ನಾಗರಿಕರಿಗೆ ಬರಹಗಾರರ ಮನವಿ

ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ನಾವಿದ್ದೇವೆ. ಈ ಹೊತ್ತಿನಲ್ಲಿ ದೇಶದ ಇನ್ನೂರಕ್ಕೂ ಹೆಚ್ಚು ಮಹತ್ವದ ಬರಹಗಾರರು ನಾಗರಿಕರಿಗೆ ಮನವಿ ಪತ್ರವನ್ನು ಕಳುಹಿಸಿದ್ದಾರೆ. ಒಂದು ಜವಾಬ್ದಾರಿಯುತ ವೆಬ್ ಪತ್ರಿಕೆಯಾಗಿ ಬರಹಗಾರರ ಬಳಗದ ಈ ಕೋರಿಕೆಯನ್ನು ಓದುಗ ಮಿತ್ರರಿಗೆ ಋತುಮಾನ ತಲುಪಿಸುತ್ತಿದೆ.

ಲೇಖಕರು ಈ ಮನವಿಯನ್ನು ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಉರ್ದು, ಬಂಗ್ಲಾ, ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಿರುವರು.

ದ್ವೇಷ ರಾಜಕಾರಣದ ವಿರುದ್ಧ ಮತ ಚಲಾಯಿಸೋಣ, ಸಮಾನ ಹಾಗೂ ಬಹುತ್ವ ಭಾರತಕ್ಕಾಗಿ ಮತ ಚಲಾಯಿಸೋಣ.

ಬರುತ್ತಿರುವ ಚುನಾವಣೆಯು ನಮ್ಮ ದೇಶವನ್ನು ಬಿಕ್ಕಟ್ಟಿಗೆ ತಂದು ನಿಲ್ಲಿಸಿದೆ. ನಮ್ಮ ಸಂವಿಧಾನವುಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು, ಅವರು ಬಯಸಿದ  ಹಾಗೆ ಆಹಾರ ಸೇವಿಸುವ, ಪ್ರಾರ್ಥಿಸುವ,ಅವರ ಆಯ್ಕೆಯ ಹಾಗೆ ಬದುಕುವ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಭಿನ್ನಾಭಿಪ್ರಾಯದ ಹಕ್ಕನ್ನು ನೀಡಿದೆ.ಆದರೆ ಕಳೆದ ಕೆಲವು ವರ್ಷಗಳಿಂದ ಅವರ ಕೋಮು, ಜಾತಿ, ಲಿಂಗ ಅಥವಾ ಅವರ ಪ್ರದೇಶಗಳಕಾರಣಕ್ಕಾಗಿ ನಾಗರಿಕರನ್ನು ಸಾಮೂಹಿಕವಾಗಿ ಕೊಲ್ಲುವುದನ್ನು, ಅವರ ಮೇಲೆ ದಾಳಿ ಮಾಡುವುದನ್ನುಮತ್ತು ತಾರತಮ್ಯ ಮಾಡುವುದನ್ನು ನಾವು ನೋಡಿದ್ದೇವೆ. ದ್ವೇಷ ರಾಜಕಾರಣವನ್ನು ನಮ್ಮ ದೇಶವನ್ನುಒಡೆಯಲು, ಭೀತಿ ಹುಟ್ಟಿಸಲು ಮತ್ತು ಹೆಚ್ಚೆಚ್ಚು ಜನರು ಪೂರ್ಣ ಪ್ರಮಾಣ ನಾಗರಿಕರಂತೆಬದುಕುವುದರಿಂದ ಹೊರಗಿಡಲು ಬಳಸಲಾಗುತ್ತಿದೆ. ಬರಹಗಾರರು, ಕಲಾವಿದರು, ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಸಂಗೀತಕಾರರು ಮತ್ತು ಸಾಂಸ್ಕೃತಿಕ  ಕ್ರೀಯಾಶೀಲರಿಗೆ ಕಿರುಕುಳ ಕೊಟ್ಟು,ಬೆದರಿಸಿ ¸ ಸೆನ್ಸರ್ ಮಾಡಲಾಗಿದೆ. ಅಧಿಕಾರದಲ್ಲಿರುವ ಶಕ್ತಿಗಳನ್ನು ಪ್ರಶ್ನಿಸುವವರು ಹಿಂಸೆಗೆ ಒಳಗಾಗುವ ,ಸುಳ್ಳು ಹಾಗೂ ಹಾಸ್ಯಾಸ್ಪದ ಆರೋಪಗಳ ಮೇಲೆ ಬಂಧನಕ್ಕೊಳಗಾಗುವ ಅಪಾಯದಲ್ಲಿದ್ದಾರೆ.

