ಡೇವಿಡ್ ಬರೆಯುವ ಚಿತ್ರ ಭಾರತ: ತಮಿಳು ಚಿತ್ರ ವಿಸಾರಣೈ

ವಿಸಾರಣೈ (೨೦೧೫ರ ತಮಿಳು ಚಲನಚಿತ್ರ, ನಿರ್ದೇಶಕರು ವೆಟ್ರಿಮಾರನ್)

೨೦೧೫ರ ವೆನಿಸ್ ಚಿತ್ರೋತ್ಸವದಲ್ಲಿ ವಿಸಾರಣೈ ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. “ಫೆಸ್ಟಿವಲ್ ಚಿತ್ರ”ಗಳ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ. ಇವುಗಳಲ್ಲಿ ನೀಡಲಾಗುವ ಪ್ರಶಸ್ತಿಗಳೂ ನಗಣ್ಯ. ಯಾವ ಮಗುವೂ ಅಳಬಾರದೆಂದು ಮಕ್ಕಳ ಕೂಟಗಳಲ್ಲಿ ಎಲ್ಲರಿಗೂ ಒಂದೊಂದು ಪ್ರಶಸ್ತಿ ಇರುತ್ತದಲ್ಲ, ಚಿತ್ರೋತ್ಸವಗಳು ಸ್ವಲ್ಪ ಹಾಗೆ. ೨೦೧೨ರಲ್ಲಿ ಹಿಂದಿ ಸಿನೆಮಾ ಗ್ಯಾಂಗ್ಸ್ ಆಫ್ ವಸ್ಸೆಪುರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಪಡೆದ ನಂತರ ಈ ರೀತಿಯ “ಅಂತರಾಷ್ಟ್ರೀಯ ಮನ್ನಣೆ”ಗಾಗಿ ಯತ್ನಿಸುವುದು ಇನ್ನೂ ತೀವ್ರವಾಗಿದೆ. ಆದರೆ ಕಶ್ಯಪ್ ಅವರ ಚಿತ್ರ ಇದನ್ನು ಸರಿಯಾದ ರೀತಿಯಲ್ಲಿ ಮಾಡಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗುವ ಮುಂಚೆಯೇ ಚಿತ್ರವು ಭಾರತದಲ್ಲಿ ಯಶಸ್ಸನ್ನು ಕಂಡಿತ್ತು. ವಿಸಾರಣೈ ಅನ್ನು, ಕನ್ನಡದ ‘ತಿಥಿ’ ಚಿತ್ರದಂತೆ, ಭಾರತದಲ್ಲಿ ಪ್ರದರ್ಶಿಸುವ ಮುನ್ನವೇ ಒಂದು ಪೂರ್ತಿ ವರ್ಷ ಯುರೋಪಿನಾದ್ಯಂತ ಸುತ್ತಿಸಲಾಗಿತ್ತು. ಆದರೆ ವಿಸಾರಣೈ ಹೀಗೆ ಭಾರತದಲ್ಲಿ ಬಿಡುಗಡೆಗೂ ಮುನ್ನ ಈ ರೀತಿ ತಿರುಗಾಡಲು ಕಾರಣವಿರಲಿಲ್ಲ. ವೆಟ್ರಿಮಾರನ್ ಈಗಾಗಲೇ ತಮಿಳು ಚಿತ್ರರಂಗದಲ್ಲಿ ಯಶಸ್ವಿ ಹಾಗೂ ಜನಪ್ರಿಯ ನಿರ್ದೇಶಕರಾಗಿದ್ದರು(ಪೊಲ್ಲಧವನ್ ೨೦೦೭, ಆಡೆಕಾಲಂ ೨೦೧೧). ಚಿತ್ರದ ವಿತರಣೆಯನ್ನು ಹೊಂದಿಸುವುದು ಇವರಿಗೆ ಬಹು ಸುಲಭದ ಕೆಲಸವಾಗಿತ್ತು. ಚಿತ್ರದ ನಿರ್ಮಾಪಕರು ಕೂಡ ಆ ಹಿಂದಿನ ಚಿತ್ರಗಳ ಸ್ಟಾರ್ ಆದ ಧನುಷ್ ಆಗಿದ್ದರು.

