ಕವಲುದಾರಿಯಲ್ಲಿ ತಕ್ಷಣಕ್ಕೆ ಕಂಡದ್ದು

ಕವಲುದಾರಿ ಸಿನಿಮಾದಲ್ಲಿ ಅನಂತ್ ನಾಗ್ ಹಾಗೂ ರಿಷಿ ನಲವತ್ತು ವರುಷಗಳ ಹಿಂದೆ ಆಗಿ ಎಲ್ಲ ಮರೆತ ಕೇಸನ್ನು ಮತ್ತೆ ಮೆಲುಕು ಹಾಕುವ ಒಂದು  ದೃಶ್ಯವಿದೆ. ಇವರಿಬ್ಬರೂ ಗಾಢವಾಗಿ ಮಾತನಾಡುತ್ತಾ ಇರೋವಾಗ, ಹಿಂದೆ ನೀಲಿ ಬಣ್ಣದ ಟ್ರೈನು ನಿಧಾನಕ್ಕೆ ಹೋಗುತ್ತಿರುತ್ತದೆ. ಯಾಕೋ ಈ ಸೀನು ಇದ್ದಕ್ಕಿದ್ದಂತೆ ನನ್ನನ್ನು ರಮ್ಯವಾಗಿ ಬೆಚ್ಚಿಸಿತು. ಒಬ್ಬ ಈಗಷ್ಟೇ ಬದುಕಿನ ಆಳವಾದ ಲೇಬ್ರಿನಥ್ನ ಒಳಗೆ ಇಳಿಯುತ್ತಿರುವ ಯುವಕ, ಮತ್ತೊಬ್ಬ  obsessionಗೆ ತಲೆ ಕೊಟ್ಟು ನಾಶವಾಗಿ, ವ್ಯರ್ಥವಾಗುವ ಗೀಳಿಗೆ ಮತ್ತೆ ಬಿದ್ದಿರುವ ಮುದುಕ. ಇವರಿಬ್ಬರನ್ನೂ ಜತೆಗೆ ಕೂಡಿಸೋದು ಸಮಯ;  ಇಲ್ಲಿ ಸ್ಪಷ್ಟವಾಗಿ ಸಮಯವನ್ನು ಕ್ಯಾಮೆರಾ ಗ್ರಹಿಸಿದೆ, ಹಿನ್ನಲೆಯಲ್ಲಿ ಸದ್ದೇ ಇಲ್ಲದೆ ಹರಿಯುತ್ತಿರುವ  ಟ್ರೈನಿನ ಮುಖಾಂತರ.  ಈ ಸ್ಪಷ್ಟತೆ ನನ್ನನ್ನು ಗಾಬರಿಯಾಗಿಸಿತು. ಏಕೆಂದರೆ ಸಮಯವೇ ತಾನೇ ನಮ್ಮೆಲ್ಲರ ರಿಯಲ್ ಹಾರರ್ ಷೋ. ಆಗಿದೇ ಅಂತ ನಾವು ಊಹಿಸಿದ್ದರೂ, ಅದು ಮತ್ತೆಂದೋ, ಮತ್ತೆಲ್ಲೋ ಮತ್ತೆ ತಲೆ ಎತ್ತುವುದು, ಮತ್ತೆ ಭವಿಷ್ಯವನ್ನ ಕಲಕುವುದು, ಮತ್ತೆ ಎಲ್ಲವನ್ನು ಅಸ್ತವ್ಯಸ್ತ ಮಾಡುವುದು… ಈ  ಫ಼್ಯೂಚರ್ ಅನ್ನೋ ಎಂಟಿಟಿ ಕೂಡ ಅವಲಂಬಿಸಿರುವುದು ಪಾಶ್ಟನ್ನೇ. ಈ ಭೂತಕಾಲ ಅನ್ನೋ ತಿಮಿಂಗಿಲ ಎಲ್ಲವನ್ನು ನುಂಗಿ ಹಾಕುತ್ತದೆ, ಮತ್ತೆ ಮಿಕ್ಕೋದು ಕೇವಲ ಮಣ್ಣಲ್ಲೀ ಹೂತು ಹೋಗಿರೋ ತಲೆ ಬುರುಡೆಗಳಷ್ಟೇ. ಯಾರಿಗೂ ಬೇಡವಾದ, ಯಾರನ್ನೂ ಬೆಚ್ಚಿಸಿದ, ಒಂದು ರೀತಿ, “ಇಂತಹದ್ದೂ ಸುಮಾರಿ ಸಲಿ ಆಗ್ತಾ ಇರುತ್ತೆ ಸಾರ್… ಏನ್ ಸ್ಪೆಶಲ್ಲ್ ಇಲ್ಲಾ ಹೀಗೆ ತಲೆಬುರುಡೆ ಸಿಗೋದ್ರರಲ್ಲಿ…’ ಅನ್ನೋ ಅಷ್ಟು ಜಡವಾಗಿರೋ ಮನುಷ್ಯರ ನಡುವೆ ಮಹಾನಗರಗಳ ನಡುವೆ ಕತ್ತೆತ್ತುವ ಭೂತಕಾಲದ ಬುರುಡೆಗಳು. ಆದರೆ ಟ್ರಾಫ಼ಿಕ್ ಇನ್ಸ್ಪೆಕ್ಟರ್ ಶ್ಯಾಮ್ ಕದಲುತ್ತಾನೆ, ಧಿಗ್ಮ್ರಾಂತನಾಗುತ್ತಾನೆ.  ಬಣ್ಣ ಬಣ್ಣದ ಮೀನುಗಳ ಜತೆ, ಬಣ್ಣ ಬದಲಿಸೋ ಗರ್ಭದಂತಹ ರೂಮಿನಲ್ಲಿ ಸುಮ್ಮನೇ ಬದಕುತ್ತಾ, ಕೊಟ್ಟ ಕುದುರೆಯನ್ನು ಏರದೆ, ಕ್ರೈಂ ಬ್ರಾಂಚು ಸೇರೋ ಖಯಾಲಿಯಲ್ಲಿ ಇದ್ದ ಈತನಿಗೆ ಈ ಭೂತದ ಅಜ್ನಾತ ಕೂಗು ಮತ್ತೆ ಹಳೇ ಬೇರಿನ ಆಳವನ್ನು ಪತ್ತೆ ಹಚ್ಚೋ ಗೀಳಿಗೆ ಹಚ್ಚುತ್ತದೆ. ಈತ ಎಲ್ಲ ಕಡೇ ಸರಿಯಾದ ಪ್ರಶ್ನೆಗಳನ್ನೇ ಕೇಳುತ್ತಾನೆ, ಎಲ್ಲ ಪತ್ತೆದಾರರಂತೆ ನಿರೀಕ್ಷಿತವಾದುದ್ದನ್ನೇ ಮಾಡುತ್ತಾನೆ, ಆದರೆ ನಿಗೂಢವಾಗಿ ಹಬ್ಬೋ ಕಾಲದ  ಕವಲಿನೊಳಗೆ ಇದ್ದಕ್ಕಿದ್ದಂತೆ ಮೂಕನಾಗುತ್ತಾನೆ. ನಿರ್ದೇಶಕ ಹೇಮಂತ್ ಕುಮಾರ್ ನಾಯಕನ ಸೋಲನ್ನು, ಆತ ಹತಾಶನಾಗೋ ಕ್ಷಣವನ್ನು, ಮತ್ತು ನೆರಳಿನ ಹಾಗೇ ಗುಪ್ತವಾಗಿ ನಮ್ಮೆಲ್ಲರನ್ನು ಆವರಿಸುತ್ತಾ ಇರೋ ಅಮೂರ್ತ ಸ್ವರೂಪದ  ನಮ್ಮ ಕಾಲದ ಕೇಡನ್ನು ಚಿತ್ರಿಸುರೋ ವೈಖರಿ ನನಗೆ ತೀರ ಹಿಡಿಸಿತು. ಹಂತಹಂತದಲ್ಲೂ ವಿಚಿತ್ರ ರೀತಿಯ ಡೆಡ್ಎಂಡ್ಗಳನ್ನೇ ಕಂಡು ಸ್ತಂಭೀಭೂತನಾಗೋ ನಾಯಕ, ಕ್ರಮೇಣ ಅರಿಯುತ್ತಾ ಬರುತ್ತಾನೆ, ಊಹಿಸಿದಂತೆ ಆಡಿದ ತಕ್ಷಣ ಗೆಲ್ಲಲು  ಆಗೋದು ಚೆಸ್ ಆಟದಲ್ಲಿ ಮಾತ್ರ, ಬದುಕಿನಲ್ಲಿ ಅಲ್ಲ ಎಂದು.  ಈ  ಸತ್ಯ ಹುಡುಕೋ ಅಪಾಯಕರಿ ಚಟ ಕೂಡ ಕಾಲದ ಜಾಡನ್ನೇ ಅನುಸರಿಸಿ ಮತ್ತೆ ಆತನನ್ನು ಭೂತದ ಎದೆಗೆ ಇಳಿಸುತ್ತದೆ. ಇಲ್ಲಿ ಸಿಗೋ ಮತ್ತೊಬ್ಬ ಅಂತದೇ ಖಯಾಲಿ ಇರೋ ವ್ಯಕ್ತಿ ಮುತ್ತಣ್ಣ(ಅನಂತ್ ನಾಗ್) ಸಹಾ ಹೀಗೆ ತಲೆಕೊರೆಯುತ್ತಿರುವ ಭೂತದ ನೊಣವನ್ನು ಹಿಂಡಿ, ಅದಕ್ಕೇ ಮುಕ್ತಿ ಕೊಡೋ ಪ್ರಯತ್ನದಲ್ಲಿ ಕೊನೆಯಾಗುವಂತಹ ಮನುಷ್ಯ. ಆದರೆ ಮತ್ತೆ ಆತನ ಹೆಣದ ಮೇಲೂ ಅದೇ ನೊಣ ಕೂತು ಗುಂಯ್ಞ್ಗುಡುತ್ತದೆ. ಮತ್ತೆ ನಮ್ಮ ಶ್ಯಾಮನನ್ನು ಕೆಣಕುತ್ತದೆ, ಆತನ ಅನ್ವೇಷಣೆಗೆ ಮತ್ತೆ ಬೆಂಕಿ ತಗಲುತ್ತದೆ.