ನಾವೆಲ್ಲರೂ ಇದು ಬದಲಾಗಬೇಕೆಂದು ಬಯಸುತ್ತೇವೆ . ವಿಚಾರವಾದಿಗಳು, ಬರಹಗಾರರು ಮತ್ತುಕಾರ್ಯಕರ್ತರು ಕಿರುಕುಳಕ್ಕೆ ಈಡಾಗುವುದು ಅಥವಾ ಕೊಲೆಗೀಡಾಗುವುದನ್ನು ನಾವು ಬಯಸುವುದಿಲ್ಲ. ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಮೇಲೆ ಮಾತಿನ ಮೂಲಕ ಅಥವಾಕ್ರಿಯೆಗೆಳ ಮೂಲಕ ನಡೆಯುವ ಹಿಂಸೆಯ ವಿರುದ್ಧ ಅತ್ಯಂತ ಕಠಿಣವಾದ ಕ್ರಮಗಳನ್ನು ಬಯಸುತ್ತೇವೆ.ಉದ್ಯೋಗಗಳು, ಶಿಕ್ಷಣ, ಸಂಶೋಧನೆ, ಆರೋಗ್ಯ ಮತ್ತು ಎಲ್ಲರಿಗೂ ಸಮಾನ ಅವಕಾಶಗಳುದೊರೆಯುವಂತಾಗಲು ಬೇಕಾದ ಸಂಪನ್ಮೂಲಗಳನ್ನು ಹಾಗೂ ಕ್ರಮಗಳನ್ನು ಬಯಸುತ್ತೇವೆ .

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಬಹುತ್ವವನ್ನು ರಕ್ಷಿಸಲು ಹಾಗೂ ಪ್ರಜಾಪ್ರಭುತ್ವವು ಸದೃಢವಾಗಿ ಬೆಳೆಯಲೆಂದು ಬಯಸುತ್ತೇವೆ.ಇದನ್ನು ಹೇಗೆ ಮಾಡುವುದು? ನಮಗೆ ತುರ್ತಾಗಿ ಅವಶ್ಯವಾಗಿರುವ ಬದಲಾವಣೆಯನ್ನು ಹೇಗೆ ತರುವುದು? ನಾವು ಮಾಡಬೇಕಾದ ಹಾಗೂ ಮಾಡಬಹುದಾದ ಅನೇಕ ಸಂಗತಿಗಳಿವೆ. ಆದರೆಅತಿಮಹತ್ವದ ಒಂದು ಮೊದಲ ಹೆಜ್ಜೆ ಇದೆ.

ನಾವು ಇಡಬೇಕಾದ ಮೊದಲ ಹೆಜ್ಜೆ ಎಂದರೆ ದ್ವೇಷ ರಾಜಕಾರಣವನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ. ನಮ್ಮ ಜನರ ವಿವಿಭಜನೆಯನ್ನು ಸೋಲಿಸಬೇಕಿದೆ ; ಅಸಮಾನತೆಯನ್ನು ಸೋಲಿಸಬೇಕಿದೆ;ಹಿಂಸೆಯ ವಿರುದ್ಧ ಮತ ಚಲಾಯಿಸಬೇಕಾಗಿದೆ. ಸೆನ್ಸರ್‌ಶಿಪ್ ವಿರುದ್ಧ ಮತ ಚಲಾಯಿಸಬೇಕಿದೆ. ನಮ್ಮಸಂವಿಧಾನವು ನಮಗೆ ನೀಡಿದ ಆಶ್ವಾಸನೆಗಳನ್ನು ಮತ್ತೆ ನವೀಕರಿಸುವ ಭಾರತಕ್ಕಾಗಿ ನಾವು ಮತ ಚಲಾಯಿಸುವುದು – ಇದೊಂದೇ ದಾರಿ ನಮಗಿದೆ. ಆದ್ದರಿಂದಲೇ ನಾವು ಬಹುತ್ವ ಹಾಗೂ ಸಮಾನತೆಯ ಭಾರತಕ್ಕಾಗಿ ಮತ ಚಲಾಯಿಸಿರಿ ಎಂದು ಎಲ್ಲಾ ನಾಗರಿಕರನ್ನು ಕೋರುತ್ತಿದ್ದೇವೆ.


