ಚಂಪಾ ಕವಿತೆಗಳ ಓದು : ಎಸ್. ದಿವಾಕರ್

ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ಚಂದ್ರಶೇಖರ ಪಾಟೀಲರು (ಚಂಪಾ) ಕವಿಯಾಗಿ , ನಾಟಕಕಾರರಾಗಿ, ಕನ್ನಡ ಪರ ಚಳುವಳಿಗಳಲ್ಲಿ ಸಕ್ರಿಯರಾಗಿ, ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಅವರ ವಿಡಂಬನಾತ್ಮಕ ಕಾವ್ಯಗಳಿಗೆ ಮನಸೋಲದವರು ಕಡಿಮೆ . ‘ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡುವುದಿಲ್ಲ. ದ್ವೇಷವನ್ನು ಕೂಡ’ ಎಂದು ಚಂಪಾ ಹೇಳಿರುವುದನ್ನು ನಾವು ಅವರು ತಮ್ಮ ಕವಿತೆಗಳಲ್ಲಿ ಸೃಷ್ಟಿಸಿದ ವ್ಯಂಗ್ಯದಲ್ಲೂ ಕಾಣಬಹುದು . ಇತಿಹಾಸ ಮತ್ತು ವರ್ತಮಾನದ ರಾಜಕೀಯ , ಸಾಂಸ್ಕೃತಿಕ ಸಂಗತಿಗಳನ್ನು ಪನ್ ಮುಖೇನ ಹಿಡಿದಿಡುವ ಕೆಲವು ಚಂಪಾ ಕವಿತೆಗಳನ್ನು ಎಸ್. ದಿವಾಕರ್ ಇಲ್ಲಿ ಓದಿದ್ದಾರೆ .

ಪ್ರತಿಕ್ರಿಯಿಸಿ