ಫ್ಯಾಸಿಸಂ: ನಾನು ಕೆಲವೊಮ್ಮೆ ಹೆದರುತ್ತೇನೆ

Jackson Pollock,

Jackson Pollock, “Untitled”, ca. 1943/ metmuseum.org

 

ನಾನು ಕೆಲವೊಮ್ಮೆ ಹೆದರುತ್ತೇನೆ ..

ಕುರೂಪಿಗಳು ಮತ್ತು ದೈತ್ಯರು ಧರಿಸಿರುವ
ಫ್ಯಾನ್ಸಿ ಡ್ರೆಸ್ನಲ್ಲಿ ಫ್ಯಾಸಿಸಂ ಬರುತ್ತದೆ
ಎಂದು ಜನ ಭಾವಿಸಿರುತ್ತಾರೆ,
ನಾಜಿಗಳ ಮುಗಿಯದ ಪ್ರದರ್ಶನದೊಳಗಿಂದ
ಎದ್ದು ಬರುವವರಂತೆ ..

ಫ್ಯಾಸಿಸಂ ನಿಮ್ಮ ಸ್ನೇಹಿತನಂತೆ ಬರುತ್ತದೆ..
ನಿಮ್ಮ ಗೌರವವನ್ನು ಪುನಃ ಸ್ಥಾಪಿಸಿ
ನೀವು ಹೆಮ್ಮೆ ಪಡುವಂತೆ ಮಾಡಿ
ನಿಮ್ಮ ಕೈಗೊಂದು ಕೆಲಸ ಕೊಟ್ಟು
ನೆರೆಹೊರೆಯವರನ್ನೇ ಇಲ್ಲವಾಗಿಸಿ
ನಿಮ್ಮ ಭವ್ಯ ಗತವನ್ನು ನೆನೆಪಿಸಿ
ನಿಮ್ಮೊಳಗಿನ ಠಕ್ಕನನ್ನು ಭ್ರಷ್ಟನನ್ನೂ ಇಲ್ಲವಾಗಿಸುತ್ತದೆ,
ನಿಮ್ಮಂತಿಲ್ಲದ ಎಲ್ಲವನ್ನೂ ಹೊಡೆದು ಹಾಕುತ್ತದೆ
ಹೊರತು ..

ಅದೆಂದೂ ಹೀಗೆ ಸಾರಿಕೊಂಡು ಬರುವುದಿಲ್ಲ,
“ನಮ್ಮ ಕಾರ್ಯಸೂಚಿ ನೈತಿಕ ಪೊಲೀಸ್ಗಿರಿ, ಸಾಮೂಹಿಕ ಜೈಲು ಶಿಕ್ಷೆ, ಸಾಗಾಣಿಕೆ, ಯುದ್ಧ ಮತ್ತು ಕಿರುಕುಳ”

ಮೈಕಲ್ ರೊಸೆನ್ -2014 | ಕನ್ನಡಕ್ಕೆ :  ಮಂಜುನಾಥ್ ನರಗುಂದ

 

One comment to “ಫ್ಯಾಸಿಸಂ: ನಾನು ಕೆಲವೊಮ್ಮೆ ಹೆದರುತ್ತೇನೆ”

Leave a Reply to prathibha nandakumar Cancel reply