳೇ ಬಹಳ ಕಾಳಜಿಯಲ್ಲಿ ವಿವಿದ ಆಂಗಲ್‌ಗಳಲ್ಲಿ ಚಿತ್ರೀಕರಿಸುವ ಕಲೆಯನ್ನು ಅವನಿಗೆ ಪರಿಚಯಿಸಿದ್ದಳು. ಸ್ವಲ್ಪ ಡುಮ್ಮಿಯಾಗಿ, ಜೋತು ಬಿದ್ದ ಸೊಂಟದಲ್ಲಿ ಚೂರು ಗೂನಿಯಾಗಿದ್ದ ಅನಾಮಿಕ, ಡೆಲ್ಲಿಯ ಕಡೆಯವಳು. ಅವಳ ಗಂಡ ಸಾತ್ವಿಕ್ ಪ್ರಭು, ಇಲ್ಲೇ ಕೊಬ್ಬರಿ ಎಣ್ಣೆ ಬಿಸಿನೆಸ್‌ನಲ್ಲಿದ್ದ. ಇವಳಿಗಿದ್ದ ಸಾಹಿತ್ಯದ ಪ್ರಜ್ನೆಯಿಂದಾಗಿ ಮತ್ತೆ ತಾನು ಹಿಂದೆ ಖುಶಿಯಲ್ಲಿ ಓದಿ, ಕಣ್ಣೆದುರಿನ ಕಟು ವಾಸ್ತವದ ಹೊಡೆತಕ್ಕೆ ಹೆದರಿ ಮರೆತಿದ್ದ ಕೆಲ ವರ್ಡ್ಸ್ವರ್ತ್ ಕವಿತೆಗಳು, ಕೀಟ್ಸನ ಭಯಗಳು, ಶೇಕ್ಸ್‌ಪಿಯರನ್ ತಲ್ಲಣಗಳು ಮತ್ತೆ ಮನಸ್ಸಿನೊಳಗೆ ಹೊತ್ತಿಕೊಂಡವು. ಅವಳ ಜತೆ ಕಾಪಿ ಡೇ ಮಾಲ್, ಸಮುದ್ರದ ಕಡೆಯೆಲ್ಲಾ ತಿರುಗುತ್ತಾ ಬೇರೆ-ಬೇರೆ ಭಾಷೆಯ ಸಿನಿಮಾಗಳ ಬಗ್ಗೆ, ಪದ ಪದ ದೃಶ್ಯವಾಗುವ ಹೊತ್ತಿನ ಬಗ್ಗೆ, ಮಾಂತ್ರಿಕ ವಾಸ್ತವತೆ ಮತ್ತು ಗ್ರೀಕ್ ರುದ್ರಭಿಕರತೆಯನ್ನು ಕಲಸಿ ಒಂದು ಕಿರುಚಿತ್ರ ಮಾಡುವುದರ ಬಗ್ಗೆ… ಹೀಗೆ ಬಹಳಷ್ಟು ಬಗೆಗಳ ಬಗ್ಗೆ ಸುಮ್ಮನೆ ಹರಟುತ್ತಿದ್ದರು ಹಾಗೂ-ಹೀಗೂ ಒಂದು ದಿನ ಏನೋ ನೆಪ ಮಾಡಿ ಅವಳ ಗಂಡನಿಲ್ಲದ ರಾತ್ರಿ ಅವಳ ಮನೆಗೆ ಹೋಗಿದ್ದ. ಮತ್ತೆ ಅಲ್ಲಿ ಅವಳ ಗಂಡ ಗೋವಾದಿಂದ ತಂದಿದ್ದ ದುಬಾರಿ ವೈನ್ ಕುಡಿದು, ಟೈಟ್ ಆಗಿ “ನೀವೆಲ್ಲಾ ಕಳ್ಳರು, ಮಜಾ ಮಾಡಕ್ಕೆ ಸಾಹಿತ್ಯದ ಮುಖವಾಡ ಹಾಕೋ ಶ್ರೀಮಂತರು… ನಿಮ್ಮ ತೆವಲುಗಳ ನಡುವೆ ಸುಸ್ತಾಗಿರುವ ನನ್ನ ಆತ್ಮನಾ ನಾಚಿಕೆಯಲ್ಲಿ ಹುಡ್ಕಿತಿರೋ ಬೇವರ್ಸಿ ನಾನು” ಎಂದು ಬಯ್ದಿದ್ದ, ಯಾರಿಗೆ ಬಯ್ಯುತ್ತಿದ್ದೇನೆ ಎಂದು ನಿಖರವಾಗಿ ತಿಳಿಯದೆ. ಅವಳಿಗೆ ಸಿಟ್ಟು ತಲೆಗೇರಿ ಇವನ ಕಪಾಲಕ್ಕೆ ಹೊಡೆದಳು. ಇವನು ಅವಳ ಕೈಕಟ್ಟಿದ. ಮತ್ತದೇ ಆಟವಾಯಿತು. ಹೊಡೆಯುವುದು, ಉಗಿಯುವುದು, ಕಚ್ಚುವುದು ಇತ್ಯಾದಿ… ಇತ್ಯಾದಿ…