ಇಲ್ಲಿ ನನ್ನ ಕುತೂಹಲ ಕೆರಳಿಸಿದ್ದು ಫ಼್ರೀಡ್ರಿಕ್ ನೀಚ್ಚನ ಎಟರನಲ್ಲ್ ರಿಟರ್ನ್ ಅಥವಾ ನಿರಂತರ ಪುನಾರವರ್ತನೆಯನ್ನು ಈ ಕಥಾ ಹಂದರವೂ ಮತ್ತೆ ಪುನಾರವರ್ತಿಸಿದ್ದು. 80ನೆಯ ಇಸವಿಯಲ್ಲಿ ಘಟಿಸಿದ ಘಟನೆಗಳನ್ನು. ಮತ್ತೆ ನಾಲ್ಕು ದಶಕಗಳ ತರುವಾಯ, ಇನ್ನೊಬ್ಬ, ಇನ್ನೊಮ್ಮೆ, ಆದರೆ ಆ ಕಾಲದ ಪತ್ತೆದಾರನಷ್ಟೇ ತೀವ್ರವಾಗಿ ಅನ್ವೇಷಿಸಲು ಯತ್ನಿಸುವುದು. ಆದರೆ ಸಮಸ್ಯೆ ಎಂದರೆ ಆಗಿನ ಘಟನೆಗಳನ್ನು ಈಗೆ ಹೇಗೆ ಅಂತ ನಿರೂಪಿಸುವುದು? ಅದಕ್ಕೇ ನಾಯಕ ಮತ್ತೆ ಮೊರೆಹೋಗುವುದು ಪುರಾತನ ಕಡತಗಳಿಗೇ! ಇದು ಕನ್ನಡ ಚಿತ್ರರಂಗಕ್ಕಂತೂ ತುಂಬಾ ತುಂಬಾ ಹೊಸ ಸಂಗತಿ; ಅಂದರೆ ಆ ಜಾಡಿನಲ್ಲಿ ಜಾರುತ್ತಲೇ, ಹಿಂದೆ ಆದ ಘಟನೆಗಳೆಲ್ಲ ಮತ್ತೆ ಜೀವ ಪಡೆದುಕೊಳ್ಳುತ್ತವೇ. 80ರ ಬಬ್ಲೂ, ನಾಯ್ಡು ಸಂಸಾರ, ಫ಼ರ್ನಾಂಡಿಸ್ ಇವೆರೆಲ್ಲರೂ ಮತ್ತೆ ತಮ್ಮ ತಮ್ಮ ಆ ಭೂತದ ಸ್ಥಾನದಲ್ಲೇ ಎದ್ದು, ಅಂದು ತಾವು ಮಾಡಿದ್ದ ಕ್ರಿಯೆಗಳಲ್ಲೇ ಪುನಃ ಪುನಃ ಮಗ್ನರಾಗಿಯೇ ಇರುತ್ತಾರೆ- ಕಾಲ ನಮ್ಮ ಕೈ ಜಾರಿದರೂ, ಅದರ ಭಾಗವಾಗಿರೋ ನಮ್ಮ ಕೆಲವು ಛೇಧಗಳು ಮಾತ್ರ ಆ ಭೂತದ ಯಂತ್ರಗಳಾಗಿ, ಆ ಕ್ರಿಯೆಗಳನ್ನೇ ಪದೇ-ಪದೇ ಮತ್ತೆ ಮತ್ತೆ ಮಾಡುತ್ತಲೇ ಇರುವಂತೆ!- ನಮ್ಮ ಹೀರೋಗೆ ಇವೆಲ್ಲವನ್ನು ಪರಿಶೀಲಿಸಲು ದೇವರಂತಹ ವಾಂಟೇಜ್ ಪಾಯಿಂಟ್ ಕಡೇ ತನಕ ಸಮರ್ಪಕವಾಗಿ ದಕ್ಕುವುದೇ ಇಲ್ಲ, ಅದೇ ಈ ಚಿತ್ರವನ್ನು ಅಷ್ಟು ಸೂಕ್ಶ್ಮ ಹಾಗೂ ವಿಶೇಷವಾಗಿಡುವುದು. ಈ ಅವಕಾಶವಿಲ್ಲದೇ ಆತನ ವಶವಾಗುವ ಸತ್ಯಗಳೆಲ್ಲ ತಿರುಗಾ ಮುರುಗಾ, ಕಪಟಿ ಕನ್ನಡಿಯ ಕೈಚಳಕದಂತೆ, ಅದಕ್ಕೋ ಏನೋ ಎಷ್ಟೋ ದೃಶ್ಯಗಳಲ್ಲಿ ಧಾರಳವಾಗಿ ಕನ್ನಡಿಯ ಬಿಂಬಗಳಿವೆ. ನೋಡಲು ನಿಜವಾಗಿ ಕಂಡರೂ ಕ್ಯಾಮೆರಾ ಝೂಮ್ ಔಟ್ ಆಗುತ್ತಲೇ, ಈ ಪಾತ್ರದಾರಿಗಳ ರಿಫ಼್ಲೆಕ್ಷನ್ನುಗಳ್ಳನ್ನು ನಾವು ನೋಡುತ್ತಿದ್ದದ್ದೂ ಅವರನ್ನಲ್ಲ ಅನ್ನೋ ಅರಿವಾಗುತ್ತದೆ. ಡಿಶ್ಟ್ರಾಟ್ ಆದ ಸತ್ಯದ ಸುತ್ತಾ ಸುತ್ತುತ್ತಾ ಇನ್ನೇನು ಕಂಡುಹಿಡಿದೇ ಬಿಟ್ಟ ಎನ್ನುವಾಗಲೇ, ಮತ್ತೊಮ್ಮೆ ಪರಿಚಯವಿಲ್ಲದ, ಆದರೆ ಆ ಭೂತಕಾಲದಲ್ಲಿ ಒಂದೇ ಸಮಯಕ್ಕೆ ಘಟಿಸಿದ್ದ, ಕಾಲದ ಇನ್ನೊಂದು ಕೋನದ ಅನಾವರಣವಾಗಿ ಈ ಪತ್ತೇದಾರ ನಿರಾಶನಾಗುತ್ತಾನೆ. ಆತನ ನಿರಾಶೆಯ ತುದಿಯನ್ನು, ಟ್ರಾಫಿಕ್ ಜಾಮಿನಲ್ಲಿ, ಟನಲ್ಲ್ನ ಒಳಗೆ ಸಿಕ್ಕಿ ಹಾಕಿಕೊಂಡ ಆಂಬುಲೆನ್ಸನ್ನು ಲಿಬೆರೇಟ್ ಮಾಡಲು ಹೆಣಗಿ ಹೆಣಗಿ, ರಕ್ತ ಮೆತ್ತಿಕೊಂಡಿರುವು ಬಟ್ಟೆಯಲ್ಲಿ, ವೇದನೆಯ ಆಳಕ್ಕಿಳಿಯುವ ದೃಶ್ಯ ತೀವ್ರವಾಗಿ ನೋಡುಗರ ಎದೆಗೆ ತಲುಪಿಸುತ್ತದೆ. ಫ಼ೆಲ್ಲನಿಯ ಎಯೇಟ್ ಆಂಡ್ ಆಫ಼್ ಸಿನಿಮಾದ ಮೊದಲ ಸೀನು ಇಲ್ಲಿ ನನಗೆ ನೆನೆಪಾಯಿತು. ಅದೊಂದು ಕನಸು, ಅಲ್ಲಿಯ ನಾಯಕ ಎಲ್ಲವನ್ನು ಬಿಟ್ಟು ಎಸ್ಕೇಪ್ ಆಗಲು ಆಕಾಶಕ್ಕೆ ಜೀಸಸ್ಸ್ನಂತೆ ಹಾರುವ ಆಸೆಯಲ್ಲಿರುತ್ತಾನೆ. ಆದರೆ ನಮ್ಮ ಶ್ಯಾಮ ಕನಸು ಕಾಣುತ್ತಿಲ್ಲ. ಸಿಕ್ಕಿ ಬಿದ್ದಿದ್ದಾನೆ. ಏನೇ ಮಾಡಿದರೂ, ಎಷ್ಟೇ ಶ್ರಮಿಸಿ, ಏಕಾಗ್ರತೆಯಲ್ಲಿ, ಸತ್ಯದ ಜಾಡು ಹಿಡಿದರು, ಅಲ್ಟಿಮೇಟ್ಲೀ ಈ ಸತ್ಯವೂ ಅತ್ಯಂತ ಶುದ್ಧ ರೂಪದಲ್ಲಿ ನಮಗೆ ದಕ್ಕುವುದೂ ಇಲ್ಲ ಮತ್ತೆ ನಮ್ಮನ್ನು ಬಿಟ್ಟು ಮಿಕ್ಯಾರಿಗೂ ಅದರ ಅವಶ್ಯಕತೆಯೂ ಇಲ್ಲ. ಈ ಸಿನಿಮಾವನ್ನೂ ಇಲ್ಲಿಗೇ ನಿಲ್ಲಿಸಿ ಬಿಟ್ಟಿದ್ದರೂ ಒಂದು ಅಸಂಗತ ನಾಟಕದಂತೆ, ವಕ್ರವಾದ ಅನುಭವವನ್ನು ಕೊಡುತ್ತಿತ್ತೋ ಏನೋ.

