ಗಾಂಧಿ ನಮಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾಗಿ ಹಲವು ವಿಷಯಗಳಲ್ಲಿ ತಮ್ಮ ದೃಷ್ಟಿಕೋನದಿಂದ ಮಾರ್ಗದರ್ಶನವನ್ನು ನೀಡಿದ್ದಾರೆ . ಗಾಂಧಿ ಕಾಲವಾಗಿ ಅರ್ಧ ಶತಮಾನ ದಾಟಿ ಬಂದು ನಿಂತಿರುವ ಭಾರತಕ್ಕೆ ಗಾಂಧಿ ಹೇಳಿದ್ದ ವಿಚಾರಗಳು ಎಷ್ಟು ಪ್ರಸ್ತುತ , ಎಷ್ಟು ಮೌಲ್ಯಯುತ ಅಥವಾ ನಿಜವಾಗಿಯೂ ಪ್ರಸ್ತುತ , ಮೌಲ್ಯಯುತವೇ ? , ಜಗತ್ತು ದಿನೇ ದಿನೇ ಹಿಂಸೆಯನ್ನೇ ನೋಡುತ್ತಿರುವಾಗ ಅಹಿಂಸೆಯನ್ನು ನಂಬಿದವರ ಸ್ಥಾನವೇನು ? ಅವರ ಪಾತ್ರವೇನು ? ಎಂಬುದನ್ನು ಹುಡುಕುವ ಪ್ರಯತ್ನ ನಮ್ಮದು . ಈ ನಿಟ್ಟಿನಲ್ಲಿ ಇಂದಿನಿಂದ ” ಗಾಂಧಿ ಕುಲುಮೆ ” ಸರಣಿ ಇಂದಿನಿಂದ ಆರಂಭ.
ಸರಣಿಯ ಈ ಮೊದಲ ಕಂತಿನಲ್ಲಿ ಶ್ರೀಧರ ಬಳಗಾರ ವರ್ತಮಾನದ ಎರಡು ಜೀವಂತ ಉದಾಹರಣೆಗಳನ್ನಿಟ್ಟುಕೊಂಡು ಗಾಂಧಿಯ ಕಲ್ಪಿತ ಗ್ರಾಮದ ಕುರಿತಾಗಿ ಇಲ್ಲಿ ಚರ್ಚಿಸಿದ್ದಾರೆ. ಈ ವಿಡಿಯೋ ಎರಡು ಭಾಗಗಳಿರುತ್ತವೆ.
ಛಾಯಾಗ್ರಹಣ : ನಿತೇಶ್ ಕುಂಟಾಡಿ
ಸಂಕಲನ : ವಿವೇಕ್ ಎಸ್. ಕೆ
ಉಪಶೀರ್ಷಿಕೆಗಳು : ಜೀವನ ಜಯರಾಮ್