ಮತ್ತೆ ಅವಳಲ್ಲಿದ್ದ ಕ್ರಿಯಾಶೀಲ ಕವಯತ್ರಿ ಆಗಾಗ ಜಾಗೃತಳಾಗಿ ಶೇಕ್ಸ್‌ಪಿಯರ್ ಕಾಲದ ಕಾಸ್ಟ್ಯೂಮ್ಸ್ ಹಾಕಿ ಪ್ರಣಯದಾಟ ಆಡುವುದನ್ನು ಕಂಡು ಹಿಡಿದಳು. ಮತ್ತೆ ಒಂದು ದಿನ “ನಾನೇ ಕೀಟ್ಸ್‌ನ ಲಾಮಿಯಾ…” ಎಂದು ನಾಗಕನ್ಯೆಯ ವೇಶದಲ್ಲಿ ಇವನ ಮುಂದೆ ನಿಂತು, ಕೀಟ್ಸ್ ಕಾವ್ಯ ವಾಚನ ಮಾಡಿದ್ದಳು. ಇವನು ತಾನು ಏನೂ ಕಮ್ಮಿಯಿಲ್ಲ ಎಂದು ಸಮಯದಲ್ಲಿ ಇನ್ನೂ ಹಿಂದಕ್ಕೆ ಹೋಗಿ, “ನಾನು ಈಡಿಪನ್, ನೀನು ಆಂಟಿಗೋನ್…” ಎಂದು ಆ ಕಾಲದ ಪೋಷಾಕನ್ನು ಕಾಸ್ಟ್ಯೂಮ್ಸ್ ಹವ್ಸ್‌ನಿಂದ ಎರವಲು ಪಡೆದು, ಅವಳ ಕೋಣೆಯಲ್ಲಿ ದೀಪ ಆರಿಸಿ, ಚಿನ್ನದ ಬೆಳಕಲ್ಲಿ ಒಬ್ಬರನ್ನೊಬ್ಬರು ಅಟ್ಟಾಡಿಸಿದ್ದರು.
ಇಂತಹ ಅಮೃತ ಗಳಿಗೆಗಳಲ್ಲಿ ಅವಳ ಮತ್ತು ಅವಳ ಅಂಕುಡೊಂಕು ದೇಹವನ್ನು ಬೇರೆ-ಬೇರೆ ಕೋನಗಳಲ್ಲಿ ಕ್ಯಾಮರಾ ಪಟಲದ ಮೇಲೆ ಸೆರೆ ಹಿಡಿಯುತ್ತಿದ್ದ ನಾಗೇಂದ್ರ. ಇದರ ಬಗ್ಗೆ ಅವನಿಗೇನು ಅಷ್ಟು ತೃಪ್ತಿಯಿಲ್ಲದಿದ್ದರೂ, ಅವಳ ಕೃಪೆಯಿಂದ, ಆ ಚಿತ್ರಗಳು ಆರ‍್ಟ್‌ಗ್ಯಾಲರಿಯಲ್ಲಿ ಪ್ರದರ್ಶಿತವಾದರೆ ಅಥವಾ ಅಲ್ಲಿಯ ಪ್ರಸಿದ್ದ ಲೀವಿಂಗ್ ಲೆಜೆಂಡರಿ ರೈಟರ್ಸ್ ಗಳೋ ಅಥವಾ ನಡೆದಾಡುವ ದಂತಕತೆಯಂತಿದ್ದ ಕವಿಗಳೋ ಈ ಚಿತ್ರಗಳನ್ನು ಅವರ ನವ್ಯ ಕಥಾಸಂಕಲನಕ್ಕೆ ಮುಖಪುಟಚಿತ್ರವಾಗಿ ಬಳಸಿದ್ದರೆ ಎಂಬ ದೂರದೃಷ್ಟಿಯಿಂದ ಈ ಕೆಲಸವನ್ನು ಬಹು ಆಸ್ಥೆಯಿಂದ ಮಾಡಿದ್ದ. ಒಂದು ವೇಳೆ ಹಾಗೇನಾದರೂ ಆದರೆ ಈ ಸಾಹಿತಿಗಳು ತನಗೆ ಡಾಲರ‍್ಸ್‌ಗಳಲ್ಲೇ ಸಂಭಾವನೆ ನೀಡುತ್ತಿದ್ದರು ಎಂದು ಯಾವುದೋ ಕಾರಣಕ್ಕೆ ಊಹಿಸಿದ್ದ.

ಇವಳ ಗಂಡ ಯಾವತ್ತೂ ಗೋವಾ, ಪುಣೆ, ಮುಂಬಯ್ ಸುತ್ತುತ್ತಾ ಇರುತ್ತಿದ್ದರಿಂದ ಹಾಗೂ ಅನಾಮಿಕ ‘ಸೋಶಿಯಲಿಸ್ಟ್ ವುಮನ್’ ಎಂದೇ ಎಲ್ಲರಿಗೂ ಪರಿಚಿತಳಾಗಿದ್ದರಿಂದ ಇವರ ಅನ್ಯೋನತೆಗೆ ಯಾವ ಅಪಾಯವೂ ಇರಲಿಲ್ಲ. ಒಂದು ದಿನ ಅವಳು ನಾಗೇಂದ್ರನ ತಾಪತ್ರಯಗಳನ್ನು ಅರಿತು NAKBA ಎನ್ನುವ ಸಾಪ್ಟ್‌ವೇರ್ ಕಂಪೆನಿಗೆ ಇವನನ್ನು ಪರಿಚಯಿಸಿದ್ದಳು. ಇವಳ ಸೆರಗ ಹಿಡಿದು ಅದರ ಮೇಲೊಂದು ಪುಟ್ಟದಾದ ಡಾಕ್ಯುಮೆಂಟರಿ ಮಾಡಿ ಸ್ವಲ್ಪ ಹಣದ ಮುಖ ನೋಡಿದ್ದ. ಅದರಲ್ಲಿ ಅರ್ಧ ದಷ್ಟನ್ನು ಮತ್ತೆ ಅವಳೇ ಸಾಲದ ರೂಪದಲ್ಲಿ ಕಿತ್ತಿದ್ದಳು. ಆದರೂ ಇವನ ಕಾರ‍್ಯವೈಖರಿಯನ್ನು ಮೆಚ್ಚಿದ್ದ ಆ ಕಂಪೆನಿಯ ಮ್ಯಾನೇಜರ್ ಮತ್ತೆ ಇವನನ್ನೇ ಸಂಪರ‍್ಕಿಸಿ, “ ನಿಮ್ಮ ಇಂಗ್ಲೀಶ್ ಚೆನ್ನಾಗಿದೆ, there is another job… not photography, ಆದ್ರೆ ಇನ್ನೂ ಜಾಸ್ತಿ ಹಣ ಸಿಗುತ್ತೆ… but Nature of the work should be confidential” ಎಂದಿದ್ದರು.

