ವಿಲಿಯಂ ಶೇಕ್ಸ್ಪಿಯರ್ ನ ದುರಂತ ನಾಟಕ ‘ಮಾಕ್ಬೆತ್’ ವಿಶ್ವದ ಹಲವಾರು ಚಲನಚಿತ್ರಗಳಿಗೆ ಸ್ಪೂರ್ತಿಯಾಗಿದೆ . ಹಲವು ಚಿತ್ರಗಳು ನೇರವಾಗಿ ಮ್ಯಾಕ್‌ಬೆತ್ ನಾಟಕವನ್ನೇ ಚಿತ್ರರೂಪದಲ್ಲಿ ತಂದರೆ ಇನ್ನೂ ಕೆಲವು ರೂಪಾಂತರಗೊಂಡು ತಮ್ಮ ತಮ್ಮ ನಾಡಿನ ಜನಜೀವನದೊಳಗೆ ಬೆರೆತಿರಬಹದಾದ ಮ್ಯಾಕ್‌ಬೆತ್ ನ ಕಥನವನ್ನು ತೆರೆಯ ಮೇಲೆ ತಂದಿವೆ . ಹೀಗೆ ರೂಪಾಂತರಗೊಂಡಿರುವ ಮೂರು ಚಲನ ಚಿತ್ರ ಅಕಿರಾ ಕುರುಸೋವಾನ ಜಪಾನಿ ಭಾಷೆಯ ಚಿತ್ರ’ ಕುಮೊನೊಸು-ಜೊ’ , ವಿಶಾಲ್ ಭಾರದ್ವಾಜ್ ನಿರ್ದೇಶದ ಹಿಂದಿ ಭಾಷೆಯ ‘ಮಕ್ಬೂಲ್’ ಮತ್ತು ಇತ್ತೀಚೆಗೆ ತುಳುವಿನಲ್ಲಿ ಬಂದ ಅಭಯ ಸಿಂಹ ನಿರ್ದೇಶದ ‘ಪಡ್ದಾಯಿ’ ಇವುಗಳ ಚಿತ್ರ ಪ್ರದರ್ಶನ ಮತ್ತು ಸಂವಾದ ಸುಚಿತ್ರ ಫಿಲ್ಮ್ ಸೊಸೈಟಿ ಬೆಂಗಳೂರಿನಲ್ಲಿ ಸುಚಿತ್ರದ ಸಹಯೋಗದೊಂದಿಗೆ ಇಂದು ಋತುಮಾನ ಹಮ್ಮಿಕೊಂಡಿದೆ . ಆ ಕುರಿತಂತೆ ಪ್ರಾರಂಭಿಕ ಓದಿಗಾಗಿ ವಿಶ್ವದಾದ್ಯಂತ ಮ್ಯಾಕ್‌ಬೆತ್ ಚಿತ್ರರೂಪ ಪಡೆದ ಇತಿಹಾಸವನ್ನಿಲ್ಲಿ ಚಿತ್ರ ಇತಿಹಾಸಕಾರ ಡೇವಿಡ್ ಬಾಂಡ್ ಪಟ್ಟಿ ಮಾಡಿದ್ದಾರೆ . ಓದಿ , ಬನ್ನಿ, ಸುಚಿತ್ರದಲ್ಲಿ ಬೆಳಿಗ್ಗೆ 10.30 ಕ್ಕೆ ಆರಂಭ.
ಮ್ಯಾಕ್‍ಬೆತ್ – ನಾಟಕ.
ಮಕ್ಕಳಿಲ್ಲದ ಮಹಾರಾಣಿ ಒಂದನೇ ಎಲಿಜಬೆತ್ ಕಾಲವಾದ ಮೂರು ವರುಷಗಳ ನಂತರ ಅಂದರೆ ೧೬೦೬ ರಲ್ಲಿ ವಿಲಿಯಂ ಷೇಕ್ಸ್ ಪಿಯರ್ ತನ್ನ ಮೊದಲ ಪ್ರದರ್ಶನ ನೀಡಿರಬಹುದೆಂಬ ಅಂದಾಜಿದೆ. ರಾಣಿಗೆ ಮಕ್ಕಳಿಲ್ಲದ ಕಾರಣ ಆಕೆಯ ಸೋದರ ಸಂಬಂಧಿ ಸ್ಕಾಟ್ಲೆಂಡಿನಲ್ಲಿ ಆರನೇ ಜೇಮ್ಸ್ ಎಂದು ಪ್ರಸಿದ್ದನಾದ ಒಂದನೆಯ ಜೇಮ್ಸ್ ಗೆ ಸಿಂಹಾಸನ ಒಲಿದು ಬಂದಿತ್ತು. ಹಾಗಾಗಿ ಸ್ಕಾಟ್ಲೆಂಡಿನ ಹಿನ್ನೆಲೆಯುಳ್ಳ ಕತೆಯನ್ನೇ ನೂತನ ಮಹಾರಾಜನಿಗೆ ಕಾಣಿಕೆಯಾಗಿ ಆಯ್ದುಕೊಳ್ಳಲಾಯಿತು. ಇದರ ಪರಿಣಾಮ ನಾಟಕದ ಖಳನಾಯಕ ಮ್ಯಾಕಬೆತ್ ನಲ್ಲ ಬದಲಿಗೆ ಅವನ ಸಹೋದ್ಯೋಗಿ (ಮತ್ತು ಸಂತ್ರಸ್ತ) ಬ್ಯಾಂಕೊ ಎಂಬ ಅಂಶವನ್ನ ಸೂಕ್ಷ್ಮವಾಗಿ ಉಲ್ಲೇಖಿಸಲಾಯಿತು. ಕತೆಯ ಬಹು ಮುಖ್ಯ ಅಂಶವಾದ ಮಾಟಗಾತಿಯರ ಎಳೆಯನ್ನು ಕೂಡ ರಾಜನನ್ನ ಮೆಚ್ಚಿಸಲೇ ಸೇರಿಸಲಾಯಿತು. ಆ ಕಾಲದಲ್ಲಿ ಯುರೋಪಿನ ತುಂಬೆಲ್ಲ ವಾಮಾಚಾರದ ಭಯ ಹರಡಿತ್ತು. ಸಾವಿರಾರು ಜನರನ್ನ (ಮುಖ್ಯವಾಗಿ ಹೆಂಗಸರನ್ನ) ವಿಚಾರಣೆಗೆ ಗುರಿಪಡಿಸಿ ಜೀವಂತ ಸುಟ್ಟು ಹಾಕಲು ಕಾರಣವಾದ ವಾಮಾಚಾರದ ಭಯ ಯುರೋಪನ್ನು ತಲ್ಲಣಿಸಿತ್ತು. ಮಾಟವನ್ನು ನಂಬುತ್ತಿದ್ದ ಜೇಮ್ಸ್ ೬ ಮತ್ತು ಜೇಮ್ಸ್ ೧ ( ಅವನು ಪ್ರತ್ಯೇಕವಾಗಿ ಎರಡೂ ದೇಶಗಳ ರಾಜನಾಗಿ ಗುರುತಿಸಿಕೊಳ್ಳುತ್ತಿದ್ದನು) ಅದರ ಕುರಿತು ಮಾಹಿತಿಪೂರ್ಣ ಪುಸ್ತಕವನ್ನೂ ಬರೆದಿದ್ದನು. ಅಲ್ಲದೆ, ಸ್ಕಾಟ್ಲೆಂಡಿನಲ್ಲಿ ನಡೆದ ಹಲವಾರು ವಾಮಚಾರಿಗಳ ವಿಚಾರಣೆಯಲ್ಲಿ ಸ್ವತಃ ಭಾಗವಹಿಸಿ ವಾಮಾಚಾರಿಎಂದು ಅನುಮಾನವಿರುವ ಜನರಿಗೆ ಚಿತ್ರಹಿಂಸೆ ನೀಡಲು ಶಿಫಾರಸ್ಸು ಮಾಡುತ್ತಿದ್ದನು. ಷೇಕ್ಸ್ ಪಿಯರ್ ತೀರಿಕೊಂಡ ೫೦ ವರುಷಗಳ ಬಳಿಕ, ಸಾಕಷ್ಟು ಅವಗಣನೆಯ ನಂತರ ಈ ನಾಟಕ ಮತ್ತೆ ಹೊಸ ರೂಪ ಪಡೆದಾಗ ಮಾಟಗಾತಿಯರ ಎಳೆ ನಾಟಕದ ಮುಖ್ಯ ಅಂಶಗಳಲ್ಲಿ ಒಂದಾಗಿ ಉಳಿದುಕೊಂಡಿತು. ಆದರೆ ಮೊದಲಿಗೆ ಹೋಲಿಸಿದರೆ ಈ ಮಾಟಗಾತಿಯರೀಗ ಹೆಚ್ಚು ಕ್ರೂರಿಗಳಾಗಿರಲಿಲ್ಲ. ಇಂಗ್ಲೆಂಡಿನಲ್ಲಿ ನಡೆದ ಪ್ರದರ್ಶನದಲ್ಲಿ ರಂಗದ ತುಂಬೆಲ್ಲ ತಂತಿಯಲ್ಲಿ ಅತ್ತಿಂದಿತ್ತ ಹಾರುತ್ತ, ತಮಗಾಗಿಯೇ ಹೊಸೆದ ವಿಶೇಷ ಸಂಗೀತ ಸಂಯೋಜನೆಯಿಂದ ಮಾಟಗಾತಿಯರ ಉಪಸ್ಥಿತಿ ನಾಟಕಕ್ಕೆ ಸ್ಪೆಷಲ್ ಎಫೆಕ್ಟಿನ ಕಳೆ ತಂದುಕೊಟ್ಟಿತು.
ಮ್ಯಾಕ್‍ಬೆತ್ ನ ಚಲನಚಿತ್ರ ಆವೃತ್ತಿಗಳು
ಮ್ಯಾಕ್‍ಬೆತ್ ನ ಮೊದಲ ಚಲನಚಿತ್ರ ಆವೃತ್ತಿ ಎಂದು ಕರೆಯಬಹುದಾದರೆ ಅದು ತಯಾರಾಗಿದ್ದು 1905 ರಲ್ಲಿ. ಲೈಬ್ರರಿ ಆಫ್ ಕಾಂಗ್ರೆಸ್ಸ್ ಆರ್ಚೈವ್ಸ್ ನಲ್ಲಿ ಉಳಿದಿರುವ ಈ ಆವೃತ್ತಿಯು ಕೇವಲ ಒಂದೂವರೆ ನಿಮಿಷದಾಗಿದ್ದು , ಮ್ಯಾಕ್‍ಬೆತ್ ಮತ್ತು ಮ್ಯಾಕ್ದಫ್ ನಡುವಿನ ಅಂತಿಮ ದೃಶ್ಯವನ್ನು ಒಳಗೊಂಡಿದೆ. ಇದನ್ನು 1908 ಮತ್ತು 1909 ರಲ್ಲಿ ಮತ್ತಷ್ಟು ಧೀರ್ಘ ಅವಧಿಗೆ (ಹತ್ತು ನಿಮಿಷಗಳಿಗೆ) ಮತ್ತೊಮ್ಮೆ (ಎರಡು ಬಾರಿ, ಫ್ರ್ರಾನ್ಸ್, ಮತ್ತು ಇಟಲಿ ಎರಡೂಕಡೆ) ಚಿತ್ರೀಕರಿಸಲಾಯಿತು, 1911 ರಲ್ಲಿ ಮತ್ತೆ( ಬ್ರಿಟಿಷ್ ರಂಗನಿರ್ಮಾಣದ ಒಂದು ದೃಶ್ಯ) 1913 ರಲ್ಲಿ ( ಜರ್ಮನಿಯಲ್ಲಿ ಮೊದಲ ಪೂರ್ಣ ಪ್ರಮಾಣದ ಚಲನಚಿತ್ರ) ಹಾಗು 1916ರಲ್ಲಿ (ಒಂದು ರಂಗನಿರ್ಮಾಣದ ಸಂಪೂರ್ಣ ರೆಕಾರ್ಡಿಂಗ್),1922 ರಲ್ಲಿ (ಎರಡು ಬಾರಿ ಬ್ರಿಟನ್ ಮತ್ತು ಜರ್ಮನಿ). ದುಃಖದ ವಿಷಯವೆಂದರೆ ಈ ಯಾವ “ಮೂಕಿ” ನಿರ್ಮಾಣಗಳು ಉಳಿದುಕೊಡಿಲ್ಲದೇ ಇರುವುದು.
