ಬೇಂದ್ರೆಯವರೊಡನೆ – ಕಂತು ೧ : ಕುಸುಮಾಕರ ದೇವರಗೆಣ್ಣೂರು

ಕುಸುಮಾಕರ ದೇವರಗೆಣ್ಣೂರು ಕಾವ್ಯನಾಮದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಾಹಿತ್ಯ ಕೃಷಿ ನಡೆಸಿದ ಡಾ. ವಸಂತ ಅನಂತ ದಿವಾಣಜಿ ಕನ್ನಡದ ಓದುಗರಿಗೆ `ಸ್ವಪ್ನನೌಕೆ~ (ಕವನ ಸಂಕಲನ), `ನಾಲ್ಕನೆಯ ಆಯಾಮ~ (ಕಾದಂಬರಿ), `ದುರ್ದಮ್ಯ~ (ಅನುವಾದ) ಮುಂತಾದ ಮಹತ್ವದ ಕೃತಿಗಳನ್ನು ನೀಡಿದವರು. ಬೇಂದ್ರೆಯವರ ಜೊತೆಗಿನ ಒಡನಾಟದ ಅನುಭವದ ಕಥನ ‘ಬೇಂದ್ರೆಯವರೊಡನೆ’ ಸಂವಾದಿಸಿದ ದಟ್ಟ ಅನುಭವವನ್ನು ಹಲವು ಕಂತುಗಳಲ್ಲಿ ಅವರದೇ ಮಾತುಗಳಲ್ಲಿ ಋತುಮಾನದಲ್ಲಿ ಕೇಳಿ ..

One comment to “ಬೇಂದ್ರೆಯವರೊಡನೆ – ಕಂತು ೧ : ಕುಸುಮಾಕರ ದೇವರಗೆಣ್ಣೂರು”
  1. ಕುಸುಮಾಕರ ದೇವರಗೆಣ್ಣೂರ ರವರು ಬೇಂದ್ರೆ ಬಗ್ಗೆ ಅವರೊಡನೆ ಒಡನಾಡಿದ ಸಮಯದಲ್ಲಿನ ಕೆಲವು ಪ್ರಸಂಗಗಳನ್ನು ನೆನಪಿಸಿಕೊಂಡು ಆಡಿದ ಮಾತುಗಳ ಮೊದಲ ಕಂತನ್ನು ಕೇಳಿದೆ. ಖುಷಿ ಆಯಿತು. ಧ್ವನಿಮುದ್ರಣ ಮತ್ತು ಅವರ ಭಾ಼ಷೆ ಕೆಲವು ಕಡೆ ನನ್ನ ಕೇಳಿಕೆಗೆ ಅಸ್ಪಷ್ಟವಾಯಿತು. ವರಕವಿ ಬೇಂದ್ರೆಯವರು ನಿಜವಾದ ಅರ್ಥದಲ್ಲಿ ಶಬ್ದ ಗಾರುಡಿಗ ಎಂಬುದು ಇದರಿಂದ ಸ್ಪಷ್ಟ ಆಯಿತು.

ಪ್ರತಿಕ್ರಿಯಿಸಿ