1 AJ Thomas 71 Gulam Mohammed Sheikh 141 Pradnya Daya Pawar
2 AR Venkatachalapathy 72 HS Shivaprakash 142 Prem Tiwari
3 Abhay Maurya 73 Hansda Sowvendra Shekhar 143 Priya Sarukkai Chabria
4 Adil Jussawalla 74 Hariyash Rai 144 Purushottam Agarwal
5 Ajai Singh 75 Harsh Mander 145 R Unni
6 Akeel Bilgrami 76 Hemant Divate 146 Rahamath Tarikere
7 Ali Javid 77 Hemlata Maheshwar 147 Rahman Abbas
8 Alok Rai 78 Hiralal Rajasthani 148 Rajendra Chenni
9 Amit Chaudhuri 79 Huchangi Prasad 149 Rajendra Rajan
10 Amit Bhaduri 80 Ishrat Syed 150 Rajesh Joshi
11 Amitav Ghosh 81 J Devika 151 Rajiv Ranjan Singh
12 Anand 82 JM Parakh 152 Ramprakash Tripathi
13 Anand Teltumbde 83 Jaidev Taneja 153 Ranjit Hoskote
14 Ananya Vajpeyi 84 Jaishree Misra 154 Raosaheb Kasbe
15 Ania Loomba 85 Jeet Thayil 155 Rakesh Tiwari
16 Anil Joshi 86 Jerry Pinto 156 Ravishankar
17 Anita Nair 87 Joy Mathew 157 Rekha Awasthi
18 Anita Ratnam 88 JV Pawar 158 Ritu Menon
19 Anita Thampi 89 K G Shankara Pillai 159 Robin Ngangom
20 Anjali Purohit 90 K N Panikkar 160 Romila Thapar
21 Anupama HS 91 K Satchidanandan 161 Ruchira Gupta
22 Anuradha Kapur 92 Kalpana Swaminarayan 162 Rukmini Bhaya Nair
23 Anuradha Marwah 93 Kalpana Swaminathan 163 S Joseph
24 Anvar Ali 94 Kavery Nambisan 164 Sachin Ketkar
25 Apoorvanand 95 Keki Daruwalla 165 Saleem Peeradina
26 Arjumand Ara 96 Kiran Nagarkar 166 Salim Yusufji
27 Arjun Dangle 97 KM Shrimali 167 Salma
28 Arun Kamal 98 KP Ramanunni 168 Samik Bandyopadhyay
29 Arunava Sinha 99 Kunal Basu 169 Sanjeev Kaushal
30 Arundhati Roy 100 Kutti Revathi 170 Sanjeev Khandekar
31 Arvind Krishna Mehrotra 101 M Mukundan 171 Sanjeev Kumar
32 Asad Zaidi 102 MMP Singh 172 Sarabjeet Garcha
33 Asghar Wajahat 103 Madhu Bhaduri 173 Satish Alekar
34 Ashok Vajpeyi 104 Makarand Sathe 174 Savitri Rajeevan
35 Ashokan Charuvil 105 Malavika Kapur 175 Sethu
36 Ashwani Kumar 106 Mamang Dai 176 Shafi Shauq
37 Atamjit Singh 107 Mamta Sagar 177 Shailesh Singh
38 B Rajeevan 108 Manash Bhattacharya 178 Shanta Acharya
39 Badri Raina 109 Manasi 179 Shanta Gokhale
40 Bajrang Bihari Tiwari 110 Mangad Ratnakaran 180 Sharankumar Limbale
41 Bali Singh 111 Mangalesh Dabral 181 Sharmila Samant
42 Bama 112 Manishi Jani 182 Shashi Deshpande
43 Basharat Peer 113 Manmohan 183 Shekhar Joshi
44 Benyamin 114 Manoj Kulkarni 184 Shobha Singh
45 Bhasha Singh 115 Manoj Kuroor 185 Shubha
46 Bina Sarkar Ellias 116 Maria Couto 186 Smita Sahay
47 CS Chandrika 117 Meena Kandasamy 187 Srilata K
48 Chaman Lal 118 Megha Pansare 188 Subodh Sarkar
49 Chandradasan 119 Mogalli Ganesh 189 Sudeep Chakravarti
50 Chandrakant Patil 120 Mrinal Pande 190 Sudeshna Banerjee
51 Civic Chandran 121 Mukul Kesavan 191 Sudhanva Deshpande
52 Dalip Kaur Tiwana 122 NS Madhavan 192 Sudhir Chandra
53 Damodar Mauzo 123 NP Hafiz Mohamad 193 Suresh Chabria
54 Datta Damodar Naik 124 Nabaneeta Dev Sen 194 TM Krishna
55 Deepan Sivaraman 125 Nalin Ranjan Singh 195 Tekchand
56 Devdan Chaudhuri 126 Namita Gokhale 196 Udayan Vajpeyi
57 Devendra Chaube 127 Namita Singh 197 Urvashi Butalia
58 Devi Prasad Mishra 128 Nancy Adajania 198 Vaasanthi
59 Dinesh Kumar Shukla 129 Nayantara Sahgal 199 Vanamala Viswanatha
60 E Santhoshkumar 130 Neeraj Singh 200 Vijay Prashad
61 EV Ramakrishnan 131 Nityanand Tiwari 201 Venita Coelho
62 GN Devy 132 Noor Zaheer 202 Vijayalakshmi
63 Gagan Gill 133 Orijit Sen 203 Vinita Agrawal
64 Gauhar Raza 134 P Sivakami 204 Vinitabh
65 Geeta Kapur 135 PN Gopikrishnan 205 Vishnu Nagar
66 Geetanjali Shree 136 PP Ramachandran 206 Vishwanath Tripathi
67 Girdhar Rathi 137 Pankaj Bisht 207 Vivan Sundaram
68 Girish Karnad 138 Paul Zacharia 208 Vivek Shanbhag
69 Githa Hariharan 139 Prabha Varma 209 Volga
70 Govind Prasad 140 Prabodh Parikh 210 Zoya Hasan
5 comments to “ನಾಗರಿಕರಿಗೆ ಬರಹಗಾರರ ಮನವಿ”
 1. ಅಡ್ಡಗೋಡೆಯಲ್ಲಿಟ್ಟ ದೀಪದ ಹಾಗಿದೆ.
  ಒಂದು ವೇಳೆ ನಾನು ಸಾಹಿತಿಯಾಗಿದ್ದಿದ್ದರೆ ಇದಕ್ಕೆ ಸಹಿ ಹಾಕುತ್ತಿರಲಿಲ್ಲ.
  ಸಿನೇಮಾರಂಗದ ಪ್ರಜ್ನಾವಂತರು ಈ ಚುನಾವಣೆಗೆ ಪ್ರತಿಕ್ರಿಯಿಸಿದ ರೀತಿಗೂ ಸಾಹಿತ್ಯರಂಗದ ವಿಚಾರವಂತರು ಪ್ರತಿಕ್ರಿಯಿಸಿದ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ.

