ಕವನ ಚಿತ್ತಾರ : ಕೆ.ವಿ. ತಿರುಮಲೇಶ್ ಅವರ “ಮಂಡೂಕರಾಜ್ಯ”

`ಋತುಮಾನ’ಕ್ಕಾಗಿ ‘ಲೋಕಚರಿತ’ ನಿರ್ಮಿಸಿರುವ “ಕವನ ಚಿತ್ತಾರ” ಸರಣಿಯ ಈ ಚಿತ್ರ ಕವನವನ್ನು — ಕನ್ನಡದ ಪ್ರಮುಖ ಕವಿ ಕೆ.ವಿ. ತಿರುಮಲೇಶ ಅವರ `ಅವಧ’ ಸಂಕಲನದಿಂದ ಆಯ್ದುಕೊಂಡಿದ್ದೇವೆ. ಈ ಸಂಕಲನ 1986ರಲ್ಲಿ ಪ್ರಕಟವಾದದ್ದು. `ಮಂಡೂಕರಾಜ್ಯ’ ಎನ್ನುವ ಈ ಕವಿತೆ ಕನ್ನಡ ಕಾವ್ಯ ಲೋಕದಲ್ಲಿ ಸಿಗುವ ರಾಜಕೀಯ ವಿಡಂಬನೆಗಳ ಅಪರೂಪದ ಕವಿತೆಗಳಲ್ಲಿ ಬಹಳ ಭಿನ್ನವಾಗಿದೆ. ಇವತ್ತು ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ರಾಜಕೀಯ ದೊಂಬರಾಟಗಳಿಗೆ ಕನ್ನಡಿಯಂತಿದೆ. `ಗೆದ್ದ ಎತ್ತಿನ ಬಾಲ ಹಿಡಿಯುವುದು’ ಎಂಬ ನಾಣ್ನುಡಿಯಂತೆ, ಗೆದ್ದ ಪಕ್ಷವನ್ನು ಯಾವ ಎಗ್ಗೂ ಇಲ್ಲದೆ ಅನುಸರಿಸುವವರನ್ನು ಈ ಕವಿತೆ ಅಣಕಿಸುತ್ತದೆ.

ಇಂತಹ ಒಂದು ಕವನ ಚಿತ್ತಾರದ ವಿಡಿಯೋ ಪ್ರಸ್ತುತಿಗೆ ಕನಿಷ್ಠವೆಂದರೂ 5 ಸಾವಿರ ರೂಪಾಯಿಗಳಷ್ಟು ವೆಚ್ಚ ತಗಲುತ್ತದೆ. ಇಂತಹ ಪ್ರಯೋಗಗಳು ನಿಮಗಿಷ್ಟವಾದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು ಆರ್ಥಿಕ ನೆರವನ್ನು ಋತುಮಾನ ಅಪೇಕ್ಷಿಸುತ್ತದೆ. ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X



ಪ್ರತಿಕ್ರಿಯಿಸಿ