ಆದರೆ ಭೂತದ ಬೇರು ಅಷ್ಟು ಸುಲಭವಾಗಿ ಕೈವಶವಾಗುವುದಿಲ್ಲ. ಅದೆಷ್ಟು ಜಟಿಲ ಮತ್ತು ಭಯಂಕರವೆಂದರೆ, ಮುಖವಾಡ ನೋಡಿ ಮಗು ನಕ್ಕು, ಅದ ತೊಟ್ಟ ನಕಲಿಶ್ಯಾಮ  ಮೊಗವಾಡ ತೆಗೆದಾಗ, ಅಲ್ಲೊಂದು ಮಿಂಚುವ ಅಸಲೀ ಮುಖವನ್ನು ನಿರೀಕ್ಷಿಸುತ್ತಾ ಇರುತ್ತದೆ, ಆದರೆ ಮತ್ತೇ ಅಲ್ಲಿ ಇನ್ನೊಂದು ಮೊಗವಾಡವ ಕಂಡರೆ ಹೆದರಿ ನಡುಗುತ್ತದೆ. ಈ ಚಿತ್ರದಲ್ಲಿ ಸತ್ಯದ ಸಹಾವಾಸವೂ ಹಾಗೇ. ಅನಂತ್ ನಾಗ್ ಪಾತ್ರ, ಅಪಾಯಕಾರಿ ಮುಖ್ಯಮಂತ್ರಿಯ ಮುಖವಾಡ ತೊಟ್ಟು ಆತನ ಅಸಲೀ ಹೆಸರು ಹಿಡಿದ ಕೂಗುವ ಇನ್ನೊಂದು ದೃಶ್ಯ ಇಲ್ಲಿದೆ. ಎಷ್ಟು ಮಾರ್ಮಿಕವಾಗಿದೆ ಅದು! ಈ ಮಂತ್ರಿಯ ಭಕ್ತರೆಲ್ಲ, ಆತನ ಮುಖವಾಡ ಹಾಕಿ ಕುಣಿಯುತ್ತಿರುವಾಗ, ಈ ಮುತ್ತಣ್ಣ ಕೂಡ ಅದೇ ವೇಶದಲ್ಲಿ, ಮಹಲಿನಲ್ಲಿ ಎಲ್ಲರ ಮಾಸ್ಕಾಗಿರುವ ತನ್ನ ನಿಜ ಮುಖದಲ್ಲಿ ಕೈಬೀಸುತ್ತಿರುವ ಖಳನನ್ನು ನೋಡಿದ ಕೂಡಲೇ, ತನ್ನ ಮುಖವನ್ನು ಮುಖವಾಡಗಳ ಮಧ್ಯೆ ಬೆತ್ತಾಲಾಗಿಸಿ, ನಿಜದ ಕಲ್ಲು ಬಿಸಾಡುತ್ತಾನೆ(ಕೂಬ್ರಿಕ್ಕ್ನ Eyes Wide Shut  ಅಲ್ಲೂ ಇಂತಹ ಒಂದು ದೃಷ್ಯವಿದೆ ಆದರೆ ಅದರ ಆತ್ಮ ಮಾತ್ರ ಇದರ ತದ್ವಿರುದ್ಧ). ಅದಕ್ಕೇ ಆತ ತೆರೋ ಬೆಲೆ ಅಪಾರ. ರಕ್ತವರ್ಣದಲ್ಲಿ ಅದ್ದಿ ಹೋಗಿರುವಂತಹ ಕೋಣೆಯಲ್ಲಿ ಚಿತ್ರಹಿಂಸೆ ಅನುಭವಿಸಿ ಆತ ಸತ್ತೇ ಹೋದರೂ, ಈ ವಿನಾಶದಲ್ಲಿ ತನ್ನ ಹಿಂದಿನ ಉದಾಸಿನ ಪರ್ವವನ್ನು ಗೆದ್ದ ಖುಷಿ ಅವನಲ್ಲಿದೆ( ನಾವು ಹಾಗೇ ಊಹಿಸ ಬೇಕು. ಅಥವಾ ಆ ಸಾವಿಗೂ ಒಂದು ಬಿಡಿಗಾಸಿನ ಬೆಲೆಯೂ ಈ ಜಗತ್ತಿನಲ್ಲಿ ಇಲ್ಲ ಎಂದು ಊಹಿಸಿದರೂ ತಪ್ಪಾಗುವುದಿಲ್ಲವೇನೋ!).