ಈ ಚಿತ್ರವನ್ನು ವಿಮರ್ಶಿಸುವುದು ಬಹಲ ಸುಲಭ. ನಮಗೆ ಅನೂಕೂಲವಾಗುವಂತೆ ನಿರ್ದೇಶಕರೇ ಚಿತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ, ಅವುಗಳ ನಡುವಿನ ವ್ಯತ್ಯಾಸ ಎದ್ದು ಕಾಣಬೇಕೆನ್ನುವಂತೆ. ಮೊದಲ ಭಾಗವು ತನ್ನಲ್ಲಿಯೇ ಒಂದು ಅತ್ಯುತ್ತಮ ಕಿರುಚಿತ್ರವಾಗಿದೆ(ಹಾಗೂ ಒಂದು ಅತ್ಯುತ್ತಮ ಪೂರ್ಣಾವಧಿಯ ಚಿತ್ರವಾಗಬಲ್ಲ ಅಂಶಗಳನ್ನು ಹೊಂದಿದೆ), ಎರಡನೆಯ ಭಾಗವು ನೇರವಾಗಿ ಹೇಳುವುದಾದರೆ ಅತಿರೇಕವಾಗಿ ಬುದ್ಧಿಗೇಡಿ ಎನ್ನುವಂತಿದೆ.

ಇದಕ್ಕೆ ಕಾರಣ ಹುಡುಕುವುದು ಕಷ್ಟವೇನಲ್ಲ. ಇವು ಚಿತ್ರದ ಮೊದಲ ಮತ್ತು ಎರಡನೆಯ ಭಾಗಗಳಲ್ಲದೇ, ಎರಡು ವಿಭಿನ್ನ ಚಿತ್ರಗಳೇ ಆಗಿವೆ. ಮೊದಲ ಅರ್ಧ – ಮತ್ತು ಮೊದಲ ಅರ್ಧವಷ್ಟೇ – ಎಂ ಚಂದ್ರಕುಮಾರ್ ಅವರ ಲಾಕ್ ಅಪ್ ಪುಸ್ತಕವನ್ನು ಆಧರಿಸಿದ್ದು. ರಿಕ್ಷಾ ಚಾಲಕರಾಗಿದ್ದು “ಆಟೋ ಚಂದ್ರ” ಎಂದೇ ಕರೆಯಲ್ಪಡುವ ಇವರು ಹವ್ಯಾಸಿ ಬರಹಗಾರರು. ಇದು ಎಂಬತ್ತರ ಸಮಯದಲ್ಲಿ ತಾವು ಮಾಡದ ತಪ್ಪಿಗೆ ಜೈಲಿಗೆ ಹೋಗಿ ಹೊಡೆಸಿಕೊಂಡ ಆಟೋ ಚಂದ್ರ ಅವರ ಸ್ವಂತ ಅನುಭವದ ಆಧಾರದ ಮೇಲೆ ಬರೆದ ನೈಜ ಕಥೆ. ಆಂಧ್ರಪ್ರದೇಶದಲ್ಲಿ ನೆಲೆಸಿರುವ “ಓಡಿಹೋಗಿರುವ” ತಮಿಳಿಗರ ಮೇಲೆ ನಡೆಯುವ ಪೋಲಿಸ್ ದೌರ್ಜನ್ಯದ ಕುರಿತು ಬರೆಯಲಾಗಿರುವ ಪುಸ್ತಕ. ಇದು ಒಬ್ಬ ಪೈಶಾಚಿಕ ಸ್ಥಳೀಯ ಪೋಲಿಸ್ ಅಧಿಕಾರಿಯು(ತೆಲುಗು ನಟ ಅಜಯ್ ಘೋಷ್ ಅವರಿಂದ ಉತ್ತಮವಾಗಿ ಅಭಿನಯಸಲ್ಪಟ್ಟಿದೆ) ಕೇಸ್ ಒಂದನ್ನು ‘ಕ್ಲೋಸ್’ ಮಾಡಲು ಹಾಗೂ ನಿಗದಿತ ಬಂಧನಗಳನ್ನು ಮುಗಿಸಲು ಅಮಾಯಕ ಯುವಕರ ಗುಂಪನ್ನು ಆರೋಪಿಗಳನ್ನಾಗಿಸಲು ಪ್ರಯತ್ನಿಸುವ, ಬಹಳ ನಂಬಬಲ್ಲ ಕಥೆ.