ಇವನು ಬಾರೀ ಕಟ್ಟುನಿಟ್ಟಿನ ಕಮಾಂಡರ್‌ನಂತೆ ತನ್ನಲ್ಲಿದ್ದ ಕಡು ನೀಲಿಬಣ್ಣದ ಷರ್ಟನ್ನು, ಬೂದಿ ಬಣ್ಣದ ಪ್ಯಾಂಟನ್ನು ಹಾಕಿ ಶಿಸ್ತಲ್ಲಿ ಹೋಗಿದ್ದ. ಆದರೆ ಆ ಜಾಗದಿಂದ ಇವನನ್ನು ಸ್ಕಾರ‍್ಪಿಯೋ ಕಾರಲ್ಲಿ ಕೂರಿಸಿ ಬೇರೆಲ್ಲಿಗೋ ಕರೆದೊಯ್ದಿದ್ದರು, ಆ ಅಪರಿಚಿತರು. ಕೆಲವು ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ನಿಲ್ಲುತ್ತಿದ್ದ ಗಾಡಿಯೊಳಗೆ ಇವನ ಹಾಗೇ ಅಚ್ಚುಕಟ್ಟಾಗಿ ಬಂದಿದ್ದ, ಮೂವತ್ತರ ಆಜು-ಬಾಜಿನಲ್ಲಿರುವ ಯುವಕರನ್ನು ಹತ್ತಿಸಿಕೊಳ್ಳಲಾಗುತ್ತಿತ್ತು. ಒಳಗಡೆ ಬರೀ ಹೊರಗಿನ ಗದ್ದಲ ತುಂಬಿದ ಮೌನ. ಎಲ್ಲರೂ ಮಾತನಾಡಿ ಕೊಂಡು ಬಂದವರಂತೆ, ಸುಮ್ಮನೆ ಕೂತಿದ್ದರು. ಹಾಗೇ ನಗರವನ್ನೆಲ್ಲಾ ಗಿರಕಿ ಹೊಡೆದ ಆ ಕಪ್ಪು ಸ್ಕಾರ‍್ಪಿಯೋ ಕೊನೆಗೆ “ಡುರ‍್ರ್‌ರ‍್ರ್…” ಎಂದು ಗುಟುರು ಹಾಕುತ್ತಾ ಆಕ್ಟೋಪಸ್ ಮಾಲ್ ಪಕ್ಕವೇ ಹಾದು ಹೋಗಿದ್ದ ಕಿರಿದಾದ ರಸ್ತೆಯಾಚೆ ತಿರುಗಿ ಅಲ್ಲಿದ್ದ ಒಂದು ಗಲ್ಲಿಯಲ್ಲಿ ಇವರೆಲ್ಲರನ್ನೂ ಇಳಿಸಿ, ಸಂಪೂರ‍್ಣವಾಗಿ ಮೌನವಾಯಿತು. ಒಳಗಡೆ ಎಲ್.ಇ.ಡಿ ಪಳ-ಪಳ ಬೆಳಕು. ಆ ತೀಕ್ಶ್ಣವಾದ ಪ್ರಭೆಯು ಆಚೆಯ ಸೂರ‍್ಯನ ಕಿರಣಗಳನ್ನೇ ಮಂಕು ಮಾಡಿತ್ತು. ಕಿತ್ತಳೆ ಹಣ್ಣಿನ ಪರಿಮಳವಿದ್ದ ಸುಗಂದ ದ್ರವ್ಯದ ಜತೆ ಬೆರೆತ ತಂಪಾದ ಹವೆಯಲ್ಲಿ ಆ ಸಂಕೀರ‍್ಣ ಕೊಟಡಿಯು ಉಸಿರಾಡುತ್ತಿತ್ತು. ಹಾಗೇ ಎದುರು ನಡೆದರೆ, ಹಾವಿನ ಹಾಗೆ ಓರೆ-ಓರೆಯಾಗಿ ತಿರುಗುತ್ತಿದ್ದ ಆ ಕೋಣೆ ಸಂದಿ-ಸಂದಿಗಳಲ್ಲಿ ಒಂದೊಂದು ಕ್ಯಾಬೀನ್; ಅದರೊಳಗಿಂದ ರುಶಿಯ ಜ್ನಾನದೃಷ್ಠಿಯಂತೆ ಗಾಢವಾಗಿ ಕಣ್ಣು ಕೋರಯ್ಸುವ ಕೃತ್ರಿಮ ಜ್ಯೋತಿಯ ಎದುರು ತಪಸ್ಸಿಗೆ ಕೂತ ಹಾಗೇ ಕುಕ್ಕರಿಸಿದ್ದ, ಮೂವತ್ತು-ಮೂವತ್ತಯ್ದರ ಗಂಡಸರು, ಸಾಗಿದಂತೆ ಉತ್ಪತ್ತಿಯಾಗಿದ್ದ ಈ ಗುಹೆಗಳೊಳಗೆ ಹೇರಳವಾಗಿದ್ದರು. ಅವರ ದೃಷ್ತಿಯೆಲ್ಲಾ ತಮ್ಮ ವಿರುದ್ದ ಬದಿಯಲ್ಲಿದ್ದ ಉದ್ಬವಿಸಿದ್ದ ಆ ಸಿಸ್ಟಮ್ಸ್‌ಗಳನ್ನೇ ನಿರಂತರವಾಗಿ ತಿವಿಯುತಿತ್ತು. ಅವರ ಬೆರಳುಗಳು ವ್ರುತ್ತಾಕಾರವಾಗಿ ಕೀಲಿಮಣೆಯನ್ನು ಒತ್ತುತ್ತಿದ್ದವು. ಮಿಕ್ಕೆಲ್ಲಾ ದೇಹದ ಭಾಗಗಳು ನಿಶ್ಕ್ರಿಯವಾಗಿ, ಆ ನಕಲಿ ತೇಜಸ್ಸನ್ನು ಗಹನವಾಗಿ ಧ್ಯಾನಿಸುತ್ತಿರುವಂತೆ ಕಾಣುತ್ತಿತ್ತು.