ಮ್ಯಾಕ್‍ಬೆತ್ (1948)
ನಿರ್ದೇಶನ : ಆರ್ಸನ್ ವೆಲ್ಸ್ | ಭಾಷೆ : ಇಂಗ್ಲೀಷ್ | ದೇಶ : ಅಮೆರಿಕಾ
ಆಶ್ಚರ್ಯಕರವಾಗಿ ಆರ್ಸನ್ ವೆಲ್ಸ್ ನ ಮ್ಯಾಕ್‍ಬೆತ್ ಆವೃತ್ತಿಯು ನಿರ್ಮಾಣಗೊಂಡ ಮೊದಲ “ಶಬ್ಧಸಹಿತ” ಆವೃತ್ತಿಯಾಗಿದೆ. (1946 ರಲ್ಲಿ ಮತ್ತೊಂದರ ನಿರ್ಮಾಣವಾಗಿದೆ). ಇದು ವೆಲ್ಸ್ ನು ತಾನೇ ನಿರ್ಮಾಣ ಮಾಡಿ ಮುಖ್ಯ ಪಾತ್ರ ವಹಿಸಿದ ನಾಟಕವೊಂದರ ಮೇಲೆ ಆಧಾರಿತವಾಗಿದೆ. ಇದರ ನಿರ್ಮಾಣವನ್ನು ಅತಿ ವೇಗವಾಗಿ ಮತ್ತು ಅತ ಕಡಿಮೆ ವೆಚ್ಚದಲ್ಲಿ ಮಾಡಲಾಯಿತು. ಇದು ತನ್ನ ದುಂದುವೆಚ್ಚ ಮತ್ತು ಗಡುವುಗಳನ್ನು ನಿರ್ವಹಿಸಲು ವಿಫಲನಾಗಿ ಹಾಲಿವುಡ್ಡ್ ನಿಂದ ಗಡೀಪಾರಾಗಿದ್ದ ವೆಲ್ಸ್ ನು ಆ ಎರಡೂ ವಿಷಯಗಳಲ್ಲಿ ತನ್ನ ಜವಾಬ್ದಾರಿಯನ್ನು ನಿರ್ಮಾಪಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವಾಗಿತ್ತು. ಆದರೆ ಈ ಪ್ರಯತ್ನವು ಅಷ್ಟೊಂದು ಉತ್ತೇಜನಕರವಾಗಿ ಸ್ವೀಕೃತವಾಗಲಿಲ್ಲ ಮತ್ತು ಇಂದಿಗೂ ಕೂಡ ಇದು ವೆಲ್ಸ್ ನ ಅತ್ಯಂತ ಕಡಿಮೆ ಪ್ರಶಂಸೆ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಆದಾಗ್ಯೂ ಇದು “ಅಭಿವ್ಯಕ್ತಿವಾದಿ” ಎಂದು ಅಸ್ಪಷ್ಟವಾಗಿ ನಿರೂಪಿಸಬಹುದಾದ ಗುಣಲಕ್ಷಣಗಳನ್ನು ಹೊಂದಿದೆ, ಇದು ಚಿತ್ರಕ್ಕೆ ಒಂದು ಗಾಢವಾದ ವಾತವರಣವನ್ನು ಒದಗಿಸುತ್ತದೆ ಮತ್ತು ಅದೇ ಕಾರಣದಿಂದಾಗಿ ವೀಕ್ಷಿಸಲು ಯೋಗ್ಯವೆನಿಸುತ್ತದೆ.
ಮ್ಯಾಕ್‍ಬೆತ್ (1971)
ನಿರ್ದೇಶನ : ರೋಮನ್ ಪೋಲನ್ಸ್ಕಿ | ಭಾಷೆ : ಇಂಗ್ಲೀಷ್ | ದೇಶ : ಅಮೆರಿಕಾ ,ಇಂಗ್ಲೆಂಡ್
“ದ ಸ್ಕಾಟಿಷ್ ಪ್ಲೇ” ಗೆ ರಂಗಭೂಮಿಯಲ್ಲಿ ಒಳ್ಳೆಯ ಹೆಸರಿರಲಿಲ್ಲ (ಆ ಹೆಸರನ್ನು ಸಹ ಯಾರು ಹೇಳುತ್ತರಲಿಲ್ಲ) ಮತ್ತು ಅದು ಚಿತ್ರ ನಿರ್ಮಾಪಕರಿಗೂ ಸಹ ಅಂತಹ ಅದೃಷ್ಟವನ್ನು ತಂದುಕೊಟ್ಟಿರಲಿಲ್ಲ. ಪೋಲನ್ಸ್ಕಿಯ ಈ ಚಿತ್ರದಲ್ಲಿ ಚಿತ್ರಿತವಾದ ನಗ್ನತೆ ಮತ್ತು ಹಿಂಸೆ ಹಾಗೂ ಇವೆರಡರ ಜೊತೆಗೆ ಸಾಫ್ಟ್ ಪೋರ್ನ್ ಪತ್ರಿಕೆ “ಪ್ಲೇಬಾಯ್” ಇದರ ನಿರ್ಮಾಣದ ಭಾಗವಾಗಿದ್ದ ಕಾರಣವಾಗಿ ಇದಕ್ಕೆ ಅತ ಹೆಚ್ಚಿನ ಪ್ರಚಾರ ದೊರೆತರೂ ಸಹ ಇದು ಬಾಕ್ಸಾಫೀಸಿನಲ್ಲಿ ಸೋಲು ಅನುಭವಿಸಿತು ಮತ್ತು ಮುಂದಿನ ದಿನಗಳಲ್ಲಿ ಕೂಡ ಯಾವುದೇ ಒಳ್ಳೆಯ ಹೆಸರನ್ನು ಗಳಿಸಲಿಲ್ಲ. ಇದು ವಿಶೇಷವಾಗಿ ಪೋಲನ್ಸ್ಕಿ.ಯ ಸ್ವಂತ ಜೀವನದ ಕರಾಳ ಹಾಗು ಹಿಂಸಾತ್ಮಕ ಕಾಲಘಟ್ಟದಲ್ಲಿ ನಿರ್ಮಾಣ ಮಾಡಲ್ಪಟ್ಟಿತ್ತು; 1969 ರ ಕುಖ್ಯಾತ ಹಿಪ್ಪಿ ಗ್ಯಾಂಗ್ ಮಾಡಿದ ಗ್ಯಾಂಗ್ ಮರ್ಡರ್‍ಗಳಲ್ಲಿ ಒಂದಕ್ಕೆ ಗರ್ಭಿಣಿಯಾದ ಅವನ ಎರಡನೇ ಹೆಂಡತಿ ನಟಿ ಶರೋನ್ ಟಾಟೆ, ಬಲಿಯಾಗಿದ್ದಳು. ಆದುದರಿಂದ ವಿಶೇಷವಾಗಿ ಹಿಂಸೆಯನ್ನು ಬಿಂಬಿಸುವ ಈ ಸಿನಿಮಾವು ಇಂದಿಗೂ ಸಹ ಕೌಶಲ್ಯಪೂರ್ಣ ಸಿನಿಮಾಗಿಂತ ಹೆಚ್ಚಾಗಿ ಹತಾಶ ಚಿಕಿತ್ಸಾ ರೂಪಿ ಸಿನಿಮಾವಾಗಿ ಕಾಣಿಸುತ್ತದೆ.