ಈ ಸೀನಿನಲ್ಲಿ ಮುಖಾಮುಖಿಯಾಗುವ POLITICIAN Fernandez ಮತ್ತು Retired Police Officer ಮುತ್ತಣ್ಣ ಇಬ್ಬರೂ ಅಬ್ಸೆಷನ್ನಿಗೆ ಬಿದ್ದವರೇ. ಇಬ್ಬರೂ ಒಂದು ರೀತಿಯಲ್ಲಿ ಪಾಪಿಗಳೇ. ಒಬ್ಬ ಶಕ್ತಿಗಾಗಿ ಬಲಿಕೊಟ್ಟು, ಮತ್ತೆದೇ ಪಾಪದ ರಾಡಿಯಲ್ಲಿ ಹುಚ್ಚನಾಗುತ್ತಾ ಇದ್ದರೆ, ಮತ್ತೊಬ್ಬ ತಾನೆನೋ ಘನಂಧಾರಿ ಸತ್ಯವ ಕಂಡುಹಿಡಿದು ಲೋಕೋದ್ಧಾರ ಮಾಡುತ್ತೇನೇ ಅನ್ನೋ ಭ್ರಮೆಗೆ ಬಿದ್ದಿದ್ದಾನೆ.  ಅದಕ್ಕೇ ಈ ದ್ರುಷ್ಯ ಡಾಂಟೆಯ ನರಕದಂತೆ ಚಿತ್ರಿತವಾಗಿದೆ. ಕೆಂಪು-ಕೆಂಪು ಬೆಳಕಲ್ಲಿ ಮ್ಲಾನವಾಗಿ ಹೊಳೆಯುವ ಕೋಣೆಯಲ್ಲಿ ನಿಂತ ಖಳ, ಹಳೇ ರಾಕ್ಷಸನಂತೆ ನಗುತ್ತಾ, ತನ್ನ ಬಿಂಬವ ತಾನೇ ಕಣ್ಣಲ್ಲೇ ಚಪ್ಪರಿಸುತ್ತಾ ಅನ್ನುತ್ತಾನೆ, “ನನ್ನ ಗುರಿ ಬಹುಶಃ ಪ್ರಧಾನಿ ಆಗೋದು…”  ಆಗ ನೋವಲ್ಲಿ ನಲುಗಿದ್ದರೂ  ಮುತ್ತಣ್ಣ, “ ಒಂದು ಸಣ್ಣ ಕಲ್ಲು ಸಾಕು ನಿನ್ನ ಈ ಸುಳ್ಳು ಬಿಂಬನ ಪುಡಿ-ಪುಡಿ ಮಾಡಕ್ಕೇ…” “ಆದರೆ ಯಾರು ಮಾಡುತ್ತಾರೆ…?” ಈ ಮಾತಿಗೆ ಮುತ್ತಣ್ಣನಲ್ಲಿ ಉತ್ತರವಿಲ್ಲ. ಭೂತಕಾಲದಲ್ಲಿ ಉರುಳಿ, ಉರಿದು ಹೋದ ಹೆಣಗಳಿಗೆ ಲೆಕ್ಕವಿಟ್ಟವರ್ಯಾರು? ಈ ಕೊಲೆಗಡುಕರಿಗೆ ಯಾವ ಜಡ್ಜ್ಮೆಂಟ್ ಡೇ ಇದೆ? ಹಿಂದೆ ಆಗಿ ಹೋದದ್ದನ್ನು ನೋಡಲಾಗದೇ, ಮತ್ತೆ ಜೀವಿಸಲಾಗದೇ ಇರೋವಾಗ, ಆಗ ಆದ ಭಯಂಕರ ಕೊಲೆಗಳಿಗೆ ಹಾಗಾದರೆ ಯಾರೂ ಜವಾಬ್ಧಾರರೇ ಅಲ್ಲವೇ? ಅದಕ್ಕೇ ಅಚ್ಯುತಕುಮಾರರ ಪಾತ್ರ ಒಂದು ಕಡೆ ಹೇಳುತ್ತದೆ, “ಬೋಳೀ ಮಗ ಸಾರ್ರ್ ಅವ್ನು ತಲೆ ತೆಗ್ದು ಈ ಮಟ್ಟಿಗೆ ಬೆಳ್ದಿದ್ದಾನೆ, ಇಂತಹವರನ್ನೆಲ್ಲಾ ಹೊಡ್ದ್ ಹಾಕ್ ಬೇಕು…” ಇಲ್ಲಿ ಈ ಬೈಗುಳಕ್ಕೇ ಎಂತಹಾ ಶಕ್ತಿ ಇದೆ ಎಂದರೆ, ಅದಕ್ಕೇ ಸಮಾಜ ಕೊಟ್ಟಿರೋ ಅರ್ಥವನ್ನು ಮೀರಿ, ಅದೊಂದು ಶುದ್ಧ ಕೋಪವನ್ನು ಹೊಮ್ಮಿಸುವ ಸಂಕೇತವಾಗುತ್ತದೆ.  “ಹೊಡೀ ಬೇಕು ಅಂದ್ರೆ ಹೊಡ್ದ್ ಹಾಕ್ ಬೇಕು ಸುಮ್ನೆ ಪುಂಗಿ ಊದ್ ಬಾರ್ದು…” ಅನ್ನೋ ಹಾಗೇ Past ಅನ್ನೋದೇ ಇಲ್ಲ, ನಾವೇ ಸರ್ವಶಕ್ತರು ಅನ್ನೋ ಹಾಗೇ ಹೆಣಗಳ ಮೇಲೆ ಸಾಮ್ರಾಜ್ಯ ಕಟ್ಟೋ ಆಶಾಢಭೂತಿಗಳನ್ನ ಭೂತದಿಂದಲೂ ಬಚ್ಚಿಟ್ಟ, ಬಲವಂತವಾಗಿ ಮುಚ್ಚಿಟ್ಟ ರಕ್ತದ ಹೊಳೆ ಕೊಚ್ಚಿ ಹಾಕಿಬಿಡುತ್ತದೆ.

