ಗಾಳಿ ಮಗ್ಗದ ಬಿಳಿ ಸೀರೆ

ರಾಮಾನುಜನ್ ಅವರ ಕಾವ್ಯದ ಬಗಗೆ ಬರೆಯುವುದು ಅಂದರೆ ಅಲ್ಲಮನ ಬೆಡಗಿಗೆ ಯಾರೋ ಟೀಕು ಬರೆದಂತೆ. ಹರಿಯುವ ಹೊಳೆಯ ದಂಡಯಲಿ ಸ್ಕೇಲಿನ ಪಟ್ಟಿ ಇಟ್ಟುಕೊಂಡು ಕುಳಿತಂತೆ. ಯಾವ ಒಳ ಸುಳಿಯೋ ಏನೋ ಕೊಚ್ಚಿಕೊಂಡು ಬಿಡುತ್ತದೆ ಸ್ಕೇಲನ್ನು, ಏ! ನನ್ನ ಹಾಡೆಷ್ಟುದ್ದ ಅಳೆದು ಹೇಳು ಎಂದು ಕೂಗಿಲೆ ಅಂಗುಲ ಹುಳುವಿಗೆ ಹೇಳಿ, ಹುಳು ಅಳೆಯುತ್ತಾ ಕಣ್ಮರೆಯಾಗುವ ಹಾಗೆ. ರಾಮಾನುಜನ್ನರ ಕಾವ್ಯಕ್ಕಿರುವ Virtue ಕೂಡ ಪಾಪ ಆ ಅಂಗುಲದ ಹುಳು ತಪ್ಪಿಸಿಕೊಂಡು ಬಿಡುವ ಮರ ಗಿಡ ಕಾಡು ನಡುವಿನ೦ತದು.

ಒಮ್ಮೆ ಬೆಂಗಳೂರಿನಲ್ಲಿ ಗುಂಟೂರು ಶೇಶೇಂದ್ರ ಶರ್ಮ ಎಂಬುವರು ತಮ್ಮ ಚಮತ್ಕಾರಿಕ ಕವಿತೆಗಳ ಓದಿನ ಮುಖೇಣ ಇಡೀ ಸಭಿಕವೃಂದವನ್ನು ನಗಿಸಿದ್ದರು. ಕವಿತೆಯೆಂದರೆ ಚಮತ್ಕಾರವೆ ಎಂದು, ಅದು ಪ್ರಶ್ನೆಯಾಗುತ್ತಿರುವಾಗಲೆ “ಅವರು ಓದಿದ್ದು ಕವಿತೆಯಲ್ಲಿ ಮಾಡಿದ ಚಮತ್ಕಾರ” ಎಂದು ಹೇಳಿಕೊಳ್ಳಲು ಕೂಡ ಶಬ್ದಗಳು ಸಿಗದ ಹಾಗೆ ಅದು ಚಮತ್ಕಾರವಾಗಿಬಿಟ್ಟಿತ್ತು. ವಾಸ್ತವವನ್ನು ವಾಸ್ತವದ ಬಗೆಗಿನ ಮಿಥ್‌ಗಳನ್ನೂ ಕೂಡ ಮರೆಸುವ ಹಾಗೆ ತುಂಬಾ Perennial ಆದ ಅಭಾಸಗಳಂತೆ ತೋರುವುದನ್ನು ಅದರ ಕ್ಯಾನ್ವಾಸಿನ ಕೆಳಗಡೆ ಗುಂಡುಸೂಜಿಗಳಿಂದ ಚುಚ್ಚಿದ್ದ ಅರ್ಥಗಳನ್ನು ಬಿಡಿಸುವ ಆದರೆ ಮುಚ್ಚಿಡುವ Ambiguous ಆದ ಬಗೆಯೊಂದಿದೆ. ಶಬ್ದಗಳ ಛೇದಿಸಿ “ಹೆಂಗಸರ ನಡುವೆ’ಯನ್ನು
ಹೆಂಗಸರ ನಡು
ವೆ
ಮಾಡುವ ಮಾದರಿಯ ಒಂದಿದೆ. ಇಂತಹ ಶಾಬ್ದಿಕ ಕೀಟಲೆಗಳು ಹಗುರಾದ ಒಂಥರಾ ಮಜಾ ಕೊಡುತ್ತವೆ. ಜನ ಮರುಳು ಸಂಸ್ಕೃತಿ (Populist Culture) ಯೊಂದು ಬೆಟ್ಟು ಮಾಡಿ ತೋರಿಸುವ ‘ಹೆಣ್ಣಿನ ದೇಹ’, ‘ಸಂಬಂಧಗಳು’, ‘ವಸ್ತು ಪ್ರಪಂಚ’ದ ಬಗೆಗಿನ ಸಂಕುಚಿತ ಗ್ರಹಿಕೆ (Reductionist Perception)ಗಳನ್ನು ‘ಮಾಡೆಲ್’ ಆಗಿಟ್ಟುಕೊಂಡಂತವು. ಈ ಮಾದರಿಗಳನ್ನು ಕವಿತೆಗಳೆಂದು ಯಾರಾದರೂ ಕರೆದಿದ್ದರೆ, ಕರೆಯುವುದಾದರೆ ಕರೆದುಕೊಳ್ಳಲಿ!, ಆದರೆ ಇವುಗಳ ಗುರುತ್ವಾಕರ್ಷಣೆಯೆಲ್ಲಾ ಇರುವುದು ಒಂದೋ ಹೆಣ್ಣಿನ ನಡುವಿನಲ್ಲಿ, ಇಲ್ಲವೇ ಪ್ರತಿ ದಿನದ ಹಗಲು ಅಭಾಸಗಳ ಸಂಕುಚಿತ ಗ್ರಹಿಕೆಯಲ್ಲಿ, ವಸ್ತುಸ್ಥಿತಿಯ ಬಗೆಗಿನ ವಕ್ರ ಗ್ರಹಿಕೆ ಕಾವ್ಯದ ಗ್ರಹಿಕೆಯಾಗಬಲ್ಲದೇ? ಇವು ರಂಜನೆಯನ್ನಷ್ಟಲ್ಲದೇ ಬೇರೆ ಆಯಾಮಗಳಿವೆಯೇ ಎಂದು ಕೇಳಿಕೊಳ್ಳುವಷ್ಟೂ ಅವಕಾಶವಿರುವುದಿಲ್ಲ.