ಮ್ಯಾಕ್‍ಬೆತ್ (2015)
ನಿರ್ದೇಶನ : ಜಸ್ಟಿನ್ ಕುರ್ಜೆಲ್ | ಭಾಷೆ : ಇಂಗ್ಲೀಷ್ | ದೇಶ : ಇಂಗ್ಲೆಂಡ್ , ಫ್ರಾನ್ಸ್
ಆಸ್ಟ್ರೇಲಿಯಾದ ನಿರ್ದೇಶಕನ ಈ ಸಿನೆಮಾ 2015 ರ ಕ್ಯಾನ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯ ಸುತ್ತಿಗೆ ಆಯ್ಕೆಯಾಗಿತ್ತು. ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು . ಅದರಲ್ಲೂ ಈ ಸಿನಿಮಾದಲ್ಲಿನ ಮ್ಯಾಕ್ ಬೆತ್ ನಟನೆಗೆ ನಟ ಮೈಕಲ್ ಫಸ್ಬೆಂಡರ್ ಮತ್ತು ಲೇಡಿ ಮ್ಯಾಕ್ ಬೆತ್ ನಟನೆಗೆ ನಟಿ ಮಾರಿಯಾನ್ ಕೊಟಿಲ್ಲಾರ್ಡ್ ಇವರಿಬ್ಬರಿಗೂ ಬಹಳ ಧನಾತ್ಮಕ ಪ್ರಶಂಸೆಗಳು ದೊರಕಿದವು. ಆದರೆ ಇವು ಯಾವುದೂ ಆ ನಾಟಕದ ಸುತ್ತ ಇರುವ ದುರಾದೃಷ್ಟದ ಪ್ರಭಾವಳಿಯನ್ನು ಕಡಿಮೆ ಮಾಡಲಿಲ್ಲ ಹಾಗಾಗಿ ಇದು ಕೂಡ ಬಾಕ್ಸಾಫೀಸಿನಲ್ಲಿ ಗಣನೀಯವಾದ ನಷ್ಟವನ್ನು ಎದುರಿಸಿತು.
ಮ್ಯಾಕ್‍ಬೆತ್ ನ ಸಿನಿಮಾ ರೂಪಾಂತರಗಳು
ಜೋ ಮ್ಯಾಕ್‍ಬೆತ್ (1955)
ನಿರ್ದೇಶನ ಕೆನ್ ಹ್ಯೂಗ್ಸ್ ( ಯು.ಎಸ್./ಬ್ರಿಟಿಷ್)
ಕಥೆಯನ್ನು ಭೂಗತ ಜಗತ್ತಿನ ಗ್ಯಾಂಗ್‍ಸ್ಟರ್ ಗಳ ಜಗತ್ತಿಗೆ ವರ್ಗಾಯಿಸಲಾಗುವ ಪ್ರಯತ್ನವನ್ನು ಇಲ್ಲಿ ಸ್ಪಷ್ಟವಾಗಿ ನಾವು ನೋಡುತ್ತೇವೆ. ಬಹುಶ ಸ್ವಲ್ಪ ಹೆಚ್ಚಾಗೇ ಇಲ್ಲಿ ಅದು ಪ್ರಕಟಗೊಂಡಿದೆ. ನನಗೆ ತಿಳಿದ ಮಟ್ಟಿಗೆ ಮೊದಲ ಬಾರಿಗೆ 1955 ರಲ್ಲಿ ತುಲನಾತ್ಮಕವಾಗಿ ಕಡಿಮೆ ವೆಚ್ಚದಲ್ಲಿ ಆದರೂ ಆಸ್ವಾದನೆಗೆ ದಕ್ಕೆಯಾಗದ ರೀತಿಯಲ್ಲಿ ಇದನ್ನು ಮಾಡಲಾಯಿತು. ಇದು ಯು.ಎಸ್‍ಮತ್ತು ಬ್ರಿಟಿಷ್ ನಟರಿಬ್ಬರನ್ನೂ ಒಳಗೊಂಡಿದೆ ಯು.ಎಸ್ ನಟರು ತಮ್ಮ ಉಚ್ಛಾರಣಾ ಶೈಲಿಯಿಂದ ಅಲ್ಪ ತೊಡಕನ್ನು ಅನುಭವಿಸುವಂತೆ ಕಂಡರೂ ಇದು ಉತ್ತಮ ಚಿತ್ರಕಥೆಯನ್ನು ಹೊಂದಿದೆ ಹಾಗು ಒಳ್ಳೆಯ ವೇಗದಲ್ಲಿ ಮುಂದೆ ಸಾಗುತ್ತದೆ, ಮಾಟಗಾರರ ಜಾಗವನ್ನು ಭವಿಷ್ಯ ನುಡಿಯುವ ಜ್ಯೋತಿಷಿಗಳು ಪಡೆದರೂ ಸಹ ಆಶ್ಷರ್ಯಕರವಾದ ರೀತಿಯಲ್ಲಿ ಇದು ಮೂಲ ಕಥೆಗೆ ಅತ್ಯಂತ ಸಮೀಪವಾಗಿದೆ.