“ಓಡಿ ಹೋದವರು” ಎನ್ನುವ ಕಲ್ಪನೆ ಭಾರತಕ್ಕೇ ವಿಶೇಷವಾದದ್ದೇನಲ್ಲ. ಯುರೋಪಿನಲ್ಲಿ ಗ್ರಾಮೀಣ ಸಂಸ್ಕೃತಿ ಪ್ರಬಲವಾಗಿರುವ ಭಾಗಗಳಲ್ಲಿಯೂ ಈ ವಿದ್ಯಮಾನವನ್ನು ಕಾಣಬಹುದು. ಆದರೆ ಇಲ್ಲಿ ಇದು ಭಾರತದ ಸಂಕೀರ್ಣ ಕುಟುಂಬ ವ್ಯವಸ್ಥೆಯ ಕಾರಣದಿಂದ ಬಹಳ ಮುಖ್ಯವಾಗಿದೆ. ನಗರಗಳಲ್ಲಿರುವ ಬಿಡಿಬಿಡಿ ಬದುಕುಗಳ ನಡುವೆಯೂ ಹೀಗೆ “ಓಡಿ ಹೋದವರು”(ಬಹುತೇಕ ‘ಅಸಹಜ’ ಎನ್ನಿಸಿಕೊಳ್ಳುವ ರೀತಿಯಲ್ಲಿ ತಮ್ಮ ಕುಟುಂಬಗಳನ್ನು ತೊರೆದು ಬಂದ ಯುವ ವಯಸ್ಸಿನವರು) ಬಹು ಆಪತ್ತಿನ ಬದುಕನ್ನು ನಡೆಸುತ್ತಿರುತ್ತಾರೆ. ಇವರು ಈ ಚಿತ್ರದಲ್ಲಿರುವಂತೆ ಕಠಿಣ ಬದುಕನ್ನೇ ನಡೆಸುತ್ತಿರಬೇಕೆಂದೇನೂ ಇಲ್ಲ. ಇವರು ಯಾವುದೇ ಜಾತಿ ಅಥವಾ ವರ್ಗದವರಾಗಿರಬಹುದು, ಸದಾ ಶೋಷಣೆ, ಬೆದರಿಕೆ(ತಮ್ಮ ಇರುವಿನ ಸುದ್ದಿ ಜನರಿಗೆಲ್ಲಿ ತಲುಪೀತೋ ಎನ್ನುವ ಭಯ) ಹಾಗೂ ಲೈಂಗಿಕ ಕಿರುಕಳಕ್ಕೂ(ಈ ಚಿತ್ರದಲ್ಲಿರುವ ಹುಡುಗಿಯಂತೆ) ಒಳಪಡಬಹುದಾದ ಸ್ಥಿತಿಯಲ್ಲಿರುತ್ತಾರೆ. ಬಹುಶಃ ಇಂತಹ ಸ್ಥಿತಿಯಲ್ಲಿರುವ ಯಾರಾದರೊಬ್ಬರನ್ನು ಅರಿಯದವರು ನಮ್ಮಲ್ಯಾರೂ ಇಲ್ಲ. ಸಾಮಾಜಿಕವಾಗಿ ಕೆಳ ಸ್ಥರದಲ್ಲಿರುವ ವಲಸಿಗ ಗುಂಪುಗಳಿಗೆ ಈ ರೀತಿ ಕಿರುಕೊಳಕ್ಕೊಳಗಾಗುವ, ಪೋಲಿಸರಿಗೆ ಬಲಿಪಶುಗಳಾಗುವ ಆಪತ್ತು ಬಹಳ ವಾಸ್ತವಿಕವಾದದ್ದು.

