ಕರ್ನಾಟಕ ಏಕೀಕರಣಕ್ಕೆ ಅರವತ್ತೊಂದು – ನಮ್ಮ ನಿನ್ನೆ, ಇಂದು ಮತ್ತು ನಾಳೆಗಳು : ಭಾಗ ೨

ಕೇಂದ್ರೀಯ ವಿದ್ಯಾಲಯಗಳು ನೇರವಾಗಿ CBSE ಯಿಂದ ನಿಯಂತ್ರಿತವಾಗುವ ಶಾಲೆಗಳು . ಅದರ ಆಡಳಿತ ಮಂಡಳಿಯೂ CBSE ಆಗಿದೆ . ಆದರೆ ಅದರ ಮನ್ನಣೆ ಮಾತ್ರ ತೆಗೆದುಕೊಂಡು ( affiliation) ಕಾರ್ಯನಿರ್ವಹಿಸುವ  ಶಾಲೆಗಳು ಕರ್ನಾಟಕದಲ್ಲಿ ನೂರಾರಿವೆ. ಕರ್ನಾಟಕ ಸರ್ಕಾರದ ಶಿಕ್ಷಣ ಕಾಯಿದೆಯಲ್ಲಿರುವ ಒಂದು ಅಂಶವೆಂದರೆ ಈ ಶಾಲೆಗಳಿಗೆ ಕರ್ನಾಟಕ ಸರ್ಕಾರ No Objection Certificate ( NOC ) ಕೊಡಬೇಕು . ಆದರೆ ಕಾಯಿದೆ ಪ್ರಕಾರ ಅಂತಹ ಶಾಲೆಗಳಲ್ಲಿ ಕಲಿಯುವ ಶೇಕಡಾ 80 ರಷ್ಟು ಮಕ್ಕಳು ಅನ್ಯ ಭಾಷಿಕರಾಗಿರಬೇಕು ಅಥವಾ ಅನ್ಯ ರಾಜ್ಯಕ್ಕೆ ಸೇರಿದವರಾಗಿರಬೇಕು ಮತ್ತು ಕಾಲದಿಂದ ಕಾಲಕ್ಕೆ ಸರ್ಕಾರ ಇದನ್ನು ಪರಿಶೀಲಿಸಬೇಕು . ಕರ್ನಾಟಕದ ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ .

*****

ಹರಿದು ಹಂಚಿ ಹೋಗಿದ್ದ ಕರ್ನಾಟಕ ಮತ್ತೆ ಒಂದಾದದ್ದು ಕರ್ನಾಟಕ ಏಕೀಕರಣದೊಂದಿಗೆ. ಅಲ್ಲಿಂದೀಚೆಗೆ 61 ವರುಶಗಳೇ ಕಳೆದಿವೆ. ಈ ಸಮಯದಲ್ಲಿ ಕಲಿಕೆ, ಆಡಳಿತ, ಗುರುತು, ದುಡಿಮೆ ಹೀಗೆ ಎಲ್ಲದರಲ್ಲೂ ಕನ್ನಡ ನಾಡು ಹಲವು ಮಹತ್ವದ ಬದಲಾವಣೆಗಳನ್ನು ಕಂಡಿದೆ. ಆದರೆ ಏಕೀಕರಣದ ಎಲ್ಲ ಕನಸುಗಳು ಈಡೇರಿವೆಯೇ? 61 ವರ್ಷಗಳಲ್ಲಿ ಪಡೆದಿದ್ದೇನು, ಕಳೆದಿದ್ದೇನು? ಕನ್ನಡಿಗರ ಬದುಕು, ಏಳಿಗೆಯತ್ತ ಆಗಬೇಕಿರುವ ಕೆಲಸಗಳೇನು ಅನ್ನುವುದರ ಕುರಿತು ನಾಡಿನ ಹಿರಿಯ ನುಡಿಯರಿಗರೂ, ಚಿಂತಕರೂ ಆದ ಶ್ರೀ. ಕೆ.ವಿ.ನಾರಾಯಣ ಇಲ್ಲಿ ಮಾತಾಡಿದ್ದಾರೆ.

ಈ ಉಪನ್ಯಾಸವನ್ನು ನವೆಂಬರ್ 1 , 2017 ರಂದು ಮುನ್ನೋಟ ಮಳಿಗೆ , ಬಸವನಗುಡಿ ಬೆಂಗಳೂರು – ಇಲ್ಲಿ ದಾಖಲಿಸಿಕೊಳ್ಳಲಾಗಿದೆ .

ಪ್ರತಿಕ್ರಿಯಿಸಿ