ಐದರ ಹೊಸ್ತಿಲಲ್ಲಿ ಋತುಮಾನ

ಒಂದು ವರ್ಷ ಪ್ರಾಯೋಗಿಕವಾಗಿ ನಡೆಸೋಣ ಎಂದು ಶುರು ಮಾಡಿದ ಋತುಮಾನ ಈಗ ನಾಲ್ಕು ವಸಂತಗಳನ್ನ ಪೂರೈಸಿದೆ. ಈ ಸಂಭ್ರಮ ಕ್ಕೆ ಕನ್ನಡ ಓದುಗ ವಲಯವೇ ಕಾರಣ. ಕಳೆದ ವರುಷ ಮಾತುಕೊಟ್ಟಂತೆ ಋತುಮಾನದ ಹೊಸ ಆಪ್ ನಲ್ಲಿ ಈಗಾಗಲೇ ಐದು ಈ ಬುಕ್ ಗಳನ್ನು ಪ್ರಕಟಿಸಲಾಗಿದ್ದು ಇನ್ನಷ್ಟು ವೈವಿಧ್ಯಮಯ ಪುಸ್ತಕಗಳನ್ನು ಡಿಜಿಟಲ್ ಲೋಕಕ್ಕೆ ಪರಿಚಯಿಸಲಾಗುವುದು. ಜೊತೆಗೆ ಆಡಿಯೋ ರೂಪದಲ್ಲೂ ಕನ್ನಡದ ಮಹತ್ವದ ಪುಸ್ತಕಗಳನ್ನು ತರುವ ಯೋಜನೆ ಜಾರಿಯಲ್ಲಿದೆ. ಋತುಮಾನ ಪ್ರಕಾಶನದ ಅಡಿಯಲ್ಲಿ ಬಿಡುಗಡೆ ಆಗಬೇಕಿದ್ದ ಹೊಸ ಪುಸ್ತಕ ಕೊರೋನಾ ಪಿಡುಗಿನಿಂದ ತುಸು ವಿಳಂಬ ವಾಗಿದೆ. ಇನ್ನೆರಡು ತಿಂಗಳಲ್ಲಿ ಹೊಸ ಪುಸ್ತಕ ನಿಮ್ಮ ಕೈಸೇರಲಿದೆ. ಕಳೆದ ವರುಷಕ್ಕೆ ಹೋಲಿಸಿದರೆ ಈ ವರುಷ ಆನ್ ಲೈನ್ ನಲ್ಲಿ ಸಾಹಿತ್ಯದ ಚಟುವಟಿಕೆ ಗಳು ಗರಿಗೆದರಿವೆ. ಬುಕ್ ಬ್ರಹ್ಮ, ಮೈ ಲ್ಯಾನ್ಗ್, ಆಲಿಸಿರಿ ಯಂತಹ ಯೋಜನೆ ಗಳು ಸಾಹಿತ್ಯಾಸಕ್ತರ ಸಂಭ್ರಮ ಹೆಚ್ಚಿಸಿವೆ. ಈ ಹೊಸ ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತ ಋತುಮಾನ ಐದನೇ ವರುಷ ವನ್ನ ಎದುರು ನೋಡುತ್ತಿದೆ. ಈ ಸಂಭ್ರಮದ ನೆಪದಲ್ಲಿ ಕನ್ನಡ ನವ್ಯ ಸಾಹಿತ್ಯ ವನ್ನು ಬಹುಮಟ್ಟಿಗೆ ಪ್ರಭಾವಿಸಿದ ಕಾಫ್ಕಾ ನ ರೂಪಾಂತರ ಕಿರು ಕಾದಂಬರಿ ಈ-ಬುಕ್ ರೂಪದಲ್ಲಿ ಲಭ್ಯವಿದೆ. ಗಿರಿ ಪರಿಣಾಮಕಾರಿಯಾಗಿ ಅನುವಾದಿಸಿರುವ ಈ ಕಾದಂಬರಿ ಯನ್ನ ಋತುಮಾನ ಆಪ್ ನಲ್ಲಿ ನೀವು ಓದಬಹುದು. ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.

Android : https://play.google.com/store/apps/details?id=ruthumana.app

ಎಂದು,

ಋತುಮಾನ ತಂಡ

ಪ್ರತಿಕ್ರಿಯಿಸಿ