ಕೊನೆಯದಾಗಿ ಈ ಸಿನಿಮಾ ನೋಡುತ್ತಾ  ಅದ್ಭುತ  Film Noirs ಆಗಿರೋ  French Connectionನಲ್ಲಿ  Gene Hackman ಮತ್ತು  Roy Scheider  ಇಡೀ ಕಾರಲ್ಲೇ ರಾತ್ರಿಯೆಲ್ಲ, ಲೀಡ್ ಅನ್ನಿಸೋ ಶಂಕಿತರನ್ನು ಹಿಂಬಾಲಿಸೋದು,  David Fincherನ ಝೋಡಿಯಾಕ್ಕ್ ಅಲ್ಲಿ Jake Gyllenhall ಕೂಡ ಹೀಗೆ ಗೀಳಿಗೆ ಬಿದ್ದು ಮತ್ತೆ ಭೂತದ ಕ್ರೈಂಗಳ ಜಾಡು ಹಿಡಿದು, ಮತ್ತೆ ಮತ್ತೆ ಉನ್ಮಾದ ರೋಗಕ್ಕೆ ತುತ್ತಾದಂತೆ ವರ್ತಿಸೋದೆಲ್ಲ ನನ್ನಲ್ಲಿ ಪುನಾರರ್ತನೆಯಾಯಿತು. ಇದೆಷ್ಟರ ಮಟ್ಟಿಗೆ ನುವಾ ಅಂತಾ ಗೊತ್ತಿಲ್ಲ ನನಗೆ. ಆದರೆ ಶ್ಯಾಮ್ ಆ ಲೀಡನ್ನು follow ಮಾಡುತ್ತಾ ಕೌಂಟಿ ಕ್ಲಬ್ಬಿನೊಳಗೆ ಕಾಲಿಡುತ್ತಿದ್ದಂತೆಯೇ, ಹಿನ್ನಲೆ ಅಲ್ಲಿ ಓಡೋ  ನಾದ ನನಗೇ ತುಂಬಾ ಖುಶಿ ಕೊಟ್ಟಿತು, ಒಂದು ಪಕ್ಕಾ 80ರ ಕಾಲದ ಶ್ರೇಷ್ಟ Neo Noirನೆನೆಪಿಸೋ ಬಿಜಿಯಂ ಅದು. ಇನ್ನೊಂದು, ಈ ಸಿನಿಮಾದಲ್ಲಿ ಆಗೋ ಪ್ರತೀ ಮುಖ್ಯ ಘಟನೆಗಳು ಚಿತ್ರದ ಮುಖ್ಯ conflictsನ್ನೇ  reflect  ಮಾಡುತ್ತೇ. ಅನಂತ್ನಾಗ್ ಆ ಕೌಂಟಿ ಕ್ಲಬ್ಬಿನಲ್ಲಿ ಒಂದು ಕಾಲದಲ್ಲಿ ತನ್ನ ಕೊಂಬೆಗಳನ್ನು ಚಾಚುತ್ತಿದ್ದ ಆಲ್ದವೃಕ್ಷ ಈಗ ಹಬ್ಬಿ ಬೆಳೆದು ಹೆಮ್ಮರವಾಗಿರೋದನ್ನ ಗಮನಿಸಿ, ಇದೇ ನಲವತ್ತು ವರುಷಗಳ ರಹಸ್ಯವನ್ನೆಲ್ಲ ತನ್ನೊಳಗೇ ಜೀವಂತವಾಗಿಸಿರುವ ಸತ್ಯವನ್ನು ಮತ್ತೆ ಉದ್ಧೀಪನಗೊಳಿಸಿವುದು, ಹಾಗೇ ನೀಲಿ fiat ಕಾರು, ಕಪ್ಪು ಐ ಟ್ವೆಂಟಿಯನ್ನು ಹಿಂಬಾಲಿಸೋದು, ಭೂತ ಭವಿಷ್ಯದ ಬೆನ್ನು ಹತ್ತಿದಂತೆ… ಒಂದು ಸಿನಿಮಾಕ್ಕೇ ತೀರ ಬೇಕಾಗಿರೋ ಭಾಷೆಯಿದು

