ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ – ಕೆ.ವಿ. ನಾರಾಯಣ : ಭಾಗ ೨

ಆಧುನಿಕ ಭಾಷಾಶಾಸ್ತ್ರದ ಹರಿಕಾರನೆಂದೇ ನೋಮ್ ಚಾಮ್‍ಸ್ಕಿ ಹೆಸರುವಾಸಿಯಾಗಿದ್ದಾನೆ. ಭಾಷೆಯ ಅಧ್ಯಯನದ ದಾರಿಗಳನ್ನು ಚಾಮ್ ಸ್ಕಿ ಶೋಧಿಸಿದ ವಿಧಾನವನ್ನೇ ಕ್ರಾಂತಿಕಾರಿ ಆಲೋಚನಾ ಕ್ರಮವೆಂದು ಬಣ್ಣಿಸಲಾಗಿದೆ. ಭಾಷಾಶಾಸ್ತ್ರವನ್ನು ಕ್ರಾಂತಿಕಾರಿಗೊಳಿಸುವುದಷ್ಟೆಯಲ್ಲದೇ, ಅದನ್ನೊಂದು ಆಧುನಿಕ ವಿಜ್ಞಾನವನ್ನಾಗಿ ರೂಪಿಸಿದ ಯಶಸ್ಸು ಮಾತ್ರ ಚಾಮ್‍ಸ್ಕಿಗೆ ಸೇರಿದ್ದು. ಭಾಷೆಯ ಕುರಿತು ಚಾಮ್ ಸ್ಕಿ ಯ ಚಿಂತನೆಗಳನ್ನು ಕನ್ನಡದ ಮನಸ್ಸುಗಳಿಗೆ ಹಿರಿಯ ಭಾಷಾತಜ್ಞರಾದ ಡಾ. ಕೆ.ವಿ. ನಾರಾಯಣ ವಿವರಿಸುವ ಪುಸ್ತಕ “ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ” ವನ್ನು ಈಗ ಅಹರ್ನಿಶಿ ಪ್ರಕಾಶನ ಹೊರತಂದಿದೆ .

ಎಲ್ಲರೂ ಓದಬೇಕಾದ ಈ ಪುಸ್ತಕ ಈಗ ಋತುಮಾನ ಅಂಗಡಿಯಲ್ಲಿ ಹತ್ತು ಶೇಕಡಾ ರಿಯಾಯಿತಿಯೊಂದಿಗೆ ಲಭ್ಯ . ಈ ಕೆಳಗಿನ ಕೊಂಡಿಯಲ್ಲಿ ಪುಸ್ತಕವನ್ನು ಖರೀದಿಸಬಹುದು . 

ಕೊಂಡಿ :
http://store.ruthumana.com/pro…/chomsky_jothege_eradu-hejje/

ಈ ಪುಸ್ತಕದ ಕುರಿತಾಗಿ ಮತ್ತು ಚಾಮ್ ಸ್ಕಿ ಯ ನುಡಿಯ ಬಗೆಗಿನ ಸಂಶೋಧನೆಗಳ ಕುರಿತಾಗಿ ಕೆ. ವಿ. ನಾರಾಯಣ ಈ ವಿಡಿಯೋದಲ್ಲಿ ಮಾತಾಡಿದ್ದಾರೆ. ಈ ಸರಣಿಯಲ್ಲಿ ೩ ಭಾಗಗಳಿರುತ್ತವೆ.

ಪ್ರತಿಕ್ರಿಯಿಸಿ