 2. ಮೊದಲು ನೀವೆಲ್ಲಾ ಸಾಹಿತಿಗಳು, ನಿರ್ದೇಶಕರು ಕಿಸಿದಿರೋದು ಏನು ಅನ್ನೋದನ್ನ ಈ ದೇಶದ ನಾಗರೀಕರಿಗೆ ಹೇಳಿ ಆಮೇಲೆ ಅದನ್ನ ಮೋದಿಯವರ ಸಾಧನೆಯ ಜೊತೆಗೆ ಹೋಲಿಸಿ ನೋಡ್ತೀವಿ. ನಿಮ್ಮ ಸಾಧನೆ ಏನಾದರೂ ಮೋದಿಯವರ ಸಾಧನೆಗಿಂತ ಗುಲಗಂಜಿ ತೂಕ ಜಾಸ್ತಿ ಇದ್ದರೆ ನಮ್ಮ ಮತ ನಿಮಗೇ.

 3. Ignore and act according to your own perception.,and choice. This is democracy. We need not look forward to the advice of these writers, without whom even, the country can progress. Ask them what is their contribution as compared to the contribution to the scientists silently engaged in the productive research.Ask how many of them are involved in this propaganda campaign , may be in anticipation of some rewards or awards.Apparently they are political agents .No word against the corruption rampant ,which ruled this nation,nepotism, casteism and setting the minority against the others. Let them stop marketing their devalued thoughts,through which they arrogantly claim themselves as they alone are” intellectuals”

 4. Ridiculous! Rutumana has totally lost its value. Disgustingly one-sided.

  Please do not use this forum for such nasty things. Stop this at once. Delete this so called appeal at once.
  Retain your true followers by deleting this frustrating appeal immediately.

  As responsible and sensible citizens of our great nation, we all know whom to vote and and whom to elect.
  Do not preach! Shame on you!

ಪ್ರತಿಕ್ರಿಯಿಸಿ