ಡಾ| ವಸುಂಧರಾ ಫಿಲಿಯೋಜಾ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕರ್ನಾಟಕದ ಇತಿಹಾಸ ವಿದುಷಿ. ಹುಟ್ಟಿದ್ದು ಹಾವೇರಿಯಲ್ಲಿ ಪಂಡಿತ ಚೆನ್ನಬಸಪ್ಪ ಕವಲಿಯವರ ಮಗಳಾಗಿ, ತಂದೆಯಿಂದ ವಿದ್ವತ್ಪ್ರೇಮದ ಜೊತೆ ಸಂಗೀತ, ನಾಟಕಗಳೂ ರಕ್ತಗತವಾದವು. ಧಾರವಾಡದಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿ. ಇತಿಹಾಸ ಅಧ್ಯಯನ ಅವರನ್ನು ಫ್ರಾನ್ಸಿಗೆ ಒಯ್ದಿತು. ಅಲ್ಲಿ ಫಿಲಿಯೋಜಾರ ಜೊತೆ ಸಂಪರ್ಕ . ಪ್ರೊ| Jean Filiozatರ ಪುತ್ರ ವಿದ್ವಾಂಸ Pierre Fillozat ರ ಜೊತೆ ಮದುವೆ , ಇಬ್ಬರೂ ಜೊತೆಗೂಡಿ ಇತಿಹಾಸದ ಅನ್ವೇಷಣೆ. ಹಂಪೆಯ ವಿರೂಪಾಕ್ಷನ ವಿಶೇಷ ಸೆಳೆತ. ವಿಜಯನಗರದ ಸಂಗಮರ ಶಾಸನಗಳ ಬಗ್ಗೆ ಫ್ರೆಂಚ್ ಭಾಷೆಯಲ್ಲಿ ಹೊತ್ತಿಗೆ ಬರೆದು ವಸುಂಧರಾ ಡಾಕ್ಟರೇಟ್ ಪಡೆದರು. ತಿರುಮಂಗೈಯಾಳ್ವರ ಶಿಲ್ಪದ ಬಗ್ಗೆ ಪುಸ್ತಕ, ಪಾಯಿಶ (Paes) ಮತ್ತು (Noniz) ನ್ಯೂನಿರರ ಪ್ರವಾಸ ಕಥನಗಳ ಮರು ಭಾಷಾಂತರ. ಧಾರವಾಡ ಜಿಲ್ಲೆಯ ಕಾಳಾಮುಖ ಮಂದಿರಗಳ ಬಹುಮುಖ ಅಧ್ಯಯನ , ಹಂಪೆಯ ವಿಜಯ ವಿಠಲನ ದೇವಾಲಯದ ಬಗ್ಗೆ ವ್ಯಾಪಕ ಅಧ್ಯಯನ, ವಿಜಯನಗರದ ಬಗ್ಗೆ ಕನ್ನಡ, ಫ್ರೆಂಚ್, ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕಗಳ ಪ್ರಕಟಣೆ. ಇಷ್ಟೆಲ್ಲ ಡಾ| ವಸುಂಧರಾ ಅವರ ಸಾಧನೆ. ಋತುಮಾನಕ್ಕಾಗಿ ನಿಧಿನ್ ಓಲೀಕಾರ ಈ ಸಂದರ್ಶನವನ್ನು ನಡೆಸಿಕೊಟ್ಟಿದ್ದಾರೆ.
ಭಾಗ ೧ : https://ruthumana.com/2020/02/13/vasundhara-filioza-interview-part-1/
ಭಾಗ ೨ : https://ruthumana.com/2020/02/20/vasundhara-filioza-interview-part-2/
ಭಾಗ ೩ : https://ruthumana.com/2020/02/28/vasundhara-filioza-interview-part-3/
ಛಾಯಾಗ್ರಹಣ : ನಿತೇಶ್ ಕುಂಟಾಡಿ, ಶಶಿಕಾಂತ್ , ಶಂಕರ್ ಭಾಗವತ್ ಸಂಕಲನ : ವಿಜಯ್ ಹನಕೆರೆ