ಕುಮೊನೊಸು-ಜೊ (1957)
ನಿರ್ದೇಶನ ಆಕಿರ ಕುರುಸೋವ ( ಜಪಾನಿ ಭಾಷೆ)
ಹೆಚ್ಚಾಗಿ ಇಂಗ್ಲೀಷ್ ನಲ್ಲಿ “ದ ಥ್ರೋನ್ ಆಫ್ ಬ್ಲಡ್” ಎಂದು ಪರಿಚಿತವಾಗಿರುವ ಈ ಚಿತ್ರದ ಮೂಲ ಶೀರ್ಷಿಕೆಯ ನಿಜವಾದ ಅರ್ಥ ” ಕಾಬ್‍ವೆಬ್ ಕ್ಯಾಸೆಲ್” ಇದನ್ನು ” ಶಿಚಿನ್ ನೊ ಸಮುರಾಯ್” ( ದ ಸೆವೆನ್ ಸಮುರಾಯ್) ಚಿತ್ರದ ಮೂರು ವರ್ಷಗಳ ನಂತರ ಕುರುಸೋವನು ಅವನ ಕ್ರಿಯಾಶೀಲತೆಯ ಉತ್ತುಂಗದಲ್ಲಿದ್ದಾಗ ಮತ್ತು ಈ ಚಿತ್ರದ ನಾಯಕನ ಪಾತ್ರಧಾರಿಯಾದ ನಟ ತೊಷಿರೊ ತೋಷಿರೋ ಮಿಫೂನ್ ನೊಡನೆಯೇ ಉತ್ತಮ ಭಾಂಧವ್ಯ ಹೊಂದಿದ್ದ ಕಾಲಘಟ್ಟದಲ್ಲಿ ನಿರ್ಮಿಸಲಾಯಿತು. ಸ್ಕಾಟ್ಲೆಂಡಿನ ಅರೆ ಬುಡಕಟ್ಟು ಜನಾಂಗದ ಕಥಾನಕದಿಂದ ಆಧುನಿಕ ಜಪಾನಿನ ವೈರಿ ಸಮರ ವೀರರ ನಡುವಿನ ಸಂಘರ್ಷದ ಕಥೆಗೆ ಮಾಡಿರುವ ಸ್ಥಿತ್ಯಂತರವು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ, ಅಲ್ಲದೆ ಬೇರೆ ಬೇರೆ ರೂಪಾಂತರಗಳಲ್ಲಿ ಕಾಣಲು ಸಿಗದೇ ಇರುವ ಅತೀಂದ್ರಿಯ ಶಕ್ತಿಯ ಅಂಶಗಳು ಇಲ್ಲಿ ನೋಡಲು ಸಿಗುತ್ತವೆ ಹಾಗಾಗಿ ಸರಳವಾಗಿ ಹೇಳಬೇಕೆಂದರೆ ಇದುವರೆಗೂ ಯಾವುದೇ ರೂಪಾಂತರದಲ್ಲಿ ನಾನು ನೋಡಿರುವ ಷೇಕ್ಸಪಿಯರ್ ನ ನಾಟಕದ ಅತ್ಯುತ್ತಮ ಆವೃತ್ತಿಯಾಗಿದೆ.
ಮೆನ್ ಆಫ್ ರೆಸ್ಪೆಕ್ಟ್ (1991)
ನಿರ್ದೇಶನ ವಿಲಿಯಂ ರೆಲ್ಲಿ ( ಯು.ಎಸ್)
ನಾಟಕದ ಆಧುನಿಕ ರೂಪಾಂತರಗಳ ಪರ್ವವನ್ನು ಆರಂಭ ಮಾಡಿದ ಶ್ರೇಯವನ್ನು ವಿಲಿಯಂ ರೆಲ್ಲಿಗೆ ನೀಡಬಹುದು, ಅವುಗಳಲ್ಲಿ ಬಹಳಷ್ಟು ಜೋ ಮ್ಯಾಕ್‍ಬೆತೆ ನಂತೆ ಕೆಲ ಮಟ್ಟದ ಅನಿವಾರ್ಯತೆಯಿಂದಾಗಿ ಗ್ಯಾಂಗ್‍ಸ್ಟರ್ ಗಳ ಕಥೆಯನ್ನು ಹೊಂದಿದೆ ಮತ್ತು ಅದೇ ಚರ್ವಿತ ಚರ್ವಣ ಕಥೆಯನ್ನು ಅದೇ ಶೈಲಿಯಲ್ಲಿ ಹೇಳುತ್ತವೆ. ಹಾಗಾಗಿ ಆ ಸಿನಿಮಾವು ಬಿಡುಗಡೆಯಾದಗಲೂ, ನಂತರದ ದಿನಗಳಲ್ಲೂ ಯಾವುದೇ ರೀತಿಯ ಆಸಕ್ತಿಯನ್ನು ಹುಟ್ಟಿಸಲಿಲ್ಲ.
ಸ್ಕಾಟ್ಲೆಂಡ್ ಪಾ (2001)
ನಿರ್ದೇಶನ ವಿಲಿಯಂ ಮೊರ್ರಿಸೆಟ್ (ಯು.ಎಸ್).
ಇದರ ಕಥೆಯು ಭೂಗತ ಜಗತ್ತಿನ ಗ್ಯಾಂಗ್‍ಸ್ಟರ್ ಗಳ ಬದಲಾಗಿ ಒಂದು ಫಾಸ್ಟ್ ಫುಡ್ ಅಂಗಡಿಯ ಹಿನ್ನಲೆಯಲ್ಲಿ ಈ ಚಿತ್ರದ ಕಥೆ ಇದೆ ಮತ್ತು ಅದನ್ನು ಸಿನಿಮಾವು ವ್ಯಂಗ್ಯ ಭರಿತ ಹಾಸ್ಯದ ಮೂಲಕ ತೋರಿಸುತ್ತದೆ. ಈ ಚಿತ್ರ 70 ರ ದಶಕದ ಸಂಗೀತ, ಅಲಂಕಾರ ಮತ್ತು ಉಡುಪಿನ ಅತ್ಯುತ್ತಮ ಗ್ರಹಿಕೆಯನ್ನು ಹೊಂದಿದೆ.