ನಾಗೇಂದ್ರ ಮತ್ತು ಅವನ ಜತೆ ಇದ್ದವರನ್ನು ಇನ್ನೊಂದು ಕೋಣೆಗೆ ಹೋಗಿ ಕೂರಲು ಹೇಳಿದರು. ಅದರೊಳಗೆ ಮಸಿಯಂತಹ ಕತ್ತಲು. ಎಲ್ಲೋ ಮೂಲೆಯಲ್ಲಿ ಮಂಪರು ಬರಿಸುವ ನೀಲಿ ಬೆಳಕು. ಸ್ವಲ್ಪ ಹೊತ್ತಿನಲ್ಲಿ ಸೂಟು-ಬೂಟು ಹಾಕಿದ್ದ ಕೆಲ ಜನರು, ಲಿನನ್ ಶರ್ಟ್ ಹಾಕಿದ್ದ ಒಬ್ಬ ಆಜಾನುಬಾಹು ಹಾಗೆಯೇ ಇವರ ಜತೆ ನೋಡಲು ಆಂಗ್ಲಳಂತೆ ಕಾಣುತ್ತಿದ್ದ ಇಳಿ ಮಧ್ಯವಯಸ್ಕ ಹೆಣ್ಣು… ಇವರ ದಂಡೇ ಅಲ್ಲಿ ಅಚಾನಕ್ಕಾಗಿ ಪ್ರತ್ಯಕ್ಷ ವಾಯಿತು. ಪಕ್ಕದಲ್ಲಿದ್ದ ಪ್ರಾಜೆಕ್ಟ್ ಹೊತ್ತಿಕೊಂಡಿತು. ಆ ತಿಳಿ ನೀಲಿ ಬೆಳಕು ಆ ಹೆಂಗಸಿನ ಮೋರೆಯ ಮೇಲೆ ಬಿದ್ದಾಗ, ಆಕೆ ಇಲ್ಲಿಯವಳೇ ಎಂದು ತಿಳಿಯಿತು. “Gentlemen Welcome to you all” ಎಂದು ಆಕೆಯು ವಿದ್ಯುತ್ ಸ್ವರದಲ್ಲಿ ಕುಳಿತವರನ್ನೆಲ್ಲಾ ಟೊಳ್ಳು ನೆರಳುಗಳಂತೆ ಪರಿಗಣಿಸಿ ಮಾತು ಶುರು ಮಾಡಿದ ರೀತಿ ನೋಡಿ ಮೊದ-ಮೊದಲು ನಾಗೇಂದ್ರ ಈಕೆ ಯಾವುದೋ Shadow Organisation ಒಂದರ ಮುಖ್ಯ ಕಾರ‍್ಯದರ್ಶಿ ಇರಬೇಕು, ತನ್ನನ್ನೂ ಅಂತಹ Secreat Mission ಒಂದಕ್ಕೆ ನೇಮಿಸಿಯೇ ಬಿಡುತ್ತಾರೆ ಎಂದೇ ಖಚಿತವಾಗಿ ನಂಬಿದ್ದ. ಆದರೆ ಈ ಸೀಕ್ರೇಟ್‌ಮಿಶನ್ ಅನ್ನು ಆಕೆಯ ಪದಗಳಲ್ಲೇ “Targetting Kinksters” ಎಂದು ವರ್ಣಿಸಬಹುದೇನೋ. ಅಂದರೆ, ಅತಿಕಾಮದಲ್ಲಿ ತಲೆಕೆಟ್ಟು ಲೈಂಗಿಕ ತೆವಲುಗಳನ್ನು ಇಟ್ಟುಕೊಂಡು ಲಲ್ಲೆ ಹೊಡೆಯಲೆಂದೇ ಅಂತರ‍್ಜಾಲದಲ್ಲಿ ಜತೆಗಾರ್ತಿಯನ್ನು ಹುಡುಕ ಬರುವ ಚಪಲ ಚಿತ್ತ ಗಂಡಸರನ್ನು, ವಿಪರೀತವಾಗಿ ಆಕರ್ಷಿಸುವ ವೆಬ್‌ಸೈಟ್ ಅದಾಗಿತ್ತು. ಇಲ್ಲಿ ಕೂತಿದ್ದ ಅಷ್ಟೂ ಗಂಡಾಳುಗಳ ಕೆಲಸ ಇವರ ಪುಟಕ್ಕೆ ಲಾಗ್-ಇನ್ ಆದ ತೀಟೆ ಮನುಶ್ಯರ ಜತೆ ಹುಡುಗಿಯರ ಸೋಗಿನಲ್ಲಿ ಹರಟೆ ಹೊಡೆದು ಅವರ ಇಂದ್ರಿಯಗಳನ್ನು ಕೆರಳಿಸಿ, ಅವರಾಗಿಯೇ ಇವರ ಮುಖ ನೋಡಲೋ ಅತವಾ ಇವರ ಬೆತ್ತಲೆ ನೃತ್ಯವನ್ನು ತೆರೆಯ ಮೇಲೆ ನೋಡಲು ತುದಿಗಾಲಲ್ಲಿ ಅಕ್ಷರಶಃ ನಿಂತು ತಯಾರಾಗಿರುವಾಗ, ಈ ಸ್ತ್ರೀ ವೇಷಧಾರಿಗಳು. “ನೋಡು… ನನ್ನ ಚಡ್ಡಿ ಕುಣಿತ ನೀನು ನೋಡಬೇಕೆಂದರೆ, ನಮ್ಮ ಅಕೌಂಟ್‌ಗೆ ನಿನ್ನ ಕ್ರೆಡಿಟ್ ಕಾರ‍್ಡ್ ಇಂದ ಇಷ್ಟು ಹಣ ರವಾನಿಸು…” ಎನ್ನಬೇಕಿತ್ತು. ಹೀಗೇ ಇವರ ಈ ನಿಯಮಕ್ಕೆ ಒಪ್ಪಿ ಇಷ್ಟು ಶೇಕಡಾ ಸದಸ್ಯರಿಂದ ಇಷ್ಟು ಮೊತ್ತದ ಹಣವನ್ನು ಪ್ರತಿವಾರ ಕೀಳಬೇಕು ಎಂದು ಟಾರ‍್ಗೇಟ್ ಬೋರ‍್ಡಲ್ಲಿ ಬರೆದೂ ಬಿಡುತ್ತಿದ್ದರು. ಯಾವ-ಯಾವ ಮಾತುಗಳನ್ನು ಆಡಿ ಮೊದ-ಮೊದಲು ಗಿರಾಕಿಗಳ ಮನಸ್ಸು ಮರಳು ಮಾಡುವುದು ಹೇಗೆ, ಅವರ ವಿಶ್ವಾಸ ಗಿಟ್ಟಿಸಿ, ತಾವು ಬಿಸಿ ರಕ್ತದ, ಸಣಕಲು ಸುಂದರಿ ಜತೆಯೇ ಪದಗಳ ಮೈಥುನದಲ್ಲಿ ಮುಳುಗಿದ್ದೇವೆ ಎಂದು ಅವರನ್ನು ನಂಬಿಸುವ ಬಗೆ ಹೇಗೆ, ಕಟ್ಟ ಕಡೆಯದಾಗಿ ಖಾಲೀ ಚಪ್ಪಟೆ ಸೀಸೆಯ ಪರದೆಯ ಮೇಲಾಡುವ ಟೊಳ್ಳು ಪದಗಳ ಪ್ರಣಯ ಕ್ರೀಡಾಸಕ್ತಿಯ ತುಮುಲ ಗಿರಾಕಿಯಲ್ಲಿ ಏರುತ್ತಿದ್ದಂತೆಯೇ, ‘More fun…More Pleasure… When we do each other in virtual reality…’ಎನ್ನುವ ಸಾಲುಗಳನ್ನು ಕಳುಹಿಸಿ ಅವರ ವೀಸಾ, ಡೆಬಿಟ್ ಕಾರ‍್ಡುಗಳಿಂದ ಒಂದಿಶ್ಟು ಹಣ ಪೀಕಿಸಿ, ಕೊಟ್ಟ ಮಾತಿಗೆ ತಪ್ಪದಿರಲು ಭೂಗತ ವೆಬ್ ಜಾಲದಿಂದ ಕೆಲ ಅಪರೂಪದ ಕಚ್ಚಾ ಹೋಮ್‌ಮೇಡ್ ಪಾರ‍್ನ್ ಪೂಟೇಜ್‌ಗಳನ್ನು ಅವರ ಅಕೌಂಟ್‌ಗೆ ಅಟ್ಯಾಚ್ ಮಾಡಿ, ‘ಆ ಹುಡುಗಿ ನಾನೇ… ಅದು ನಿನಗಾಗಿ ಕಂಪೋಸ್ ಮಾಡಿರುವ ನನ್ನ ಕ್ಲಿಪಿಂಗ್ಸ್…’ ಎಂದು ಹಸಿ ಸುಳ್ಳು ಬಿಟ್ಟು ಕೈ ತೊಳೆದುಕೊಳ್ಳುವ ವಿಶಿಷ್ಟ ಕುಶಲತೆಯ ಅರಿಯುವ ತರತರಾವರಿ ಕಲೆಗಳನ್ನು ಆ ಕಪ್ಪು ಕೂದಲಿಗೆ ಕೆಂಚು ಬಣ್ಣ ಬಳಿದುಕೊಂಡು ಹಸಿರು ರಂಗು ಚೊಟ್ಟುತ್ತಿದ್ದ ತುಟಿಗಳಲ್ಲಿ ಅಮೇರಿಕನ್ ಶೈಲಿಯಲ್ಲಿ ಇಂಗ್ಲೀಶ್ ಭಾಷೆಯನ್ನು ಉಚ್ಚರಿಸುತ್ತಿದ್ದ ‘ಮೇಡಂ’ ಬಹು ಲೀಲಾಜಾಲವಾಗಿ ಆ ಗೋಷ್ಠಿಯಲ್ಲಿ ಕಲಿಸಿದ್ದಳು.

