“ಭೃಂಗಿ ನಡೆಯ ಮಾಲಿ” ಈಗ ಋತುಮಾನ ಮೊಬೈಲ್ ಆ್ಯಪ್ ನಲ್ಲಿ ಕೊಳ್ಳಲು ಲಭ್ಯ

ಋತುಮಾನ ಮತ್ತು ಟೆಕ್ ಫಿಜ಼್ ಸಹಯೋಗದಲ್ಲಿ ತಯಾರಾಗಿರುವ ಮೊದಲ ಇ – ಪುಸ್ತಕ “ಭೃಂಗಿ ನಡೆಯ ಮಾಲಿ” ಈಗ ಋತುಮಾನ ಮೊಬೈಲ್ ಆ್ಯಪ್ ನಲ್ಲಿ ಕೊಳ್ಳಲು ಲಭ್ಯವಿದೆ. . ಪ್ರೀತಿಯಿಂದ ಮಾಲಿ ಎಂದೇ ಪರಿಚಿರಾಗಿರುವ ಕೊಳಲು ವಾದಕ ಟಿ ಆರ್ ಮಹಾಲಿಂಗಂ ಅವರನ್ನು ಕುರಿತ ಪುಸ್ತಕ. ಅವರ ಬಗ್ಗೆ ಬಂದ ಬರಹಗಳು, ಅವರೇ ಬರೆದ ಲೇಖನಗಳು, ಅವರನ್ನು ಬಲ್ಲವರು ಆಡಿದ ಮಾತುಗಳು, ಅವರ ಜೊತೆಗೆ ಸಂಗೀತದಲ್ಲಿ ತೊಡಗಿಸಿಕೊಂಡವರು ಹಂಚಿಕೊಂಡ ಮಾತುಗಳು ಇವೆಲ್ಲಾ ಸೇರಿ ಈ ಪುಸ್ತಕ ಆಗಿದೆ. ಅವರ ವಿಚಿತ್ರ ವ್ಯಕ್ತಿತ್ವ, ಅಪ್ರತಿಮ ಸಂಗೀತ, ವಿಭಿನ್ನ ಆಸಕ್ತಿಗಳು ಹೀಗೆ ಹಲವು ಹತ್ತು ಮುಖಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿ ನಡೆದಿದೆ.

 

ಭೃಂಗಿ ನಡೆ ಎನ್ನುವುದು ಕವಿ ಪುತಿನ ಅವರ ಮಾತು. ಶಿವನ ಆಸ್ಥಾನದ ನರ್ತಕ ಭಂಗಿಗೆ ಮೂರು ಕಾಲು. ಎರಡು ಸಮಕಾಲಗಳೊಂದಿಗೆ ಒಂದು ಗಿಡ್ಡ ಕಾಲು. ಅವನ ನರ್ತನ ರೂಢಿಗತಿಯ ಪರಿಚಿತವಲಯದಲ್ಲೇ ಸಾಗುತ್ತಿರುವಾಗ ಅಚಾನಕ್ಕಾಗಿ ಈ ಗಿಡ್ಡಗಾಲು ತೊಡರಿಕೊಂಡು ಆ ನೃತ್ಯಕ್ಕೆ ಅನಿರೀಕ್ಷಿತ ಗತಿಯೊದಗಿಬಿಡುತ್ತದೆ. ನೃತ್ಯ ಪರಿಚಿತ ವಲಯದಿಂದ ಹೊರಬಿದ್ದು ತನ್ನ ಕೆಡವಿ ನಿಲ್ಲುತ್ತದೆ. ಕಲೆಗಾರನೂ ರಸಿಕನೂ ತನ್ನ ಕೈಲಿರದ ಈ ಕ್ಷಣಕ್ಕಾಗಿ ತಾನೇ ಕಾಯುವುದು. ಮಾಲಿಯನ್ನು ಕುರಿತು ಈ ಅಂಶವನ್ನು ಸೂಚಿಸಿದ್ದು ಇಂಥದೇ ವಿಸ್ಮಯದ ಗತಿಯ ಸಾಹಿತಿ ದೇವನೂರ ಮಹಾದೇವ. ಮಾಲಿಯ ಸಂಗೀತದಲ್ಲಿ ಸಂಭವಿಸುವ ಅನಿರೀಕ್ಷಿತ ತಿರುವುಗಳನ್ನೂ ಅದು ಒತ್ತರಿಸುವ ಗಡಿಗಳನ್ನೂ ಕಂಡವರಿಗೆ ಈ ಹೆಸರಿನ ಔಚಿತ್ಯ ಸ್ಪಷ್ಟ.

 

ಋತುಮಾನ ಆ್ಯಪ್ ನಲ್ಲಿ ‘E Books’ ವಿಭಾಗದಲ್ಲಿ ನೀವಿದನ್ನು ಕೊಳ್ಳಬಹುದು. ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.

Download RUTHUMANA App here :

ಪ್ರತಿಕ್ರಿಯಿಸಿ