ಮಕ್ಬೂಲ್ (2004)
ನಿರ್ದೇಶನ ವಿಶಾಲ್ ಭಾರದ್ವಾಜ್ (ಹಿಂದಿ).
‘ವಿಶಾಲ್ ಭಾರದ್ವಾಜ್’ ಅವರ ಷೇಕ್ಸ್ಪಿಯರನ ಟ್ರಿಯಾಲಜಿ ಯ ಮೊದಲನೇ ಭಾಗವಾಗಿ ಬಂದ ಈ ಸಿನಿಮಾವು ಬಿಡುಗಡೆಯಾದಾಗ ಸಂಚಲನವನ್ನು ಉಂಟು ಮಾಡಿದರೂ ,ನಂತರದ ದಿನಗಳಲ್ಲಿ ಹಿಂತಿರುಗಿ ನೋಡಿದರೆ, ಮೂರು ಸಿನಿಮಾಗಳಲ್ಲಿ ಇದು ಅತ್ಯಂತ ನಿರಾಸಕ್ತವಾದುದು ಎಂದು ಭಾಸವಾಗುತ್ತದೆ. ವೈಯುಕ್ತಿಕವಾಗಿ ನನ್ನ ಮನಸ್ಸಿಗೆ ಇರ್ಫಾನ್ ಖಾನ್ ನ ಅಭಿನಯವು ಹೆಚ್ಚು ಹಿಡಿಸಲಿಲ್ಲ. ಹಾಗೆಯೆ ಈ ಸಿನಿಮಾದಲ್ಲಿನ ಪ್ರಮುಖ ಅಂಶ ಎಂದು ನನಗನಿಸುವುದು , ಮೂಲ ಕಥೆಯ ಮಾಟಗಾರರ ಬದಲಾಗಿ ಬಳಸಲಾಗಿರುವ ಭ್ರಷ್ಟ ಪೋಲೀಸ್ ಪೇದೆ ಮತ್ತು ಜ್ಯೋತಿಷಿಗಳ ಪಾತ್ರದಲ್ಲಿರುವ ‘ನಾಸಿರುದ್ದೀನ್ ಷಾ’ ಮತ್ತು ‘ಓಂಪುರಿ’ಯವರ ಹಾಸ್ಯಭರಿತ ಆಂಗಿಕ ಅಭಿನಯ.
ಮ್ಯಾಕ್‍ಬೆತ್ (2006)
ನಿರ್ದೇಶನ ಜೆಫ್ರಿ ರೈಟ್ (ಆಸ್ಟ್ರೇಲಿಯ)
ರೈಟ್, ಸ್ಟಾನ್ಲಿ ಕುಬ್ರಿಕ್‍ನ 1971 ರ ” ಕ್ಲಾಕ್ ವರ್ಕ್ ಆರೆಂಜ್” ಸಿನಿಮಾವನ್ನು ಸ್ಪಷ್ಟವಾಗಿ ಹೋಲುವ “ರೊಂಪರ್ ಸ್ಟೊಂಪರ್ (1992)” ಸಿನಿಮಾದ ವಿವಾದಾತ್ಮಕ ನಿರ್ದೇಶಕ. ಆದರೆ ಇವನ ಚಿತ್ರವು ಮೆಲ್ಬೋರ್ನ್‍ನ ನಿಯೊ ನಾಜಿ ಗ್ಯಾಂಗ್ ಗಳ ಲೋಕದ ಕಥೆಯನ್ನು ಆಧರಿಸಿದೆ. ಇವನ ಮ್ಯಾಕ್ ಬೆತ್ ಆಧುನಿಕ ವ್ಯವಸ್ಥೆಯಲ್ಲಿ ಮೂಡಿರುವ ಮತ್ತೊಂದು ಗ್ಯಾಂಗ್‍ಸ್ಟರ್ ಗಳ ಸಿನಿಮಾ ಆದರೂ ಸಹ ಷೇಕ್ಸಪಿಯರನ ಮೂಲ ಭಾಷೆಯನ್ನು ಸಮರ್ಥವಾಗಿ ಉಳಿಸಿಕೊಂಡಿದೆ.
ಷೇಕ್ಸಪಿಯರ್ ತೊಂಗ್ ತೈ (2012)
ನಿರ್ದೇಶನ ಇಂಗ್ ಕಾಂಜನ್ವಿತ್ (ಥಾಯ್)
ಇಂಗ್ಲೀಷ್ ನಲ್ಲಿ ‘ಷೇಕ್ಸಪಿಯರ್ ಮಸ್ಟ್ ಡೈ’ ಎಂದು ಜನಪ್ರಿಯ ವಾಗಿರುವ , ” ಸೌತ್ ಈಸ್ಟ್ ಏಶಿಯನ್ ಫಿಲ್ಮ್ ಫೆಸ್ಟಿವಲ್” (ಆಗ್ನೇಯ ಏಷ್ಯಾದ ಚಲನಚಿತ್ರ ಮಹೋತ್ಸವ) ನಲ್ಲಿ ” ಮಾಸ್ಟರ್ ಪೀಸ್” ಎಂಬ ಹೊಗಳಿಕೆಗೆ ಪಾತ್ರವಾದ ಈ ಸಿನಿಮಾವು ಮ್ಯಾಕ್ ಬೆತ್ ನ ಥಾಯ್ ರೂಪಾಂತರ. ಇದರ ಕಥೆಯು ಮೂಲದ ಕಥೆಯಂತೆ ಅತೀಂದ್ರಿಯ ಶಕ್ತಿಗಳು ಮತ್ತು ರಾಜಕೀಯ ಪಾತ್ರಗಳಿಗೆ ಸಮಾನಾಂತರ ಮಹತ್ತ್ವ ನೀಡುತ್ತದೆ ( ಇದನ್ನು ಥಾಯ್‍ಲ್ಯಾಂಡ್ ನಲ್ಲಿ ನಿಷೇಧಿಸಲಾಗಿತ್ತು) ಆದುದರಿಂದ ಇದು ಬೇರೆಲ್ಲಾ ರೂಪಾಂತರಗಳಿಗಿಂತ ಹೆಚ್ಚಾಗಿ ಷೇಕ್ಸಪಿಯರನ ಮೂಲ ಕಥೆಯನ್ನು ಹೋಲುತ್ತದೆ.
