ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ – ಕಂತು ೬

ಪ್ರಯೋಗದಲ್ಲಿ ಒರಟು ಹಾಗೂ ಶಿಷ್ಟವಲ್ಲದ ದಲಿತ , ಪ್ರಾದೇಶಿಕ ಭಾಷೆಯನ್ನು ಇತರ ಭಾಷಾ ಪ್ರಭೇದಗಳಂತೆಯೇ ಸಮರ್ಥವಾಗಿ ಬಳಸಿ , ಕಣ್ಣೊಡಲ ತುಂಬುವ ಸಶಕ್ತ ರೂಪಕಗಳೊಡನೆ ದೇವನೂರು ಮಹಾದೇವ ಬರೆದ  ಕೃತಿ ‘ಕುಸುಮಬಾಲೆ’ ಕನ್ನಡ ಕಾದಂಬರಿ ಇತಿಹಾಸದಲ್ಲಿ a sudden leap  ಅನ್ನಿಸಿಕೊಂಡು ಹಲವು ಚರ್ಚೆಗೆ ದಾರಿಯಾಯಿತು. ತನ್ನ ವಿಶಿಷ್ಟವಾದ ಕಥನ ಕ್ರಮದಿಂದ ಓದುಗ ಮತ್ತು ವಿಮರ್ಶಕ ವರ್ಗಗಳೆರಡರಿಂದಲೂ ಪ್ರಶಂಶೆಗೆ ಪಾತ್ರವಾಯಿತು .
ಕುಸುಮಬಾಲೆ ಮೊತ್ತ ಮೊದಲನೆಯದಾಗಿ ೧೯೮೫ರಲ್ಲಿ ಸುದ್ದಿ ಸಂಗಾತಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು .  ಅದು ಪುಸ್ತಕರೂಪದಲ್ಲಿ ಹೊರಬಂದದ್ದು ೧೯೮೮ ರಲ್ಲಿ . ಇದಾದ ಮಾರನೆಯ ವರ್ಷದಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ಕೃತಿಕಾರ ದೇವನೂರು ಮಹಾದೇವರಿಗೆ  ಕನ್ನಡದಲ್ಲಿ ಆ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಲೇಖಕ ಅನ್ನುವ ಗರಿ ಮೂಡಿಸಿತು .
ಸರಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ಋತುಮಾನಕ್ಕಾಗಿ ಕುಸುಮಬಾಲೆಯನ್ನು ಓದಿದ್ದಾರೆ.

ಕುಸುಮಬಾಲೆ – ಓದು : ಎ. ಎಂ. ಶಿವಸ್ವಾಮಿ – ಕಂತು ೬ | Kusumabale – Reading : A. M. Shivsaway – Episode 6


ಕಂತು ೧ : https://ruthumana.com/2019/03/23/kusumabale-reading-a-m-shivsaway-episode-1/
ಕಂತು ೨ : https://ruthumana.com/2019/03/29/kusumabale-reading-a-m-shivaswamy-episode-2/
ಕಂತು ೩ : https://ruthumana.com/2019/04/03/kusumabale-reading-a-m-shivaswamy-episode-3/
ಕಂತು ೪ : https://ruthumana.com/2019/04/07/kusumabale-reading-a-m-shivaswamy-episode-4/
ಕಂತು ೫ : https://ruthumana.com/2019/04/12/kusumabale-reading-a-m-shivaswamy-episode-5/

One comment to “ಕುಸುಮಬಾಲೆ – ಓದು : ಎ.ಎಂ. ಶಿವಸ್ವಾಮಿ – ಕಂತು ೬”
  1. ಕುಸುಮಬಾಲೆಯ ಓದು ಕೇಳುತ್ತಾ ಕೇಳುತ್ತಾ ನಿಮ್ಮ ಕಂತುಗಳ ನಿರೀಕ್ಷೆಯಲ್ಲಿ ಕಾಯುವಂತೆ ಮಾಡಿವೆ. ಧಾರಾವಾಹಿಯ ಕೌತುಕತೆಯಂತೆ ನಡೆಸಿಕೊಂಡು ಹೋಗುತ್ತಿದೆ. ಪುಸ್ತಕ ಹಿಡಿದು ಓದಬೇಕೆಂಬ ಹುಚ್ಚು ಹತ್ತಿಸುತ್ತದೆ. ಮಗದೊಮ್ಮೆ ಪ್ರಣಾಮಗಳು .

ಪ್ರತಿಕ್ರಿಯಿಸಿ