ಚಿತ್ರ : ಗುಜ್ಜರ್ ( ‘ಸಂಚಯ’ ಪತ್ರಿಕೆಯ ರಾಮಾನುಜನ್ ವಿಶೇಷ ಸಂಚಿಕೆಯಿಂದ )

ಒಂದು ಕವಿತೆಯ ಆರ್ಕಿಟೈಪ್‌ನ್ನು ಆಧಾರವಾಗಿಟ್ಟುಕೊಂಡು ರಚಿಸಿದ ನೂರಾರು ಕವಿತೆಗಳು ಬರುತ್ತವೆ. ದುರದೃಷ್ಟವಶಾತ್ ಇವೆಲ್ಲವೂ ಸಾಮಾಜಿಕ ಕಾಳಜಿಯ ಹೆಸರಿನಲ್ಲಿ ಪ್ರಕಟವಾಗುತ್ತಿರುವುದು ಮತ್ತು ಯಾವ ಸಾಮಾಜಿಕ ಸಮಸ್ಯೆಯನ್ನು ಉದ್ದೇಶಿಸಿ ಬರೆಯಲಾಗುತ್ತಿದಯೋ ಆ ಸಮಸ್ಯೆಯ ಸರ್ವಗ್ರಾಹಿತ್ಯವನ್ನು ಕಾಣಿಸದ ಆದರೆ ಅಬ್ಬರದಿಂದ ಹೇಳುವ ಮಾದರಿಗಳು. ಹೀಗಾಗಿ ಕವಿತೆಯ ಗ್ರಹಿಕೆ ಮತ್ತು ಭಾವಿಸುವಿಕೆಗಳು, ತಾನು ಕಂಡ ಸಮಸ್ಯೆಯ ಹಿನಾಯಾನ ಸ್ಥಿತಿಯಿಂದ ಮಹಾಯಾನಕ್ಕೆ Elevate ಆಗುವುದಿಲ್ಲ ಮಣ್ಣಿನ ನಿಜದ ಗುಣದಿಂದ ಅರಳಿದ ಗಿಡವಾಗಿ ಹೂವಾಗುವ ಕಾಣ್ಕೆ ಇಲ್ಲವಾಗುತ್ತದೆ. ಆಂತರ್ಯದ ಮೌನಕ್ಕೆ ಚಾಲನೆ ಕೊಡದ ಕವಿತಗಳು ಇವು.