ವೀರಂ (2017)
ನಿರ್ದೇಶನ ಜೈರಾಜ್ (ಮಲಯಾಳಂ)
ವೀರಂ ಕುರುಸೋವನ 1957 ರೂಪಾಂತರವನ್ನು ಹೋಲುತ್ತದೆ, 13ನೇ ಶತಮಾನದಲ್ಲಿ ಮಲಬಾರ್ ಪ್ರದೇಶದಲ್ಲಿದ್ದ ಒಬ್ಬ ವೀರನ ನಿಜ ಜೀವನದ ಕಥೆಯನ್ನು ಆಧರಿಸಿ ಮಾಡಿರುವ ಈ ಸಿನಿಮಾವು ಬಹು ವೆಚ್ಚದ ನಿರ್ಮಾಣದ್ದಾಗಿದೆ. (ವಡಕ್ಕನ್ ಪಾಟ್ಟು ಗಳು) ಉತ್ತರ ಕೇರಳದಲ್ಲಿನ ಲಾವಣಿ ಹಾಡುಗಳಲ್ಲಿ ವರ್ಣಿಸುವ ಮಲಬಾರಿನ ವೀರನ ಕಥೆಯಾದ್ದರಿಂದ ಇದರಲ್ಲಿನ ಬಹಳಷ್ಟು ದೃಶ್ಯಗಳಲ್ಲಿ ಕೇರಳದ ಯುದ್ದ ಕಲೆ ಕಲರಿಪಯ್ಯಟ್ಟು ಕಾಣಸಿಗುತ್ತದೆ. ಅತಿ ಶ್ಲಾಘನೀಯ ವಿಮರ್ಶೆಗಳ ಹೊರತಾಗಿಯೂ ಇದು ಬಾಕ್ಸಾಫೀಸಿನಲ್ಲಿ ಹೆಚ್ಚಿನ ಸಫಲತೆಯನ್ನು ಕಾಣಲಿಲ್ಲ.
ಪಡ್ದಾಯಿ (2018)
ನಿರ್ದೇಶನ ಅಭಯ್ ಸಿಂಹ (ತುಳು)
ನಾನು ಇನ್ನೂ ತುಳು ಮ್ಯಾಕ್‍ಬೆತ್ ನೋಡಿಲ್ಲ ಆದರೆ ಅದನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದೇನೆ. ಮಂಗಳೂರಿನ ಬಂದರಿನ ಮೀನುಗಾರಿಕೆಯ ಹಿನ್ನಲೆಯಲ್ಲಿನ ಕಥೆಯು ನನಗೆ ಅತ್ಯುತ್ತಮ ವಿಷಯವೆಂದೆನಿಸುತ್ತದೆ, ಶೇಕ್ಸ್‌ಪಿಯರ್‌ನ ಮೂಲ ನಾಟಕದಲ್ಲಿನ ಬಹಳ ಮುಖ್ಯವಾದ ಮತ್ತು ಹೆಚ್ಚಾಗಿ ನಿರ್ಲಕ್ಷಿಸಲ್ಪಟ್ಟಿರುವ ಸಂವೇದನಾ ಚಿತ್ರಣ (sensory imagery) ವನ್ನುಈ ಚಿತ್ರ ಹೇಗೆ ತನ್ನಲ್ಲಿ ಹಿಡಿದಿಟ್ಟಿದೆ ಎಂಬುದನ್ನು ನೋಡಲು ನಾನು ಆಸಕ್ತಿ ಹೊಂದಿದ್ದೇನೆ. ಅಲ್ಲದೆ ಈ ಚಿತ್ರದಲ್ಲಿ ನನ್ನನ್ನು ಆಕರ್ಷಿಸಿದ ಮತ್ತೊಂದು ಸುಂದರ ಆಯಾಮವೆಂದರೆ ಇಲ್ಲಿನ ಮ್ಯಾಕ್‍ಬೆತ್ ಗಳು ಮೊದಲ ರೂಪಾಂತರ ಜೊ ಮ್ಯಾಕ್‍ಬೆತ್ ನಂತೆ ನವ ವಿವಾಹಿತರು.
*****
The play of Macbeth
William Shakespeare is thought to have been first performed in 1606, three years after the death of Queen Elizabeth I without children had led to the English throne passing to her cousin James I, who was already James VI of Scotland. The Scottish theme was therefore chosen as a compliment to the new King, who claimed descent, not from the villain Macbeth but from his colleague (and victim) Banquo, a fact that is carefully referred to in the play. The ‘witchcraft” theme was no doubt also included for the attention of the King. Much of Europe was in the grip at this time of a “witchcraft” scare that led to trials and burnings of thousands (mainly women) across Europe. James VI and I (he remained separately king of both countries) was a firm believer in the reality of witchcraft, had even himself written a learned book on the subject, involved himself personally in trials of witches that took place in Scotland and recommended the use of torture in the case of those suspected of witchcraft. When the play was revived, after years of neglect, some fifty years after Shakespeare’s death, the witches remained a focal element of the play in rather less grim fashion, as they were flown around the stage on wires in one of the earliest public theatre productions in England to feature elaborate scenery, specially written music and a whole panoply of special effects.
The film versions of Macbeth
The first known film version, if it can be called that, was made in 1905. The film, which survives in the Library of Congress archives, was just over a minute and featured just the final duel scene between Macbeth and Macduff. It was filmed at slightly greater length (ten minutes) in 1908 and again (twice, both in France and in Italy) in 1909, again in 1911 (a scene from a British stage production), in 1913 (in Germany, the first full-length feature) and in 1916 (a complete record of a stage production), in 1922 (twice, in Britain and Germany). Sadly none of these other “silent” productions are thought to have survived.
Macbeth (1948) directed by Orson Welles
Orson Welles’ version of Macbeth is rather surprisingly virtually the first “sound” version to have been made (there had been one other in 1946). It was based on an earlier theatre production that Welles had produced and starred the director himself in the title role. It was made rapidly and on a low budget; Welles, in exile from Hollywood on account of his extravagance and failure to meet deadlines, was trying to convince Hollywood producers of his sense of responsibility in both these respects. It was not well received and, to this day, remains one of Welles’ least admired films. It does however have a strong atmospheric feel to it, in a style that could be vaguely characterised as “expressionistic”, and remains very definitely worth viewing.