“If you get lucky and they still express a great desire to meet you in real even after seeing those raw porno clips, then do inform us… so that we can make some arrangements for that too… but our primary priority will be Middlge aged Unlces stuck into the world of fantasy… as they stay on our site we will convinve them to buy some of the ‘products’ we will play some adds… you know believable adds…Flash adds atleast. Anyway you gotta make them stay for long time on this site so look for what triggers their fetishes … and use the right words to the trigger right fetish …” ಎನ್ನುತ್ತಿದ್ದ ಆ ಟಿಗರ್‌ಲೇಡಿ, ದೃಷ್ಟಾಂತ ಕ್ಕೆಂದು ಪುರುಷರ ಅಯ್ಲುಗಳನ್ನು ಕರಾರುವಕ್ಕಾಗಿ ಕೆದಕುವ ಸ್ಪಟಿಕ ಶಲಾಕೆಯಂತಹ ನುಡಿಮುತ್ತುಗಳನ್ನು ಆದಶ್ಟು ಸಹಜವಾಗಿ ಉದುರಿಸುತ್ತಿದ್ದಳು.

ಇಂತಹಾ ಅಲೌಕಿಕ ಕಲ್ಪನೆಗಳಲ್ಲಿ ನಾಗೇಂದ್ರ ಮೊದಲಿನಿಂದಲೂ ನಿಷ್ಣಾತ. ತನ್ನ ಸ್ವಂತ ಕಸುಬನ್ನು ಮರೆತು ಈ ದಂದೆಗಿಳಿದು ಜಾಗರಣೆ ಮಾಡಿ, ಮೂರು ತಿಂಗಳಲ್ಲೇ ಬಹಳಷ್ಟು ಹಣವನ್ನು ಗಿರಾಕಿಗಳಿಂದ ಲಪಟಾಯಿಸಿದ್ದ. ಇದರಿಂದ ಆ ಸಂಸ್ಥೆಯ ಸಂಚಾಲಕರು ಇವನಿಗೆ ಒಳ್ಳೆ ಪರ‍್ಸಂಟೇಜನಲ್ಲಿ ಸಂಬಳ ಕೂಡ ಕೊಟ್ಟಿದ್ದರು. ಇವನೇ ತನ್ನಲ್ಲಿದ್ದ ಗ್ರೀಕ್ ನಾಟಕಗಳಲ್ಲಿ ಬರುವ ಶಕುನ ಮತ್ತು ಅಪಶಕುನಗಳ ಜ್ನಾನದಿಂದ “White Owl Speaks” ಎಂಬ ವಿಚಿತ್ರ ಶೀರ್ಷಿಕೆಯನ್ನು ಸೃಷ್ಟಿಸಿದ್ದ, ಇದರಲ್ಲಿ ಏನೋ ತ್ರಿಲ್ಲಿದೆ ಎಂದು ಆ ವೆಬ್‌ಪೇಜ್‌ನ ಡೈರೆಕ್ಟರ್ಸ್ ಮೆಚ್ಚಿದ್ದರಿಂದ ಕಡೆಗೆ ಇದೇ ಹೆಸರು ಈ ಸೈಟಿಗೆ ಕಾಯಂ ಆಗಿತ್ತು. ತಮ್ಮ ಗಿರಾಕಿಗಳನ್ನು ಆದಷ್ಟು ತೃಪ್ತಿ ಪಡಿಸಲು ಗಂಟೆ ಗಟ್ಟಲೆ ಸೆಕ್ಸ್ ವಿಡೀಯೋಗಳನ್ನು ತದೇಕ ಚಿತ್ತದಲ್ಲಿ ವೀಕ್ಷಿಸುವಂತೆ ಕಂಪೆನಿಯ ಒಡೆಯರು ಕಟ್ಟಪ್ಪಣೆ ಬೇರೆ ಮಾಡಿದ್ದರು. ಯಾವ ಎಂಪ್ಲಾಯಿ ಇದುವರೆಗೂ ಕೇಳದಿದ್ದ ಲೈಂಗಿಕಾಸಕ್ತಿಯನ್ನು ಹೆಚ್ಚಿಸುವ ಟಾಪಿಕ್‌ನ್ನು ತಮ್ಮ ಸಹೋದ್ಯೋಗಿಗಳಿಗೆ ಪರಿಚಯಿಸುತ್ತಾನೋ ಅವನಿಗೆ “Encouaragement Prizes” ಸಿಗುತ್ತಿದ್ದವು. ಆ ಟಾಪಿಕ್ ಏನಾದರು ತಮ್ಮ ಗಿರಾಕಿಗಳಿಗೆ ಪ್ರಿಯವಾದರೆ, ಖಾತೆಗೆ ಜಮೆಯಾದ ಹೆಚ್ಚುವರಿ ಹಣದಲ್ಲಿ ಎಲ್ಲರಿಗೂ ವೀಕೆಂಡಲ್ಲಿ ಪಾರ್ಟಿಗಳಿರುತ್ತಿತ್ತು.