ಹೀಗೆ ಚಿತ್ರದ ಮೊದಲಾರ್ಧ ಅತ್ಯುತ್ತಮವಾಗಿದ್ದು, ಉತ್ತರಾರ್ಧದಲ್ಲಿಯೂ ಇದಕ್ಕೆ ಕಾರಣವಾದ ಹಲವು ಅಂಶಗಳಿಗೆ ಕೊರತೆಯೇನಿಲ್ಲ. ಇಡೀ ಚಿತ್ರದ ಉದ್ದಕ್ಕೂ ಛಾಯಾಗ್ರಹಣ ಉನ್ನತ ಮಟ್ಟದಾಗಿದ್ದು; ಇದರ ಶ್ರೇಯಸ್ಸು, ಛಾಯಾಗ್ರಾಹಕ ರಾಮಲಿಂಗಂ ಅವರಿಗೆ ಇದು ಮೊದಲ ಅನುಭಾವಗಿದ್ದರಿಂದ, ವೆಟ್ರಿಮಾರಂ ಅವರಿಗೇ ಸಲ್ಲಬೇಕು. ಕ್ಯಾಮೆರಾ ಬಹಳ ಚಲನಶೀಲವಾಗಿದ್ದು, ‘ತಿಥಿ’ಯಲ್ಲಿ ರೆಡ್ಡಿ ಅವರು ಮಾಡಿದಂತೆ, ವೆಟ್ರಿಮಾರನ್ ಅವರು ಫೋಕಸ್ ಆಳವಾಗಿಸುವುದಕ್ಕೆ ಪ್ರಾಮುಖ್ಯತೆ ಕೊಡುತ್ತಾ, ಹಲವು ಬಾರಿ ದೃಶ್ಯದೊಳಗೆಯೇ ಸಹಜವಾಗಿ ಹೊಕ್ಕುಹೋಗುವ ಇಣಕಾಡುವ ಕೋನಗಳನ್ನು ಕೂಡ ಬಳಸಿದ್ದಾರೆ. ಈ ವಿಷಯದಲ್ಲಿ ಇವರ ನೈಪುಣ್ಯತೆಯನ್ನು ಇವರ ಹಿಂದಿನ ಚಿತ್ರಗಳಾದ, ವೆಲ್ರಾಜ್ ಅವರು ಚಿತ್ರೀಕರಿಸಿದ, ಪೊಲ್ಲವಧನ್ ಹಾದು ಆಡುಕಲಂ ಚಿತ್ರಗಳಲ್ಲಿ ಕಾಣಬಹುದು. ಅಲ್ಲಿಯೂ ಚಿತ್ರೀಕರಣದ ಆಯ್ಕೆ ಇವರ ಕಲ್ಪನಾ ಶಕ್ತಿಯನ್ನು ಆಗಾಗ ಕಾಣಿಸುತ್ತದೆ. ಇವರ ಎಲ್ಲ ಚಿತ್ರಗಳಲ್ಲಿ (ತಮಿಳರಿಗೆ ವಿಶೇಷವಾಗಿ ಸಿದ್ಧಿಸಿರುವ) ಬೀದಿಗಳಲ್ಲಿ ನಡೆಯುವ ಬದುಕಿನ ಬಲವಾದ ಹಾಗೂ ವಾಸ್ತವಿಕ ಅರಿವಿದೆ.

ನಾವು ಮೊದಲಾರ್ಧದಲ್ಲಿ ಕಾಣುವ, ಆಟೋ ಚಂದ್ರನ್ ಅವರ ಕಾದಂಬರಿಯ ವಿಷಯವಾಗಿರುವ, ಸನ್ನಿವೇಶವನ್ನು ಮತ್ತಷ್ಟು ಆಳದಲ್ಲಿ ಹಾಗೂ ವಿವರವಾಗಿ ವಿಶ್ಲೇಷಿಸಬಹುದಿತ್ತು. ಹಾಗೂ ಇದು ಖಂಡಿತಾ ನಾನು ನೋಡಬಯಸುವ ಚಿತ್ರವಾಗುತ್ತಿತ್ತು. ಆದರೆ, ಬೇಸರದ ಸಂಗತಿಯೆಂದರೆ, ಮಧ್ಯಂತರದ ನಂತರ, ನಾವು ಕಾಣುವುದು ಈ ಚಿತ್ರವನ್ನಲ್ಲ.