Macbeth (1971) directed by Roman Polanski
“The Scottish play” has an evil reputation in the theatre (the title itself is never spoken) and it has not proved very fortunate for film-makers either. Although this Polanski film received a great deal of publicity for its nudity and violence and the fact that it was partly produced by the soft-porn publisher Playboy, it was a flop at the box-office and has not gained much in reputation with the passing years. It was made at a particularly dark and violent time in Polanski’s own life; his pregnant second wife, actress Sharon Tate, had been one of the victims of a notorious hippy-gang murder in 1969 and this particularly violent film seemed, and still seems, more like desperate therapy than adroit film-making..
Macbeth (2015) directed by Justin Kurzel
It was selected to compete for the Palme d’Or at the 2015 Cannes Film Festival and received generally positive reviews from film critics, particularly for the performances of Michael Fassbender as Macbeth and Marion Cotillard as Lady Macbeth. It did not however entirely succeed in overcoming the jinx surrounding the play, and made a substantial loss at the box-office.
The film adaptations of Macbeth
Joe Macbeth (1955) directed by Ken Hughes (US/British)
The idea of transposing the story to the gagster underworld is a fairly obvious one, perhaps a little too obvious. It was done, for the first time as far as I know, in this relatively low-budget but enjoyable film noir in 1955. It combines US and British actors and the latter struggle a bit with their US accents but it is well-scripted and well-paced and, if the witches are replaced by a fortune-teller, it sticks surprisingly closely to the original story
Kumonosu-jō (1957) directed by Akira Kurosawa (Japanese)
Known generally in English as The Throne of Blood although the title of the film in fact means “Cobweb Castle” is one of the great films of Kurosawa, made when he was at the height of his creative powers, three years after Shichinin no Samurai (The Seven Samurai) and while he still benefited from the dynamic partnership with actor Toshiro Mifune who plays the protagonist. The transposition from a semi-tribal Scotland to an early modern Japan riven by conflicts between rival war-lords works perfectly and the supernatural elements of the story are not, as is often the case with adaptations, shied away from. It is, quite simply, the best version of the Shakespeare play, in any form, that I have seen.
Men of Respect (1991) directed by William Reilly (US)
William Reilly can fairly lay claim to have initiated the modern spate of adaptations, most of which, like Joe Macbeth, are set amongst gangsters and most of which, with a certain inevitability, tell much the same story in much the same way. The film however attracted no great interest either when it appeared or since and I have not been able to find a copy.
Scotland, Pa. (2001) directed by William Morrisette (US)
I have not been able to find this film either but would like to do so. It sets the story in a fast-food store rather than in the gangster underworld and plays it as something of a black comedy. PA is a funny, light hippie movie with an excellent grasp of ’70s music, decor, and dress.
Maqbool (2004) directed by Vishal Bharadwaj (Hindi)
The first I what has subsequently come to be known as Vishal Bharadwaj’s “Shakespeare trilogy” caused a good deal of stir when it first appeared but may turn out n retrospect to be the least interesting of the three. I was never very convinced personally by Irfan Khan’s performance and the highlight of the film remains for me the comic antics of Om Puri and Nasureddin Shah as corrupt cops cum astrologers who make a really rather original variant on the “witches” of the original.
Macbeth (2006) directed by Geoffrey Wright (Australian)
Wright was the controversial director of Romper Stomper (1992), a film which distinctly resembles Stanley Kubrick’s 1971 Clockwork Orange but set in ht world of Melbourne’s neo-Nazi gangs. His version of Macbeth is yet another gangster film but is unusual in retaining, despite it modern setting, much of the original Shakespearian language.
Shakespeare Tong Tai (2012) directed by Ing Kanjanavanit (Thai)
This Thai adaptation of Macbeth, known in English as “Shakespeare Must Die” was greeted as a “masterpiece” apparently at the Southeast Asian Film Festival. It seemingly privileges both the supernatural elements (black magic) and the political elements of the story (it was banned in Thailand) which brings it closer to Shakespeare’s original than most adaptations. I have not however been able to find a copy.
Veeram (2017) directed by Jayaraj (Malayalam)
Veeram, resembles Kurosawa’s 1957 adaptation, is on a more epic scale, basing the story round a real-life warrior in thirteenth-century Malabar, and drawing therefore on the Vadakkan Pattukal (Northern Ballads) where he appears as well as on Shakespeare’s play and including several scenes featuring the Keralan martial art Kalarippayattu. Despite rave reviews, it was not a success at the box-office, so it would seem there is life still in the jinx.
Paddayi (2018) directed by Abhaya Simha (Tulu)
I have not yet seen the Tulu Macbeth, but am looking forward to doing so. The idea of a setting among the coastal fisheries around Mangaluru seems to me an excellent one and I am interested to see how well the films catches the sensory imagery that is a very important, and often neglected, element in Shakespeare’s original play. There is also, for my purposes here, a pleasing symmetry. The film’s “Macbeths” are a newly-married couple as they were also in the first adaptation considered here, Joe Macbeth.
ಕನ್ನಡಾನುವಾದ : ಸುಮ ಅನಿಲ್
ಡೇವಿಡ್ ತನ್ನ ವೃತ್ತಿ ಜೀವನದಲ್ಲಿ ಈಗಾಗಲೇ ಸಂಶೋಧಕ, ಪ್ರಾಧ್ಯಾಪಕ, ಪತ್ರಕರ್ತ ಹೀಗೆ ಹಲವು ಪಾತ್ರಗಳನ್ನ ಅಭಿನಯಿಸಿದ್ದರೂ ತನ್ನನ್ನು ‘ಆಲೋಚನೆಯ ಹುಳ’ (thinking reed) ಎಂದಷ್ಟೇ ಕರೆದುಕೊಳ್ಳುತ್ತಾರೆ. ಮೂಲತಃ ಇಂಗ್ಲೇಂಡಿನವರು. ಬದುಕಿನ ಹೆಚ್ಚಿನ ಭಾಗ ಕಳೆದದ್ದು ಫ್ರಾನ್ಸಿನಲ್ಲಿ. ಸದ್ಯ ಬೆಂಗಳೂರು ವಾಸಿ.