ಹೊಸ e-ಪುಸ್ತಕ “ಹರಪ್ಪ : ಡಿಎನ್ಎ ನುಡಿದ‌ ಸತ್ಯ”

ಭಾರತದ ಪ್ರಾಚೀನ ಇತಿಹಾಸದ ಕುರಿತಂತೆ ಕೊನೆ ಮೊದಲಿಲ್ಲದ ಹಲವು ಚರ್ಚೆಗಳು ಕಳೆದೊಂದು ಶತಮಾನದುದ್ದಕ್ಕೂ ನಡೆದಿವೆ. ಅನೇಕ ತಪ್ಪು ಕಲ್ಪನೆಗಳು, ತಪ್ಪು ಗ್ರಹಿಕೆಗಳು ಸಹ ಚಾಲ್ತಿಯಲ್ಲಿವೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆಯುತ್ತಿರುವ ವಂಶವಾಹಿ ಸಂಶೋಧನೆಗಳು ಭಾರತದ ಗತಕಾಲದ ಬಹುಹಿಂದಿನ ಕೆಲವು ಒಗಟುಗಳನ್ನು ಬಿಡಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ.
ಹರಿಯಾಣದ ಹಿಸ್ಸಾರ್ ಜಿಲ್ಲೆಯ ರಾಖಿಗಡಿಯಲ್ಲಿ ಹರಪ್ಪ ನಾಗರಿಕತೆ ಅಥವಾ ಸಿಂಧೂ ಬಯಲಿನ ನಾಗರಿಕತೆಗೆ ಸಂಬಂಧಿಸಿದ ಪುರಾತನ ವಂಶವಾಹಿಗಳು ದೊರೆತು ಅವುಗಳ ಮೇಲಿನ ತಳಿ ಸಂಶೋಧನೆಯ ಫಲಿತಾಂಶಗಳು ನಮ್ಮ ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲಿವೆ. ಕಳೆದ 10-15 ವರ್ಷಗಳಲ್ಲಿ ಭಾರತದ ನೂರಾರು ಜನಜಾತಿಗಳ ಕುರಿತು ನಡೆದಿರುವ ತಳಿ ಸಂಶೋಧನೆಗಳ ಜೊತೆಯಲ್ಲಿ ಈ ರಾಖಿಗಡಿಯ ಪಳೆಯುಳಿಕೆಗಳ ಸಂಶೋಧನೆಗಳು ಸೇರಿಕೊಂಡು ಕರಾರುವಾಕ್ಕಾದ ಕೆಲವು ಫಲಿತಾಂಶಗಳು ಇದೀಗ ಲಭ್ಯವಾಗಿವೆ.
ಭಾರತದ ಇಂದಿನ ಎಲ್ಲಾ ಜನಸಮುದಾಯಗಳು ಹೇಗೆ ಪ್ರಮುಖವಾಗಿ ಎರಡು ಬಗೆಯ ಪೂರ್ವಿಕರಿಂದ ರೂಪಿಸಲ್ಪಟ್ಟಿವೆ. ಈ ಪೂರ್ವಿಕರ ಅನುಂಶೀಯ ಹಿನ್ನೆಲೆಗಳು ಏನಾಗಿದ್ದವು? ಈ ನೆಲದಲ್ಲಿ ವಿಕಾಸಗೊಂಡ ಅತ್ಯಂತ ಪುರಾತನವಾದ ಭವ್ಯ ಸಿಂಧೂ ನಾಗರಿಕತೆಯನ್ನು ಕಟ್ಟಿ ಬೆಳೆಸಿದ ಜನ ಸಮುದಾಯಗಳು ನಿಜಕ್ಕೂ ಯಾರಾಗಿದ್ದರು? ನಂತರದಲ್ಲಿ ಈ ದೇಶಕ್ಕೆ ವಲಸೆ ಬಂದ ಆರ್ಯರು ಅಥವಾ ಸ್ಟೆಪ್ಪಿ ಪಶುಪಾಲಕರು ಎಲ್ಲಿಂದ ಬಂದರು? ಅವರು ತಮ್ಮೊಂದಿಗೆ ಯಾವ ಬಗೆಯ ಸಂಸ್ಕೃತಿಯನ್ನು ಹೊತ್ತು ತಂದರು? ಯೂರೋಪಿನ ಕೆಲವು ಅತಿ ಪುರಾತನ ಆರ್ಯ ಸಂಸ್ಕೃತಿಗಳೊಂದಿಗೆ ಈ ಭಾರತದ ಆರ್ಯ ವೈದಿಕರು ಹೊಂದಿದ್ದಂತಹ ಸಂಬಂಧ ಯಾವ ಬಗೆಯದು? ಭಾರತದ ಸಮಾಜದಲ್ಲಿ ಜಾತಿ ವ್ಯವಸ್ಥೆ ಹುಟ್ಟಿಕೊಂಡದ್ದು ಯಾವಾಗ ಮತ್ತು ಇಲ್ಲಿ ಸಾಮಾಜಿಕ ನಿಯಂತ್ರಣ ಸಾಧಿಸುವ ಮೂಲಕ ಕೆಲವು ಸಮುದಾಯಗಳು ಉಳಿಸಿ ಬೆಳೆಸಿಕೊಂಡು ಬಂದ ಸಂಸ್ಕೃತಿ ಯಾವುದು? ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಇತ್ತೀಚಿನ ತಳಿ ವಿಜ್ಞಾನ ಹೇಗೆ ಉತ್ತರ ನೀಡಬಲ್ಲದು ಎಂಬುದನ್ನು ತಿಳಿಸಿ ಕೊಡುವ ಒಂದು ಕಿರು ಹೊತ್ತಗೆ- ಹರಪ್ಪ: ಡಿ ಎನ್ ಎ ನುಡಿದ ಸತ್ಯ. ಭಾರತದ ಚರಿತ್ರೆ ಮತ್ತು ಸಾಮಾಜಿಕ ಅಧ್ಯಯನದಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವಿದು.

ಋತುಮಾನ ಆ್ಯಪ್ ನಲ್ಲಿ ‘E Books’ ವಿಭಾಗದಲ್ಲಿ ನೀವಿದನ್ನು ಕೊಳ್ಳಬಹುದು. ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.

Download RUTHUMANA App here :

ಪ್ರತಿಕ್ರಿಯಿಸಿ