ಕನ್ನಡದ ನಟ ಕಿಶೋರ್ (ವೆಟ್ರಿಮಾರನ್ ಅವರ ಚಿತ್ರಗಳಲ್ಲಿ ತಪ್ಪದೇ ಕಾಣಿಸಿಕೊಳ್ಳುವ) ಅವರು ಕೊಲೆಯಾದ ಅಕೌಂಟೆಂಟ್ ಆಗಿ ನೀಡಿರುವ ಮೆಚ್ಚರರ್ಹ ನಟನೆಯಿದ್ದೂ ಸಹಿತ ಅನುಕಂಪವೇ ಕಾಣದ ತಮಿಳುನಾಡಿನ ಹಿರಿಯ ಪೋಲಿಸ್ ಅಧಿಕಾರಿಗಳನ್ನೊಳಗುತ್ತ, ಚಿತ್ರದ ಉತ್ತರಾರ್ಧವು ಸುದೀರ್ಘವಾದ ನಂಬಲರ್ಹವಾಗದ ಥ್ರಿಲ್ಲರ್ ಆಗಿದೆ. ತಮಿಳು ಹುಡುಗರ ಒಳಗೊಳ್ಳುವಿಕೆಯನ್ನು ಮುಂದುವರಿಸಿದ ಕುರಿತಾಗಿ ಹೇಳುವುದಾದರೆ, ಅವರು ಬೇರೊಂದು ಚಿತ್ರದಿಂದ ಮರೆತು ಉಳಿದುಕೊಂಡ (ಇದು ಬಹುಮಟ್ಟಿಗೆ ಸತ್ಯ ಕೂಡ) ಪಾತ್ರಗಳಾಗಿ ಕಾಣುತ್ತಾರೆ. ವಿವಾದಕ್ಕೊಳಪಡಬೇಕೆನ್ನುವ ಉದ್ದೇಶದಿಂದಲೇ ಉತ್ತರಾರ್ಧದವನ್ನು “ವ್ಯವಸ್ಥೆ”ಯ ಕುರಿತಾದ ಪೊಳ್ಳು, ಹುಸಿ ನಿಂದನೆಗಳಿಂದ ತುಂಬಲಾಗಿದೆ. ಮೊದಲಾರ್ಧದಲ್ಲಿ ಚಿತ್ರಿಸಿರುವ ಅನ್ಯಾಯ ಸ್ಪಷ್ಟವಾಗಿ ಕಾಣಿಸುತದೆಯಾದ್ದರಿಂದ, ಅಲ್ಲಿ ಈ ತರಹದ ಮಾತಿನ ಮೋಡಿಯ ಅಗತ್ಯ ಬೀಳಲಿಲ್ಲ.

ವಿಸಾರಣೈ ಭಾರತದಲ್ಲಿ ಅಂತೂ ಬಿಡುಗಡೆಯಾದಾಗ ವಿವಾದವೇನೋ ಹುಟ್ಟಿತು, ಆದರೆ ಚಿತ್ರದ ಎರಡು ಭಾಗಗಳ ನಡುವೆ ಮೂಡಿಸಿದ್ದ ಹುಸಿ ಸಂಬಂಧದಿಂದ ಮಾತ್ರ. ಆಟೋ ಚಂದ್ರನ್ ಅವರಿಗೆ ಒಂದಿಷ್ಟು ಅರ್ಹವಾದ ಪ್ರಶಂಸೆ ಸಿಕ್ಕಿತು (ವೆನಿಸ್ ಚಿತ್ರೋತ್ಸವದಲ್ಲಿ ಸಾರುವುದರೊಂದಿಗೆ), ಆದರೆ ಅವರನ್ನು ಹಲವು ಅವರ ಸ್ವಂತ ಭಾಗವಿಲ್ಲದ (ಪೋಲಿಸ್ ಠಾಣೆಯನ್ನು ಬಂಧಿತರಿಂದ ಒತ್ತಾಯದಲ್ಲಿ ಸ್ವಚ್ಛ ಮಾಡಿಸಿದ್ದನ್ನು ಹೊರತುಪಡಿಸಿ), ಹುಸಿ ಭಾವೋದ್ರೇಕಗಳನ್ನು ಪ್ರೋತ್ಸಾಹಿಸಲು ಬಳಸಿಕೊಳ್ಳಲಾಯಿತಷ್ಟೇ. ಚಂದ್ರಕುಮಾರ್ ಅವರ (ಆಂಧ್ರಪ್ರದೇಶದಲ್ಲಿ ನೆಲೆಯಾದ) ಮೂಲ ಕಥೆಯಲ್ಲಿ ವ್ಯಕ್ತವಾದ ನೈಜ ಸಮಸ್ಯೆಗಳನ್ನು ಕೇಂದ್ರೀಕರಿಸುವುದಂತೂ ದೂರದ ಮಾತು, ಕಾಲ್ಪನಿಕವಾದ ಚಿತ್ರದ ಎರಡನೇ ಭಾಗದಿಂದ ಚಿತ್ರವು ತಮಿಳುನಾಡಿನಲ್ಲಿಯ ಅತಿರೇಕದ ಪೋಲಿಸ್ ಕಾರ್ಯಾಚರಣೆಗಳ ಬಗ್ಗೆ ಹುಸಿ ವಿವಾದಗಳನ್ನು ಸೃಷ್ಟಿ ಮಾಡಿತು. ಈ ಆರೋಪಗಳ ಅಸಾಧ್ಯತೆ ನಿಚ್ಚಳವಾಗಿ ತಿಳಿಯುತ್ತಿದ್ದರಿಂದ ಅಧಿಕಾರಿಗಳು ಈ ಟೀಕೆಗಳನ್ನು ಸುಲಭವಾಗಿ ತಳ್ಳಿಹಾಕಿಲು ಸಾಧ್ಯವಾಯಿತು. ಈ ರೀತಿಯಲ್ಲಿ ಚಿತ್ರದ ಉಅತ್ತರಾರ್ಧವು ಮೊದಲಾರ್ಧದಲ್ಲಿಯ ಗಂಭೀರ ಆದರೆ ಸ್ವಲ್ಪ ರೋಚಕವಲ್ಲದ ಸಮಸ್ಯೆಗಳ ಪರಿಶೀಲನೆಯನ್ನು ಕ್ಷೀಣವಾಗಿಸಿತು.