 *  *  *

ರಾಮಾನುಜನ್ ಅವರ ಕಾವ್ಯದ ಬಗಗೆ ಬರೆಯುವುದು ಅಂದರೆ ಅಲ್ಲಮನ ಬೆಡಗಿಗೆ ಯಾರೋ ಟೀಕು ಬರೆದಂತೆ. ಹರಿಯುವ ಹೊಳೆಯ ದಂಡಯಲಿ ಸ್ಕೇಲಿನ ಪಟ್ಟಿ ಇಟ್ಟುಕೊಂಡು ಕುಳಿತಂತೆ. ಯಾವ ಒಳ ಸುಳಿಯೋ ಏನೋ ಕೊಚ್ಚಿಕೊಂಡು ಬಿಡುತ್ತದೆ ಸ್ಕೇಲನ್ನು, ಏ! ನನ್ನ ಹಾಡೆಷ್ಟುದ್ದ ಅಳೆದು ಹೇಳು ಎಂದು ಕೂಗಿಲೆ ಅಂಗುಲ ಹುಳುವಿಗೆ ಹೇಳಿ, ಹುಳು ಅಳೆಯುತ್ತಾ ಕಣ್ಮರೆಯಾಗುವ ಹಾಗೆ. ರಾಮಾನುಜನ್ನರ ಕಾವ್ಯಕ್ಕಿರುವ Virtue ಕೂಡ ಪಾಪ ಆ ಅಂಗುಲದ ಹುಳು ತಪ್ಪಿಸಿಕೊಂಡು ಬಿಡುವ ಮರ ಗಿಡ ಕಾಡು ನಡುವಿನ೦ತದು.

ರಾಮಾನುಜನ್ನರ ಕಾವ್ಯ ಹೇಗೆ ಚಾಕಚಕ್ಯತಯದೋ ಹಾಗೆಯೇ ಕಸುಬು ದಾರಿಕೆಯದು, ಹಾಸಿಗೆಯಲ್ಲಿ ಚುಚ್ಚಿದ ಗಾಜಿನ ಚೂರುಗಳಿಂದ ಕೆಲಿಡೋ ಸ್ಕೋಪ್ ಸಿದ್ಧವಾಗುತ್ತದೆ. ಸರಳವಾಗಿ ಬಿಡುವ ಮುಖೇಣ ಸಂಕೀರ್ಣವಾಗಿ ಬಿಡುವ ಬಗೆಯಿದು

ಅವಸರಕ್ಕೆ ಬಯಲು
ಹುಡುಕಿದರೆ ಇನ್ನು ಸಿಕ್ಕುವುದು
ಬಯಲೆಲ್ಲ ಆಲಯ

ಕಾಲ ಒಂದು ಪ್ರಮುಖ ಸ್ಥಾಯಿಯಾಗಿ ಮೈಸೂರಿನಿಂದ ಹೈದ್ ಪಾರ್ಕಿಗೆ ಬಂದ 25 ವರ್ಷಗಳಾದರೂ ನೆನ್ನೆ ತಾನೇ ಬಂದ ಹಾಗಿದೆ. ನೆನ್ನೆ ನೀವು ಬಂದಾಗ ಹೇಳಿದೆನೆ? ಹೇಳಿ ಮುಗಿಸುವುದರೊಳಗೆ ನೆನ್ನೆ ನಾಳೆಯಾಗುತ್ತಾ ಇದೆ.