ಹೊಸತರಲ್ಲಿ ಈ ನೌಕರಿ ನಾಗೇಂದ್ರನಿಗೆ ತೀರಾ ಆಪ್ತವಾಗಿತ್ತು. ಆದರೆ ಬರ-ಬರುತ್ತಾ ಹೊತ್ತಲ್ಲದ ಹೊತ್ತಲ್ಲಿ ಅಂಕಲ್ಸ್‌ರನ್ನೆಲ್ಲಾ ಅಕ್ಷರಗಳಲ್ಲೇ ರಮಿಸುವುದು, ಅವರ ಅತಿರೇಕದ ತೀಟೆಗಳನ್ನು ಕೇಳಿಸಿಕೊಂಡು, ಅದಕ್ಕೆ ತಕ್ಕಂತೆ ಸ್ಪಂದಿಸುವುದು-ಅದೂ ಹುಡುಗಿಯ ಪ್ರತಿಕ್ರಿಯೆಯ ಹಾಗೆ-ಮತ್ತೆ-ಮತ್ತೆ ಅಂಡರ್‌ಗ್ರೌಂಡ್ ಪಾರ‍್ನ್ ವಿಡಿಯೋಗಳನ್ನು ವೀಕ್ಶಿಸುವುದು, ಆ ಕ್ರೀಡೆಗಳನ್ನೇ ಟ್ರಿಗರ್‌ಲೇಡಿಯ ಸಲಹೆಯಂತೆ ಪಕ್ಕಾ ಪದಗಳಲ್ಲಿ ಹಿಡಿದಿಟ್ಟು, ಮತ್ತೆ ಇವರ ಪೆಟಿಶ್‌ಗಳನ್ನು ಕೆರಳಿಸಲು ಒಗ್ಗುವ ನುಡಿಮುತ್ತುಗಳನ್ನೇ ಬಳಸುವುದು…ಈ ಕ್ರಿಯೆಗಳೆಲ್ಲಾ ಇವನನ್ನು ನಿತ್ರಾಣಗೊಳಿಸಿತ್ತು. ದಿನ ಕಳೆದಂತೆ ಇಂಗ್ಲೀಶ್ ಭಾಶೆಯಲ್ಲಿರುವ ಶಬ್ದಗಳೆಲ್ಲವೂ ಈ ಅತೃಪ್ತ ಆತ್ಮಗಳ ತೆವಲುಗಳಿಗೆ ಆಕಾರ ನೀಡಲೆಂದೇ ಹುಟ್ಟಿರುವಂತೆ ಭ್ರಮೆಯಾಗತೊಡಗಿತು.

ಆಗಲೇ ಇವನ ಹಾಗೂ ಅನಾಮಿಕಾ ನಡುವಿನ ಸಂಬಂದ ಹಳಸಲು ಶುರುವಾದದ್ದು. ಆಕೆಯ ಜತೆ ಮುಂಚಿನ ಉತ್ಸಾಹದಲ್ಲಿ ವರ್ತಿಸದೇ ಹಾಗೆಯೇ ನಿದ್ರಿಸಿ ಬಿಡುತ್ತಿದ್ದ. ಅವಳನ್ನೇ ಪದೇ-ಪದೇ ಇವನಿದ್ದ ಎಡಿಟಿಂಗ್ ಸ್ಟುಡಿಯೋಗೆ ಬರುವಂತೆ ಪೀಡಿಸುತ್ತಿದ್ದ. ಆಕೆಯೇನಾದರೂ ಬರದಿದ್ದರೆ ಬೆಂಕಿಯಲ್ಲಿ ಸುಟ್ಟವನ ಹಾಗೆ ಅರುಚಾಡಿ ಅವಳನ್ನು ಬಯ್ಯುತ್ತಿದ್ದ, ಅದೇ ಬಂದರೆ, ಅವಳ ಅಂಗಾಂಗಗಳನ್ನೆಲ್ಲಾ ಬಲವಂತವಾಗಿ ಅಮುಕಿ, ಅವಳಿಗೆ ರೇಜಿಗೆ ಬರಿಸಿ ಕಡಗೇ ಅವಳೇ ಇವನನ್ನು ಉಗಿದು ಓಡಿಹೋಗುವ ಪರಿಸ್ಥಿತಿ ಸೃಷ್ಟಿಸುತ್ತಿದ್ದ. ಆಮೇಲೆ ಅವಳು ತನ್ನ ಗಂಡನ ಜತೆ ಗುಂಡು ಹಾಕಿ ಗಾಂಜಾ ಸೇದುವಾಗ ತಾನು ಕಾಲ್ “ನನಗೆ ಗಾಂಜಾ ಬೇಕೇ ಬೇಕು… ತೆಗಿಸಿಕೊಡೇ ನಾಳೇನೇ… ಅಟ್ ಲೀಸ್ಟ್ ನಿನ್ನ್ ಗಂಡ ಅದನ್ನ ಎಲ್ಲಿ ಪಿಕ್ ಮಾಡ್ತಾನೆ ಅದನ್ನಾದರೂ ಕೇಳಿ ಹೇಳು…” ಎಂದು ಹಿಂಸಿಸುತ್ತಿದ್ದ.