ರಿಷಿ ಅನ್ನೋ ನಟ ಇಷ್ಟು ದಿನ ಎಲ್ಲಿದ್ದರು? ಎಷ್ಟು subtle ಆಗಿ, ಎಲ್ಲೂ ಅತಿಯಾಗಿ ಆಡದೆ, ಕೇವಲ ಕಣ್ಣಲ್ಲೇ, ಮತ್ತು ನೋವು ಹಾಗೂ ಹತಾಶೆ ಮಿಶ್ರಿತ ನಗುವಲ್ಲಿ ಈ ಬದುಕಿಗೆ ಯಾವ ಘನಂಧಾರಿ ಅರ್ಥವೂ ಇಲ್ಲ ಆದರು ನಾವೆಲ್ಲ ಐಲುಪೈಲಾಗಿ ಏನೇನೋ ಅರ್ಥವ ಹೇರಲು ಹೆಣಗುತ್ತಿದ್ದೇವೆ ಅನ್ನೋ ಭಾವವನ್ನು ದಾಟಿಸೋ ಸಬ್ಲೈಮ್ ಆಕ್ಟರ್ ಈತ. ಅನಂತ್ನಾಗ್ ಬಗ್ಗೆ ಏನು ಹೇಳಿದರೂ ಅದೇ ಹಳೇ ಕ್ಲೀಶೆ ಆಗುತ್ತದೆ. ಅದಕ್ಕೇ ಇಷ್ಟು ಮಾತ್ರ ಹೇಳುವೆ,   ಬಾಬ್ ಡಿನಿರೋನನ್ನು ಇತ್ತೀಚಿಗೆ ಲಿಮಿಟ್ಲೆಸ್ಸ್ ಅನ್ನೋ ಸಿನಿಮಾದಲ್ಲಿ ನೋಡಿದಾಗ ಎಷ್ಟು ಖುಷಿ ಆಯ್ತೋ ಅಷ್ಟೇ ಖುಷಿ ಈ ಗಿಲ್ಟಿನ ಪಾಪಪ್ರಜ್ಞೆಯಲ್ಲಿ ಆತ್ಮಹತ್ಯಾಕಾರವಾಗಿ ಬದುಕುವ ಮುತ್ತಣ್ಣನನ್ನು ನೋಡಿದಾಗಲೂ ಆಯಿತು.

13 comments to “ಕವಲುದಾರಿಯಲ್ಲಿ ತಕ್ಷಣಕ್ಕೆ ಕಂಡದ್ದು”
 1. ಕವಲುದಾರಿಯನ್ನು ನಾನು ನಿನ್ನೆ ತಾನೆ ಓಟ್ ಮಾಡಿದ ನಂತರ ನೋಡಿದೆ. ಈ ವಿಮರ್ಶೆ ಅತಿಯಾದ ಬೌದ್ಧಿಕತೆಯ ಭಾರದಿಂದ ನಲುಗಿದೆ ಎಂದಷ್ಟೇ ಹೇಳಬಲ್ಲೆ. ಸಿನಿಮಾವೊಂದು ನಾವು ಪಡೆದ ತಿಳುವಳಿಕೆಯೆಲ್ಲವನ್ನು ಹೊರಹಾಕಲು ನೆಪವಾಗಬಾರದು. 8 1/2, ಫ್ರೆಂಚ್ ಕನೆಕ್ಷನ್ ಸಿನಿಮಾಗಳು ಕವಲುದಾರಿಯಜೊತೆ ಹೇಗೆ ಇಂಟರ್ ಟೆಕ್ಸ್ಚುಯಾಲಿಟಿ ಹೊಂದಿದೆ ಎಂಬುದೇ ಅರ್ಥವಾಗಲಿಲ್ಲ. ಸಿನಿಮಾ ಇನ್ನಷ್ಟು ಹ್ರಸ್ವವಾಗಬೇಕಿತ್ತು. ದೇಶಪಾಂಡೆಯ ಪಾತ್ರ ಅಸ್ಪಷ್ಟವಾಗಿ ಉಳಿದದ್ದು ಯಾಕೆ ಎಂಬುದೂ ಸ್ಪಷ್ಟವಾಗಲಿಲ್ಲ.

  • Not trying to display my intelligence I don need this page to do that… it’s so natural to me when I watch a film my mind goes back to all the corner of my memory and brings in strange yet subtle connections… and it’s like the language of the unconscious and I did make a perfect sense when I spoke on Nietzsche’s Eternal Recurrence and how the films reflects on the same theme; and if you read it carefully then you will understand how the article only suggests the reflection of other great fillm noirs at least scene wise; same goes for eight and half too. Plus writing on a film has never been objective where you write a summary of the film and say few things and make a criticism. It is an art like poetry. And I can’t write a review like our kannada dailys do. Writitng is like a river you can’t expect the river to flow in the direction you want it, it goes futher n further into the unexplored territories of darkness just because you never knew such terroties existed you can’t blame the river for flowing there!