ನನ್ನ ‘ತಿಥಿ’ ಚಿತ್ರದ ವಿವರ್ಶೆಯಲ್ಲಿ ಅದೇ “ನಟ”ರನ್ನು ಹೊಂದಿದ ಕಳಪೆ ಸೀಕ್ವೆಲ್‍ಗಳನ್ನು ಮಾಡುವುದರ ಮೂರ್ಖತನದ ಕುರಿತಾಗಿ ಎಚ್ಚರಿಸಿದ್ದೆ. ಇದು ಮೂಲ ಚಲನಚಿತ್ರದ ಮೇಲೆಯೂ ಕೆಟ್ಟ ಪ್ರಭಾವವನ್ನು ಬೀರುತ್ತದೆಂದು ವಿವರಿಸಿದ್ದೆ. ಹೀಗಾಗಿ ಇದಾದ ನಂತರ ಯಾರಾದರೂ ನನ್ನ ಬಳಿ ತಿಥಿಯ ಬಗ್ಗೆ ಮಾತನಾಡುವುದಿದ್ದರೆ “ಹೌದು, ಆದರೆ ತದ ನಂತರ ಅವರು…” ಎಂಬುದನ್ನು ಹೇಳುವುದರೊಂದಿಗೇ ಮುಗಿಸುತ್ತಾರೆ. ಇದೇ ರೀತಿಯಲ್ಲಿ, ಈ ತಮಿಳು ಸಿನೆಮಾ ವಿಫಲ ಎನ್ನುವುದಕ್ಕಿಂತ ಕಡಿಮೆ. ಚಲನಚಿತ್ರವು ತನ್ನನ್ನು ತಾನೇ ವಿಫಲವಾಗಿಸಿಕೊಳ್ಳುತ್ತದೆ. ಸರಳ ಆದರೆ ಮನಮುಟ್ಟುವ ಕಥೆಯೊಂದರ ಜೊತೆಗೆ ರಾಜಕೀಯ ಥ್ರಿಲ್ಲರ್ ಎಂದನ್ನು ಬೆಸೆದು ನಿರ್ದೇಶಕರು ತಾವು ನಿರ್ಮಿಸಬಹುದಾಗಿದ್ದ ಬಹು ಮುಖ್ಯ ಚಲನಚಿತ್ರವೊಂದನ್ನು ನಿರ್ಮಿಸುವಲ್ಲಿ ವಿಫಲರಾಗಿದ್ದಾರೆ. ಅಷ್ಟೇ ಅಲ್ಲ, ಈ ಮೂಲಕ ತಾವು ಮಾಡಿರುವ ಚಲನಚಿತ್ರದ ಗಂಭೀರ ಭಾಗಗಳ ಬೆಲೆಯನ್ನೂ ಕುಂದಿಸಿದ್ದಾರೆ.

ವೆಟ್ರಿಮಾರನ್ ಅವರ ಪ್ರಸಿದ್ಧವಾದ ಮೂರು ಚಲನಚಿತ್ರಗಳಲ್ಲಿ, ಆಡುಕಲಂ ತಮಿಳುನಾಡಿನ ಹೊರಗೆ ಅತ್ಯಂತ ಕಡಿಮೆ ಪರಿಚಯವಿರುವಂತಹದ್ದು. ಇದು ದುರಾದೃಷ್ಟಕರ, ಏಕೆಂದರೆ ನನ್ನ ಅಭಿಪ್ರಾಯದಲ್ಲಿ ಇದುವೇ ಈ ಮೂರು ಚಿತ್ರಗಳ ನಡುವೆ ಅತ್ಯಂತ ಆಸಕ್ತಿದಾಯಕ ಚಿತ್ರ. ಇದು ನನ್ನ ಮುಂದಿನ ವಿಮರ್ಶೆಯ ವಸ್ತುವಾಗಿದೆ.

 

 

 

ಪ್ರತಿಕ್ರಿಯಿಸಿ