ಹೀಗೇ ಆ ಕತ್ತಲ ಗವಿಯೊಳಗೆ ಸವೆದು ಹೋಗುತ್ತಿದ್ದ ನಾಗೇಂದ್ರನಿಗೆ ಇದ್ದಕ್ಕಿದ್ದಂತೆ ಜೀವಕಳೆ ತಂದದ್ದು ‘ಈಡಿಪಸ್’ ಹೆಸರು ಹೊತ್ತ ಅಪರಿಚಿತ ಕಳುಹಿಸಿದ ಮಿಂಚಂಚೆ, ಮೊದಲ Chatting Messageನಲ್ಲೇ ಆ ವ್ಯಕ್ತಿ ನಾಗೇಂದ್ರನನ್ನು ಈಡಿಪಸ್ ಕತೆಯನ್ನಿಟ್ಟುಕೊಂಡು roleplay ಆಡುವಂತೆ ಸೂಚಿಸಿದ್ದ. ಆ ಕಾಮ ತುಂಬಿದ ಪಾತ್ರದಾಟ ಮುಗಿದ ನಂತರ ‘ವಾಹ್… ನಿನ್ನ ಜತೆ ಆಡಿದ್ದು ವಿಚಿತ್ರ ಉಲ್ಲಾಸ ಕೊಟ್ಟ ನನ್ನನ್ನು ತೋಳದಂತೆ ಉನ್ಮಾದದಲ್ಲಿ ಕಿರುಚುವಂತೆ ಮಾಡಿದೆ. ದಯವಿಟ್ಟು ಇನ್ನು ಇಂತಹ ನೂರು ಆಟ ಆಡೋಣ…’ ಎಂದು ಬೇಡಿದ್ದನ್ನಲ್ಲದೆ, ಇವನು ಕೇಳಿದ್ದಕ್ಕಿಂತ ದುಪ್ಪಟ್ಟು ಹಣವನ್ನು ಕಾತೆಗೆ ಹಾಕಿದ್ದ, ಅದೂ ಆಂಟಿಗೋನೆಯ ಛದ್ಮ ವೇಷದಲ್ಲಿದ್ದ ನಾಗೇಂದ್ರನ ಜತೆ ಇನ್ನೂ ಹೆಚ್ಚು ಹೊತ್ತು ಬರೀ ಅಕ್ಷರಗಳ ಚಕ್ಕಂದವಾಡಲು. ಇವರು ಕಾಲಕಳೆದಂತೆ Oscar Wilde ವಿರಚಿತ ‘Salome’ ನಾಟಕದ ಪಾತ್ರಧಾರಿಗಳಾಗಿ ಕಿರು ಬೆಳ್ಳಿ ಪರದೆ ಎದುರು ಕೂತು ಪದಗಳ ಮುಖಾಂತರ ಅಭಿನಯಿಸುತ್ತಿದ್ದರು. Othello Desdemona ಜೋಡಿಯ ಹಾಗೇ ರೂಪಾಂತರಗೊಂಡು Erotic Rape Roleplayಗೆ ಒಗ್ಗುವಂತೆ ಆ ಪಾತ್ರಗಳನ್ನು ತಿರುಚಿ ಚಾಟ್ ಮಾಡುತ್ತಿದ್ದರು. ಒಟ್ಟಾರೆಯಾಗಿ ಈ ಅನಾಮಧೇಯ ಗಿರಾಕಿ, ನಾಗೇಂದ್ರನ ವಕ್ರ ಅರಿವನ್ನು ಕಲಕಿದ್ದ. ಇವನ್ಯಾರೋ ಮಾಮೂಲು ತೀಟೆ ತೀರಿಸಿಕೊಳ್ಳಲೆಂದು ಅಂತರ‍್ಜಾಲಕ್ಕೆ ನುಸುಳಿರುವ ಪಾಪಿಯಲ್ಲವೇ ಅಲ್ಲ ಎಂದು ನಾಗೇಂದ್ರನ ಆರನೆಯ ಇಂದ್ರಿಯಯೊಂದಕ್ಕೆ ಏಕೋ ಮನದಟ್ಟಾಯಿತು. ಇದಕ್ಕೆ ಆ ತುದಿಯ ವ್ಯಕ್ತಿಯ ಶುಭ್ರ ಭಾಶೆ ಮತ್ತು ಸಾಂದ್ರವಾಗಿದ್ದ ಸಾಹಿತ್ಯ ಪ್ರಜ್ನೆಯೂ ಕಾರಣವಾಗಿತ್ತು. ಕಾಲ ಕಳೆದಂತೆ ಈ ರಹಸ್ಯ ಮನುಷ್ಯನ ಜತೆ ಕತ್ತಲಲ್ಲಿ ಮಿನ್ನರಟೆ ನಡೆಸಲೆಂದೇ ಆ ಸುಡುವ ಬಿಸಿಲಲ್ಲಿ ಬೆವರುತುಂಬಿದ ಜನರಿರುವ ಬಸ್ಸಲ್ಲಿ ನೇತಾಡಿಕೊಂಡು,(ಅಂದ ಹಾಗೆ ನಗರದೊಳಗೆ ತನ್ನ ಮಾರುತಿ ೮೦೦ ಕಾರು ಓಡಿಸಲು ನಾಗೇಂದ್ರ ಅಂಜುತ್ತಿದ್ದರಿಂದ ಈ ಬಸ್ಸ್ ದೊಂಬರಾಟ) ಧೂಳಲ್ಲಿ ನೆನೆದು ಈ ಹಾವಿನ ಚರ‍್ಮದಶ್ಟು ತಂಪಾಗಿದ್ದ, ಮಂಕು ಹಿಡಿಸುತ್ತಿದ್ದ ಕತ್ತಲ ಕೋಣೆಗೆ ಸರಸರನೆ ಸೇರಿ, ಒಳಗೆ ಹಬ್ಬಿದ ಕಿತ್ತಳೆ ಹಣ್ಣಿನ ಕಂಪಲ್ಲಿ ಭೂಗತವಾಗಿರುತ್ತಿದ್ದ.
ಒಮ್ಮೆ ಈ ಭೂಗತ ದೊರೆ ಈಡಿಪಸ್, ‘ನಾವೊಮ್ಮೆ ಭೇಟಿಯಾಗೋಣ, ನಮ್ಮ ಮಾತುಕತೆ ಕವಲೊಡೆಯಲಿ… ಸೆಕ್ಸ್ ಅಷ್ಟೇ ಆಳವಾಗಿರುವ ಹಲವು ವಿಷಯಗಳಿವೆ ನನ್ನಲ್ಲಿ ಇನ್ನೂ’ ಎಂದಿದ್ದ. ನಾಗೇಂದ್ರ ತಾನು ಈ ಆಹ್ವಾನವನ್ನೇ ನಿರೀಕ್ಶಿಸುತ್ತಿದ್ದಂತೆ ‘ಖಂಡಿತವಾಗಿಯೂ’ ಎಂದು ಒಪ್ಪಿದ್ದ, ಕಂಪೆನಿಯ ನಿಯಮಕ್ಕೆ ಇದು ವಿರುದ್ದವೆಂದು ಗೊತ್ತಿದ್ದರೂ. ಆದರೂ ಮತ್ತೆ ಇದು ಯಾಕೋ ಅತಿರೇಕ ಎನಿಸಿ ಆ ಹಂಬಲವನ್ನು ಅಲ್ಲೇ ಕೈ ಬಿಟ್ಟು “ತೂ!ನಾನಿಷ್ಟು ಕಚಡಾ ಮನುಷ್ಯನಾಗಿ, ಒಬ್ಬ ಅಪರಿಚಿತನನ್ನು ಅದು ಆತ ನನ್ನನ್ನು ಹುಡುಗಿ ಎಂದು ತಿಳಿದು ಭೇಟಿ ಮಾಡಲು ಇಷ್ಟಪಡುವಾಗ, ನಾನಾಗಿ ಅದಕ್ಕೆ ಒಪ್ಪುತಿದ್ದೇನಲ್ಲ… ಎಂತ ಕೇಡಿನ ದಿನಗಳಿವು…” ಎಂದು ತನ್ನ ನಸೀಬನ್ನು ಹಳೆದಿದ್ದ. ಆದರೂ ಪ್ರತಿಸಲವೂ ಈ ದೊರೆಯ ಜತೆ ಅಂತರ್ಜಾಲದಲ್ಲಿ ಹರಟೆ ಹೊಡೆಯುವಾಗ, “ಈ ಮನುಷ್ಯ ನಾನು ನಿಜಕ್ಕೂ ಉಪಯೋಗವಿಲ್ಲದ ತೆವಲಿನ ಚಕ್ಕಂದವಾಡುತ್ತಿರುವ ಹುಡುಗಿಯಲ್ಲವೆಂಬ ವಾಸ್ತವವನ್ನು ಅರಿತಿದ್ದಾನೆಯೇ…” ಎಂಬ ಗುಮಾನಿಯಲ್ಲಿ ಚಡಪಡಿಸಿದ್ದ.

