ಡಾ. ನವೀನ್ ಭಾರತಿ ನಡೆಸಿಕೊಡಲಿರುವ ಈ ಉಪನ್ಯಾಸವು ಪ್ರಸ್ತುತ ಭಾರತದ 147 ಮಹಾನಗರ ಗಳಲ್ಲಿ ಸಂಗ್ರಹಿಸಿದ ಮೋಹಲ್ಲಾ ಮಟ್ಟದ ಅಂಕಿ ಅಂಶಗಳನ್ನು ಆಧರಿಸಿದೆ. ಈ ಬಗೆಯ ಅಧ್ಯಯನ ಗಳಲ್ಲೇ ಮೊದಲಬಾರಿಗೆ ಅತಿ ದೊಡ್ಡ ಮಾಹಿತಿಮೊತ್ತವನ್ನು ಸಂಸ್ಕರಿಸಿ ಜಾತಿ ವಿಂಗಡನೆಗೂ ನಗರಗಳ ಗಾತ್ರಕ್ಕೂ ಅಷ್ಟಾಗಿ ಸಂಬಂಧವಿಲ್ಲ ಎಂಬುದನ್ನು ಕಂಡುಕೊಳ್ಳಲಾಯಿತು. ಡಾ. ನವೀನ್ ಭಾರತಿ ಮತ್ತು ತಂಡದವರು, ಭಾರತೀಯ ನಗರ ಪ್ರದೇಶಗಳಲ್ಲಿನ ಕೇಂದ್ರ ಸಮಸ್ಯೆ ಯಾದ ಜಾತಿ ವಿಭಜನೆಯು ಹೇಗೆ ದೇಶದಾದ್ಯಂತ, ಎಲ್ಲ ಗಾತ್ರದ ಪಟ್ಟಣಗಳಲ್ಲಿಯೂ ದಟ್ಟ ವಾಗಿದೆ ಎಂಬುದನ್ನು ಚರ್ಚಿಸುತ್ತಾರೆ. ನಗರೀಕರಣ ದಲ್ಲಿ ಸಾಂಪ್ರದಾಯಿಕ ಜಾತಿ ತಾರತಮ್ಯ ನಶಿಸಿಹೋಗುತ್ತದೆ ಎಂಬ ಸಾಮಾನ್ಯ ನಂಬಿಕೆಯನ್ನು ಈ ಅಧ್ಯಯನ ದ ಫಲಿತಾಂಶ ಗಳು ಬುಡ ಮೇಲಾಗಿಸುತ್ತವೆ. ಈ ಉಪನ್ಯಾಸವು ಇನ್ನೂ ಹೆಚ್ಚಿನ ಸೂಕ್ಶ್ಮ ಫಲಿತಗಳನ್ನು ಮುಂದೊಡ್ಡಿ, ನಗರ ಭಾರತದಲ್ಲಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ಹೇಗೆ ಮತ್ತಷ್ಟು ಮೂಲೆಗುಂಪಿಗೆ ಒಳಗಾಗುತ್ತವೆ ಎಂಬುದನ್ನು ತೋರಿಸುತ್ತದೆ.
ಭಾರತದ ನಗರವೊಂದರಲ್ಲಿನ ಜಾತಿಯಾಧಾರಿತ ವಸತಿಬೇಧದ ಕುರಿತು ಮಾಡಲ್ಪಟ್ಟ ಮೊದಲ ಅಧ್ಯಯನ ಇದು. ಬೆಂಗಳೂರಿನಲ್ಲಿನ ಬ್ಲಾಕ್ ಮಟ್ಟದ ಭೌಗೋಳಿಕ ಮಾತಿಹಿಯನ್ನಾಧರಿಸಿದ ಡೇಟಾ ಬಳಸಿ ಈ ನೋಟವನ್ನು ಕಟ್ಟಿಕೊಡಲಾಗಿದೆ.