   • ಪ್ರೀತಿಯ ಗೌತಮ್,
    ನಿಮ್ಮ ವಿಮರ್ಶೆ ನೋಡಿ ನಗುಬಂದಿತ್ತು… ನಿಮ್ಮ ಕಮೆಂಟ್ ನೋಡಿ ಆಶ್ಚರ್ಯ ಆಯ್ತು… ತುಂಬ ಸಿಟ್ಟಿನಿಂದ ಕಮೆಂಟ್ ಮಾಡಿದ್ದೀರಾ. ಒಳ್ಳೆಯದು.
    ಪುಟ್ಟಸ್ವಾಮಿ ಸರ್ ಹೇಳಿದ ಹಾಗೆ ನನಗೂ ನೀವು ಬರೆದಿದ್ದು ಸಿನಿಮಾ ವಿಮರ್ಶೆ ಅಲ್ಲ, ನಿಮ್ಮ ಇಂಟಲೆಕ್ಚುವಲ್ ಫ್ರೊಫೈಲ್ ಅಂತಲೇ ಅನಿಸಿತ್ತು. ಯಾಕೆಂದರೆ ನಾನೂ ಕಾವಲು ದಾರಿ ಸಿನಿಮಾ ನೋಡಿದ್ದೇನೆ… (ನೀವು ಇಲ್ಲಿ ಉಲ್ಲೇಖಿಸಿದ ಸಿನಿಮಾಗಳನ್ನು ನೋಡಿಲ್ಲ. ಹಾಗಾಗಿ ಅದರ ಕುರಿತು ನಾನು ಮಾತಾಡಲಾರೆ) ಇಲ್ಲಿ ನೀವು ಹೇಳಿದ ಸಬ್ ಟೆಕ್ಸ್ಟುಗಳು, ಅದು ಪ್ರತೀಕಿಸುವ ಭೂತ ಭವಿಷ್ಯದ ಸಂಕೇತಗಳು ಶೇ. 1೦ ರಷ್ಟೂ ಸಿನಿಮಾದಲ್ಲಿ ಇದ್ದಂತೆ ತೋರಲಿಲ್ಲ. ಹಾಗಂತ ಕವಲುದಾರಿ ಖಂಡಿತ ಕೆಟ್ಟ -ಕಳಪೆ ಸಿನಿಮಾ ಅಲ್ಲ. ಖಂಡಿತ ಆ ಸಿನಿಮಾ ಬಗ್ಗೆ ಒಂದಿಷ್ಟು ಒಳ್ಳೆಯ ಮಾತುಗಳನ್ನು ಆಡಬಹುದು. ಒಂದು ಸಾಧಾರಣ ಸಿನಿಮಾದಲ್ಲಿ ಇಲ್ಲದಿರುವುದನ್ನು ನೀವು ಆರೋಪಿಸಿ ಬರೆದಿದ್ದು ಬೌದ್ಧಿಕ ಪ್ರದರ್ಶನದ ಬರಹವಾಗಿಯೇ ಕಾಣಿಸಿತು ನನಗೂ. ಮತ್ತು ತೀರಾ ಕಾಗುಣಿತ ದೋಷಗಳಿದ್ದವು (ನನ್ನ ಮಟ್ಟಿಗೆ ಇದೂ ಬಹುಮುಖ್ಯ ಸಂಗತಿಯೇ).
    ಸಿನಿಮಾ ಬರವಣಿಗೆಯ ಕುರಿತು ಸಾಕಷ್ಟು ವಿಷಯಗಳನ್ನೂ ಹೇಳಿದ್ದೀರಾ… ನದಿಯ ಹಾಗೇ, ಹರಿವನ್ನು ನಿರ್ಧರಿಸಲಾಗುವುದಿಲ್ಲ ಅಂತೆಲ್ಲ… ಸಿನಿಮಾಗಳ ಕುರಿತು ಆಳವಾಗಿ ಅಧ್ಯಯನ ಮಾಡಿರುವ ಪುಟ್ಟಸ್ವಾಮಿ ಅವರಿಗೆ ಈ ಕುರಿತು ನಿಮಗಿಂತ ತುಂಬ ಚೆನ್ನಾಗಿಯೇ ತಿಳಿದಿದೆ ಎಂಬುದು ನನ್ನ ನಂಬಿಕೆ. ಅವರು ಕನ್ನಡ ಸಿನಿಮಾದ ಎಪ್ಪತ್ತೈದು ವರ್ಷಗಳ ಇತಿಹಾಸದ ಕುರಿತು ‘ಸಿನಿಮಾ ಯಾನ’ ಅಂತೊಂದು ಪುಸ್ತಕ ಬರೆದಿದ್ದಾರೆ. ಕನ್ನಡ ಚಿತ್ರರಂಗದ ಕುರಿತು ಅಧ್ಯಯನಕ್ಕಿರುವ ಕೆಲವೇ ಕೆಲವು ಅಧಿಕೃತ-ನಂಬಲರ್ಹ ಕೃತಿಗಳಲ್ಲಿ ಅದೂ ಒಂದು… ಅಗತ್ಯವೆನಿಸಿದರೆ ಅದನ್ನೊಮ್ಮೆ ಓದಿ. ಕನ್ನಡ ಸಿನಿಮಾ ಕುರಿತು ತಿಳಿದುಕೊಳ್ಳಲು ಸಹಾಯವಾಗಬಹುದು.
    ಹಾಗೆಯೇ ಇಂದು ಕನ್ನಡ ದಿನಪತ್ರಿಕೆಯಲ್ಲಿ ಬರುತ್ತಿರುವ ವಿಮರ್ಶೆಗಳಂತೆ ನಾನು ಬರೆಯಲಾರೆ ಎಂದೂ ಹೇಳಿದ್ದೀರ. ತುಂಬ ಸಂತೋಷ. ಕನ್ನಡ ದಿನಪತ್ರಿಕೆಗಳಲ್ಲಿ ಬರುತ್ತಿರುವ ಹಾಗೆಯೇ ಮತ್ತೆ ನೀವೂ ಬರೆಯಬೇಕಿಲ್ಲ. ಯಾಕೆಂದರೆ ಅಲ್ಲಿ ಈಗಾಗಲೇ ಬರುತ್ತಿದೆಯಲ್ಲ..
    ಆದರೆ ಇಂದಿನ ಕನ್ನಡ ದಿನಪತ್ರಿಕೆಗಳಲ್ಲಿ ಬರುವುದಕ್ಕಿಂತ ತುಂಬ ಕಳಪೆಯಾಗಿದೆ- ಫೇಕ್ ಆಗಿದೆ ನಿಮ್ಮ ಬರಹ. ದಯವಿಟ್ಟು ಅವುಗಳಿಗಿಂತ ಬೇರೆ ರೀತಿ ಬರೀತೀನಿ ಅಂದ ಹಾಗೆ ಅವುಗಳಿಗಿಂತ ಗಂಭೀರವಾಗೋ- ಚೆನ್ನಾಗಿಯೋ- ಹೆಚ್ಚು ಒಳನೋಟಗಳನ್ನಿಟ್ಟುಕೊಂಡೋ ಬರಿತೀನಿ ಅಂತಲೂ ಅಂದುಕೊಳ್ಳಿ. ಅದರಿಂದ ನಿಮಗೂ ಓದುಗರಿಗೂ ಉಪಯೋಗ ಆದೀತು.
    ಕೊನೆಯಲ್ಲೊಂದು ಮಾತು:
    ನದಿಯ ಹರಿವನ್ನು ಹೀಗೆಯೇ ಇರಬೇಕು ಎಂದು ನಿರ್ಧರಿಸಲಾಗದು ಎಂಬುದು ನೂರಕ್ಕೆ ನೂರು ನಿಜ.ಆದರೆ ಯಾರೋ ಒಬ್ಬ , ನದಿ ಹೊಸ ಹೊಸ ಜಾಗಗಳನ್ನು ಹುಡುಕುತ್ತ ಗುಡ್ಡ ಏರುತ್ತಿದೆ ಅಂತ ಹೇಳಿದರೆ ಅದು ಸುಳ್ಳು ಎಂದು ಹೇಳಬಹುದಲ್ಲವಾ? ಹೇಳಬೇಕಲ್ಲವಾ? ಹಾಗೆ ಹೇಳಿದರೆ ನದಿಯನ್ನು ಬ್ಲೇಮ್ ಮಾಡಿದ ಹಾಗಲ್ಲ ಅಲ್ಲವಾ?
    ಶುಭವಾಗಲಿ..
    ಇನ್ನಷ್ಟು ಸಿನಿಮಾಗಳನ್ನು ನೋಡಿ.. ಬರೆಯುತ್ತಿರಿ…