ಮುಂದುವರೆಯುವುದು …. 

 

4 comments to “ದೇವರ ದೇವ ಶಿಖಾಮಣಿ ಬಂದಾನೋ- ಮೊದಲ ಭಾಗ”
  1. ಬೆಸಿಕಲ್ಲಿ, ಫ್ರಾಯ್ಡ್ ನ ಜಾಡಿನಲ್ಲಿ, ಹೊರಟು, ನವ್ಯ ಬರಹದ ಪರಿಧಿ ದಾಟಿ , ಪೋಸ್ಟ್ ಮಾಡ್ರನ್ ಗೌಜಿನಲ್ಲಿ ಗೇ ಲೆಸ್ಬಿಯನ್ ಥಿಯರಿ ಗಳಿಗಿಂತಲೂ ಮುಂದೆ ಹೋಗಿ, ‘subjective self’ ನ್ನು ಕೊಂದುಕೊಂಡು ಬದುಕುತ್ತಿರುವ ರೀತಿ ನೀತಿ ಗಳೊಳಗೆ …. ನಿಚ್ಚಳ ನಿರ್ಮಲ ಪ್ರೀತಿಯ ಹುಡುಕಾಟ ವಾಗುವುದೇ ಈ ನೀಳ್ಗತೆ? ಆನ್-ಲೈನ್ ನಾರಾಣಪ್ಪನ ಪ್ಲೇಗ್ ಹರಡಿರುವ ನಗರಿ ಯೊಳಗೆ , ‘ ಸಂಸ್ಕಾರ ದ ಚಂದ್ರಿ’ ಅಥವಾ ‘ಮೈ ಮನಗಳ ಸುಳಿಯಲ್ಲಿ’ ಯ ಚಂದ್ರಿ ಕಾಣುವಳೇ? .
    .
    ಕಥೆಯು ಗಾಢ ಪರಿಣಾಮ ದೊಂದಿಗೆ ಜೀವನದ ಅಸ್ತಿತ್ವಗಳ ಬುಡವನ್ನ ಲ್ಲಾಡಿಸು ತ್ತದೆ. ಮುನುಕುಲ ವೇ ತಳ ವಿಲ್ಲದ ಆಳವಾದ ಬಾವಿ ಯಲ್ಲಿ ಪಾತಾಳ ಕ್ಕಿಳಿಯು ತ್ತಿದೆ ಎನ್ನಿಸು ವಷ್ಟು ಗಟ್ಟಿ ಯಾದ ನೀಳ್ಗತೆ. 👌🏻👍🙏
    Kudos👍

  2. Pingback: ಋತುಮಾನ | ದೇವರ ದೇವ ಶಿಖಾಮಣಿ ಬಂದಾನೋ- ಎರಡನೇ ಭಾಗ

  3. Pingback: ಋತುಮಾನ | ದೇವರ ದೇವ ಶಿಖಾಮಣಿ ಬಂದಾನೋ- ಕೊನೆಯ ಭಾಗ

ಪ್ರತಿಕ್ರಿಯಿಸಿ