ಚರಿತ್ರೆಯಲ್ಲಿ ಟಿಪ್ಪು : ನಿಧಿನ್ ಒಲಿಕಾರ್ ಸಂದರ್ಶನ – ಭಾಗ ೨

ಚರಿತ್ರೆಯಲ್ಲಿ ಇರುವ ರಾಜನನ್ನು ಪ್ರಜಾಪ್ರಭುತ್ವದ ಸರ್ಕಾರವೊಂದು ಎತ್ತಿ ತಂದು ಜಯಂತಿಯೋ ಮತ್ತೊಂದೋ ಆಚರಿಸಲು ಸರಕಾರಗಳಿಗೆ ಅವರದ್ದೇ ರಾಜಕೀಯ ಕಾರಣಗಳಿರುತ್ತವೆ. ಸರ್ಕಾರ ಈಗ ಅದರಷ್ಟಕ್ಕೇ ಸರಕಾರ ಟಿಪ್ಪು ಜಯಂತಿ ಆಚರಿಸಿ ಮುಗಿಸಿದೆ. ಚರಿತ್ರೆಯ ಮಹಾಪುರುಷರ ಜಯಂತಿ ಆಚರಿಸುವುದು, ಪುತ್ಥಳಿ ನಿರ್ಮಿಸುವುದನ್ನೇ ಸರಕಾರಗಳು ಸಾಂಸ್ಕೃತಿಕ ಕೊಡುಗೆಗಳೆಂದು ಭಾವಿಸಿದಂತಿದೆ. ವಾಸ್ತವ ಅದಕ್ಕಿಂತ ದೂರ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ .

ನಮ್ಮ ಪ್ರಯತ್ನ ಟಿಪ್ಪುವನ್ನು ವೈಭವೀಕರಿಸುವುದಾಗಲೀ , ಅಲ್ಲಗಳೆಯುವುದಾಗಲೀ ಅಲ್ಲ . ಚರಿತ್ರೆಯಲ್ಲಿರುವ ರಾಜನನ್ನು ನಾವು ಹೇಗೆ ನೋಡಬೇಕು ಎಂಬುದನ್ನು ತಿಳಿಸುವ ಪ್ರಯತ್ನ ಅಷ್ಟೇ . ಮೊದಲ ಭಾಗ ಕೇಳಿದವರು ಹಲವಾರು ಪ್ರಶ್ನೆಗಳನ್ನು ನಮಗೆ ಕಳಿಸಿದ್ದಾರೆ . ಸಮಯ ಮಿತಿಯನ್ನು ಪರಿಗಣಿಸಿ ಆಯ್ದ ಕೆಲವೊಂದು ಪ್ರಶ್ನೆಗಳಿಗೆ ಇಲ್ಲಿ ನಿಧಿನ್ ಉತ್ತರಿಸಿದ್ದಾರೆ .

ಮೂಲತ: ಕೇರಳದವರಾದ ನಿದಿನ್ ವೃತ್ತಿಯಿಂದ ಮ್ಯಾಕೆನಿಕಲ್ ಇಂಜಿನೀಯರ್. ಶಿವಮೊಗ್ಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಒಲಿಕಾರ್ ಟ್ರ್ಯಾಕ್ಟರ್ ಎನ್ನುವ ಹೆಸರಿನಲ್ಲಿ ಆಟೋಮೊಬ್ಯೆಲ್ ಬ್ಯಸಿನೆಸ್ ಮಾಡುತ್ತಿದ್ದಾರೆ. ಅನೇಕ ನಿಯತಕಾಲಿಕೆಗಳು, ಜರ್ನಲ್ ಗಳಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ. ಹಾಲಿ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಹೆಚ್ಚುವರಿ ಕಾರ್ಯ ನಿರ್ವಹಿಸುತ್ತಿದ್ದಾರೆ. “The Seringapatam Times”  ಎಂಬ ಹೆಸರಿನ ಅಂತರ್ಜಾಲದ ಬ್ಲಾಗ್ ನಲ್ಲಿ ಟಿಪ್ಪು ಮತ್ತು ಮೈಸೂರು ಸಂಸ್ಥಾನದ ಕುರಿತಾಗಿ ಇಂಗ್ಲೀಶ್ ನಲ್ಲಿ ಸಂಶೋಧನಾ ಲೇಖನಗಳನ್ನು ಬರೆಯುತ್ತಾರೆ .


ಪ್ರತಿಕ್ರಿಯಿಸಿ