ಪೌರಾಣಿಕ ಕಥಾವಸ್ತು ಹೊಂದಿರುವ ’ಅಗ್ನಿ ಮತ್ತು ಮಳೆ’ ನಾಟಕವು ಕಾರ್ನಾಡರ ಯಶಸ್ವಿ ನಾಟಕಗಳಲ್ಲಿ ಒಂದು. ಅಗ್ನಿ ಪೂಜಿಸುವ ಒಂದು ಸಮೂಹ. ನೀರು-ಮಳೆಯನ್ನು ಆರಾಧಿಸುವ ಮತ್ತೊಂದು ಸಮುದಾಯಗಳ ಸಂಘರ್ಷವನ್ನು ಕಟ್ಟಿಕೊಡುವ ನಾಟಕ. ತೋರಿಕೆ ಮತ್ತು ಅಂತರ್ ಸಂಬಂಧಗಳನ್ನು ಮುಖಾಮುಖಿ ಆಗಿಸುವ ನಾಟಕ ಗಿರೀಶರ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಭಾರತದಾದ್ಯಂತ ಹಲವು ಭಾಷೆಗಳಲ್ಲಿ, ಖ್ಯಾತ ನಿರ್ದೇಶಕರ ಕೈಯಲ್ಲಿ ಹಲವು ರೀತಿಯ ಪ್ರಯೋಗಗಳಿಗೆ ಒಳಗಾದ ಮಹಾಭಾರತದ ಸನ್ನಿವೇಶವೊಂದನ್ನು ಆಧರಿಸಿ ರಚಿಸಿದ ಈ ನಾಟಕವನ್ನು 1994ರಲ್ಲಿ ಕಾರ್ನಾಡರು ಪ್ರಕಟಿಸಿದ್ದರು. ಇದು ಮುಂದೆ, ಅಗ್ನಿ- ವರ್ಷ ಹೆಸರಿನಲ್ಲಿ ಹಿಂದಿಯಲ್ಲಿ ಚಲನಚಿತ್ರವಾಗಿ ತೆರೆಕಂಡಿತ್ತು.
ಅಗ್ನಿ ಮತ್ತು ಮಳೆಯ ಆಯ್ದ ಭಾಗವನ್ನು ಮೌನೇಶ್ ಬಡಿಗೇರ್ ಇಲ್ಲಿ ಓದಿದ್ಡಾರೆ
Nice
Super
Good
Good