    • Dear Mr. Puttaswamy Kempegowda and Mr. Padmanabh Bhat,
     Nimmashtu chendhavaagi Kannadadhalli bareyuva samarthya nanagilla. Kshamisi. Addharindha naanu Englishinalle mundhuvareyuve. Samayaviddhare odhi.

     The mere act of watching a movie (or experiencing any art form, for that matter) is a state of taking a step out of your everyday mundane lives and experiencing something novel. An act of empathy, a sense of deja vu, an intense feeling of disgust, or a wide spectrum of emotions which the viewer (or reader; or listener) goes through along with the creator through his\her work.

     Now, for the sake of limited space, let’s limit out discussion to film analysis. I believe it has mainly two aspects. Writing a dry, indifferent, piecewise evaluation of cinema (as all traditional cinema critiques in mainstream media might attest to) is one.

     On the other hand, the watcher analysing various set pieces, examining the motivations and philosophies of characters, the influences on the director\script writer, the various nuances and the plot devices deployed, and ultimately, feeling a sense of identity with the particular piece of work.

     I believe the sheer joy of watching cinema lies in the latter.

     That is, when a movie really pushes you to think about it, dissect the underlying philosophies, draw parallels from life and\or other movies, and document them. In short, really relishing a cinema is to be its student (for it can teach you numerous things and, if you look at the above processes, how different is it from academia anyway).

     Please note: I’m not professing here, merely paraphrasing and distilling various interviews, writings and ruminations on cinema from greats like Roger Ebert and our very own Baradwaj Rangan.

     And I must congratulate and thank Mr. Gawtham Jyothsna here. For he has had insights watching Kavaludaari and has taken pains to elucidate his thoughts clearly on it in lay men terms, inviting us to view the movie from a different standpoint. For frankly it takes tremendous patience and effort to draw parallels from Nietzsche to Fellini to Fincher, and it is absolutely secondary whether the director has had thoughts about it or not.

     And sorry to say this, but shame on you Mr. Kempegowda and Mr. Bhat for instead of appreciating emerging writers in Kannada, and learning something new from them, you are being internet trolls (under the guise of orthodoxy, of course). Just take a moment both of you, what are your comments conveying to a lay reader, merely asking to not open themselves to new thoughts and novel interpretations, and just viewing a cinema as is. If that’s indeed objectively true (as people of your mindset may think), then what difference is there between watching a superbly crafted piece as Kavaludaari and the greatest film mankind has ever seen, Prem’s The Villain.

     My two cents.

     • Thank you Mr. Harsha for trying to see what I am attempting. Here are some old heads who can stoop so low when they cannot comprehend the write up and begin to call names such as Kalape and fake though they neither have any idea of how film studies is studied and how various literary theories are applied this only show the conventional mind set of our so called modern film crtics… no point in arguing with them for they have no idea how profoundly the process of thoughts are intertwined with the philosophies of life… they lack luck good for them! Lol

    • You lost me when you said my write up is fake.. just because you guys have not seen things that I have? I have no idea why you so stubborn to point out that I cannot perceive such themes… this is yet another form of dictatorship. PLUS you used big words such as “Olanota” and calling my write up as LIE? well sir you seems to have taken my comments very personally and calling my write up Lie? Even though you have not even cared to analyse the new school of thought I am proposing… I have nothing to say to you… Don assume things on your own and call something as fake or lie just because you don wanna agree… Have a good day sir

   • Absolutely correct . Nimage en kanide adhannu barediddiri . Adhu avarige aa view sikkilla antha bereyavara anisike thappu antha alla

 2. Agree puttaswamy kempegiwda views.
  ಚಿತ್ರದ ವಿಮರ್ಶೆ ಗಿಂತ!!!
  ನಿಮ್ಮ ಪಾಂಡಿತ್ಯ ಪ್ರದರ್ಶನ….. ಸಾರಿ

 3. ಮೈಲೂರ್ ಶ್ರೀನಿವಾಸ್ ಎಂಬ ಹೆಸರು, ಮುಖ್ಯಮಂತ್ರಿಗಳ ಎದುರು ಕುರುಬರ ಜಾನಪದ ನೃತ್ಯ, ಮುಖ್ಯಮಂತ್ರಿಗಳಿಗೆ ಕನ್ನಡದ ಮೇಲೆ ಬಾರಿ ಪ್ರೀತಿ ಎಂಬ ಸಂಭಾಷಣೆ, ಇವೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೂಚಿಸುವಂತಿದೆ. ರಾಜಕಾರಣಿಗಳನ್ನು ಅಣಕಿಸುವುದಕ್ಕೆ ಯಾವ ತಕರಾರು ಇಲ್ಲ. ಆದರೆ ಈ ಕೆಲಸಕ್ಕೆ ಜಾತಿಸೂಚಕ ಅಂಶಗಳನ್ನು ಮತ್ತು ಸಮುದಾಯವೊಂದರ ಸಾಂಸ್ಕೃತಿಕ ನೃತ್ಯವನ್ನು ಬಳಸಿಕೊಂಡಿರುವ ನಿರ್ದೇಶಕ ತುಂಬಾ ಕೀಳು ಅಭಿರುಚಿಯನಿರಬೇಕೆಂಬುದು ನನ್ನ ಅಭಿಪ್ರಾಯ. ಸಿನೆಮಾ ಸಂಕಲನ ಸಂಪೂರ್ಣವಾಗಿ ಸೋತಿದೆ. ಕವಿತೆಯಂತೆ ಸಿನೆಮಾ ಕೂಡ ಕೆಲವೊಮ್ಮೆ ಸಂಕ್ಷಿಪ್ತತೆ ಯನ್ನು ಅಳವಡಿಸಿಕೊಂಡರೆ ಚೆನ್ನ.

ಪ್ರತಿಕ್ರಿಯಿಸಿ