ಅಲ್ಲಿಂದ ನೆನ್ನೆ
ಹೊರಟು ಬಂದ ಮಂಗೋಲಿಯಾದ ಸ್ಕೂಡಂಟ್
ಒಬ್ಬಳು ಮೊನ್ನೆ
ಇಲ್ಲಿಗೆ ಬಂದು ಸೇರಿದಾಗ
ಒಂದು ಇಡೀ ದಿನ ಆದೂ ಸೋಮವಾರ
ಎಲ್ಲಿ ಕಳೆದು ಹೋಯಿತು

 *  *  *

ಜೆನ್ ಒಡಪುಗಳನ್ನು Anarchy ಅಂತನ್ನಬಹುದಾದರೆ ಬರೀ ಬೆರಗೂ ಅಲ್ಲದ ಅದು. ಜೆನ್ ಎಂದರೆ ಏನೆಂದು ಜೆನ್ ಏನೂ ಅಲ್ಲದ್ದು ಮತ್ತು ಎಲ್ಲವೂ ಆಗಿರುವುದು.

ರಾಮಾನುಜನ್ನರ ಕಾವ್ಯಕ್ಕೆ Cultural Specificity ಇಲ್ಲ ಎಂಬ ಮಾತೊಂದಿದೆ. ಅದು ಇಲ್ಲವೇ ಇಲ್ಲ ಎಂದರೆ ಇಲ್ಲ ಮತ್ತು ಇದೆ ಎನ್ನುವುದಾದರೆ ಇದೆ. ಅದು ಪಕ್ಕದ ಮನೆಯ ಉಪನಿಷತ್ತು ಹಾಗಾದರೆ

       ಚಿಕ್ಕಂದು ಮುಕ್ಕಿದ ಬೀದಿ ಮಣ್ಣಲ್ಲಿ ವಿಶ್ವ
ರೂಪ ಕಂಡ ಹಾಗಾಗಿ ಒಂದು ನಿಮಿಷ
ತಬ್ಬಿಬ್ಬಾಯಿತು.  ( ಕುಂಟೋಬಿಲ್ಲೆ )

*   *   *

೧೧_೧_೧೧_ _೧೧೧೧_
⁻∪∪⁻∪∪∪⁻∪∪∪∪⁻∪∪⁻ ⁻∪
∪∪∪⁻∪⁻∪∪⁻∪∪∪∪⁻∪∪⁻ ⁻∪
ಇದು ನಿಜವೋ
ಸುಳ್ಳೋ ಕಾಣೆ
ಅಂತೂ ಸತ್ಯ.

*   *   *

ರಾಮಾನುಜನ್
ನಿಮ್ಮನ್ನು ಕಂಡಿರಲಿಲ್ಲ
ಕವಿತೆಗಿಂತ ಸಂಕ್ಷಿಪ್ತವಾಗಿ ಆಡಿದ
ಮಾತು ಕೇಳಿದೆ
ನುಡಿದರೆ ಮುತ್ತಿನ ಹಾರದಂತಿರಬೇಕು
ಎಂದಿದ್ದನಲ್ಲ ಬಸವ
ನಾಲ್ಕು ಅಂದರೆ ನಾಲ್ಕೆ
ಮಾತು ಆಡಿದಿರಿ ಆವತ್ತು

‘ಮಗುವಿಗೆ ಶ್! ಮಾಡಿ
ಸುಮ್ಮನೆ ಹೊಳೆಯುವ ಚಂದ್ರನ ಕಡೆಗೆ
ಬೆರಳು ಮಾಡಿ ತೋರಿಸಿದಂತಿದೆ
ಆಗಾಗ ನೋಡುತ್ತಿರುವೆ
ನಿಮ್ಮ ಕಾವ್ಯದ ಬಗೆಗೆ
ಬರೆಯಬಾರದು
ಎಲ್ಲವನ್ನೂ ಅರ್ಥಮಾಡಿಕೊಳ್ಳಬೇಕೆಂಬ
ಅಹಂ ಕೂಡ ಇರಬಾರದು
ಇಷ್ಟಕ್ಕೂ ಕಾವ್ಯವಿರುವುದು
ಅರ್ಥಮಾಡಕೊಳ್ಳಲಿಕ್ಕೆ ಮಾತ್ರವೇನಲ್ಲ

ಪ್ರತಿಕ್ರಿಯಿಸಿ